Varamahalaxmi Decoration: ವರಮಹಾಲಕ್ಷ್ಮಿಯ ಸಿಂಗಾರಕ್ಕೂ ಬಂತು ಮಿನಿ ವಸ್ತ್ರಾಭರಣಗಳು! - Vistara News

ಧಾರ್ಮಿಕ

Varamahalaxmi Decoration: ವರಮಹಾಲಕ್ಷ್ಮಿಯ ಸಿಂಗಾರಕ್ಕೂ ಬಂತು ಮಿನಿ ವಸ್ತ್ರಾಭರಣಗಳು!

Varamahalaxmi Decoration: ಹಬ್ಬದಂದು ಮನೆಯಲ್ಲಿ ಕೂರಿಸುವ ವರಮಹಾಲಕ್ಷ್ಮಿಯನ್ನು ಆಕರ್ಷಕವಾಗಿ ಸಿಂಗರಿಸಲು ಮಾರುಕಟ್ಟೆಗೆ ನಾನಾ ಬಗೆಯ ಪುಟ್ಟ ಪುಟ್ಟ ವಸ್ತ್ರಾಭರಣಗಳು ಲಗ್ಗೆ ಇಟ್ಟಿವೆ. ಏನೆಲ್ಲಾ ಬಂದಿವೆ? ಈ ಬಾರಿ ಯಾವ್ಯಾವ ಡಿಸೈನ್‌ನವು ಲಭ್ಯ ಎಂಬುದರ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Varamahalaxmi Decoration
ಚಿತ್ರಗಳು: ಮಿಂಚು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುಂಬರುವ ಹಬ್ಬಕ್ಕೆ ವರಮಹಾಲಕ್ಷ್ಮಿ (Varamahalaxmi Decoration) ದೇವಿಯನ್ನು ಆಕರ್ಷಕವಾಗಿ ಅಲಂಕರಿಸುವ ಪುಟ್ಟ ಪುಟ್ಟ ವಸ್ತ್ರಾಭರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

Varamahalaxmi Decoration

ವರಮಹಾಲಕ್ಷ್ಮಿಯ ಸಿಂಗಾರಕ್ಕೆ ವಸ್ತ್ರಾಭರಣ

ವರಮಹಾಲಕ್ಷ್ಮಿ ದೇವಿಯನ್ನು ಸಿಂಗಾರಗೊಳಿಸುವಂತಹ ಬಣ್ಣ ಬಣ್ಣದ ರೇ‍ಷ್ಟೇ ಹಾಗೂ ಬ್ರೋಕೆಡ್‌ನ ಪುಟ್ಟ ಸೀರೆ, ಮಿನಿ ದಾವಣಿ ಹಾಗೂ ಲೆಹೆಂಗಾದಂತಹ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಅವರವರ ಮನೆಯ ಡೆಕೋರೇಷನ್‌ ಥೀಮ್‌ಗೆ ತಕ್ಕಂತೆ ದೇವಿ ಲಕ್ಷ್ಮಿಯನ್ನು ಸುಂದರವಾಗಿ ಬಿಂಬಿಸಬಲ್ಲ, ಈ ದೇವಿ ವಸ್ತ್ರಗಳು, ಸಾಕಷ್ಟು ಶೇಡ್‌ಗಳಲ್ಲಿ ಹಾಗೂ ಡಿಸೈನ್‌ನಲ್ಲಿ ಸಿಗುತ್ತಿವೆ.

Varamahalaxmi Decoration

ವರಮಹಾಲಕ್ಷ್ಮಿಗೆ ಮಿನಿ ಆಭರಣಗಳು

ಇವುಗಳೊಂದಿಗೆ ಟ್ರೆಡಿಷನಲ್‌ ಲುಕ್‌ ನೀಡುವ ಕೇಶಾಲಂಕಾರದ ಪುಟ್ಟ ಜಡೆ, ಕುಚ್ಚು, ಜಡೆ ನಾಗರ, ಕತ್ತಿಗೆ ಪುಟ್ಟ ತಾಳಿ, ಕಾಸಿನ ಸರ, ಹರಳಿನ ಲೇಯರ್‌ ಹಾರ, ನೆಕ್ಲೇಸ್‌, ಮೂಗುತಿ, ಕಿವಿಯೊಲೆ, ಕಿವಿ ಸರಪಳಿ, ಡಾಬು, ಕಿರೀಟ ಸೇರಿದಂತೆ ಎಲ್ಲವೂ ಮಿನಿ ಸೈಝಿನಲ್ಲಿ, ಡಿಸೈನ್‌ಗಳಲ್ಲಿ ಬಂದಿವೆ.

Varamahalaxmi Decoration

ಹೆಚ್ಚಿದ ಮಾರಾಟ

ಪೂಜಿಸುವ ಬಿಂದಿಗೆಗೆ ಉಡಿಸುವ ಸೀರೆಗಳು, ದೇವಿಯ ಬೊಂಬೆಗೆ ಉಡಿಸುವ ಸೀರೆಗಳು ಅತಿ ಹೆಚ್ಚಾಗಿ ಮಾರಾಟವಾಗುತ್ತಿವೆ. ಇನ್ನು, ದೇವಿಯ ತೋಳಿಗೆ ಸಿಕ್ಕಿಸುವ ಹರಳಿನ ಅಸ್ತ್ರಗಳು, ಮಾತಾಪಟ್ಟಿ, ಕಿರೀಟದ ಹಿಂದಿನ ಚಕ್ರ, ಮೊಗ್ಗಿನ ಜಡೆ, ರೆಡಿಮೇಡ್‌ ಹರಳಿನ ತುರುಬು, ಸೊಂಟದ ಪಟ್ಟಿ, ಕಾಲ್ಗೆಜ್ಜೆ ಎಲ್ಲವೂ ನಾನಾ ಕಲರ್‌ಗಳಲ್ಲಿ ಹಾಗೂ ಡಿಸೈನ್‌ಗಳಲ್ಲಿ ಬಂದಿದ್ದು, ಅತಿ ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಗಾಂಧಿ ಬಜಾರ್‌ ಶಾಪ್‌ವೊಂದರ ಮಾರಾಟಗಾರರು.

Varamahalaxmi Decoration

ವೆರೈಟಿ ಅಲಂಕಾರಿಕ ವಸ್ತ್ರಾಭರಣಗಳು

ಆಯಾ ಮನೆಯಲ್ಲಿ ಕೂರಿಸುವ ಅಥವಾ ಪ್ರತಿಷ್ಠಾಪಿಸುವ ವರಮಹಾಲಕ್ಷ್ಮಿಯ ಆಕಾರಕ್ಕೆ ತಕ್ಕಂತೆಯೂ ಈ ವಸ್ತ್ರಾಭರಣಗಳು ದೊರಕುತ್ತಿವೆ. ಉದಾಹರಣೆಗೆ., ಪುಟ್ಟ ಚೊಂಬನ್ನು ದೇವಿಯಂತೆ ಕೂರಿಸಿ, ಆರಾಧಿಸುವವರಿಗೆಂದೇ ಚಿಕ್ಕ ಸೈಜಿನ ವಸ್ತ್ರಗಳು ದೊರೆಯುತ್ತಿವೆ. ಅವುಗಳಲ್ಲಿ ರೇಷ್ಮೆ, ಕಾಟನ್‌, ಬಾರ್ಡರ್‌ನವು, ಬ್ರೋಕೆಡ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. 100 ರೂ.ಗಳಿಂದಿಡಿದು 1000 ಸಾವಿರ ರೂ. ಗಳವರೆಗೂ ಅವುಗಳಿಗೆ ಬೆಲೆ ನಿಗಧಿಯಾಗಿದೆ ಎನ್ನುತ್ತಾರೆ ಮಾರಾಟಗಾರರು.

  • ಪೂಜಿಸುವ ದೇವಿಯ ಸೈಝಿಗೆ ತಕ್ಕಂತಹ ಮಿನಿ ಡಿಸೈನರ್‌ವೇರ್‌ ಕೊಳ್ಳಿ.
  • ವಸ್ತ್ರಾಭರಣಗಳನ್ನು ಬಳಸುವಾಗ ತೆಗೆದು ನಂತರ ಹಾಗೆಯೇ ಇಟ್ಟು ಪ್ಯಾಕಿಂಗ್‌ ಮಾಡಿ. ವರ್ಷಗಟ್ಟಲೇ ಬಣ್ಣ ಮಾಸುವುದಿಲ್ಲ.
  • ಹೆಚ್ಚಿನ ಬಿಲ್‌ಗೆ ಉಚಿತ ಹೋಮ್‌ ಡಿಲಿವೆರಿ ಸೌಲಭ್ಯ ನೀಡುವುದನ್ನು, ಬಳಸಿಕೊಳ್ಳಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Shravana Shopping 2024: ಮಾರುಕಟ್ಟೆಯಲ್ಲೀಗ ಶ್ರಾವಣದ ಟ್ರೆಂಡ್‌; ಶುರುವಾಗಿದೆ ಶಾಪಿಂಗ್‌ ಭರಾಟೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Latest

Shravan 2024: ಶ್ರಾವಣ ಶನಿವಾರದ ವಿಶೇಷ ಏನು? ಇದನ್ನು ಹೇಗೆ ಆಚರಿಸಿದರೆ ದೋಷ ನಿವಾರಣೆಯಾಗುತ್ತದೆ?

Shravan 2024: ಶ್ರಾವಣ ಮಾಸದಲ್ಲಿ ಬರುವ ಪ್ರತಿವಾರಗಳಿಗೆ ವಿಶೇಷ ಮಹತ್ವವಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶನಿವಾರವನ್ನು ಶ್ರಾವಣ ಶನಿವಾರ ಅಥವಾ ಸಂಪತ್ ಶನಿವಾರ ಎಂದು ಕರೆಯುತ್ತಾರೆ. ಈ ದಿನ ಲಕ್ಷ್ಮಿ-ವೆಂಕಟೇಶ್ವರ, ಹನುಮಂತ ಹಾಗೂ ಶನಿದೇವನನ್ನು ಪೂಜಿಸಲಾಗುತ್ತದೆ.ಶ್ರಾವಣ ಶನಿವಾರದ ಪೂಜಾ ವಿಧಾನಗಳು ಏನು? ಹೇಗೆ ಇದನ್ನು ಮಾಡಬಹುದು ಎಂಬುದಕ್ಕೆ ಇಲ್ಲಿದೆ ಮಾಹಿತಿ.

VISTARANEWS.COM


on

Shravan 2024
Koo
  • ಪವಿತ್ರಾ ಶೆಟ್ಟಿ

ಶ್ರಾವಣ ಮಾಸ ಆಗಸ್ಟ್ 5ರಿಂದ ಪ್ರಾರಂಭವಾಗಿದೆ. ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಶ್ರಾವಣ ಮಾಸ ಕೊನೆಗೊಳ್ಳುತ್ತದೆ. ಈ ಮಾಸ ಹಿಂದೂಗಳಿಗೆ ಬಹಳ ಪವಿತ್ರವಾದ ಮಾಸ. ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಹಾಗಾಗಿ ಈ ಮಾಸದಲ್ಲಿ ಶಿವನ ಆರಾಧನೆಯ ಜೊತೆಗೆ ವಿಷ್ಣು, ಲಕ್ಷ್ಮಿ, ಪಾರ್ವತಿ ಮುಂತಾದ ದೇವರುಗಳ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಪ್ರತಿವಾರಗಳಿಗೆ ವಿಶೇಷ ಮಹತ್ವವಿದೆ. ಹಾಗಾಗಿ ಶ್ರಾವಣ ಮಾಸ (Shravan 2024)ದಲ್ಲಿ ಬರುವ ಪ್ರತಿ ಶನಿವಾರವನ್ನು ಶ್ರಾವಣ ಶನಿವಾರ ಅಥವಾ ಸಂಪತ್ ಶನಿವಾರ ಎಂದು ಕರೆಯುತ್ತಾರೆ. ಈ ದಿನ ಲಕ್ಷ್ಮಿ ವೆಂಕಟೇಶ್ವರ, ಹನುಮಂತ ಹಾಗೂ ಶನಿದೇವನನ್ನು ಪೂಜಿಸಲಾಗುತ್ತದೆ. ಆ ವರ್ಷ ಶ್ರಾವಣ ಶನಿವಾರ ಆಗಸ್ಟ್ 10, 17, 24 ಹಾಗೂ 31ರಂದು ಬಂದಿದೆ. ಹಾಗಾಗಿ ಈ ಶ್ರಾವಣ ಶನಿವಾರದ ಪೂಜಾ ವಿಧಾನಗಳನ್ನು ತಿಳಿದುಕೊಳ್ಳಿ.

Shravan 2024
Shravan 2024

ಲಕ್ಷ್ಮಿ-ವೆಂಕಟೇಶ್ವರ ಪೂಜೆ:

ಶ್ರಾವಣ ಶನಿವಾರದಂದು ವಿಶೇಷವಾಗಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಈ ದಿನ ವೆಂಕಟೇಶ್ವರ ಸ್ವಾಮಿಯನ್ನು ಪೂಜಿಸುವುದರಿಂದ ವಿಶೇಷ ಫಲಗಳು ದೊರೆಯುತ್ತದೆ ಎಂಬ ನಂಬಿಕೆ ಇದೆ. ಶ್ರಾವಣ ಶನಿವಾರದ ದಿನ ಮನೆಯನ್ನು ಸ್ವಚ್ಛಗೊಳಿಸಿ ಮನೆಯ ತುಳಸಿಯ ಕಟ್ಟೆಯ ಮುಂದೆ ಶಂಖ, ಚಕ್ರದ ರಂಗೋಲಿಯನ್ನು ಹಾಕಿ. ಹಾಗೇ ಮನೆಯೊಳಗೆ ವೆಂಕಟೇಶ್ವರ ಸ್ಮಾವಿಯ ಪೋಟೊ ಇಟ್ಟು ಅದಕ್ಕೆ ತುಳಸಿ ಹಾರವನ್ನು ಹಾಕಿ ಹಾಗೂ ಹಳದಿ ಬಣ್ಣದ ಹೂ ಸ್ವಾಮಿಗೆ ಪ್ರಿಯವಾದ್ದರಿಂದ ಹಳದಿ ಬಣ್ಣದ ಹೂಗಳಿಂದ ಅಲಂಕಾರ ಮಾಡಿ. ಹಾಗೇ ಸ್ವಾಮಿಯ ಮುಂದೆ ಅಕ್ಕಿಹಿಟ್ಟಿನಿಂದ ತಯಾರಿಸಿದ ದೀಪವನ್ನು ಬೆಳಗಿಸಿ. ಈ ದೀಪವನ್ನು ಅಕ್ಕಿಹಿಟ್ಟು, ಬೆಲ್ಲ ಮತ್ತು ತುಪ್ಪವನ್ನು ಬೆರೆಸಿ ತಯಾರಿಸುತ್ತಾರೆ. ಹಾಗೇ ಪೂಜೆಯ ವೇಳೆ ವೆಂಕಟೇಶ್ವರ ಸ್ವಾಮಿ ನಾಮಗಳನ್ನು ಪಠಿಸುತ್ತಾ ದೀಪಾರಾಧನೆ ಮಾಡಿದರೆ ಒಳ್ಳೆಯದು. ದೇವರಿಗೆ ಸಿಹಿ ನೈವೇದ್ಯವನ್ನು ಅರ್ಪಿಸಿ.

ಅಲ್ಲದೇ ಶ್ರಾವಣ ಶನಿವಾರದಂದು ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸುವವರು ಪಡಿ ಕೇಳುವ ಶಾಸ್ತ್ರವನ್ನು ಮಾಡಬೇಕು. ಅಂದರೆ ಶುಭ್ರವಾದ ಬಟ್ಟೆ ತೊಟ್ಟು ಹಣೆಗೆ ಗೋವಿಂದನ ನಾಮವನ್ನು ಹಚ್ಚಿ ತಾಮ್ರದ ಚೊಂಬನ್ನು ಹಿಡಿದುಕೊಂಡು ಕನಿಷ್ಠ ಐದು ಮನೆಗೆ ಹೋಗಿ ಭಿಕ್ಷೆ ಅಥವಾ ಪಡಿ ಕೇಳಬೇಕು. ಅದರಿಂದ ಬಂದ ಧಾನ್ಯದಿಂದ ಸ್ವಾಮಿಗೆ ನೈವೇದ್ಯ ಅರ್ಪಿಸಬೇಕು.

Shravan 2024
Shravan 2024

ಶನಿದೇವನ ಪೂಜೆ :

ನಿಮ್ಮ ಜಾತಕದಲ್ಲಿ ಶನಿ ಸಾಡೇಸಾತಿ, ಅಷ್ಟಮ ಶನಿ, ಪಂಚಮ ಶನಿ ಮುಂತಾದ ಶನಿ ದೋಷವಿದ್ದರೆ ಶ್ರಾವಣ ಶನಿವಾರ ಪೂಜೆ ಮಾಡುವುದು ಅವಶ್ಯಕ. ಶ್ರಾವಣ ಶನಿವಾರದಂದು ಶನಿ ಪೂಜೆ ಮಾಡಿದರೆ ಶನಿ ದೋಷ ನಿವಾರಣೆಯಾಗುತ್ತದೆ. ಈ ದಿನ ಶನಿಯ ಜೊತೆಗೆ ಶಿವ ಪೂಜೆ ಮಾಡುತ್ತಾ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಹಾಗೇ ಶನಿ ಬೀಜಮಂತ್ರವನ್ನು ಪಠಿಸಿ. ಹಾಗೇ ಈ ದಿನ ಶನಿದೇವಾಲಯಕ್ಕೆ ಹೋಗಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿದರೆ ಒಳ್ಳೆಯದು.

Shravan 2024
Shravan 2024

ಹನುಮಂತನ ಪೂಜೆ:

ಶ್ರಾವಣ ಶನಿವಾರದಂದು ಹನುಮಂತ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಎದುರಾದ ಸಂಕಷ್ಟಗಳು ನಿವಾರಣೆಯಾಗುತ್ತವೆ. ಮತ್ತು ಶನಿದೋಷದಿಂದ ಮುಕ್ತಿ ಪಡೆಯಬಹುದು. ಹಾಗಾಗಿ ಹೆಚ್ಚಿನ ಜನರು ಶ್ರಾವಣ ಶನಿವಾರದಂದು ಉಪವಾಸ ವ್ರತಗಳನ್ನು ಆಚರಣೆ ಮಾಡುತ್ತಾರೆ. ಮತ್ತು ಈ ದಿನ ಹನುಮಂತನ ದೇವಸ್ಥಾನಕ್ಕೆ ತೆರಳಿ ಹನುಮಂತನ ಪೂಜೆ ಮಾಡುತ್ತಾರೆ.

ಶ್ರಾವಣ ಶನಿವಾರದಂದು ಈ ಕೆಲಸ ಮಾಡಿ:
ಶ್ರಾವಣ ಶನಿವಾರದಂದು ಶನಿ ದೇವರಿಗೆ ಸಂಬಂಧಿಸಿದ ಕಪ್ಪು ಬಟ್ಟೆ, ಕಪ್ಪು ಎಳ್ಳು, ಬೀಗಗಳು, ಛತ್ರಿಗಳು, ಬಟ್ಟೆಗಳು ಮುಂತಾದ ವಸ್ತುಗಳನ್ನು ನಿರ್ಗತಿಕರಿಗೆ ಮತ್ತು ಬಡವರಿಗೆ ದಾನ ಮಾಡಿ. ಈ ದಿನ ಶಿವ ದೇವಾಲಯದಲ್ಲಿ ಮರೆಯದೆ ಬಾರ್ಲಿಯನ್ನು ದಾನ ಮಾಡಿ. ಹಾಗೇ ಶ್ರಾವಣ ಶನಿವಾರದಂದು ಶಿವನಿಗೆ ಶನಿಗೆ ಪ್ರಿಯವಾದ ಶಮಿ ಹೂವುಗಳನ್ನು ಅರ್ಪಿಸಿ. ಇದರಿಂದ ಶನಿಗ್ರಹದ ಸಾಡೇಸಾತಿ, ಶನಿ ದೋಷ, ಶನಿ ಮಹಾದಶ, ಶನಿ ಧೈಯ್ಯಾ ಸೇರಿದಂತೆ ಇನ್ನಿತರ ಶನಿಗೆ ಸಂಬಂಧಿಸಿದ ದೋಷಗಳ ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಶ್ರಾವಣ ಶುಕ್ರವಾರದ ವಿಶೇಷವೇನು? ಅಂದು ಏನು ಮಾಡಬೇಕು? ಏನು ಮಾಡಬಾರದು?

ಒಟ್ಟಾರೆ ಶ್ರಾವಣ ಶನಿವಾರದಂದು ದೇವರ ಪೂಜೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಜೀವನದಲ್ಲಿ ಎದುರಾದ ಸಂಕಷ್ಟಗಳನ್ನು ನಿವಾರಿಸಿಕೊಳ್ಳಿ. ಪ್ರತಿ ಶ್ರಾವಣ ಶನಿವಾರದಂದು ನಿಯಮಗಳ ಪ್ರಕಾರ ಪೂಜೆ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಿ.

Continue Reading

ಭವಿಷ್ಯ

Bhavishya: ಅಂಗೈಯಲ್ಲಿರುವ ʼಹೃದಯ ರೇಖೆಗಳುʼ ನಿಮ್ಮ ವ್ಯಕ್ತಿತ್ವ ಏನೆಂದು ಹೇಳುತ್ತವೆ; ಚೆಕ್‌ ಮಾಡಿ ನೋಡಿ!

Bhavishya: ಅಂಗೈಯಲ್ಲಿ ಮೂರು ವಿಧದ ಹೃದಯ ರೇಖೆಗಳಿರುತ್ತವೆ. ಎರಡೂ ಕೈಗಳನ್ನು ಒಟ್ಟಿಗೆ ತಂದಾಗ ಕೆಲವರಲ್ಲಿ ಹೃದಯ ರೇಖೆಗಳು ಜೋಡಿಸುತ್ತವೆ. ಇನ್ನು ಕೆಲವರ ಎಡಗೈಯ ಹೃದಯ ರೇಖೆಯು ಬಲಗೈಗಿಂತ ಹೆಚ್ಚಾಗಿರುತ್ತದೆ. ಮತ್ತೆ ಕೆಲವರ ಬಲಗೈಯ ಹೃದಯ ರೇಖೆಯು ಎಡಗೈಗಿಂತ ಹೆಚ್ಚಾಗಿರುತ್ತದೆ. ಈ ಹೃದಯ ರೇಖೆಯು ಏನು ಹೇಳುತ್ತದೆ? ಇದರಿಂದ ಗೊತ್ತಾಗುವುದೇನು? ನಮ್ಮ ವ್ಯಕ್ತಿತ್ವವನ್ನು ಇವು ಹೇಗೆ ಸೂಚಿಸುತ್ತವೆ ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Bhavishya
Koo

ಹಸ್ತ ನೋಡಿ ಭವಿಷ್ಯ (Bhavishya) ಹೇಳುವವರೂ ಇದ್ದಾರೆ, ಇದನ್ನು ಕುತೂಹಲದಿಂದ ಕೇಳುವವರೂ ಇದ್ದಾರೆ. ಅಂಗೈಲಿರುವ ರೇಖೆಗಳು (Palm line) ನಮ್ಮ ವ್ಯಕ್ತಿತ್ವವನ್ನು ದರ್ಶಿಸುತ್ತದೆ. ಅದೇ ರೀತಿ ನಮ್ಮ ಭವಿಷ್ಯ ಯಾವ ರೀತಿ ಇರಲಿದೆ ಎಂಬುದನ್ನು ಹೇಳುತ್ತದೆ. ಅದರಲ್ಲೂ ಮುಖ್ಯವಾಗಿ ಹಸ್ತದಲ್ಲಿರುವ ಹೃದಯ ರೇಖೆಯು (Heart line) ಗುಪ್ತ ವ್ಯಕ್ತಿತ್ವದ ಲಕ್ಷಣಗಳನ್ನು (Hidden Personality) ಬಹಿರಂಗಪಡಿಸುತ್ತದೆ. ಹಸ್ತದ ಮೇಲಿನ ಶಿರೋನಾಮೆಯ ಮೇಲಿರುವ ಹೃದಯ ರೇಖೆಯು ಭಾವನಾತ್ಮಕ ಸ್ವಭಾವ, ಮನೋಧರ್ಮ, ಜೀವನದ ಕಡೆಗೆ ದೃಷ್ಟಿಕೋನ ಮತ್ತು ವೃತ್ತಿಯ ಒಲವುಗಳ ಬಗ್ಗೆ ಬಹಿರಂಗಪಡಿಸುತ್ತದೆ.

ಅಂಗೈಯಲ್ಲಿ ಮೂರು ವಿಧದ ಹೃದಯ ರೇಖೆಗಳಿರುತ್ತವೆ. ಎರಡೂ ಕೈಗಳನ್ನು ಒಟ್ಟಿಗೆ ತಂದಾಗ ಹೃದಯ ರೇಖೆಯು ಜೋಡಿಸುತ್ತದೆ. ಕೆಲವರ ಎಡಗೈಯ ಹೃದಯ ರೇಖೆಯು ಬಲಗೈಗಿಂತ ಹೆಚ್ಚಾಗಿರುತ್ತದೆ ಮತ್ತು ಇನ್ನು ಕೆಲವರ ಬಲಗೈಯ ಹೃದಯ ರೇಖೆಯು ಎಡಗೈಗಿಂತ ಹೆಚ್ಚಾಗಿರುತ್ತದೆ. ಈ ಹೃದಯ ರೇಖೆಯು ಏನು ಹೇಳುತ್ತದೆ ಎಂಬ ಮಾಹಿತಿ ಇಲ್ಲಿದೆ.


ಎರಡೂ ಕೈಗಳ ಹೃದಯ ರೇಖೆ ಒಂದೇ ರೀತಿ ಇದ್ದರೆ ಏನು?

ಎರಡೂ ಕೈಗಳ ಹೃದಯ ರೇಖೆಗಳು ಸಂಪೂರ್ಣವಾಗಿ ಜೋಡಿಸಿದರೆ ನೀವು ಸಾಮರಸ್ಯ ಮತ್ತು ಸಮತೋಲಿತ ಸ್ವಭಾವವನ್ನು ಹೊಂದಿರುವಿರಿ ಎಂದು ತಿಳಿಸುತ್ತದೆ. ಶಾಂತ ಮತ್ತು ಭಾವನಾತ್ಮಕವಾಗಿ ಸ್ಥಿರವಾಗಿರುತ್ತೀರಿ. ದಯೆ, ಸಹಾನುಭೂತಿ ಮತ್ತು ವಿಶ್ವಾಸಾರ್ಹರು. ಅಚಲ ಬೆಂಬಲಕ್ಕೆ ಹೆಸರುವಾಸಿಯಾಗಿರುವ ನೀವು ಉತ್ತಮ ಸ್ನೇಹಿತನಾಗಿರುತ್ತೀರಿ.

ಜೀವನ ಮತ್ತು ವೃತ್ತಿಜೀವನದಲ್ಲಿ ಸ್ಥಿರ ಮತ್ತು ಪ್ರಾಯೋಗಿಕ ವಿಧಾನವನ್ನು ಹೊಂದುವ ಸಾಧ್ಯತೆಯಿದೆ. ಸಮಾಲೋಚನೆ, ಬೋಧನೆ, ಮಾನವ ಸಂಪನ್ಮೂಲ, ಸಾಮಾಜಿಕ ಕೆಲಸ, ವ್ಯಾಪಾರ, ಹಣಕಾಸು ಅಥವಾ ಕಾನೂನಿನಂತಹ ವೃತ್ತಿಗಳಲ್ಲಿ ತೊಡಗಿಕೊಳ್ಳುತ್ತೀರಿ.

ನೀವು ಅತ್ಯುತ್ತಮ ಕೇಳುಗನಾಗಿರುತ್ತೀರಿ. ಅರ್ಥಪೂರ್ಣ ಸಂಬಂಧಗಳನ್ನು ಹುಡುಕುತ್ತೀರಿ ಮತ್ತು ಸಾಮಾನ್ಯವಾಗಿ ನಿಷ್ಠಾವಂತ ಮತ್ತು ವಿಶ್ವಾಸಾರ್ಹ ಪಾಲುದಾರರಾಗಿ ಕಾಣುತ್ತೀರಿ.

ವೃತ್ತಿ ಆಯ್ಕೆಗಳಲ್ಲಿ ಶಿಕ್ಷಣ, ಆರೋಗ್ಯ, ಆಡಳಿತ, ಹಣಕಾಸು, ಗ್ರಾಹಕ ಸೇವೆ, ಸಮಾಜ ಕಾರ್ಯ, ಯೋಜನಾ ಸಮನ್ವಯ, ಪರಿಸರ ಸೇವೆಗಳು, ಕಾರ್ಪೊರೇಟ್ ತರಬೇತಿ ಮತ್ತು ಸಮುದಾಯ ನಿರ್ವಹಣೆ ಸೇರಿವೆ.


ಎಡಗೈಯ ಹೃದಯ ರೇಖೆಯು ಬಲಗೈಗಿಂತ ಹೆಚ್ಚಾಗಿದ್ದರೆ?

ಎಡಗೈಯ ಹೃದಯ ರೇಖೆಯು ಬಲಗೈಗಿಂತ ಹೆಚ್ಚಿದ್ದರೆ ನೀವು ಅರ್ಥಗರ್ಭಿತ, ಸೃಜನಶೀಲ, ಸಾಹಸಮಯ ಮತ್ತು ಹೊಂದಿಕೊಳ್ಳುವ ವ್ಯಕ್ತಿತ್ವವನ್ನು ಹೊಂದಿರುವಿರಿ ಎಂಬುದನ್ನು ತೋರಿಸುತ್ತದೆ. ಸ್ವಾವಲಂಬಿ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಇಷ್ಟಪಡುತ್ತೀರಿ. ಸ್ವಂತ ಮಾರ್ಗವನ್ನು ರೂಪಿಸುವ ಬಲವಾದ ಬಯಕೆ ನಿಮ್ಮಲ್ಲಿ ಇರುತ್ತದೆ.

ರೋಮಾಂಚಕ ಸ್ವಭಾವವು ನಿಮ್ಮನ್ನು ವರ್ಚಸ್ವಿ ಮತ್ತು ಕಾಂತೀಯವಾಗಿಸುತ್ತದೆ. ಇದು ಆಗಾಗ ಜನರನ್ನು ನಿಮ್ಮ ಕಡೆಗೆ ಸೆಳೆಯುತ್ತದೆ. ಆದರೂ ನೀವು ಆಯ್ದ ಕೆಲವರೊಂದಿಗೆ ಮಾತ್ರ ಬಲವಾದ ಸಂಬಂಧಗಳನ್ನು ಬೆಳೆಸುತ್ತೀರಿ.

ವೃತ್ತಿಜೀವನದಲ್ಲಿ ನೀವು ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತೀರಿ. ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ. ಯಾವಾಗಲೂ ಹೊಸ ಅನುಭವಗಳನ್ನು ಬಯಸುತ್ತೀರಿ. ಈ ಹೃದಯ ರೇಖೆಯನ್ನು ಹೊಂದಿರುವ ಬರಹಗಾರರು ತಮ್ಮ ಆಕರ್ಷಕ ಕಥೆ ಹೇಳುವಿಕೆಗೆ ಹೆಸರುವಾಸಿಯಾಗಬಹುದು. ಸ್ವತಂತ್ರ ಮತ್ತು ಸೃಜನಶೀಲ ಸ್ವಭಾವವು ನಿಮ್ಮನ್ನು ಕಲೆಗಳು, ಮನರಂಜನೆ ಅಥವಾ ವೈಯಕ್ತಿಕ ಅಭಿವ್ಯಕ್ತಿಗೆ ಅನುಮತಿಸುವ ಕ್ಷೇತ್ರಗಳಲ್ಲಿ ವೃತ್ತಿಜೀವನದ ಕಡೆಗೆ ಕರೆದೊಯ್ಯುತ್ತದೆ.

ಭಾವನಾತ್ಮಕವಾಗಿ ನೀವು ಅಭಿವ್ಯಕ್ತಿಶೀಲರಾಗಿರುತ್ತೀರಿ. ಕಾಳಜಿ ವಹಿಸುವವರಿಗೆ ನೀವು ತೀವ್ರವಾಗಿ ನಿಷ್ಠರಾಗಿರುತ್ತೀರಿ. ಆದರೆ ಅವರ ಏಕಾಂತತೆಯನ್ನು ಗೌರವಿಸುತ್ತೀರಿ. ಸ್ವಾತಂತ್ರ್ಯವು ಶ್ಲಾಘನೀಯವಾಗಿದ್ದರೂ ಇದು ಕೆಲವೊಮ್ಮೆ ಸಂಬಂಧಗಳಲ್ಲಿ ಸವಾಲುಗಳಿಗೆ ಕಾರಣವಾಗಬಹುದು.

ಸೃಜನಾತ್ಮಕ ಕಲೆಗಳು, ಮನರಂಜನೆ, ಮಾರ್ಕೆಟಿಂಗ್, ಸಾಮಾಜಿಕ ಮಾಧ್ಯಮ, ಪ್ರಯಾಣ ಮತ್ತು ಪ್ರವಾಸೋದ್ಯಮ, ಫ್ಯಾಷನ್, ಮಾರಾಟ, ಈವೆಂಟ್ ಯೋಜನೆ, ಬರವಣಿಗೆ, ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಸಂಬಂಧಗಳ ವೃತ್ತಿ ಕ್ಷೇತ್ರದಲ್ಲಿ ನೀವು ಹೆಚ್ಚಿನ ಸಾಧನೆ ಮಾಡಬಲ್ಲವರಾಗಿರುತ್ತೀರಿ.


ಬಲಗೈಯ ಹೃದಯ ರೇಖೆಯು ಎಡಗೈಗಿಂತ ಹೆಚ್ಚಾಗಿದ್ದರೆ?

ಬಲಗೈಯ ಹೃದಯ ರೇಖೆಯು ಎಡಗೈಗಿಂತ ಹೆಚ್ಚಿದ್ದರೆ ನೀವು ಪ್ರಾಯೋಗಿಕ, ಭಾವನಾತ್ಮಕವಾಗಿ ಬುದ್ಧಿವಂತ, ವಿಶ್ಲೇಷಣಾತ್ಮಕ, ತಾರ್ಕಿಕ ಮತ್ತು ವಾಸ್ತವಿಕ ವ್ಯಕ್ತಿತ್ವವನ್ನು ಹೊಂದಿರುವಿರಿ ಎಂಬುದನ್ನು ಸೂಚಿಸುತ್ತದೆ. ನಿಮ್ಮ ಸ್ವಭಾವವು ನಿಮ್ಮನ್ನು ವಿಶ್ವಾಸಾರ್ಹರನ್ನಾಗಿ ಮಾಡುತ್ತದೆ. ಬಲವಾದ ಜವಾಬ್ದಾರಿಯ ಪ್ರಜ್ಞೆಯೊಂದಿಗೆ. ನೀವು ಬಲವಾದ ಆದರ್ಶವಾದಿ ಮತ್ತು ಮಾನವೀಯ ಗುಣಗಳನ್ನು ಹೊಂದಿರಬಹುದು.

ವೃತ್ತಿಜೀವನದಲ್ಲಿ ಶಿಸ್ತುಬದ್ಧತೆಗೆ ಗಮನಹರಿಸುತ್ತೀರಿ. ಆಗಾಗ್ಗೆ ಸ್ಪಷ್ಟ ಗುರಿಗಳನ್ನು ಹೊಂದಿಸಿ ಅವುಗಳನ್ನು ಸಾಧಿಸಲು ಶ್ರದ್ಧೆಯಿಂದ ಕೆಲಸ ಮಾಡುತ್ತೀರಿ.

ಇದನ್ನೂ ಓದಿ: Shravan 2024: ಇಂದಿನಿಂದ ಶ್ರಾವಣ ಶುಭಾರಂಭ; ಈ ತಿಂಗಳ ವಿಶೇಷ ಏನು?

ಭಾವನೆಗಳನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಬಯಸುತ್ತೀರಿ. ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವುದು ನಿಮಗೆ ಸವಾಲಾಗಬಹುದು. ಪ್ರೀತಿಸುವವರಿಗೆ ನಿಷ್ಠರಾಗಿರುವಿರಿ. ಸಂಬಂಧಗಳು ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ನಿರ್ಮಾಣವಾಗುತ್ತದೆ.

ವೃತ್ತಿ ಕ್ಷೇತ್ರಗಳಲ್ಲಿ ತಂತ್ರಜ್ಞಾನ, ಕಾನೂನು, ಹಣಕಾಸು, ಎಂಜಿನಿಯರಿಂಗ್, ಸಂಶೋಧನೆ, ಐಟಿ, ಡೇಟಾ ವಿಶ್ಲೇಷಣೆ, ನವೀಕರಿಸಬಹುದಾದ ಶಕ್ತಿ, ಕೃಷಿ ಮತ್ತು ಆರೋಗ್ಯ ವಿಜ್ಞಾನ ನಿಮಗೆ ಹೊಂದಿಕೆಯಾಗುತ್ತದೆ.

Continue Reading

ಅಂಕಣ

ರಾಜಮಾರ್ಗ ಅಂಕಣ: ನಾಗಾರಾಧನೆ- ಪ್ರಕೃತಿಯ ಆರಾಧನೆ ಆಗಲಿ

ರಾಜಮಾರ್ಗ ಅಂಕಣ: ಮನುಷ್ಯನ ಬೆನ್ನು ಮೂಳೆಯು ದೇಹದ ಮೂಲಾಧಾರ ಚಕ್ರದ ಕೇಂದ್ರ. ಮನುಷ್ಯನ ಎಲ್ಲ ಸಂವೇದನೆಗಳ ಕೇಂದ್ರವೂ ಹೌದು. ಅದರ ತುದಿಯಲ್ಲಿ ಇರುವ ಮೆದುಳು ನಾಗದೇವರ ಹೆಡೆಗೆ ಹೋಲಿಕೆ ಪಡೆಯುತ್ತದೆ. ಬೆನ್ನು ಮೂಳೆಯನ್ನು ನಾಗನ ದೇಹಕ್ಕೆ ಹೋಲಿಕೆ ಮಾಡುತ್ತಾರೆ. ನಾಗದೇವರ ಆರಾಧನೆಯನ್ನು ಮಾಡುವುದರಿಂದ ಬೆನ್ನು ಮೂಳೆಯ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಉಂಟಾಗುತ್ತದೆ.

VISTARANEWS.COM


on

ರಾಜಮಾರ್ಗ ಅಂಕಣ nagara panchami
Koo

ತುಳುನಾಡಿನ ನಾಗಾರಾಧನೆಗೆ – ನೂರಾರು ಆಯಾಮಗಳು

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ತಮಗೆಲ್ಲರಿಗೂ ನಾಗರಪಂಚಮಿ (Nagara Panchami) ಹಬ್ಬದ ಶುಭಾಶಯಗಳು. ನಾಗಾರಾಧನೆಯು ನಮ್ಮ ಹಿರಿಯರ ಪ್ರಕೃತಿ ಪ್ರೇಮ, ಕೃತಜ್ಞತೆಯ ಪ್ರತೀಕ ಎಂದೇ ಭಾವಿಸಲಾಗುತ್ತದೆ. ಜಗತ್ತಿನಾದ್ಯಂತ ನಾಗಾರಾಧನೆಯು ಇದ್ದರೂ ತುಳುನಾಡಿನ (Tulunadu) ನಾಗಾರಾಧನೆಯ (nagaradhane) ವಿಸ್ತಾರ ಮತ್ತು ಹರಹು ದೊಡ್ಡದು. ಅದಕ್ಕೆ ನೂರಾರು ಕಾರಣಗಳೂ ಇವೆ.

ತುಳುನಾಡು ಅಂದರೆ ನಾಗದೇವರ ಭೂಮಿ

ಭಾರತದ ಎಲ್ಲ 18 ಪುರಾಣಗಳಲ್ಲಿ ನಾಗದೇವರ ಉಲ್ಲೇಖವು ಬರುತ್ತದೆ ಅನ್ನುತ್ತದೆ ಒಂದು ಆಯಾಮ. ಇನ್ನೊಂದು ಈ ಕರಾವಳಿಯ ಭಾಗವು ‘ನಾಗರಖಂಡ ‘ಎಂದು ಕರೆಯಲ್ಪಟ್ಟಿದೆ. ಈ ಭೂಮಿಯನ್ನು ನಾಗದೇವರು ನಮಗೆ ದಾನವಾಗಿ ನೀಡಿದರು ಅನ್ನುವುದು ಇನ್ನೊಂದು ಆಯಾಮ. ಅದರಿಂದಾಗಿ ನಾಗಾರಾಧನೆ ಅಂದರೆ ನಮ್ಮ ಹಿರಿಯರ ಕೃತಜ್ಞತೆಯ ಸಂಕೇತವೇ ಆಗಿದೆ. ಇಲ್ಲಿನ ಸಡಿಲ ಮಣ್ಣು, ತೇವಾಂಶ ಮತ್ತು ವಾತಾವರಣದ ಉಷ್ಣತೆ ಇವುಗಳು ನಾಗನ ನಡೆಗೆ ಪೂರಕವಾಗಿಯೇ ಇವೆ. ಆದ್ದರಿಂದ ಇಡೀ ತುಳುನಾಡು ನಾಗದೇವರ ನಡೆಯೇ ಆಗಿದೆ. ನಾಗದೇವರು ನಮ್ಮ ಪೂರ್ವಜ ಎಂಬಲ್ಲಿಗೆ ಸರ್ಪ ಸಂಸ್ಕಾರ ಇತ್ಯಾದಿ ವಿಧಿಗಳೂ ನಡೆದುಬಂದವು. ಭೂಮಿಯನ್ನು ಹೊತ್ತವನು ಮಹಾಶೇಷ ಎಂಬ ಕಾರಣಕ್ಕೆ ಕೂಡ ನಾಗದೇವರ ಆರಾಧನೆಯು ಪ್ರಾಮುಖ್ಯತೆ ಪಡೆಯುತ್ತದೆ.

ತುಳುನಾಡಿನಲ್ಲಿ ನಾಗದೇವರು ಮತ್ತು ದೈವಗಳೇ ಸಾರ್ವಭೌಮರು. ಇಲ್ಲಿನ ಜನಗಳು ಅವೆರಡನ್ನು ನಂಬಿದಷ್ಟು ಬೇರೆ ಯಾವುದನ್ನೂ ನಂಬುವುದಿಲ್ಲ. ಕುಟುಂಬದ ಹಿರಿಯರು ಮೂಲನಾಗನಿಗೆ ತನು ಹಾಕುವುದನ್ನು ಎಂದಿಗೂ ತಪ್ಪಿಸುವುದಿಲ್ಲ. ನಾಗನ ಬಗ್ಗೆ ಇರುವ ಭಕ್ತಿ, ಗೌರವ ಮತ್ತು ಭಯಗಳು ನಮ್ಮ ಜನ್ಮದಿಂದಲೂ ನಮ್ಮ ಹೊಕ್ಕಳಬಳ್ಳಿಯ ಒಳಗೇ ಕೂತಿರುತ್ತವೆ.

ತುಳುನಾಡಿನ ನಾಗಾರಾಧನೆ ನೂರು ವಿಧ

ಹುತ್ತಪೂಜೆ, ನಾಗದೇವರ ಶಿಲಾ ಪೂಜನ, ತನು ಹಾಕುವುದು, ಆಶ್ಲೇಷಾ ಪೂಜೆ, ನಾಗಮಂಡಲ, ತಂಬಿಲ ನೀಡುವುದು, ಢಕ್ಕೆಬಲಿ, ಸರ್ಪ ಸಂಸ್ಕಾರ…ಹೀಗೆ ನೂರಾರು ಆಯಾಮಗಳಲ್ಲಿ ತುಳುನಾಡಿನ ನಾಗಾರಾಧನೆಯು ಸಾಗಿಬಂದಿದೆ. ಇವೆಲ್ಲವೂ ತುಳುನಾಡಿನಲ್ಲಿ ಅನೂಚಾನವಾಗಿ ನಡೆದುಕೊಂಡು ಬರುತ್ತಿವೆ. ಶ್ರಾವಣ ಶುಕ್ಲ ಪಂಚಮಿಯಂದು ನಡೆಸುವ ನಾಗಬನದಲ್ಲಿ ತನು ಹಾಕುವ ವಿಧಿಯನ್ನು ಯಾವ ಕುಟುಂಬವೂ ತಪ್ಪಿಸಿಕೊಳ್ಳುವುದಿಲ್ಲ. ಶ್ರದ್ಧೆ ಒಂದಿಂಚೂ ಕಡಿಮೆ ಆಗುವುದಿಲ್ಲ. ಇಡೀ ಕುಟುಂಬವು ಮೂಲನಾಗನನ್ನು ಹುಡುಕಿಕೊಂಡು ಬಂದು ಭಾಗವಹಿಸುವುದರಿಂದ ನಾಗರಪಂಚಮಿಯು ಕೂಡು ಕುಟುಂಬದ ಹಬ್ಬ.

ನಾಗಾರಾಧನೆಯ ವೈಜ್ಞಾನಿಕ ಹಿನ್ನೆಲೆ

ಮನುಷ್ಯನ ಬೆನ್ನು ಮೂಳೆಯು ದೇಹದ ಮೂಲಾಧಾರ ಚಕ್ರದ ಕೇಂದ್ರ. ಮನುಷ್ಯನ ಎಲ್ಲ ಸಂವೇದನೆಗಳ ಕೇಂದ್ರವೂ ಹೌದು. ಅದರ ತುದಿಯಲ್ಲಿ ಇರುವ ಮೆದುಳು ನಾಗದೇವರ ಹೆಡೆಗೆ ಹೋಲಿಕೆ ಪಡೆಯುತ್ತದೆ. ಬೆನ್ನು ಮೂಳೆಯನ್ನು ನಾಗನ ದೇಹಕ್ಕೆ ಹೋಲಿಕೆ ಮಾಡುತ್ತಾರೆ. ನಾಗದೇವರ ಆರಾಧನೆಯನ್ನು ಮಾಡುವುದರಿಂದ ಬೆನ್ನು ಮೂಳೆಯ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ನಾಗಾರಾಧನೆಯ ಬಣ್ಣ ಬಣ್ಣದ ಮಂಡಲಗಳು, ಸುವಾಸನೆ ಬೀರುವ ಹೂವುಗಳು, ಆ ಬಣ್ಣಗಳ ವಿನ್ಯಾಸಗಳು, ನಾಗದೇವರ ಬನದ ಪರಿಸರ, ಅಲ್ಲಿರುವ ಔಷಧಿಯ ಸಸ್ಯಗಳು ಇವೆಲ್ಲವೂ ಸೇರಿ ನಮ್ಮ ದೇಹದ ಮತ್ತು ಮಾನಸಿಕ ಆರೋಗ್ಯವು ಅಭಿವೃದ್ದಿ ಆಗುತ್ತದೆ ಎನ್ನುತ್ತದೆ ವಿಜ್ಞಾನ. ನಾಗನ ನಡೆಯ ಮಣ್ಣು ಔಷಧೀಯ ಗುಣವನ್ನು ಹೊಂದಿದ್ದು ಅದರ ಸ್ಪರ್ಶದಿಂದ ಚರ್ಮರೋಗ ಗುಣವಾಗುವುದು ಸಾಬೀತು ಆಗಿದೆ. ಹಾಗೆಯೇ ಸಂತಾನ ದೋಷ ಪರಿಹಾರ, ದೃಷ್ಟಿದೋಷ ಪರಿಹಾರ ಕೂಡ ಆಗಿರುವ ಸಾವಿರಾರು ಉದಾಹರಣೆಗಳು ನಮಗೆ ಇಲ್ಲಿ ದೊರೆಯುತ್ತವೆ. ನಾಗಾರಾಧನೆಯ ವಿಷಯದಲ್ಲಿ ನಂಬಿಕೆ ಮತ್ತು ವಿಜ್ಞಾನಗಳು ಜೊತೆ ಜೊತೆಯಾಗಿ ಮುನ್ನಡೆಯುತ್ತವೆ.

ಕಾಂಕ್ರೀಟ್ ಕಾಡುಗಳು ಮತ್ತು ನಾಗದೇವರ ಬನ

ಸಾವಿರಾರು ವರ್ಷಗಳಿಂದ ಹರಿದುಬಂದ ‘ನಾಗದೇವರ ನೈಸರ್ಗಿಕ ಬನದ ಕಲ್ಪನೆ ‘ಯು ಇತ್ತೀಚೆಗೆ ಮತ್ತೆ ಮುನ್ನೆಲೆಗೆ ಬಂದಿದೆ. ನಾಗನನ್ನು ಕೃತಕವಾದ ಕಾಂಕ್ರೀಟ್ ಕಾಡನ್ನು ಮಾಡಿ ಪೂಜೆ ಮಾಡುವುದಕ್ಕಿಂತ ನೈಸರ್ಗಿಕವಾದ ನಾಗನ ಬನ (ಬನ ಅಂದರೆ ಕಾಡು ಎಂದರ್ಥ)ದಲ್ಲಿಯೇ ನಾಗನ ಪೂಜೆ ನೆರವೇರಿಸಬೇಕು ಎಂಬ ಬೃಹತ್ ಅಭಿಯಾನವು ಇಂದು ಕರಾವಳಿಯ ಉದ್ದಕ್ಕೂ ಜಾಗೃತಿ ಮೂಡಿಸುತ್ತಿದೆ. ಅಂದರೆ ನಿರ್ದಿಷ್ಟವಾದ ಗಿಡಗಳ ಜೊತೆಗೆ ಔಷಧೀಯ ಸಸ್ಯಗಳನ್ನು ಅಲ್ಲಿ ಬೆಳೆಸಿ ಅಲ್ಲಿಯೇ ತಂಪಾದ ಜಾಗದಲ್ಲಿ ನಾಗನ ಆವಾಸ ಸ್ಥಾನವನ್ನು ನಿರ್ಮಾಣ ಮಾಡುವ ಮತ್ತು ಅಲ್ಲಿಯೇ ನಾಗಾರಾಧನೆ ಮಾಡುವ ಅದ್ಭುತ ಕಲ್ಪನೆ ಇಂದು ಜನಪ್ರಿಯತೆ ಪಡೆಯುತ್ತಿದೆ. ಅದು ವೈಜ್ಞಾನಿಕವಾಗಿ ಕೂಡ ಪುಷ್ಟಿಯನ್ನು ಪಡೆಯುತ್ತಿದೆ. ವಿಶೇಷವಾಗಿ ಉಡುಪಿಯ ಉರಗತಜ್ಞರಾದ ಗುರುರಾಜ್ ಸನಿಲ್ ಹಲವಾರು ಪುಸ್ತಕಗಳನ್ನು ಬರೆದು ಮತ್ತು ಉಪನ್ಯಾಸಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದು ಅಭಿನಂದನೀಯ. ಅವರು ಮತ್ತು ಅವರ ಗೆಳೆಯರು ಅಂತಹ ಹತ್ತಾರು ಕಡೆ ನಾಗಬನ ನಿರ್ಮಾಣ ಕೂಡ ಮಾಡಿದ್ದಾರೆ. ಹಾಗೆಯೇ ಉಡುಪಿಯ ಸಂವೇದನಾ ಫೌಂಡೇಶನ್ (ಸಂಚಾಲಕರು – ಪ್ರಕಾಶ್ ಮಲ್ಪೆ) ನೂರು ಪ್ರಾಕೃತಿಕ ನಾಗಬನಗಳನ್ನು ನಿರ್ಮಿಸುವ ಸಂಕಲ್ಪ ಮಾಡಿಕೊಂಡು ಮುಂದುವರೆಯುತ್ತಿದ್ದಾರೆ. ಅವರಿಗೆ ನಮ್ಮ ನೆರವು ದೊರೆಯಲಿ.

ನಾಡಿನ ಎಲ್ಲ ಧಾರ್ಮಿಕ ಬಂಧುಗಳಿಗೆ ನಾಡಿನ ಅತೀ ದೊಡ್ಡ ಹಬ್ಬ ನಾಗರಪಂಚಮಿಯ ಹಾರ್ದಿಕ ಶುಭಾಶಯಗಳು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿನೇಶ್ ಪೋಗಟ್ ತೂಕ ಇದ್ದಕ್ಕಿದ್ದಂತೆ 2 ಕೆ.ಜಿ ಹೆಚ್ಚಿದ್ದು ಹೇಗೆ? ಉತ್ತರ ಸಿಗದ ಪ್ರಶ್ನೆ!

Continue Reading

ಕರ್ನಾಟಕ

Nagara Panchami 2024: ನಾಗದೋಷ ಎಂದರೇನು? ಇದರ ಪರಿಹಾರ ಕ್ರಮಗಳು ಏನೇನು?

Nagara Panchami 2024: ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ನಾಗರ ಪಂಚಮಿಯಂದು ನಾಗದೇವತೆಗೆ ತನಿ ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ಈಗಲೂ ನಡೆಸಿಕೊಂಡು ಬರಲಾಗುತ್ತಿದೆ.

VISTARANEWS.COM


on

Nagara Panchami 2024
Koo

ಪ್ರೊ. ವಿದ್ವಾನ್ ನವೀನಶಾಸ್ತ್ರಿ ರಾ. ಪುರಾಣಿಕ
(ಲೇಖಕರು, ಸಂಸ್ಕೃತ ಉಪನ್ಯಾಸಕರು, ಸಂಸ್ಕೃತಿ ಚಿಂತಕರು ಹಾಗೂ ಜ್ಯೋತಿಷಿಗಳು)

ಜಾತಕದಲ್ಲಿ ನವಗ್ರಹಗಳ ಪೈಕಿ ಎರಡು (Nagara Panchami 2024) ಗ್ರಹಗಳಾದ ರಾಹು ಮತ್ತು ಕೇತು ಗ್ರಹಗಳಿಂದ ಉಂಟಾಗುವ ದೋಷಗಳಿಗೆ ಸರ್ಪದೋಷ (ನಾಗದೋಷ) ಎಂದು ಕರೆಯುವರು. ರಾಹು ಕೇತುಗಳನ್ನು ಹೋರಾಸಂಹಿತೆ,ಬೃಹಜ್ಜಾತಕ ಇತ್ಯಾದಿ ಗ್ರಂಥ ಬರೆದ ವರಾಹಮಿಹಿರ ಉಲ್ಲೇಖ ನೀಡಿಲ್ಲವಾದರೂ, ಸೂರ್ಯ ಸಿದ್ದಾಂತದಂತ ಗ್ರಂಥಗಳು ಗ್ರಹಣದ ವಿಷಯದಲ್ಲಿ ಕಂಡುಬರುವ ಛಾಯಾಬಿಂದುಗಳನ್ನು ರಾಹು ಕೇತುಗಳೆಂಬ ಉಲ್ಲೇಖ ಕಂಡುಬರುತ್ತದೆ.
ಅದರಂತೆ ರಾಹು ಕೇತು ಗ್ರಹಗಳು ಛಾಯಾ ಗ್ರಹಗಳು ಇವುಗಳಿಗೆ ತಮ್ಮದೇ ಅಸ್ತಿತ್ವ ಇಲ್ಲ. ಇವುಗಳಿಗೆ ಸದಾ ವಕ್ರಗತಿ. ಆದರೆ ಶನಿವತ್ ರಾಹು, ಕುಜವತ್ ಕೇತು ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಕೆಲವು ಗ್ರಂಥಕಾರರು ಹೇಳಿದ್ದಾರೆ. ಅಂದರೆ ಶನಿಗ್ರಹದಿಂದ ಉಂಟಾಗುವ ಫಲ ಮತ್ತು ದೋಷಗಳಷ್ಟೇ ಪರಿಣಾಮ ರಾಹು ಗ್ರಹದಿಂದ ಉಂಟಾಗುವುದು ಹಾಗೂ ಕುಜಗ್ರಹದಿಂದ ಉಂಟಾಗುವ ಫಲ ಮತ್ತು ದೋಷಗಳಷ್ಟೇ ಪರಿಣಾಮ ಕೇತು ಗ್ರಹದಿಂದ ಉಂಟಾಗುತ್ತದೆ.

ಛಾಯಾಗ್ರಹಗಳು

ರಾಹುಕೇತುಗಳು ಛಾಯಾಗ್ರಹವಾದರೂ ಜಾತಕದಲ್ಲಿ ಅನಿಷ್ಟಸ್ಥಾನದಲ್ಲಿರುವಾಗ ಹಾಗೂ ಗೋಚಾರದಲ್ಲಿ ಅಶುಭ ಸ್ಥಾನದಲ್ಲಿದ್ಧಾಗ ಜಾತಕನಿಗೆ ತೀವ್ರತರವಾದ ಬಾಧೆ ಕೊಡುತ್ತದೆ. ದಶಾ ಮತ್ತು ದಶಾಭುಕ್ತಿ ನಡೆಯುವಾಗ ಇನ್ನೂ ಹೆಚ್ಚು ಬಾಧಿಸುತ್ತದೆ. ದೇಶಾಂತರ ಹೊರಡುವ ಪ್ರಸಂಗವೂ ಸಹ ಬರಬಹುದು.ಮನೆಮಠಬಿಟ್ಟು ಬೀದಿ ಪಾಲಾಗುವ ಸಂಭವ ಇರುತ್ತದೆ.ಉಳಿದ ಗ್ರಹಗಳಿಗಿಂತ ಹೆಚ್ಚು ಬಾಧಕವನ್ನು ಕೊಡುತ್ತವೆ.

ದೋಷ ಗುರುತಿಸುವುದು ಹೇಗೆ?

ಜಾತಕದಲ್ಲಿ ಸುಮಾರಾಗಿ 100ಕ್ಕೆ ಪ್ರತಿಶತ ಒಂದೆರಡು ಮಾತ್ರ ಕಾಲಸರ್ಪದೋಷದಿಂದ ಬಂಧಿತವಾಗಿರುತ್ತದೆ. ಹಾಗಾದರೆ ಕಾಲಸರ್ಪ ದೋಷ ಎಂದರೇನು? ಅದನ್ನು ಜಾತಕದಲ್ಲಿ ಗುರುತಿಸುವುದು ಹೇಗೆ?
ಜಾತಕ(ಕುಂಡಲಿ)ಯಲ್ಲಿ ರಾಹು ಕೇತು ಗ್ರಹಗಳ ಮಧ್ಯದಲ್ಲಿ ಇತರ ಗ್ರಹಗಳು ಅಂದರೆ ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ ಗ್ರಹಗಳು ಇದ್ದರೆ ಅದು ಕಾಲಸರ್ಪ ದೋಷ ಎನಿಸುತ್ತದೆ. ರಾಹುಕೇತು ಗ್ರಹಗಳು ಸದಾ ವಕ್ರಗತಿಯನ್ನು ಹೊಂದಿದೆ. ರಾಹು ಕೇತು ಗ್ರಹಗಳನ್ನು ಬಿಟ್ಟು ಉಳಿದ ಗ್ರಹಗಳು ತಾವಿರುವ ಮನೆಯಿಂದ ಮುಂದೆ ಚಲಿಸಿದರೆ ರಾಹು ಕೇತು ಗ್ರಹಗಳು ಹಿಂದಕ್ಕೆ ಚಲಿಸುತ್ತವೆ. ಆದ್ದರಿಂದ ಕಾಳಸರ್ಪ ದೋಷದಲ್ಲಿ ರಾಹು ಕೇತು ಗ್ರಹಗಳ ಮಧ್ಯದಲ್ಲಿ ಇತರ ಗ್ರಹಗಳು ಬಂಧಿಯಾದಂತೆ ಇರಬೇಕೇ ವಿನಃ ಉಳಿದ ಗ್ರಹಗಳ ಮಧ್ಯದಲ್ಲಿ ರಾಹು ಕೇತು ಇದ್ದರೆ ಅಲ್ಲ.

ಕಾಳಸರ್ಪ ದೋಷ

ಕಾಳಸರ್ಪ ದೋಷ ಚಿಂತನೆಯ ಬಗ್ಗೆ ಉದಾಹರಣೆ ಮೇಷಲಗ್ನದಲ್ಲಿ ರಾಹು ಇದ್ದು ಸಪ್ತಮವಾದ ತುಲಾದಲ್ಲಿ ಕೇತುವಿದ್ದು ಉಳಿದ ಗ್ರಹಗಳು ಮೇಷದಿಂದ ತುಲಾದ ಒಳಗಡೆ ಇದ್ದರೆ ಕಾಳಸರ್ಪ ದೋಷ ಎಂದು ತಿಳಿಯಬೇಕು.ಇದೇ ರೀತಿ ಉಳಿದ ಹನ್ನೆರಡು ಲಗ್ನಗಳಲ್ಲೂ ಇದರಂತೆ ತಿಳಿದುಕೊಳ್ಳಬೇಕು.
ರಾಹು ಕೇತುಗಳು ಸಮಸಪ್ತಕರಾಗಿ( 7ರಾಶಿ ಅಂತರದಲ್ಲಿ)ಯಾವಾಗಲೂ ಇರುತ್ತಾರೆ.

ಜೋತಿಷ್ಯಶಾಸ್ತ್ರದಿಂದ ತಿಳಿಯುವ ಸರ್ಪದೋಷ, ಆಶ್ಲೇಷಾ ಬಲಿ

ಜ್ಯೋತಿಷ್ಯದಲ್ಲಿ ರಾಹುವಿಗೂ ನಾಗನಿಗೂ ಅನ್ಯೋನ್ಯ ಸಂಬಂಧವಿರುವುದರಿಂದ ಅನೇಕ ರೀತಿಯಾಗಿ ನಾಗಾನುಗ್ರಹ ಹಾಗೂ ನಾಗ ದೋಷಗಳ ಬಗ್ಗೆ ಪರಿಕಲ್ಪನೆಯಿದೆ ಅಂದರೆ ರಾಹುವಿನ ಆದಿ ದೇವತಾ ಹಾಗೂ ಪ್ರತ್ಯಧಿದೇವತಾ ಕಾಲ ಹಾಗೂ ಸರ್ಪ, ದೋಷಗಳನ್ನು ಅತಿಶಯೋಕ್ತಿ ಮಾಡದೆ ಸಣ್ಣ – ಪುಟ್ಟ ಪ್ರಾಯಶ್ಚಿತ್ತದಿಂದಲೇ ನಿವೃತ್ತಿ ಮಾಡಿಸಿ, ನಿರ್ಭೀತಿಯಿಂದಲೇ ಜೀವನ ಮಾಡುವುದಕ್ಕೆ ಜ್ಯೋತಿಷ್ಯದಿಂದ ಪರಿಹರಿಸಿಕೊಳ್ಳುವದಾಗಿದೆ.
ಆಶ್ಲೇಷ ನಕ್ಷತ್ರವು ತಾರಾ ಮಂಡಲದಲ್ಲಿ ಗುರುತಿಸಲಾದ ಇಪ್ಪತ್ತೇಳು ಮಹಾ ನಕ್ಷತ್ರಗಳಲ್ಲಿ ಒಂಭತ್ತನೆಯದು. ಜ್ಯೋತಿಷ್ಯ ಶಾಸ್ತ್ರಾಧಾರದಂತೆ ಪ್ರತಿನಕ್ಷತ್ರಕ್ಕೂ ಒಂದೊಂದು ನಕ್ಷತ್ರ ದೇವತೆ. ಆಶ್ಲೇಷ ನಕ್ಷತ್ರದ ನಕ್ಷತ್ರ ದೇವತೆಯು ಸರ್ಪ. ತನ್ನಿಂದ ಘಟಿಸಿದ ಪ್ರಮಾದದ ಪ್ರಾಯಶ್ಚಿತ್ತಕ್ಕಾಗಿ, ನಾಗದೇವತೆಯ ಅನುಗ್ರಹಕ್ಕಾಗಿ ನಾಗನಿಗೆ ಬಲಿ ಅಥವಾ ಆಹುತಿ ನೀಡುವ ಮೂಲಕ ನಡೆಸುವ ವಿಶೇಷ ಆರಾಧನೆಯೇ ಆಶ್ಲೇಷಾ ಬಲಿ.

ನಾಗಾಲಯಗಳು-ಆಶ್ಲೇಷಾ ಬಲಿ

ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು ಇಂದು ನಾಗರಿಕರೆನಿಸಿದ ವಿದ್ಯಾವಂತರ ಮನೆ ಮನಗಳಲ್ಲೂ ಆಳವಾಗಿ ಬೇರೂರಿ ನಿಂತಿದೆ. ನಾಗರ ಪಂಚಮಿಯಂದು ನಾಗದೇವತೆಗೆ ತನಿ ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ಈಗಲೂ ನಡೆಸಿಕೊಂಡು ಬರಲಾಗುತ್ತಿದೆ. ನಾಗಾರಾಧನೆಯು ಒಟ್ಟಿನಲ್ಲಿ ನಾಗ ಪ್ರೀತಿಗಾಗಿ. ಆದರೆ ನಾಗಾರಾಧನೆಯ ಒಂದು ಅಂಗವಾದ ಆಶ್ಲೇಷಾ ಬಲಿ ಎಂಬುದು ನಾಗ ದೇವತೆಗೆ, ಸರ್ಪ ಸಂಕುಲಕ್ಕೆ ಮಾನವನಿಂದ ಒದಗಿದ ಹಾನಿಯ, ಅಪಚಾರದ ದೆಸೆಯಿಂದ ಉಂಟಾದ ಸರ್ಪ ಶಾಪದ ಪರಿಹಾರಾರ್ಥವಾಗಿ ನಡೆದು ಬಂದಿದೆ.

ಆಶ್ಲೇಷಾ ಬಲಿ ಎಂಬ ಪದಗಳನ್ನು ಕೇಳಿದೊಡನೆಯೇ ಶ್ರೀ ಪರಶುರಾಮ ಸೃಷ್ಟಿಯ ಕ್ಷೇತ್ರಗಳಾದ ಶ್ರೀ ಕುಕ್ಕೆಸುಬ್ರಹ್ಮಣ್ಯ, ಗುತ್ತಿಗಾರು ಸಮೀಪದ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ, ಮಂಗಳೂರು ತಾಲೂಕಿನ ಕುಡುಪು, ಕಾಸರಗೋಡು ತಾಲೂಕಿನ ಮಂಜೇಶ್ವರ, ಬೆಳ್ತಂಗಡಿ ತಾಲೂಕಿನ ಬಳ್ಳಮಂಜ, ಪುತ್ತೂರು ತಾಲೂಕಿನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಶ್ರೀ ವಾಸುಕಿ ಸನ್ನಿಧಿ, ಆರ್ಯಾಪು ಗ್ರಾಮದ ಕಾರ್ಪಾಡಿ ಇಂತಹ ನಾಗಾಲಯಗಳಲ್ಲಿ ವಿಶೇಷವಾಗಿ ಆಶ್ಲೇಷ ನಕ್ಷತ್ರದ ತಿಥಿಯಂದು ಈ ಆರಾಧನೆ ನಡೆಯುತ್ತದೆ. ಪಂಚಮಿ ಅಥವಾ ಷಷ್ಠಿ ತಿಥಿಯಿದ್ದರೂ ಈ ಆರಾಧನೆಗೆ ಪ್ರಶಸ್ತವೆಂಬ ನಂಬಿಕೆಯಿದೆ.

ಪುರಾಣಗಳಲ್ಲಿ ಉಲ್ಲೇಖಿತವಾದ ಸರ್ಪಗಳ ಜನ್ಮ, ಸರ್ಪ ಸಂಕುಲ

ಕದ್ರೂ ಮತ್ತು ಕಶ್ಯಪ ದಂಪತಿಗಳಿಂದ ಎಂಟು ಪ್ರಧಾನ ನಾಗದೇವತೆಗಳ ಸೃಷ್ಟಿಯಾಯಿತು. ಇದರ ಉಲ್ಲೇಖ “ವರಾಹ ಪುರಾಣ”ದಲ್ಲಿದೆ.
ಸೃಜತಾಃ ಬ್ರಹ್ಮಣಾಃ ಸೃಷ್ಠಿಂ
ಮರೀಚಃ ಸೂರಿಕಾರಣಂ ।
ಪ್ರಥಮಂ ಮನಸಾ
ಧ್ಯಾತಸ್ತಸ್ಯ ಪುತ್ರಸ್ತು ಕಾಶ್ಯಪಃ ।।
ತಸ್ಯ ದಾಕ್ಷಾಯಣೀ ಭಾರ್ಯಾ
ಕದ್ರೂರ್ನಾಮ ಶುಚಿಸ್ಮಿತಾ ।
ಮಾರೀಚೋ ಜನಯಾಮಾಸಾ
ತಸ್ಯಾಂ ಪುತ್ರಾನ್ ಮಹಾ ಬಲಾನ್ ।।
ಅನಂತಂ ವಾಸುಕಿಂ ಚೈವ
ಕಂಬಳಂ ಚ ಮಹಾಬಲಂ ।
ಕರ್ಕೋಟಕಂ ಚ ರಾಜೇಂದ್ರ
ಪದ್ಮಂ ಜಾನ್ಯಂ ಸರೀಸೃಪಮ್ ।।
ಮಹಾ ಪದ್ಮಂ ತಥ ಶಂಖಂ
ಕುಲಿಕಂ ಚಾಪರಾಜಿತಂ ।
ಏತೇ ಕಶ್ಯಪದಾಯದಾಃ
ಪ್ರಧಾನಾಃ ಪರಿಕೀರ್ತಿತಾಃ ।।

ಸರ್ಪಗಳ ಮಾತೆ

ಕಶ್ಯಪ ಮಹರ್ಷಿಯ ಹದಿಮೂರು ಮಂದಿ ಪತ್ನಿಯರಲ್ಲಿ ಕದ್ರೂ ಎಂಬಾಕೆ ಸರ್ಪಗಳ ಮಾತೆ. ಅವಳ ಮಕ್ಕಳಲ್ಲಿ ತಕ್ಷಕ, ವಾಸುಕಿ ಪ್ರಧಾನರು. ಅನಂತ, ಮಹಾಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ, ವಾಸುಕಿ ಇವರು ನವನಾಗರೆಂದು ಪ್ರಸಿದ್ಧರು. ಇವರಲ್ಲೇ ಐವತ್ತೆರಡು ಮಂದಿ ಸರ್ಪಶ್ರೇಷ್ಠರೂ ಹದಿನಾರು ಸಾವಿರ ಪ್ರಕಾರಗಳ ಸರ್ಪಗಳೂ ಇವೆಯೆಂದು ಬ್ರಹ್ಮ ಪುರಾಣದಲ್ಲಿಯೂ ಸಹ ವರ್ಣಿತವಾಗಿದೆ. ವಿಷಮಯವಾದ ಹಲ್ಲುಗಳು, ಅಗ್ನಿ ಜ್ವಾಲೆಗಳನ್ನು ಹೊರಸೂಸುವಂತೆ ತೀಕ್ಷ್ಣವಾಗಿ ಹೊಳೆಯುವ ಕೆಂಗಣ್ಣುಗಳು, ಭಯಂಕರವಾದ ಕಡುಕೋಪವಿದ್ದರೂ ನಂಬಿ ಪೂಜಿಸಿದವರಿಗೆ ತಾರಕ ಶಕ್ತಿ- ನಂಬದೆ ಹಾನಿಯುಂಟು ಮಾಡಿದರೆ ಮಾರಕ ಶಕ್ತಿಯೂ ಹೌದು.ನಾಗದೇವತೆಗೆ ಕಾಯೇನ, ವಾಚಾ, ಮನಸಾ ಹಾನಿಯುಂಟು ಮಾಡಿದರೆ, ಅಪಚಾರವೆಸಗಿದರೆ ಸರ್ಪಶಾಪದಿಂದ ವಿಧ ವಿಧದ ಅನಿಷ್ಟಗಳು ಎದುರಾಗಿ ಕಾಡುತ್ತವೆ ಎಂಬುದು ಪೂರ್ವಜರ ಮಾತು. ಆದುದರಿಂದ ಸರ್ಪಶಾಪದಿಂದ ಮುಕ್ತಿ ಪಡೆಯುವ ಮಾರ್ಗಗಳಲ್ಲಿ ಆಶ್ಲೇಷಾ ಬಲಿ ಆರಾಧನೆಯೂ ಒಂದು. ನಾಗರ ಪಂಚಮಿ, ಆಶ್ಲೇಷ ನಕ್ಷತ್ರದ ತಿಥಿ, ಷಷ್ಠಿಯದಿನ ಆಶ್ಲೇಷಾ ಬಲಿಗೆ ಪ್ರಶಸ್ತ. ಕುಕ್ಕೇ ಸುಬ್ರಹ್ಮಣ್ಯ ದೇವಸ್ತಾನದಲ್ಲಿ ಬಹುತೇಕ ಎಲ್ಲ ದಿನಗಳಲ್ಲೂ ಈ ಪೂಜೆ ನಡೆಯುತ್ತದೆ.

ಸರ್ಪ ಶಾಪ ಬರುವುದು ಹೇಗೆ?

ನಾಗ ದೇವತೆಗೆ ಹಾನಿಯುಂಟಾಗುವ, ಅಪಚಾರ ತರುವ ಪ್ರಸಂಗಗಳು ಹಲವು. ಈ ಜನ್ಮದ, ಪೂರ್ವಜನ್ಮದ, ಜನ್ಮ ಜನ್ಮಾಂತರಗಳ ಜೀವಿತಾವಧಿಯ ವಿವಿಧ ಅವಸ್ಥೆಗಳಲ್ಲಿ ಮನಸ್ಸು, ಮಾತು, ಶರೀರ, ಕರ್ಮೇಂದ್ರಿಯ ವ್ಯಾಪಾರಗಳಿಂದ, ಶರೀರದ ಅಂಗಾಂಗಗಳಿಂದ, ಅರಿಷಡ್ವರ್ಗಗಳ ದೆಸೆಯಿಂದ, ತಿಳಿದೋ, ತಿಳಿಯದೆಯೋ ಓರ್ವ ವ್ಯಕ್ತಿ, ಆತನ ಕುಟುಂಬಸ್ಥರು ಪೂರ್ವಜರಿಂದ ನಡೆದ ಸರ್ಪವಧೆ, ದಂಡದಿಂದ ಹೊಡೆಯುವಿಕೆ, ಹುತ್ತಗಳ ಅಗೆತ, ವೃಕ್ಷನಾಶ ಅಥವಾ ಇಂತಹ ದುಷ್ಕೃತ್ಯಗಳಿಗೆ ಪ್ರೇರಣೆ ನೀಡುವುದರಿಂದ ಸರ್ಪಶಾಪ ಉಂಟಾಗುತ್ತದೆ. ತನ್ಮೂಲಕ ಕುಟುಂಬದಲ್ಲಿ ವಿವಾಹ ವಿಳಂಬ,ಬಂಜೆತನ, ಸಂತತಿ ನಾಶ, ಕುಷ್ಠಾದಿ ಮಹಾರೋಗಗಳೂ ಇನ್ನಿತರ ಭಯಂಕರ ಆಪತ್ತುಗಳೂ ಉಂಟಾಗುತ್ತವೆ ಎಂದು ಆಶ್ಲೇಷಾ ಬಲಿ ವಿಧಾನದ ಸಂಕಲ್ಪದಲ್ಲಿ ಹೇಳಲಾಗಿದೆ. ಸರ್ಪಗಳ ಮೊಟ್ಟೆಗಳ ನಾಶವೂ ಇಂತಹ ಅಕೃತ್ಯಗಳ ಸಾಲಿಗೆ ಸೇರುತ್ತದೆ. ಕೃಷಿ ಕ್ಷೇತ್ರದಲ್ಲಿ ಕೃಷಿಕನಿಗೆ ತಿಳಿಯದೆಯೇ ಇಂತಹ ಹಾನಿಗಳು ಸಂಭವಿಸುತ್ತಿರುತ್ತವೆ. ಆದುದರಿಂದ ಕೃಷಿಕರು ವಿಶೇಷವಾಗಿ ನಾಗದೇವತೆಯ ಆರಾಧನೆ ಮಾಡುತ್ತಲೇ ಇರುವುದು ಅನಿವಾರ್ಯವಾಗಿದೆ. ಸಮಸ್ತ ಸರ್ಪದೋಷ, ಸರ್ಪ ಶಾಪಗಳ ಪ್ರಾಯಶ್ಚಿತ್ತ ಪರಿಹಾರಾರ್ಥವಾಗಿ, ಸಕಲೈಶ್ವರ್ಯ ಸಿದ್ಧಿಗಾಗಿ ಆಶ್ಲೇಷಾ ಬಲಿಯನ್ನು ನೀಡಲಾಗುತ್ತದೆ.

ಆಶ್ಲೇಷಾ ಬಲಿ ವಿಧಾನ

ಆಶ್ಲೇಷಾ ಬಲಿಗೆ ಪ್ರಶಸ್ತವಾದ ಶುಭದಿನದಂದು ಕುಟುಂಬದ ಯಜಮಾನನು ಕುಟುಂಬದ ಸದಸ್ಯರೊಡಗೂಡಿ ಶುಚಿರ್ಭೂತನಾಗಿ, ಉಪವಾಸವಿದ್ದು, ಕ್ಷೇತ್ರ ವಿಧಿಗನುಸಾರವಾಗಿ, ವೇದ ಪಾರಂಗತರಾದ ನಿಷ್ಠಾವಂತ ವಿಪ್ರೋತ್ತಮರ ದ್ವಾರಾ ಆಶ್ಲೇಷಾ ಬಲಿಯನ್ನು ನೀಡಬೇಕು. ಸಾಮೂಹಿಕವಾಗಿ ಈ ಪೂಜೆ ನಡೆಸುವುದೂ ಇದೆ. ವ್ಯಕ್ತಿಗತವಾಗಿ ನಡೆಸುವ ಪದ್ಧತಿಯೂ ಉಂಟು. ಶ್ರೀ ಗುರು ಗಣಪತಿ, ನವಶಕ್ತ್ಯಾದಿ ದೇವತೆಗಳನ್ನು ಆವಾಹಿಸಿ ಸಂಕಲ್ಪ ಮಾಡುವುದರೊಂದಿಗೆ ಆಶ್ಲೇಷಾ ಬಲಿ ವಿಧಾನ ಆರಂಭವಾಗುತ್ತದೆ. ತಳಿರು ತೋರಣಗಳಿಂದ ಅಲಂಕೃತವಾದ ನಾಗ ಸನ್ನಿಧಿಯಲ್ಲಿ ಹರಿದ್ರಾ, ಕುಂಕುಮ, ರಂಗೋಲಿ ಪುಡಿಗಳಿಂದ ಸರ್ಪ ನವಪದಮಂಡಲವನ್ನೂ ಆಶ್ಲೇಷಾ ಬಲಿ ಮಂಡಲವನ್ನೂ ಆಕರ್ಷಕವಾಗಿ ಬರೆಯಲಾಗುತ್ತದೆ. ಸರ್ಪ ನವಪದ ಮಂಡಲದ ಕೇಂದ್ರ ಪದದಲ್ಲಿ ಶ್ರೀ ವಾಸುಕೀ ನಾಗರಾಜನಿಗೆ ಅಗ್ರಸ್ಥಾನ. ಉಳಿದ ಅಷ್ಟ ಪದಗಳಲ್ಲಿ ಅಷ್ಟಕುಲ ಸಂಜಾತರಾದ ಅನಂತ, ಶೇಷ, ಕಪಿಲ, ನಾಗ, ಕುಳಿಕ, ಶಂಖಪಾಲ, ಭೂಧರ, ತಕ್ಷಕ ಅವರ ಆವಾಹನೆ. ಆಶ್ಲೇಷಾ ಬಲಿ ಮಂಡಲದ 52 ಪದಗಳು ಸರ್ಪಕುಲದ ೫೨ ಮಂದಿ ಸರ್ಪ ಶ್ರೇಷ್ಟರ ಆವಾಹನೆಗಾಗಿವೆ. ಸರ್ಪಗಳ ಪತ್ನಿಯರು, ಪುತ್ರರು, ಪುತ್ರಿಯರು, ಮೊಮ್ಮಕ್ಕಳು, ಮರಿ ಮಕ್ಕಳ ಸಹಿತ ಸರ್ಪ ಸಂಕುಲವನ್ನೂ ಇಂದ್ರಾದಿ ಅಷ್ಟದಿಕ್ಪಾಲಕರನ್ನೂ ದೇವಗಣಗಳನ್ನೂ ನಾಗಗಣಗಳನ್ನೂ ಅವಾಹಿಸಲಾಗುತ್ತದೆ.
ಆಶ್ಲೇಷಾ ಬಲಿ ವಿಧಾನದಂತೆ ಶ್ರೀ ವಾಸುಕೀ ನಾಗರಾಜನನ್ನೂ ಆತನ ಸರ್ಪ ಸಂಕುಲವನ್ನೂ ಧ್ಯಾನಿಸಲಾಗುತ್ತದೆ. ಅನಂತರ ಕಲ್ಪೋಕ್ತವಾಗಿ ಆಸನ, ಸ್ವಾಗತ, ಪಾದ್ಯ, ಅರ್ಘ್ಯ, ಆಚಮನೀಯ, ಮಧುಪರ್ಕ, ಆಚಮನ, ಸ್ನಾನ, ವಸನ, ಆಭರಣ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ವಂದನೆಗಳೆಂಬ ಷೋಡಶೋಪಚಾರ ಪೂಜೆಯನ್ನು ಸಲ್ಲಿಸಲಾಗುತ್ತದೆ. ಸಮಸ್ತ ಸರ್ಪಶಾಪ ಪರಿಹಾರಕ್ಕಾಗಿ ಕ್ಷೀರ, ಶರ್ಕರ, ಕದಳಿ, ಮಧು, ಆಜ್ಯ, ಹರಿದ್ರಾಯುಕ್ತ ಪಿಂಡಗಳನ್ನು ಸರ್ಪಗಳಿಗೆ ಮಂಡಲಗಳ ಪದಗಳಲ್ಲಿರಿಸಿ, ಸಮರ್ಪಿಸಲಾಗುತ್ತದೆ. ದೇವತೆಗಳಿಗೆ ಪ್ರಿಯವಾಗುವಂತೆ ಜ್ಯೋತಿಗಳನ್ನು ಬೆಳಗಿಸಿ ದೇದಿಪ್ಯವಾದ ವಾತಾವರಣವನ್ನು ನಿರ್ಮಿಸಲಾಗುತ್ತದೆ. ಮಹಾಮಂಗಳಾರತಿಯನ್ನು ಬೆಳಗಿ ಮಂತ್ರ ಪುಷ್ಪಾಂಜಲಿಯನ್ನು ಸಮರ್ಪಿಸಲಾಗುತ್ತದೆ. ಆನಂತರ ಪ್ರದಕ್ಷಿಣೆ ಗೈದು, ಸಾಷ್ಟಾಂಗ ನಮಸ್ಕಾರ ಮಾಡಿ, ನಾಗದೇವತೆಯನ್ನು ಪ್ರಸನ್ನಗೊಳಿಸಿ,ಮಹಾಮಹಿಮರಾದ ಸರ್ಪಗಳೇ, ಶ್ರದ್ಧಾ ಭಕ್ತಿಯಿಂದ ಯಥಾಶಕ್ತಿಯಾಗಿ ನಡೆಸಿದ ಈ ಪೂಜೆಯನ್ನು ಅಂಗೀಕರಿಸಿ, ಬಲಿದಾನವನ್ನು ಸ್ವೀಕರಿಸಿರಿ. ಸುಪ್ರೀತರಾಗಿರಿ, ಯಜಮಾನನಿಂದ, ಆತನ ಕುಟುಂಬದವರಿಂದ, ಪೂರ್ವಜರಿಂದ ನಿಮಗಾಗಿರ ಬಹುದಾದ ಸಕಲ ಹಾನಿಯನ್ನು, ಅಪಚಾರಗಳನ್ನು ಮನ್ನಿಸಿ, ಯಜಮಾನನನ್ನು, ಆತನ ಕುಟುಂಬವನ್ನು ಸಕಲ ದುರಿತಗಳಿಂದ ರಕ್ಷಿಸಿರಿ, ಅವರಿಗುಂಟಾಗಿರುವ ಸರ್ಪ ಶಾಪವನ್ನು ನಿವೃತ್ತಿ ಪಡಿಸಿ ಅನುಗ್ರಹಿಸಿರಿ. ಕುಷ್ಠಾದಿ ರೋಗಗಳನ್ನು ನಾಶಗೊಳಿಸಿರಿ. ಆಯುಷ್ಮಂತರಾದ ಪುತ್ರ ಪೌತ್ರರ ಉತ್ತಮ ಸಂತಾನ ಭಾಗ್ಯವನ್ನು ಅನುಗ್ರಹಿಸಿ ಉತ್ತರೋತ್ತರ ಅಭಿವೃದ್ಧಿಯಾಗುವಂತೆ ಆಶಿರ್ವದಿಸಿ, ಅಷ್ಟ್ಯೆಶ್ವರ್ಯಗಳನ್ನು ದಯಪಾಲಿಸುವ ಕೃಪೆ ಮಾಡಿರಿ ಎಂದು ಮನಃಪೂರ್ವಕವಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ತದನಂತರ ಅರ್ಘ್ಯದಾನ, ಮತ್ತು ವಾಯನಗಳ ದಾನ ನೀಡಲಾಗುತ್ತದೆ. ಪ್ರಸಾದವನ್ನು ವಿತರಿಸಿ, ವಿಸರ್ಜನ ಪೂಜೆಯನ್ನು ನೆರವೇರಿಸಿ ಆಶ್ಲೇಷಾ ಬಲಿ ವಿಧಾನವನ್ನು ಪರಿಸಮಾಪ್ತಿಗೊಳಿಸಲಾಗುತ್ತದೆ.
ಅನಂತರ ಪೂಜೆಯನ್ನು ನೆರವೇರಿಸಿದ ಆಚಾರ್ಯರಿಗೆ ಫಲ, ತಾಂಬೂಲ ಯಥಾಶಕ್ತಿ ದಕ್ಷಿಣೆ ನೀಡಿ ನಮಸ್ಕರಿಸಿ, ಆರ್ಶಿರ್ವಾದ ಪಡೆಯುವುದರೊಂದಿಗೆ ಆಶ್ಲೇಷಾ ಬಲಿ ಪೂಜೆಯು ಮುಕ್ತಾಯವಾಗುತ್ತದೆ.
ಆದಿತ್ಯಾದಿ ನವಗ್ರಹ ಪ್ರಸಾದ ಸಿದ್ಧಿರಸ್ತು.

ಇದನ್ನೂ ಓದಿ: Nagara Panchami : ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ; ಏನಿದರ ಹಿನ್ನೆಲೆ, ವಿಶೇಷ?

Continue Reading
Advertisement
KCET Mock Allotment 2024 Engineering mock seat allotment announced
ಬೆಂಗಳೂರು19 mins ago

KCET Mock Allotment 2024: ಎಂಜಿನಿಯರಿಂಗ್ ಅಣಕು ಸೀಟು ಹಂಚಿಕೆ ಪ್ರಕಟ

Viral News
ವೈರಲ್ ನ್ಯೂಸ್26 mins ago

Viral News: 5 ಕೆಜಿ ಆಲೂಗಡ್ಡೆ ಲಂಚ ಕೇಳಿ ಅಮಾನತುಗೊಂಡ ಸಬ್‌ ಇನ್ಸ್‌ಪೆಕ್ಟರ್ !

CM Siddaramaiah
ಚಾಮರಾಜನಗರ44 mins ago

CM Siddaramaiah: ನಮಗೆ ಮನೇಲಿ ತಂಗಳು ಇರ್ತಿತ್ತು, ಇಡ್ಲಿ-ದೋಸೆ ಇರ್ತಿಲಿಲ್ಲ ಎಂದ ಸಿಎಂ

High Calcium Foods
ಆರೋಗ್ಯ48 mins ago

High Calcium Foods: ದೇಹಕ್ಕೆ ಮುಖ್ಯವಾದ ಅಧಿಕ ಕ್ಯಾಲ್ಶಿಯಂ ಆಹಾರಗಳನ್ನು ಪಡೆಯುವುದು ಹೇಗೆ?

Narendra Modi
ದೇಶ48 mins ago

Narendra Modi: ಮಕ್ಕಳು, ಸ್ತ್ರೀಯರು ಸೇರಿ ವಯನಾಡು ಸಂತ್ರಸ್ತರನ್ನು ಸಂತೈಸಿದ ಮೋದಿ; Photos ಇಲ್ಲಿವೆ

Smriti Mandhana
ಪ್ರಮುಖ ಸುದ್ದಿ50 mins ago

Smriti Mandhana : ವಿರಾಟ್​ ಕೊಹ್ಲಿ ಜತೆ ನನ್ನನ್ನು ಹೋಲಿಕೆ ಮಾಡಬೇಡಿ; ಸ್ಮೃತಿ ಮಂದಾನ ಮನವಿ

Tharun Sudhir
ಸಿನಿಮಾ54 mins ago

Tharun Sudhir: ತರುಣ್ ಸುಧೀರ್-ಸೋನಲ್ ಮದುವೆ ಸಂಭ್ರಮ; ರಿಸೆಪ್ಶನ್‌ ಲೈವ್‌ ವಿಡಿಯೊ ಇಲ್ಲಿದೆ ನೋಡಿ

ಪ್ರಮುಖ ಸುದ್ದಿ1 hour ago

BJP-JDS Padayatra: ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ಹೋರಾಟ ನಿಲ್ಲಲ್ಲ: ಸಿಎಂ, ಡಿಸಿಎಂ ವಿರುದ್ಧ ಬಿಎಸ್‌ವೈ ಗುಡುಗು

Bengaluru Power Cut
ಕರ್ನಾಟಕ1 hour ago

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ.13ರಂದು ಕರೆಂಟ್‌ ಇರಲ್ಲ

Saina Nehwal
ಪ್ರಮುಖ ಸುದ್ದಿ1 hour ago

Saina Nehwal : ನನ್ನ ಸ್ಮ್ಯಾಶ್​ ತಡೆಯಲು ಬುಮ್ರಾಗೆ ಸಾಧ್ಯವಿಲ್ಲ; ಕ್ರಿಕೆಟ್​ಗೆ ಹೆಚ್ಚು ಆದ್ಯತೆ ಬಗ್ಗೆ ತಕರಾರು ಎತ್ತಿದ ಸೈನಾ ನೆಹ್ವಾಲ್​

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ6 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌