Tatoo Chokers Fashion: ಯುವತಿಯರ ಫಂಕಿ ಆಕ್ಸೆಸರೀಸ್‌ ಲಿಸ್ಟ್ ಗೆ ಮರಳಿದ ಟ್ಯಾಟೂ ಚೋಕರ್ಸ್‌ - Vistara News

ಫ್ಯಾಷನ್

Tatoo Chokers Fashion: ಯುವತಿಯರ ಫಂಕಿ ಆಕ್ಸೆಸರೀಸ್‌ ಲಿಸ್ಟ್ ಗೆ ಮರಳಿದ ಟ್ಯಾಟೂ ಚೋಕರ್ಸ್‌

ತೂಕವಿಲ್ಲದ ಹಗುರವಾದ ಟ್ಯಾಟೂ ಸ್ಟೈಲ್‌ ಚೋಕರ್ಸ್‌ (Tatoo Chokers fashion) ಈ ಸೀಸನ್‌ನಲ್ಲಿ ಯುವತಿಯರ ಫಂಕಿ ವಿಂಟರ್‌ ಆಕ್ಸೆಸರೀಸ್‌ ಲಿಸ್ಟ್‌ಗೆ ಮರಳಿದೆ. ಹೇಗೆಲ್ಲಾ ವೆಸ್ಟರ್ನ್ ಔಟ್‌ಫಿಟ್‌ ಜೊತೆ ಇವನ್ನು ಹೇಗೆಲ್ಲಾ ಧರಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Tatoo Chokers Fashion
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟ್ಯಾಟು ಸ್ಟೈಲ್‌ ಚೋಕರ್‌ಗಳು (Tatoo Chokers fashion) ಫಂಕಿ ಆಕ್ಸೆಸರೀಸ್‌ ಲೋಕಕ್ಕೆ ಮರಳಿವೆ. ತಕ್ಷಣಕ್ಕೆ ನೋಡಲು ಟ್ಯಾಟೂ ಡಿಸೈನ್‌ ಬಿಡಿಸಿದಂತೆ ಕಾಣುವ ಇವು ತೂಕವಿಲ್ಲದ ಚೋಕರ್ಸ್! ಮಾಡರ್ನ್ ಯುವತಿಯರಿಗೆ ಹೇಳಿಮಾಡಿಸಿದಂತಿವೆ. ಹಾಗೆಂದು ಇದೇನು ಹೊಸ ಕಾನ್ಸೆಪ್ಟ್‌ ಚೋಕರ್ಸ್‌ಗಳಲ್ಲ! ನಯಾ ಡಿಸೈನ್‌ ಹಾಗೂ ಹೊಸ ವೆರೈಟಿ ಕಾನ್ಸೆಪ್ಟ್‌ನಲ್ಲಿ ಆಗಮಿಸಿವೆ. ಸದ್ಯಕ್ಕೆ ಲೈಟ್‌ವೇಟ್‌ ಆಕ್ಸೆಸರೀಸ್‌ ಲಿಸ್ಟ್‌ನಲ್ಲಿರುವ ಇವು ಸುಲಭವಾಗಿ ಕ್ಯಾರಿ ಮಾಡಬಹುದಾದಂತಹ ಆಕ್ಸೆಸರೀಸ್‌ಗಳಿವು.

What are tattoo chokers?

ಏನಿದು ಟ್ಯಾಟೂ ಚೋಕರ್ಸ್‌

ನೋಡಲು ಟ್ಯಾಟೂ ಡಿಸೈನ್‌ ಹೊಂದಿರುವ ಚೋಕರ್‌ ಧರಿಸಿದಾಗ ನೆಕ್‌ಗೆ ಅಂಟಿದಂತೆ, ನೋಡಲು ಟ್ಯಾಟೂ ಬಿಡಿಸಿದಂತೆ ಕಾಣುತ್ತವೆ. ನಾನಾ ಶೈಲಿಯ ಸಿಂಪಲ್‌ ಟ್ಯಾಟೂ ಡಿಸೈನ್‌ಗಳಿಂದ ಹಿಡಿದು ಕಾಂಪ್ಲಿಕೇಟೆಡ್‌ ಟ್ಯಾಟೂ ಚೋಕರ್ಸ್‌ಗಳು ಇದೀಗ ಲಭ್ಯ. ಲೈಟ್‌ವೇಟ್‌ ವೈರ್‌ನಂತಹ ಮೆಟಿರಿಯಲ್‌ನಲ್ಲಿ ಇವನ್ನು ಸಿದ್ಧಪಡಿಸಲಾಗಿರುತ್ತದೆ. ನೋಡಲು ನೆಕ್‌ ಮೇಲೆ ಟ್ಯಾಟೂ ಅಂಟಿಸಿದ ರೀತಿಯಲ್ಲೆ ಕಾಣಿಸುತ್ತವೆ. ಹಾಗೆಂದು ಇವನ್ನು ಧರಿಸುವುದರಿಂದ ಉಸಿರುಗಟ್ಟಿದಂತಾಗುವುದಿಲ್ಲ. ಧರಿಸಿದರೂ ಭಾರವೆನಿಸುವುದಿಲ್ಲ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Chokers Variety Designs

ಚೋಕರ್ಸ್ ವೆರೈಟಿ ಡಿಸೈನ್ಸ್‌

ಟ್ಯಾಟೂ ಹೆಸರೇ ಹೇಳುವಂತೆ ಲೆಕ್ಕವಿಲ್ಲದಷ್ಟು ಸೂಕ್ಷ್ಮ ಡಿಸೈನ್‌ಗಳವನ್ನು ಕಾಣಬಹುದು. ನೋಡಲು ಎಲ್ಲವೂ ಒಂದೇ ಬಗೆಯಂತೆ ಕಂಡರೂ ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ. ಸುರುಳಿಯಾಕಾರ, ಮಧ್ಯೆ ಮಧ್ಯೆ ಬೀಡ್ಸ್‌, ಬ್ಲಾಕ್‌ ಪರ್ಲ್‌, ಬಾರ್ಡರ್‌ ಚಿತ್ತಾರ ಹೀಗೆ ಸಾಮಾನ್ಯ ಡಿಸೈನ್‌ಗಳಿಂದಿಡಿದು ಎರಡ್ಮೂರಿಂಚಿನ ಟ್ಯಾಟೂ ಡಿಸೈನ್‌ನ ಚೋಕರ್ಸ್ ಹುಡುಗಿಯರ ಕತ್ತನ್ನು ಸಿಂಗರಿಸುತ್ತಿವೆ.

Demand for black shade

ಬ್ಲಾಕ್‌ ಶೇಡ್‌ಗೆ ಬೇಡಿಕೆ

ಅತಿ ಹೆಚ್ಚು ಟ್ರೆಂಡ್‌ನಲ್ಲಿರುವ ಟ್ಯಾಟೂ ಚೋಕರ್ಸ್‌ನಲ್ಲಿ ಬ್ಲಾಕ್‌ ಕಲರ್‌ನದ್ದಕ್ಕೆ ಹೆಚ್ಚು ಬೇಡಿಕೆಯಿದೆ. ಇದು ಎಲ್ಲಾ ಬಗೆಯ ಉಡುಪುಗಳಿಗೂ ಮ್ಯಾಚ್‌ ಆಗುತ್ತವೆ. ಇದು ಒಂಥರ ಯೂನಿಕ್‌ ಮ್ಯಾಚಿಂಗ್‌ ಆಕ್ಸೆಸರೀಸ್‌ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ರೀಟಾ. ಅವರ ಪ್ರಕಾರ, ಬ್ಲಾಕ್‌ ವರ್ಣಗಳ ಟ್ಯಾಟೂ ಚೋಕರ್ಸ್ ಯಾವುದೇ ವೆಸ್ಟರ್ನ್ ಕಾನ್ಸೆಪ್ಟ್‌ನ ಉಡುಪುಗಳಿಗಾದರೂ ಧರಿಸಬಹುದು. ಇದರ ತೆಳುವಾದ ಡಿಸೈನ್ಸ್‌ ಸಿಂಪಲ್‌ ಆಗಿ ಬಿಂಬಿಸುತ್ತವೆ.

5 Tips for Tattoo Chokers Lovers

ಟ್ಯಾಟೂ ಚೋಕರ್ಸ್ ಪ್ರಿಯರಿಗೆ 5 ಟಿಪ್ಸ್

  • ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತವೆ.
  • ಸ್ಟ್ರೀಟ್‌ ಶಾಪಿಂಗ್‌ನಲ್ಲೆ ಖರೀದಿಸಬಹುದು.
  • ಸ್ಪ್ರಿಂಗ್‌ನಂತಹ ಚೊಕರ್ಸ್ ಯಾರೂ ಬೇಕಾದರೂ ಧರಿಸಬಹುದು.
  • ಬಾಳಿಕೆ ಹೆಚ್ಚು ಬರುತ್ತವೆ.
  • ಕಲರ್‌ನವು ಇದೀಗ ದೊರೆಯುತ್ತಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star winter Fashion: ಸೀಸನ್‌ಗೆ ತಕ್ಕಂತೆ ಬದಲಾಯ್ತು ನಟಿ ಶಾನ್ವಿ ಶ್ರೀವಾತ್ಸವ್ ವಿಂಟರ್‌ ಫ್ಯಾಷನ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Neetha Ambani Jewel Love: ನೀತಾ ಅಂಬಾನಿಯ ದುಬಾರಿ ಜ್ಯುವೆಲರಿ ಪ್ರೇಮ!

ಅಂಬಾನಿ ಫ್ಯಾಮಿಲಿಯ ಆಧಾರಸ್ತಂಭದಂತಿರುವ ನೀತಾ ಅಂಬಾನಿಯ ಜ್ಯುವೆಲರಿ ಪ್ರೇಮ (Neetha Ambani Jewel Love) ಎಂಥದ್ದು, ಗೊತ್ತೇ! ಅಪರೂಪದ ಡಿಸೈನ್ಸ್ ಹಾಗೂ ದುಬಾರಿ ಬೆಲೆಯ ವಜ್ರಾಭರಣಗಳ ಕಲೆಕ್ಷನ್‌ ಹೊಂದಿದ್ದಾರೆ. ಅವರ ಈ ಅಪರಿಮಿತ ಜ್ಯುವೆಲ್‌ ಪ್ರೇಮದ ಕುರಿತಂತೆ ಇಲ್ಲಿದೆ ಕುತೂಹಲಕರ ನೋಟ.

VISTARANEWS.COM


on

Neetha Ambani Jewel Love
ಚಿತ್ರಗಳು: ನೀತಾ ಅಂಬಾನಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀತಾ ಅಂಬಾನಿಯವರ ಜ್ಯುವೆಲ್‌ ಪ್ರೇಮ (Neetha Ambani Jewel Love) ಅದ್ಭುತ ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳು. ಹೌದು. ಅಂಬಾನಿ ಫ್ಯಾಮಿಲಿಯ ಆಧಾರಸ್ತಂಭದಂತಿರುವ ನೀತಾ ಅವರು ಸಾಮಾನ್ಯ ಜ್ಯುವೆಲರಿಗಳನ್ನು ಧರಿಸುವುದೇ ಇಲ್ಲ! ಇತರರ ಡಿಸೈನ್‌ ನೋಡಿ ಅದನ್ನು ಡಿಸೈನ್‌ ಮಾಡಿಸುವುದು ಇಲ್ಲ! ಬದಲಿಗೆ ತಮ್ಮದೇ ಆದ ವಿನ್ಯಾಸಕ್ಕೆ ಜ್ಯುವೆಲರಿ ಡಿಸೈನರ್‌ಗಳಿಂದ ರೂಪ ಕೊಡಿಸಿ, ಧರಿಸುತ್ತಾರೆ. ಅವರ ಒಂದೊಂದು ಜ್ಯುವೆಲರಿಗಳು ಭಿನ್ನ-ವಿಭಿನ್ನ ಹಾಗೂ ಅಪರೂಪದ ಡಿಸೈನ್‌ಗಳನ್ನು ಹೊಂದಿವೆ. ಅಲ್ಲದೇ, ದುಬಾರಿ ಬೆಲೆಯ ಕಲೆಕ್ಷನ್ಸ್ ಅವರ ಬಳಿಯಿದೆ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್ಸ್.

Love diamond jewelry

ವಜ್ರದ ಆಭರಣ ಪ್ರಿಯೆ

ಅಂದಹಾಗೆ, ನೀತಾ ಅಂಬಾನಿಯವರು ದಿನನಿತ್ಯದ ಜೀವನದಲ್ಲೂ ವಜ್ರದ ಅಭರಣಗಳನ್ನು ಧರಿಸುತ್ತಾರೆನ್ನಲಾಗಿದೆ. ವಜ್ರದ ಸ್ಟಡ್ಸ್, ಸಿಂಪಲ್‌ ನೆಕ್‌ಪೀಸ್‌ ಹಾಗೂ ಬ್ರೇಸ್‌ಲೇಟ್‌ ಇಲ್ಲವೇ, ಕಡವನ್ನು ಅವರು ಧರಿಸಿರುತ್ತಾರೆ. ಇನ್ನು ಪಾರ್ಟಿ ಹಾಗೂ ಕಾರ್ಯಕ್ರಮಗಳಿಗೆ ಅವರು ಧರಿಸುವ ಆಭರಣಗಳು ಕಂಪ್ಲೀಟ್‌ ವಿಭಿನ್ನ. ಇಂಟರ್‌ನ್ಯಾಷನಲ್‌ ಬ್ರಾಂಡ್‌ನ ಫ್ಯಾಷನ್‌ ವಜ್ರಾಭರಣಗಳು ಅವರ ಬಳಿಯಿವೆ ಎನ್ನಲಾಗುತ್ತದೆ. ಅಲ್ಲದೇ, ವಜ್ರದ ನೆಕ್ಲೇಸ್‌ಗಳು ಅವರ ಫೇವರೇಟ್‌ ಲಿಸ್ಟ್ ನಲ್ಲಿವೆ ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳು. ಒಂದಲ, ಎರಡಲ್ಲ, ಸಾಕಷ್ಟು ಡೈಮಂಡ್‌ ಜ್ಯುವೆಲರಿಗಳು ನೀತಾ ಅವರ ಜ್ಯುವೆಲ್‌ ಕಲೆಕ್ಷನ್‌ನಲ್ಲಿವೆ. ಆಗಾಗ್ಗೆ ಉಡುಪಿಗೆ ಮ್ಯಾಚ್‌ ಆಗುವಂತೆ ಧರಿಸುತ್ತಿರುತ್ತಾರೆ ಎನ್ನುತ್ತವೆ ಮೂಲಗಳು.

Nita Ambani's Emerald Jewellery

ನೀತಾ ಅಂಬಾನಿಯವರ ಎಮರಾಲ್ಡ್ ಜ್ಯುವೆಲರಿ

ಇನ್ನು ಅನಂತ್‌-ರಾಧಿಕಾ ಮರ್ಚೆಂಟ್‌ ಅವರ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ ಅವರು ಧರಿಸಿದ ಭಾರಿ ಗಾತ್ರದ ಎಮರಾಲ್ಡ್ ಜ್ಯುವೆಲರಿ ನೋಡಿಯೇ ಇರುತ್ತೀರಾ! ಬಿಗ್‌ ಎಮರಾಲ್ಟ್‌ ಇರುವಂತಹ ಪೆಂಡೆಂಟ್‌, ಸ್ಟಡ್ಸ್, ಸಿಲ್ವರ್‌ ಡೈಮಂಡ್‌ ಕಾಂಬಿನೇಷನ್‌ನ ಬಿಗ್‌ ಹ್ಯಾಂಡ್‌ ಕಫ್‌ ಎಲ್ಲರನ್ನೂ ಆಕರ್ಷಿಸಿತ್ತು. ಇನ್ನು, ತಮ್ಮ ಮಗಳ ಮದುವೆಯಲ್ಲಿ ಮಾಡಿಸಿದ್ದ ಈ ಜ್ಯುವೆಲರಿಯನ್ನು ಆಗಾಗ್ಗೆ ಧರಿಸುತ್ತಾರೆ. ಈ ಹಿಂದೆ ನಿಶಾ ಅಂಬಾನಿ ಕೂಡ ಇದನ್ನು ಹಲವು ಬಾರಿ ಧರಿಸಿದ್ದರು. ಅಮ್ಮ-ಮಗಳು ಆಗಾಗ್ಗೆ ಜ್ಯುವೆಲರಿಗಳನ್ನು ಅದಲು-ಬದಲು ಮಾಡಿ ಧರಿಸುತ್ತಾರಂತೆ ಹಾಗೆನ್ನುತ್ತವೆ ಮೂಲಗಳು.

Pearl Jewelery Set

ಪರ್ಲ್ ಆಭರಣಗಳ ಸೆಟ್‌

ಇನ್ನು ಸಾಕಷ್ಟು ಬಾರಿ 5 ಲೇಯರ್‌ನ ಮುತ್ತಿನ ಹಾರ ಧರಿಸುತ್ತಿರುತ್ತಾರೆ. ಇದಕ್ಕೆ ಮ್ಯಾಚ್‌ ಆಗುವಂತಹ ಪರ್ಲ್ ಹಾಗೂ ಡೈಮಂಡ್‌ ಕಾಂಬಿನೇಷನ್‌ನ ಜುಮ್ಕಾ ಶೈಲಿಯ ಹ್ಯಾಂಗಿಂಗ್ಸ್ ಕೂಡ ಅವರ ಕಲೆಕ್ಷನ್‌ನಲ್ಲಿದೆ.

  • ಡೈಮಂಡ್‌ ಹಾಗೂ ಎಮರಾಲ್ಡ್ ಕಾಂಬಿನೇಷನ್‌ನ ಸಾಕಷ್ಟು ಜ್ಯುವೆಲರಿಗಳು ನೀತಾ ಅವರ ಬಳಿಯಿವೆಯಂತೆ.
  • ಚಿನ್ನಕ್ಕಿಂತ ವಜ್ರಾಭರಣಗಳೆಂದರೇ ನೀತಾ ಅವರಿಗಿಷ್ಟವಂತೆ.
  • ತಮ್ಮದೇ ಆದ ಜ್ಯುವೆಲರಿ ಡಿಸೈನ್‌ಗಳಿಗೆ ಪ್ರಾಮುಖ್ಯತೆ ನೀಡುತ್ತಾರಂತೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Ambani Family Spends Crores On Designer Clothing: ಮದುವೆ ಪೂರ್ವ ಸಂಭ್ರಮದಲ್ಲಿ ಡ್ರೆಸ್‌ಗೆ ಕೋಟಿ ಕೋಟಿ ಹಣ ಚೆಲ್ಲಿದ ಅಂಬಾನಿ ಫ್ಯಾಮಿಲಿ!

Continue Reading

ಫ್ಯಾಷನ್

Dhruthi Utsava Fashion Show: ಧೃತಿ ಉತ್ಸವದಲ್ಲಿ ಯಶಸ್ವಿಯಾದ ಮಹಿಳೆಯರ ಫ್ಯಾಷನ್‌ ಶೋ

ಧೃತಿ ಉತ್ಸವದಲ್ಲಿ ರಾಜ ರವಿವರ್ಮಾ ಪೇಟಿಂಗ್ಸ್ ಥೀಮ್‌ಗೆ ತಕ್ಕಂತೆ ನಡೆದ ಫ್ಯಾಷನ್‌ ಶೋನಲ್ಲಿ (Dhruthi Utsava Fashion Show), ಮಹಿಳೆಯರು ರೆಡಿಯಾಗಿ ರ‍್ಯಾಂಪ್‌ ವಾಕ್‌ ಮಾಡಿದರು. ಸಾಂಸ್ಕೃತಿಕ ಹಿನ್ನೆಲೆಗೆ ಹೊಂದುವಂತಹ ಉಡುಗೆ-ತೊಡುಗೆಗಳಲ್ಲಿ ಕಾಣಿಸಿಕೊಂಡರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

A successful women's fashion show at Dhruti Utsav
ಚಿತ್ರಗಳು: ಧೃತಿ ಉತ್ಸವದಲ್ಲಿ ನಡೆದ ಫ್ಯಾಷನ್‌ ಶೋನ ಝಲಕ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಯಲ್ಲಿ ಯಶಸ್ವಿಯಾಗಿ ನಡೆದ ಧೃತಿ ಉತ್ಸವದಲ್ಲಿ (Dhruthi Utsava Fashion Show) ರಾಜ ರವಿವರ್ಮಾ ಪೇಟಿಂಗ್ಸ್‌ನಲ್ಲಿನ ಆಯ್ದ ಕೆಲವು ಕ್ಯಾರೆಕ್ಟರ್‌ಗಳಿಗೆ ತಕ್ಕಂತೆ ಕಾಣಿಸಿಕೊಂಡ ಮಹಿಳೆಯರು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು. ಟ್ರೆಡಿಷನಲ್‌ ಹಾಗೂ ಸಾಂಸ್ಕೃತಿಕ ಹಿನ್ನೆಲೆಗೆ ಹೊಂದುವಂತಹ ಉಡುಗೆ-ತೊಡುಗೆಗಳಲ್ಲಿ ಕಾಣಿಸಿಕೊಂಡು ನೋಡುಗರ ಮನಸೆಳೆದರು.

Stepped models

ರಾಜ ರವಿವರ್ಮಾ ಥೀಮ್‌ನ ಫ್ಯಾಷನ್‌ ಶೋ

ರಾಜ ರವಿವರ್ಮಾ ಥೀಮ್‌ ಇರಿಸಿಕೊಂಡು ಹಮ್ಮಿಕೊಳ್ಳಲಾದ ಈ ಮಹಿಳೆಯರ ಫ್ಯಾಷನ್‌ ಶೋನಲ್ಲಿ ಮೈಸೂರಿನ ಕಲಾವಿದ ಎಲ್‌. ಕೆ. ಆಚಾರ್ಯರವರು ರಚಿಸಿದ ಚಿತ್ತಾರಗಳು ಕೂಡ ಜೊತೆ ಜೊತೆಯಲ್ಲೆ ವೇದಿಕೆ ಮೇಲೆ ಅನಾವರಣಗೊಂಡವು.

Raja Ravivarma themed fashion show

ಹೆಜ್ಜೆ ಹಾಕಿದ ಹಾಕಿದ ಮಾಡೆಲ್‌ಗಳು

ರಾಧೆಯಾಗಿ ಅನಘಾ, ರಾಣಿ ಲಕ್ಷ್ಮಿ ಬಾಯಿಯಾಗಿ ಸಂಜನಾ, ತಂಬೂರ ಹಿಡಿದಿರುವ ಜಾನ್ಹವಿ, ಕುರುಪಮ್‌ ರಾಣಿಯಾಗಿ ಅನುಷಾ, ಚಂದ್ರನ ಬೆಳಕಿನಲ್ಲಿನ ರಾಧೆಯಾಗಿ ತನುಶ್ರೀ, ಜಾನಕಿ ಬಾಯಿಯಾಗಿ ಶಿಶಿರಾ, ಹಣ್ಣು ಹಿಡಿದಿರುವ ಮಹಿಳೆಯಾಗಿ ಲಿಖಿತಾ, ವಯಲೀನ್‌ ಹಿಡಿದ ಯುವತಿಯಾಗಿ ವೈಷ್ಣವಿ, ಮಗುವಿನೊಂದಿಗೆ ಮಹಿಳೆ ಹೀಗೆ ಪೇಟಿಂಗ್‌ನಲ್ಲಿರುವ ಮಹಿಳೆಯರಂತೆಯೇ ಸಿಂಗರಾಗೊಂಡ ಮಹಿಳೆಯರು ಫ್ಯಾಷನ್‌ ಶೋನಲ್ಲಿ ವಾಕ್‌ ಮಾಡಿ ಸೈ ಎನಿಸಿಕೊಂಡರು. ಇದು ರಾಜಾ ರವಿವರ್ಮಾ ಪೇಟಿಂಗ್‌ಗಳನ್ನು ಕಣ್ಮುಂದೆ ತಂದು ನಿಲ್ಲಿಸಿದವು.

Aparna Rao's words

ಅಪರ್ಣಾ ರಾವ್‌ ಮಾತು

“ಧೃತಿ ಮಾರುಕಟ್ಟೆ ಮಹಿಳೆಯರಿಂದ ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ನಡೆಯುತ್ತಿರುವ ಮಾರುಕಟ್ಟೆಯಾಗಿದೆ. ಇಲ್ಲಿ ಮಹಿಳೆಯರ ಸ್ವಾವಲಂಭಿ ಜೀವನಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಜೊತೆಗೆ ಮನೋರಂಜನೆ ನೀಡುವಂತಹ ಕಾರ್ಯಕ್ರಮಗಳನ್ನು ಧೃತಿ ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ. ಫ್ಯಾಷನ್‌ ಶೋ ಮಾತ್ರವಲ್ಲ, ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಯಶಸ್ವಿಯಾಗಿ ನಡೆಸಲಾಗಿದೆ” ಎಂದು ಸಂಸ್ಥಾಪಕರಾದ ಅಪರ್ಣಾ ರಾವ್‌ ಅವರು ವಿಸ್ತಾರ ನ್ಯೂಸ್‌ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞೆ ಗೀತಾ ರಾಮನುಜಂ, ಕಲಾವಿದರಾದ ಜಯಲಕ್ಷ್ಮಿ ಪಾಟೀಲ್‌, ದೀಪಾ ರವಿಶಂಕರ್‌ ಪಾಲ್ಗೊಂಡಿದ್ದರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Ambani Family Spends Crores On Designer Clothing: ಮದುವೆ ಪೂರ್ವ ಸಂಭ್ರಮದಲ್ಲಿ ಡ್ರೆಸ್‌ಗೆ ಕೋಟಿ ಕೋಟಿ ಹಣ ಚೆಲ್ಲಿದ ಅಂಬಾನಿ ಫ್ಯಾಮಿಲಿ!

Continue Reading

ಫ್ಯಾಷನ್

Ambani Family Spends Crores On Designer Clothing: ಮದುವೆ ಪೂರ್ವ ಸಂಭ್ರಮದಲ್ಲಿ ಡ್ರೆಸ್‌ಗೆ ಕೋಟಿ ಕೋಟಿ ಹಣ ಚೆಲ್ಲಿದ ಅಂಬಾನಿ ಫ್ಯಾಮಿಲಿ!

ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ರ ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ, ಕುಟುಂಬದವರು ಧರಿಸಿದ ಒಂದೊಂದು ಡಿಸೈನರ್‌ವೇರ್‌ಗಳಿಗೂ ಅಂಬಾನಿ ಫ್ಯಾಮಿಲಿ ಕೋಟಿಗಟ್ಟಲೇ ಹಣ ಸುರಿದಿದೆ. ಸರದಿಯಂತೆ 3 ದಿನಗಳ ಕಾಲ ಪ್ರತಿಯೊಬ್ಬರು ಧರಿಸಿದ ಒಂದೊಂದು ಡಿಸೈನರ್‌ವೇರ್‌ಗಳು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಈ ಕುರಿತಂತೆ (Ambani Family Spends Crores On Designer Clothing) ಫ್ಯಾಷನ್‌ ವಿಮರ್ಶಕರು ವಿಶ್ಲೇಶಿಸಿರುವುದೇನು? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Ambani Family Spends Crores On Designer Clothing
ಚಿತ್ರಗಳು : ಅಂಬಾನಿ ಕುಟುಂಬದವರ ಗ್ರ್ಯಾಂಡ್‌ ಡಿಸೈನರ್‌ವೇರ್‌ ಚಿತ್ರಗಳು.
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ರ ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ, ಕುಟುಂಬದವರು ಧರಿಸಿದ ಒಂದೊಂದು ಡಿಸೈನರ್‌ವೇರ್‌ಗಳಿಗೂ ಅಂಬಾನಿ ಫ್ಯಾಮಿಲಿ ಕೋಟಿಗಟ್ಟಲೇ ಹಣ ಸುರಿದಿದೆ. ಸರದಿಯಂತೆ 3 ದಿನಗಳ ಕಾಲ ಪ್ರತಿಯೊಬ್ಬರು ಧರಿಸಿದ ಒಂದೊಂದು ಡಿಸೈನರ್‌ವೇರ್‌ಗಳು ಫ್ಯಾಷನ್‌ ಪ್ರಿಯರ ಕಣ್ಣರಳಿಸಿರುವುದು ಮಾತ್ರವಲ್ಲ, ಸಾಮಾನ್ಯ ಜನರ ಹುಬ್ಬನ್ನೇರಿಸಿವೆ. ಅಬ್ಬಬ್ಬಾ., ಎನ್ನುವಷ್ಟರ ಮಟ್ಟಿಗೆ ಅಲ್ಟಿಮೆಟ್‌ ಹೈ ಫ್ಯಾಷನ್‌ಗೆ ನಾಂದಿ ಹಾಡಿದೆ. ಪರಿಣಾಮ, ಈಗಾಗಲೇ ಇವುಗಳ ರಿಪ್ಲಿಕಾ ಡಿಸೈನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಲು ಸಜ್ಜಾಗಿವೆ ಎಂದು ಮುಂಬರುವ ಫ್ಯಾಷನ್‌ ಬಗ್ಗೆ ಸುಳಿವು (Ambani Family Spends Crores On Designer Clothing) ನೀಡುತ್ತಾರೆ ಫ್ಯಾಷನಿಸ್ಟ್‌ಗಳು.

Nisha ambani
Nisha ambani

ರಾಯಲ್‌ ಫ್ಯಾಷನ್‌ ಕುರಿತಂತೆ ಫ್ಯಾಷನ್‌ ವಿಮರ್ಶಕರ ವಿಶ್ಲೇಷಣೆ

ಕಳೆದ ಮೂರ್ನಾಲ್ಕು ದಿನಗಳಿಂದ ಬಹುತೇಕ ಸೋಷಿಯಲ್‌ ಮೀಡಿಯಾದ ಫ್ಯಾಷನ್‌ ಪೇಜ್‌ಗಳಲ್ಲಿ, ಅಂಬಾನಿ ಫ್ಯಾಮಿಲಿ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳದ್ದೇ ವ್ಲಾಗ್‌ಗಳು! ಅವರೆಲ್ಲರೂ ಧರಿಸಿದ್ದ ಒಂದೊಂದು ಡಿಸೈನರ್‌ವೇರ್‌ಗಳಿಂದಿಡಿದು, ಬ್ರಾಂಡ್‌, ಲೆಬೆಲ್‌, ಆಕ್ಸೆಸರೀಸ್‌ ಹಾಗೂ ಮೇಕಪ್‌ ಕುರಿತಂತೆ ವಿಷಯಗಳೇ ಹರಿದಾಡುತ್ತಿದ್ದವು. ಆ ಮಟ್ಟಿಗೆ ಇದು ಸುದ್ದಿಯಾಗಿದೆ. ಇನ್ನು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸೆಲೆಬ್ರೆಟಿಗಳ ಬಗ್ಗೆ ಹೇಳುವುದೇ ಬೇಡ! ಅವರು ಧರಿಸಿದ ಔಟ್‌ಫಿಟ್‌ಗಳು, ಟ್ರೆಂಡ್‌ ಹುಟ್ಟು ಹಾಕುವಷ್ಟರ ಮಟ್ಟಿಗೆ ಪಬ್ಲಿಸಿಟಿ ಪಡೆದಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಿನತ್‌. ಇನ್ನು, ಪ್ರಯೋಗಾತ್ಮಕ ಗ್ರ್ಯಾಂಡ್‌ ದೇಸಿ ಡಿಸೈನರ್‌ವೇರ್‌ಗಳು ಮತ್ತು ಕಾಕ್‌ಟೈಲ್‌ ಔಟ್‌ಫಿಟ್‌ಗಳ ಒಂದೊಂದು ಡಿಸೈನ್‌ಗಳು ಕೂಡ ಮುಂಬರುವ ಸೀಸನ್‌ಗೆ ಕಾಣಿಸಿಕೊಳ್ಳುವುದು ಖಚಿತ ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್‌. ಇದೊಂದು ಜಾಗತೀಕ ಮಟ್ಟದಲ್ಲಿ ಸದ್ದು ಮಾಡಿದ ರಾಯಲ್‌ ಫ್ಯಾಷನ್‌ ವೆಡ್ಡಿಂಗ್‌ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ನಿಶಾ ಶರ್ಮಾ. ಅವರ ಪ್ರಕಾರ, ಇದೊಂದು ಲೈವ್‌ ರಾಯಲ್‌ ಫ್ಯಾಷನ್‌ ವೆಡ್ಡಿಂಗ್‌ ರ‍್ಯಾಂಪ್‌ನಂತಿತ್ತು ಎನ್ನುತ್ತಾರೆ.

Neetha ambani & Nisha ambani
Neetha ambani & Nisha ambani

ದುಬಾರಿ ಬೆಲೆಯ ಡಿಸೈನರ್‌ವೇರ್‌ಗಳು

3 ದಿನಗಳ ಕಾಲ ಸರದಿಯಂತೆ ಧರಿಸಿದ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳಿಗೆ ಕೋಟಿಗಟ್ಟಲೇ ಹಣ ಸುರಿಯಲಾಗಿದೆ. ಅವರೆಲ್ಲರ ಒಂದೊಂದು ಉಡುಪು, ಶ್ರೀ ಸಾಮಾನ್ಯನ ಲೈಫ ಅನ್ನೇ ಸೆಟಲ್‌ ಮಾಡುವಷ್ಟರ ಮಟ್ಟಿಗೆ ದುಬಾರಿ ಬೆಲೆ ಹೊಂದಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ವಿದ್ಯಾ.

ಪ್ರತಿಯೊಬ್ಬರದು ಯೂನಿಕ್‌ ಡಿಸೈನರ್‌ವೇರ್ಸ್

ಅನಂತ್‌-ರಾಧಿಕಾ ಮರ್ಚೆಂಟ್‌ ಮಾತ್ರವಲ್ಲ, ಮುಖೇಶ್‌-ನೀತಾ ಅಂಬಾನಿ, ಆಕಾಶ್–ಶ್ಲೋಕಾ , ಇಶಾ ಅಂಬಾನಿ ಸೇರಿದಂತೆ ಅಂಬಾನಿ ಫ್ಯಾಮಿಲಿಯವರೆಲ್ಲರ ಡಿಸೈನರ್‌ವೇರ್‌ಗಳು ಸೆಲೆಬ್ರೆಟಿ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಸೇರಿದಂತೆ ಇಂಟರ್‌ನ್ಯಾಷನಲ್‌ ಡಿಸೈನರ್‌ಗಳ ಲೆಬೆಲ್‌ನದ್ದಾಗಿವೆ. ಕಾಕ್‌ಟೈಲ್‌ ಗೌನ್‌ನಿಂದಿಡಿದು, ದೇಸಿ ಲೆಹೆಂಗಾ, ಸೂಟ್‌, ಸೀರೆ ಎಲ್ಲವೂ ವಜ್ರ-ವೈಡೂರ್ಯ ಹೊಂದಿರುವ ಯೂನಿಕ್‌ ಡಿಸೈನ್‌ದ್ದಾಗಿವೆ. ಡಿಸೈನ್‌ಗಳಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ! ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಫರ್ಟ್ ರಾಬರ್ಟ್.

Shloka & Radhika merchant
Shloka & Radhika merchant

ನಿಮಗೆ ಗೊತ್ತೇ!

ಇಶಾ ಅಂಬಾನಿ, ತಮ್ಮ ಮದುವೆಯಲ್ಲಿ, 150 ಕ್ಯಾರೆಟ್‌ ವಜ್ರ ಹಾಗೂ ವೈಡೂರ್ಯಗಳನ್ನು ಹೊಂದಿದ ಡಿಸೈನರ್‌ವೇರ್‌ಗಳನ್ನು ಧರಿಸಿದ್ದರಂತೆ. ಇನ್ನು, ಇದರ ಬೆಲೆ ಅಂದಾಜು 90 ಕೋಟಿ ರೂ.ಗಳನ್ನು ಮೀರಿಸಿತ್ತಂತೆ. ಹಾಗಾದಲ್ಲಿ, ಮುಂಬರುವ ಅನಂತ್‌-ಅಂಬಾನಿ ಮದುವೆಯ ಡಿಸೈನರ್‌ವೇರ್‌ಗಳಿಗೆ ಅಂಬಾನಿ ಕುಟುಂಬ ಎಷ್ಟು ಹಣ ಚೆಲ್ಲಬಹುದೆಂದು ನೀವೇ ಊಹಿಸಿ ನೋಡಿ!

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wardrobe Malfunction 2024: ಪಾಪ್‌ ಐಕಾನ್‌ ರಿಹಾನಾ ಡ್ರೆಸ್‌ ಎಡವಟ್ಟು! ಹೀಗಾಗದಂತೆ ಎಚ್ಚರ ವಹಿಸುವುದು ಹೇಗೆ?

Continue Reading

ಫ್ಯಾಷನ್

Nita Ambani: ಮಗನ ಮದುವೆ: ಕೈ ಮಗ್ಗದ ಕಾಂಚೀವರಂ ಸೀರೆಯುಟ್ಟು ಮಿಂಚಿದ ನೀತಾ ಅಂಬಾನಿ!

ಭಾರತೀಯ ಕಲೆ ಮತ್ತು ಸಂಸ್ಕೃತಿಯ ಅಪ್ಪಟ ಪ್ರೇಮಿಯಾಗಿರುವ ನೀತಾ ಅಂಬಾನಿ ಅವರು ಅನಂತ್- ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮದ ಸಂದರ್ಭದಲ್ಲೂ ಸ್ಥಳೀಯ ಕಲಾವಿದರ ಅಮೋಘ ಕಲಾ ಕೌಶಲದ ಕಡೆಗೆ ಗಮನ ಸೆಳೆಯುವುದಕ್ಕೆ ಪ್ರಯತ್ನಿಸಿದರು.

VISTARANEWS.COM


on

Nita Ambani Kanchipuram sari at Anant-Radhika pre-wedding
Koo

ಅನಂತ್ ಅಂಬಾನಿ (Nita Ambani) ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅವರು ಕೈಮಗ್ಗದ ಕಾಂಚೀಪುರಂ ಸೀರೆಯನ್ನು ಧರಿಸಿದ್ದರು. ಈ ಸೀರೆಯ ವಿಶೇಷತೆ ಏನೆಂದರೆ, ಇದು ದಕ್ಷಿಣ ಭಾರತದ ನೇಕಾರರು ಕೈಯಿಂದಲೇ ಸಿದ್ಧಪಡಿಸಿದ್ದಾಗಿದೆ. ಇದನ್ನು ಕೈ ಮಗ್ಗದ ಸೀರೆ ಎನ್ನಲಾಗುತ್ತದೆ. ಯಂತ್ರಗಳಿಂದ ಅಲ್ಲದೆ, ಕುಶಲಕರ್ಮಿಗಳು ತಮಗೆ ತಲೆತಲಾಂತರದಿಂದ ಬಂದಂಥ ಅದ್ಭುತ ಕಲೆಯನ್ನು ಮೂಡಿಸಿರುವಂಥ ಮೇರು ಕಲಾಕೃತಿ ಇದು. ಭಾರತೀಯ ಸಾಂಪ್ರದಾಯಿಕ ಕರಕುಶಲತೆ ಬಗ್ಗೆ ನೀತಾ ಅಂಬಾನಿ ಅವರಿಗೆ ಇರುವಂಥ ಗೌರವ, ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಇದು ಇನ್ನೊಂದು ಸುಮಧುರ ಕ್ಷಣವಾಗಿತ್ತು.

ಭಾರತೀಯ ಕಲೆ ಮತ್ತು ಸಂಸ್ಕೃತಿಯ ಅಪ್ಪಟ ಪ್ರೇಮಿಯಾಗಿರುವ ನೀತಾ ಅಂಬಾನಿ ಅವರು ಅನಂತ್- ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮದ ಸಂದರ್ಭದಲ್ಲೂ ಸ್ಥಳೀಯ ಕಲಾವಿದರ ಅಮೋಘ ಕಲಾ ಕೌಶಲದ ಕಡೆಗೆ ಗಮನ ಸೆಳೆಯುವುದಕ್ಕೆ ಪ್ರಯತ್ನಿಸಿದರು.

ರಿಲಯನ್ಸ್ ನ ಸ್ವದೇಶ್ ಎಂಬ ಉಪಕ್ರಮವು ಸಮುದಾಯಗಳ ಕೈ ಬಲಪಡಿಸುತ್ತದೆ ಹಾಗೂ ಪಾರಂಪರಿಕ ಕರಕುಶಲತೆಯ ಸಂರಕ್ಷಣೆ ಮಾಡುತ್ತದೆ.

ಇದನ್ನೂ ಓದಿ: Nita Ambani: ಅನಂತ್ ಅಂಬಾನಿ ಮದುವೆ: ವಿಶ್ವಂಭರಿ ಸ್ತುತಿಗೆ ನೀತಾ ಅಂಬಾನಿ ಅದ್ಭುತ ನೃತ್ಯ!

ವಿಶ್ವಂಭರಿ ಸ್ತುತಿಗೆ ಅದ್ಭುತ ನೃತ್ಯ ಪ್ರದರ್ಶನ ನೀಡಿದ ನೀತಾ ಅಂಬಾನಿ

ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಮಗ ಅನಂತ್ ಹಾಗೂ ರಾಧಿಕಾ ಮರ್ಚಂಟ್ ವಿವಾಹ ಪೂರ್ವ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದಿದೆ. ನೀತಾ ಅಂಬಾನಿ ಹಾಗೂ ಅವರ ಜತೆಗೆ ಇತರರು ಸೇರಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದ್ದಾರೆ. ವಿಶ್ವಂಭರಿ ಸ್ತುತಿಗೆ ನೃತ್ಯ ಮಾಡಿದ್ದು, ವಿಶಾಲವಾದ ವೇದಿಕೆಯಲ್ಲಿ ಈ ಸಮಾರಂಭಕ್ಕೆ ಇನ್ನಷ್ಟು ಕಳೆ ಕಟ್ಟುವಂತೆ ಮಾಡಿದ್ದಾರೆ.

ಅಂದ ಹಾಗೆ, ಅನಂತ್ ಅಂಬಾನಿ ಅವರ ಭಾವೀ ಪತ್ನಿ ರಾಧಿಕಾ ಮರ್ಚಂಟ್ ಸಹ ಅತ್ಯುತ್ತಮ ನೃತ್ಯಪಟು. ಹಾಗೂ ಕುಟುಂಬದ ಕಾರ್ಯಕ್ರಮಗಳಲ್ಲಿ ಸ್ವತಃ ನೀತಾ ಅಂಬಾನಿ ಅವರು ಈ ಹಿಂದೆಯೂ ಸಹ ನೃತ್ಯ ಪ್ರದರ್ಶನವನ್ನು ನೀಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಭಾರತೀಯ ಸಂಪ್ರದಾಯದಂತೆ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಅತಿಥಿ ಸತ್ಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವತಾ ಆರಾಧನೆ ಹೀಗೆ ವಿವಿಧ ರೀತಿಯ ಆಚರಣೆಗಳನ್ನು ಮಾಡಲಾಗುತ್ತದೆ.

Continue Reading
Advertisement
Ravichandran Ashwin, Jonny Bairstow
ಕ್ರೀಡೆ54 seconds ago

IND Vs ENG 5th Test: 100ನೇ ಟೆಸ್ಟ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ಬೇರ್‌ ಸ್ಟೊ, ಅಶ್ವಿನ್

KPSC Secretary
ನೌಕರರ ಕಾರ್ನರ್13 mins ago

KPSC Transfer : ಕೆಪಿಎಸ್ಸಿ ಕಾರ್ಯದರ್ಶಿಯಾಗಿ ಡಾ. ರಾಕೇಶ್‌ ಕುಮಾರ್‌ ನೇಮಕ; ಲತಾ ಕುಮಾರಿ ವರ್ಗ

Adi Shankara
ಪ್ರಮುಖ ಸುದ್ದಿ15 mins ago

ತತ್ತ್ವ ಶಂಕರ: ಶಂಕರ; ಲೋಕ ಕಲ್ಯಾಣಕ್ಕಾಗಿ ಬಂದ ಅವತಾರ ಪುರುಷ

Death Threat to Modi threatens to kill PM Nrendra Modi and Yogi Adityanath and Nasir Brother Khaja apologises
ಯಾದಗಿರಿ20 mins ago

Death Threat to Modi: ಮೋದಿ, ಯೋಗಿಗೆ ಜೀವ ಬೆದರಿಕೆ ಹಾಕಿದ್ದ ನಾಸಿರ್;‌ ಕ್ಷಮೆ ಕೋರಿದ ಸಹೋದರ ಖಾಜಾ

tpl
ಕಿರುತೆರೆ25 mins ago

TPL Seson 3: ಟಿಪಿಎಲ್ ಸೀಸನ್-3ಕ್ಕೆ ತೆರೆ; ಕಿರುತೆರೆ ಕ್ರಿಕೆಟ್ ಲೀಗ್‌ನ ಚಾಂಪಿಯನ್‌ ಪಟ್ಟ ಯಾರಿಗೆ?

Rohit Sharma
ಕ್ರೀಡೆ30 mins ago

IND vs ENG 5th Test: ವಿಶ್ವ ಟೆಸ್ಟ್​ನಲ್ಲಿ ದಾಖಲೆ ಬರೆಯಲು ರೋಹಿತ್​ಗೆ ಬೇಕು ಕೇವಲ ಒಂದು ಸಿಕ್ಸರ್​

Neetha Ambani Jewel Love
ಫ್ಯಾಷನ್30 mins ago

Neetha Ambani Jewel Love: ನೀತಾ ಅಂಬಾನಿಯ ದುಬಾರಿ ಜ್ಯುವೆಲರಿ ಪ್ರೇಮ!

Rahul Gandhi
ದೇಶ31 mins ago

Rahul Gandhi: ಇಡೀ ಭಾರತದ ಎಕ್ಸ್‌ರೇ ತೆಗೆಯಬೇಕು ಎಂದ ರಾಹುಲ್‌ ಗಾಂಧಿ; ಹೀಗೆ ಹೇಳಿದ್ದೇಕೆ?

ram charan
ಸಿನಿಮಾ51 mins ago

Ram Charan: ದಕ್ಷಿಣ ಭಾರತದ ಸ್ಟಾರ್‌ ರಾಮ್‌ ಚರಣ್‌ಗೆ ಶಾರುಖ್‌ ಖಾನ್‌ನಿಂದ ಅವಮಾನ? ಫ್ಯಾನ್ಸ್‌ ಗರಂ ಆಗಿದ್ದೇಕೆ?

Man harasses Wife for giving birth to girl child
ಚಿಕ್ಕಬಳ್ಳಾಪುರ52 mins ago

Baby Girl : ಹೆಣ್ಣು ಮಗುವೆಂದು ಗಂಡನ ತಾತ್ಸಾರ; ದಾನ ಮಾಡಲು ಮುಂದಾದ ನತದೃಷ್ಟ ತಾಯಿ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ1 day ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ1 day ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ3 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌