Site icon Vistara News

Kundan Jhumka Fashion: ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಡಿಷನಲ್‌ ಜುಮಕಿ ಕುಂದನ್‌ ಜುಮ್ಕಾ ಆದ ಕಥೆ!

Kundan Jhumka Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕುಂದನ್‌ ಜುಮ್ಕಾಗಳು (Kundan Jhumka Fashion) ಇದೀಗ ಮಹಿಳೆಯರನ್ನು ಅಲಂಕರಿಸುತ್ತಿವೆ. ಹೌದು. ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ಜುಮಕಿಗಳು ಇದೀಗ ನಾರ್ತ್ ಇಂಡಿಯನ್‌ ಸ್ಟೈಲ್‌ನ ಕುಂದನ್‌ ಜುಮ್ಕಾಗಳಾಗಿ ಬದಲಾಗಿವೆ. ನೋಡಲು ಮನಮೋಹಕ ಡಿಸೈನ್‌ನಲ್ಲಿ ಆಗಮಿಸಿರುವ ಇವು ಉತ್ತರ-ದಕ್ಷಿಣದ ವಿನ್ಯಾಸದ ಸಂಗಮವಾಗಿವೆ. ಅಂದ ಹಾಗೆ, ಜುಮಕಿಗಳು ದಕ್ಷಿಣ ಭಾರತದ ಸಾಂಪ್ರದಾಯಿಕ ಆಭರಣಗಳಲ್ಲೊಂದಾಗಿವೆ. ಮುತ್ತಿನ ಜುಮಕಿ, ಹರಳಿನ ಜುಮಕಿ, ಏಳು ಕಲ್ಲಿನ ಜುಮಕಮ ಬೆಳ್ಳಿ ಮೋಡ ಜುಮಕಿ ಸೇರಿದಂತೆ ನಾನಾ ಡಿಸೈನ್‌ಗಳು ಸೌತ್‌ ಇಂಡಿಯಾದ ವೆಡ್ಡಿಂಗ್‌ ಜ್ಯುವೆಲರಿ ಫ್ಯಾಷನ್‌ನಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಅದರಲ್ಲೂ ಮದುಮಗಳ ಪ್ರಮುಖ ಜ್ಯುವೆಲರಿಗಳಲ್ಲಿ ಸ್ಥಾನ ಪಡೆದಿವೆ ಎನ್ನುವ ಜ್ಯುವೆಲ್‌ ಡಿಸೈನರ್‌ ರಾಶಿ ಪ್ರಕಾರ, ಕಾಲಕಳೆದಂತೆ ಇವು ಕೂಡ ನಾನಾ ರೂಪದಲ್ಲಿ ಬದಲಾಗುತ್ತಿವೆಯಂತೆ.

ಕುಂದನ್‌ ಜುಮ್ಕಾ ಕಥೆ

ಮೊದಲಿನಿಂದಲೂ ಉತ್ತರ ಭಾರತದ ಆಭರಣಗಳಲ್ಲಿ ಕುಂದನ್‌ ಡಿಸೈನ್‌ಗಳು ಹೆಚ್ಚು ಪ್ರಚಲಿತದಲ್ಲಿವೆ. ಇದಕ್ಕೆ ಪೂರಕ ಎಂಬಂತೆ ಇದೀಗ ಅಲ್ಲಿನ ಹೆಣ್ಣುಮಕ್ಕಳಿಗೆ ಪ್ರಿಯವಾಗುವಂತೆ, ಕುಂದನ್‌ ಸೂಕ್ಷ್ಮ ವಿನ್ಯಾಸದ ನಾನಾ ಡಿಸೈನ್‌ಗಳು ಜುಮಕಿಗಳಲ್ಲಿ ಕಾಣಿಸತೊಡಗಿವೆ. ಜ್ಯುವೆಲ್‌ ಡಿಸೈನರ್‌ಗಳು ಇದನ್ನು ಮೊದಲಿಗೆ ಪ್ರಯೋಗಾತ್ಮಕವಾಗಿ ವಿನ್ಯಾಸಗೊಳಿಸಿ ಬಿಡುಗಡೆಗೊಳಿಸಿದ್ದು, ಇದೀಗ ಟ್ರೆಂಡಿಯಾಗಿದೆ. ಅಲ್ಲಿನ ಸ್ಟೇಟ್‌ಮೆಂಟ್‌ ಜ್ಯುವೆಲರಿಯೊಂದಿಗೆ ಸೇರಿಸಿ, ಊಹೆಗೂ ಮೀರಿದ ಡಿಸೈನ್‌ಗಳ ಜುಮ್ಕಾಗಳನ್ನು ಪರಿಚಯಿಸಿದ್ದಾರೆ. ಇದು ಅಲ್ಲಿಯವರಿಗೆ ಪ್ರಿಯವಾಗಿದ್ದು, ಇದೀಗ ಪಾಫುಲರ್‌ ಆಗಿದೆ. ಪರಿಣಾಮ, ಇಲ್ಲಿನ ಸಾಂಪ್ರಾದಾಯಿಕ ಜುಮಕಿಗಳು ಜುಮ್ಕಾಗಳಾಗಿ ಬದಲಾಗಿವೆ. ಇತ್ತೀಚಿನ ಅಲಿಯಾ ಭಟ್‌ ನಟಿಸಿದ ಹಿಂದಿ ಸಿನಿಮಾದಲ್ಲಿ ಸಖತ್‌ ಪಾಪುಲರ್‌ ಹಾಡು ಜುಮ್ಕಾ ಗೀರಾ ರೇ…ಇದಕ್ಕೆ ಸಾಕ್ಷಿ ಎನ್ನಬಹುದು.

ಪಾಫುಲರ್‌ ಕುಂದನ್‌ ಜುಮ್ಕಾ ಡಿಸೈನ್ಸ್

ಚಾಂದ್‌ ಬಾಲಿ ಶೈಲಿಯ ಜುಮ್ಕಾ, ಅಗಲವಾದ ಸ್ಟಡ್ಸ್ ಜೊತೆ ಜುಮ್ಕಾ, ಸೂರ್ಯನಂತಹ ಓಲೆಯ ಜೊತೆ ಜುಮ್ಕಾ, ಪರ್ಲ್ –ಕುಂದನ್‌ ಜುಮ್ಕಾ, ಕುಂದನ್‌ – ಸ್ಟೋನ್ಸ್ ಜುಮ್ಕಾ, ಕುಂದನ್‌ನ ಬಿಗ್‌ ಜುಮ್ಕಾ ಸೇರಿದಂತೆ ಸಾಕಷ್ಟು ಡಿಸೈನ್‌ನವು ಈ ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.

ಕುಂದನ್‌ ಜುಮ್ಕಾ ಮ್ಯಾಚಿಂಗ್‌ ಮಾಡುವುದು ಹೇಗೆ?

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Tatoo Chokers Fashion: ಯುವತಿಯರ ಫಂಕಿ ಆಕ್ಸೆಸರೀಸ್‌ ಲಿಸ್ಟ್ ಗೆ ಮರಳಿದ ಟ್ಯಾಟೂ ಚೋಕರ್ಸ್‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version