Site icon Vistara News

Star Fashion: ಫೆಸ್ಟಿವ್‌ ಲುಕ್‌ಗೆ ನಟ ಶರತ್‌ ಕ್ಷತ್ರೀಯ ಎಥ್ನಿಕ್‌ ಔಟ್‌ಫಿಟ್ಸ್ ಸಾಥ್‌

Star Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟ ಹಾಗೂ ಮಾಡೆಲ್‌ ಶರತ್‌ ಕ್ಷತ್ರೀಯ (Star Fashion) ಅವರ ಫೆಸ್ಟಿವ್‌ ಸೀಸನ್‌ನ ಎಥ್ನಿಕ್‌ ಫ್ಯಾಷನ್‌ ಸಖತ್‌ ಟ್ರೆಂಡಿಯಾಗಿದೆ. ಶ್ರಾವಣ ಮಾಸದ ಈ ಸೀಸನ್‌ಗೆ ತಕ್ಕಂತಿರುವ ಕುರ್ತಾ-ಪೈಜಾಮ ಹಾಗೂ ಜಾಕೆಟ್‌ನ ಈ ದೇಸಿ ಔಟ್‌ಫಿಟ್‌ಗೆ ಫ್ಯಾಷನಿಸ್ಟಾಗಳ ರಿವ್ಯೂ ಜೊತೆಗೆ ಫುಲ್‌ ಮಾಕ್ರ್ಸ್ ದೊರೆತಿದೆ.

ಎಥ್ನಿಕ್‌ ಕುರ್ತಾ –ಪೈಜಾಮ ಜಾಕೆಟ್‌

ಇನ್ನು ಫ್ಯಾಷನ್‌ ವಿಮರ್ಶಕರ ಪ್ರಕಾರ, ಕಾಂಟ್ರಸ್ಟ್ ಶೇಡ್‌ನ ಶರತ್‌ ಅವರು ಧರಿಸಿರುವ ಕುರ್ತಾ- ಪೈಜಾಮ ಹಾಗೂ ಜಾಕೆಟ್‌, ಕಂಪ್ಲೀಟ್‌ ಎಥ್ನಿಕ್‌ ಡಿಸೈನ್‌ದಾಗಿದೆ. ಈ ಸೀಸನ್‌ನಲ್ಲಿ ಮಾನೋಕ್ರೋಮ್‌ ಶೇಡ್‌ಗಿಂತ ಕಾಂಟ್ರಾಸ್ಟ್‌ ಅದರಲ್ಲೂ ಒಂದೊಂದು ಉಡುಪು ಒಂದೊಂದು ವರ್ಣದ ಮಿಕ್ಸ್‌ ಮ್ಯಾಚ್‌ನದ್ದು ಟ್ರೆಂಡಿಯಾಗಿದೆ. ಇದು ಇಂದಿನ ನಟರ ಚಾಯ್ಸ್‌ನಲ್ಲಿ ಸೇರಿದೆ. ಅಷ್ಟು ಮಾತ್ರವಲ್ಲ, ಫ್ಯಾಷನ್‌ ಪ್ರಿಯ ಯುವಕರು ಕೂಡ ಇದನ್ನು ಅನುಕರಿಸತೊಡಗಿದ್ದಾರೆ. ಹಾಗಾಗಿ ಶರತ್‌ ಅವರ ಈ ಎಥ್ನಿಕ್‌ ಫ್ಯಾಷನ್‌ ಟ್ರೆಂಡ್‌ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

ನಟ ಶರತ್‌ ಕ್ಷತ್ರೀಯಾ ಎಥ್ನಿಕ್‌ ಫ್ಯಾಷನ್‌ ಟಾಕ್‌

ಎಥ್ನಿಕ್‌ ಲುಕ್‌ ಹಬ್ಬದ ಸೀಸನ್‌ನ ಸಂತಸವನ್ನು ಹೆಚ್ಚಿಸುತ್ತದೆ. ಸಾದಾ ಶೇಡ್‌ಗೆ ಮಾರು ಹೋಗದೇ ಡಿಫರೆಂಟ್‌ ಆಗಿ ಆಕರ್ಷಕವಾಗಿ ಕಾಣಿಸುವ ಕಾಂಟ್ರಾಸ್ಟ್ ಕಲರ್ಸ್‌ನ ಕುರ್ತಾ-ಪೈಜಾಮ ಹಾಗೂ ಜಾಕೆಟ್‌ಗಳನ್ನು ಆಯ್ಕೆ ಮಾಡಿದ್ದೆನೆ. ಇದು ವೈಬ್ರೆಂಟ್‌ ಲುಕ್‌ ನೀಡಿದೆ ಹಾಗೂ ಫ್ಯಾಷನ್‌ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಸಿರಿಯಲ್‌ಗಳಲ್ಲೂ ಕೂಡ ಎಥ್ನಿಕ್‌ ಲುಕ್‌ಗಾಗಿ ಟ್ರೆಂಡಿ ಔಟ್‌ಫಿಟ್‌ ಧರಿಸುವುದು ಇಂದು ಕಾಮನ್‌ ಆಗಿದೆ. ಈ ಡಿಸೈನರ್‌ವೇರ್‌ ಕ್ರೆಡಿಟ್‌ ಡಿಸೈನರ್‌ ಶರತ್‌ ನಾಗರಾಜ್‌ ಅವರಿಗೆ ಸಲ್ಲುತ್ತದೆ ಎಂದು ನಟ ಶರತ್‌ ಕ್ಷತ್ರೀಯಾ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.

ನಟ ಶರತ್‌ ಕ್ಷತ್ರೀಯಾರಂತೆ ಕಾಣಲು ಇಲ್ಲಿದೆ ಟಿಪ್ಸ್

ಇನ್ನು ಯುವಕರು ಪಕ್ಕಾ ದೇಸಿ ಸ್ಟೈಲ್‌ನಲ್ಲಿ ಅದರಲ್ಲೂ ನಟ ಶರತ್‌ ಅವರಂತೆ ಕಾಣಲು ಒಂದಿಷ್ಟು ಫ್ಯಾಷನ್‌ ಟಿಪ್ಸ್ ಫಾಲೋ ಮಾಡಿದರೇ ಸಾಕು! ಇದಕ್ಕಾಗಿ ಅವರೇ ಒಂದಿಷ್ಟು ಟಿಪ್ಸ್‌ ನೀಡಿದ್ದಾರೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Festive Fashion: ಫೆಸ್ಟಿವ್‌ ಸೀಸನ್‌ನಲ್ಲಿ ಟ್ರೆಂಡ್‌ ಸೆಟ್‌ ಮಾಡಿದ ಚೈತ್ರಾ ವಾಸುದೇವನ್‌ ಸೌತ್‌ ಇಂಡಿಯನ್‌ ಲೆಹೆಂಗಾ!

Exit mobile version