Site icon Vistara News

Varamahalakshmi Festival 2024: ಹಬ್ಬಕ್ಕೆ ಮಾರುಕಟ್ಟೆ ಪ್ರವೇಶಿಸಿವೆ ರೆಡಿಮೇಡ್‌ ವರಮಹಾಲಕ್ಷ್ಮಿ ಮೂರ್ತಿಗಳು!

Varamahalakshmi Festival 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುಂಬರುವ ಹಬ್ಬದ ಅಂಗವಾಗಿ (Varamahalakshmi Festival 2024) ನಾನಾ ರೂಪದಲ್ಲಿ ಅಲಂಕೃತಗೊಂಡ ರೆಡಿಮೇಡ್‌ ವರಮಹಾಲಕ್ಷ್ಮಿ ಉತ್ಸವ ಮೂರ್ತಿಗಳು ಈಗಾಗಲೇ ಮಾರುಕಟ್ಟೆ ಪ್ರವೇಶಿಸಿವೆ. ಹೌದು. ವರಮಹಾಲಕ್ಷ್ಮಿ ಹಬ್ಬ ಮಹಿಳೆಯರ ಫೇವರೇಟ್‌ ಹಬ್ಬ. ಈ ಹಬ್ಬಕ್ಕೆ ಪೂರಕ ಎಂಬಂತೆ, ಈಗಾಗಲೇ ಲೆಕ್ಕವಿಲ್ಲದಷ್ಟು ಬಗೆಯ ಅಲಂಕಾರಿಕ ಸಾಮಗ್ರಿಗಳು ಕಾಲಿಟ್ಟಿದ್ದು, ಇವುಗಳೊಂದಿಗೆ ಕಂಪ್ಲೀಟ್‌ ಅಲಂಕೃತಗೊಂಡ ರೆಡಿಮೇಡ್‌ ವರಮಹಾಲಕ್ಷ್ಮಿಯ ಉತ್ಸವಮೂರ್ತಿಗಳು ಬಂದಿವೆ. ಶ್ರೀಮಂತರು, ಉದ್ಯೋಗಸ್ಥರು ಹಾಗೂ ಸಮಯದ ಅಭಾವವಿರುವವರು, ಇನ್ಮುಂದೆ ಹಬ್ಬದ ದೇವಿಯ ಅಲಂಕಾರದ ಬಗ್ಗೆ ಯೋಚಿಸಬೇಕಾಗಿಲ್ಲ! ಇಂತಹವರಿಗೆಂದೇ ರೆಡಿಮೇಡ್‌ ವರಮಹಾಲಕ್ಷ್ಮಿಯರು ಅಂದರೇ, ಅಲಂಕೃತಗೊಂಡ ಬ್ಯೂಟಿಫುಲ್‌ ಉತ್ಸವ ಮೂರ್ತಿಗಳು ಆಗಮಿಸಿವೆ.

ಕಾನ್ಸೆಪ್ಟ್‌ಗೆ ತಕ್ಕಂತೆ ದೊರೆಯುವ ರೆಡಿಮೇಡ್‌ ವರಮಹಾಲಕ್ಷ್ಮಿ

ಮನೆಯಲ್ಲಿ ಹಬ್ಬ ಆಚರಿಸುವ ಕಾನ್ಸೆಪ್ಟ್‌ಗೆ ತಕ್ಕಂತೆ ವರಮಹಾಲಕ್ಷ್ಮಿಯ ಉತ್ಸವ ಮೂರ್ತಿಗಳು ದೊರಕುತ್ತಿವೆ. ಉದಾಹರಣೆಗೆ, ಫ್ಲೋರಲ್‌ ಥೀಮ್‌ ಆಗಿದ್ದಲ್ಲಿ, ಅಲಂಕೃತಗೊಂಡ ದೇವಿಯ ಕಂಪ್ಲೀಟ್‌ ಉಡುಗೆ-ತೊಡುಗೆ ಹಾಗೂ ಅಲಂಕಾರಿಕ ಆಕ್ಸೆಸರೀಸ್‌ಗಳು ಹೂವಿನ ಡಿಸೈನ್‌ನಿಂದ ಅಲಂಕೃತಗೊಂಡಿರುತ್ತವೆ. ಹಸಿರು ಕಲರ್‌ಗೆ ಪ್ರಾಮುಖ್ಯತೆ ನೀಡುವವರಿಗೆಂದು ಈ ಕಲರ್‌ನ ಸೀರೆ, ಬಳೆ, ಆಭರಣ ಧರಿಸಿರುವ ವರಮಹಾಲಕ್ಷ್ಮಿ ದೊರೆಯುತ್ತವೆ. ಜ್ಯುವೆಲರಿಗಳಿಂದಲೇ ಸೆಳೆಯುವಂಥವು, ಮಧುರೈ ಮೀನಾಕ್ಷಿ, ಕಂಚಿ ಕಾಮಾಕ್ಷಿ, ದಾವಣಿ-ಲಂಗ ಧರಿಸಿದ ಕನ್ಯಾ ಕುಮಾರಿಯಂತೆ ಕಾಣುವ ವರಮಹಾಲಕ್ಷ್ಮಿ, ಕಮಲದ ಹೂವಿನೊಳಗೆ ಕುಳಿತ ಲಕ್ಷ್ಮಿ, ಆದಿ ಶಕ್ತಿಯಂತೆ ಕಾಣಿಸುವ ನಿಂತ ವರಮಹಾಲಕ್ಷ್ಮಿ ಸೇರಿದಂತೆ ನಾನಾ ಕಾನ್ಸೆಪ್ಸ್ಟಗೆ ತಕ್ಕಂತೆ ಅಲಂಕೃತಗೊಂಡ ವರಮಹಾಲಕ್ಷ್ಮಿ ಉತ್ಸವ ಮೂರ್ತಿಗಳು ಗಾಂಧೀ ಬಜಾರ್‌, ಮಲ್ಲೇಶ್ವರದ ಮುಖ್ಯ ರಸ್ತೆಯ ಸುತ್ತ-ಮುತ್ತ, ಜಯನಗರ 4 ನೇ ಬ್ಲಾಕ್‌ ಸೇರಿದಂತೆ ನಾನಾ ಮಾರುಕಟ್ಟೆಗಳಲ್ಲಿ ರಾರಾಜಿಸುತ್ತಿವೆ.

ಅಲಂಕಾರಕ್ಕೆ ತಕ್ಕಂತೆ ಬೆಲೆ ನಿಗದಿ

ಇನ್ನು, ಇವುಗಳ ಬೆಲೆ ಆಯಾ ವರಮಹಾಲಕ್ಷ್ಮಿ ದೇವಿಯ ಸೈಜ್‌ ಹಾಗೂ ಡೆಕೋರೇಷನ್‌ಗೆ ತಕ್ಕಂತೆ ನಿಗದಿಯಾಗಿರುತ್ತದೆ. ಚಿಕ್ಕ ಉತ್ಸವಮೂರ್ತಿಗೆ ಕಡಿಮೆಯೆಂದರೂ 1 ಸಾವಿರ ರೂ.ಗಳ ಬೆಲೆ ಇರುತ್ತದೆ. ಎತ್ತರ ಹಾಗೂ ಡೆಕೋರೇಷನ್‌ ಆಧಾರದ ಮೇಲೆ ಬೆಲೆ ನಿಗಧಿಯಾಗಿರುತ್ತದೆ. ಗರಿಷ್ಠ ಎಂದರೂ 30-40 ಸಾವಿರ ರೂ.ಗಳ ಬೆಲೆಯಿದೆ ಎನ್ನುತ್ತಾರೆ ಗಾಂಧಿ ಬಜಾರ್‌ ಶಾಪ್‌ವೊಂದರ ಮಾರಾಟಗಾರರು. ಅಲ್ಲದೇ ಗ್ರಾಹಕರಿಗೆ ಇವುಗಳ ಉಚಿತ ಹೋಮ್‌ ಡಿಲಿವಿರಿ ಸೌಲಭ್ಯ ಕೂಡ ನೀಡಲಾಗುತ್ತಿದೆ ಎನ್ನುತ್ತಾರೆ ಮಲ್ಲೇಶ್ವರದ ಅಂಗಡಿಯೊಂದರ ಸೇಲ್ಸ್ ಮ್ಯಾನ್‌.

ಇದನ್ನೂ ಓದಿ: Varamahalaxmi Decoration: ವರಮಹಾಲಕ್ಷ್ಮಿಯ ಸಿಂಗಾರಕ್ಕೂ ಬಂತು ಮಿನಿ ವಸ್ತ್ರಾಭರಣಗಳು!

ರೆಡಿಮೇಡ್‌ ವರಮಹಾಲಕ್ಷ್ಮಿ ಖರೀದಿಸುವುದಾದಲ್ಲಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version