ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಹುಭಾಷಾ ತಾರೆ ಸಂಜನಾ ಗರ್ಲಾನಿ, ಕೇರಳದ ಸೀರೆ ಧರಿಸಿ ,ಓಣಂ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಹೌದು. ಸದ್ಯ ನಟಿ ಸಂಜನಾ ಅವರು ಕೇರಳದಲ್ಲಿ ಮಲಯಾಳಂ ಸಿನಿಮಾ ಕುಂದರ ಅಂಡಿಯಪ್ಪೀಸ್ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ಈ ಮಧ್ಯೆ ಫೆಸ್ಟಿವಲ್ ಸೀಸನ್ಗೆ ಪೂರಕವಾಗುವಂತೆ, ಅಲ್ಲಿನ ಟ್ರೆಡಿಷನಲ್ (Star Onam Fashion) ಸೀರೆಯಲ್ಲಿ ಕಾಣಿಸಿಕೊಂಡು, ಹಬ್ಬವನ್ನು ಸಂಭ್ರಮಿಸಿದ್ದಾರೆ.
ವಿಸ್ತಾರದೊಂದಿಗೆ ಸಂಜನಾ ಸೀರೆ ಟಾಕ್
“ನಾನು ಧರಿಸಿರುವ ಈ ಕೇರಳದ ಸೀರೆ ಮನಮೋಹಕವಾಗಿದ್ದು, ಐರಾ ಡಿಸೈನರ್ ಸ್ಟುಡಿಯೋದ್ದಾಗಿದೆ. ನೋಡಲು ಸಿಂಪಲ್ ಎನಿಸುವ ಈ ಸೀರೆ ಮೇಲೆ ನನಗೆ ಪ್ರೀತಿ ಹುಟ್ಟಿದೆ. ಹ್ಯಾಂಡ್ಲೂಮ್ ಕಾಟನ್ ಫ್ಯಾಬ್ರಿಕ್ನಿಂದ ಸಿದ್ಧಪಡಿಸುವ ಈ ಕೇರಳದ ಈ ಸೀರೆಗಳು ಉಟ್ಟಾಗ ಕಂಫರ್ಟಬಲ್ ಫೀಲ್ ನೀಡುತ್ತವೆ. ಮಾತ್ರವಲ್ಲ! ನೋಡಲು ಕೂಡ ಆಕರ್ಷಕವಾಗಿವೆ ಬಿಂಬಿಸುತ್ತವೆ” ಎಂದು ನಟಿ ಸಂಜನಾ ಗರ್ಲಾನಿ ವಿಸ್ತಾರ ನ್ಯೂಸ್ನೊಂದಿಗೆ ತಮಗೆ ಈ ಕೇರಳದ ಓಣಂ ಸೀರೆ ಮೇಲುಂಟಾಗಿರುವ ಪ್ರೇಮವನ್ನು ಹಂಚಿಕೊಂಡಿದ್ದಾರೆ.
ಇನ್ನು ಕೇರಳದ ಈ ಶೈಲಿಯ ಸೀರೆಗಳ ಬಗ್ಗೆ ಸಾಕಷ್ಟು ತಾನು ತಿಳಿದುಕೊಂಡಿದ್ದೇನೆ. ಅಲ್ಲಿನ ವಾತಾವರಣ ಹಾಗೂ ಹವಾಮಾನಕ್ಕೆ ಹೊಂದುವಂತಹ ಈ ಸೀರೆಗಳು ಸಾಕಷ್ಟು ವಿನ್ಯಾಸದಲ್ಲಿ ದೊರೆಯುತ್ತವೆ. ಅವುಗಳ ಕ್ರೀಮ್ ಶೇಡ್, ಉಟ್ಟಾಗ ಫ್ರೆಶ್ ಫೀಲಿಂಗ್ ನೀಡುತ್ತವೆ. ಉಟ್ಟವರನ್ನು ಸುಂದರವಾಗಿ ಬಿಂಬಿಸುತ್ತವೆ ಎನ್ನುವ ಸಂಜನಾ ಗರ್ಲಾನಿ, ಅಭಿಮಾನಿಗಳಿಗೆ ಅದರಲ್ಲೂ ಓಣಂ ಸೀರೆ ಪ್ರಿಯರಿಗೆ ಒಂದಿಷ್ಟು ಸಿಂಪಲ್ ಸಲಹೆಗಳನ್ನೂ ನೀಡಿದ್ದಾರೆ.
ಸೀರೆ ಜೊತೆ ಜ್ಯುವೆಲರಿ ಮ್ಯಾಚ್ ಮಾಡಿ
ಓಣಂ ಸೀರೆ ಉಟ್ಟಾಗ ಮ್ಯಾಚಿಂಗ್ ಬ್ಲೌಸ್ ಧರಿಸಿರೇ ಅದರ ಮೆರಗು ಮತ್ತಷ್ಟು ಹೆಚ್ಚುತ್ತದೆ. ಅದರಲ್ಲೂ ಗೋಲ್ಡ್ ಬೂಟಾ ಅಥವಾ ವರ್ಕ್ ಇರುವಂತಹ ಬ್ಲೌಸ್ಗಳು ಇಡಿ ಸೀರೆಯ ಅಂದ ಹೆಚ್ಚಿಸುತ್ತವೆ. ಇನ್ನು ಈ ಸೀರೆಯೊಂದಿಗೆ ಟ್ರೆಡಿಷನಲ್ ಜ್ಯುವೆಲರಿ ಧರಿಸಿದರಂತೂ ವಾಹ್., ಎನ್ನುವಷ್ಟರ ಮಟ್ಟಿಗೆ ಚೆಂದನಾಗಿ ಕಾಣಬಹುದು. ಜತೆಗೆ ಕೈಗಳಿಗೆ ಒಂದಿಷ್ಟು ಬಳೆ ಹಾಗೂ ಹಣೆಗೆ ಬಿಂದಿ ಇಟ್ಟರಂತೂ ಥೇಟ್ ಕೇರಳದ ಕುಟ್ಟಿಯಂತೆ ಕಾಣಬಹುದು ಎಂದು ಸರಳ ಟಿಪ್ಸ್ ನೀಡಿದ್ದಾರೆ ಸಂಜನಾ.
ಸಂಸ್ಕೃತಿ ಬಿಂಬಿಸುವ ಸೀರೆ ಭಾವೈಕ್ಯತೆಯ ಸಂಕೇತ
ಇನ್ನು, ಈ ಸೀರೆಗಳು ಆ ಸ್ಥಳದ ಸಂಸ್ಕೃತಿ ಬಿಂಬಿಸುತ್ತವೆ. ಇತರರು ಉಟ್ಟಾಗ ಭಾವೈಕ್ಯತೆಯನ್ನು ಸಾರುತ್ತವೆ ಎನ್ನುವ ನಟಿ ಸಂಜನಾ ಅವರು ಕೇರಳದ ಸೀರೆಯ ಬಗ್ಗೆ ತಮ್ಮ ಒಲವನ್ನು ಮಾತು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತೋರ್ಪಡಿಸಿದ್ದಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Onam Saree Fashion: ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರ ಟ್ರೆಡಿಷನಲ್ ಫ್ಯಾಷನ್ಗೆ ಸೇರಿದ ಓಣಂ ಸೀರೆ