Site icon Vistara News

Star Saree Fashion: ಏನಿದು ನಟಿ ಶ್ರೀಲೀಲಾ ಧರಿಸಿ ಮಿಂಚಿದ ಆಕರ್ಷಕ ಕಟ್ ವರ್ಕ್ ಸೀರೆ?

Star Saree Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಕರ್ಷಕ ಸಿಕ್ವೀನ್ಸ್ ಕಟ್ ವರ್ಕ್ ಸೀರೆಯಲ್ಲಿ (Star Saree Fashion) ನಟಿ ಶ್ರೀ ಲೀಲಾ ಮಿನುಗಿದ್ದಾರೆ. ಕನ್ನಡದ ಕಿಸ್ ಸಿನಿಮಾದ ಮೂಲಕ ಸಿನಿಮಾದಲ್ಲಿ ಎಂಟ್ರಿ ನೀಡಿ ಇದೀಗ ಇತರೇ ಭಾಷೆಗಳಲ್ಲೂ ಕಾಣಿಸಿಕೊಳ್ಳುತ್ತಿರುವ ಬಹುಭಾಷಾ ತಾರೆ ನಟಿ ಶ್ರೀ ಲೀಲಾ ಮೊದಲಿನಿಂದಲೂ ಗ್ಲಾಮರಸ್ ನಟಿ ಎಂದೇ ಖ್ಯಾತಿ ಗಳಿಸಿದವರು. ಹೆಚ್ಚಾಗಿ ವೆಸ್ಟರ್ನ್ ಔಟ್‌ಫಿಟ್‌ನಲ್ಲೆ ಕಾಣಿಸಿಕೊಳ್ಳುವ ಇವರು, ಇದೀಗ ಡಿಸೈನರ್ ಸಾವನ್ ಗಾಂಧಿಯವರ ಆಕರ್ಷಕ ಕಟ್ ವರ್ಕ್ ಸೀರೆಯಲ್ಲಿ ಮಿಂಚಿದ್ದಾರೆ. ಇವರ ಈ ಲುಕ್‌ಗೆ ಸೋಷಿಯಲ್ ಮೀಡಿಯಾ ಫ್ಯಾನ್ಸ್ ಫಿದಾ ಆಗಿದ್ದಾರೆ.

ಸೀರೆಯಲ್ಲೂ ನಟಿ ಶ್ರೀ ಲೀಲಾ ಗ್ಲಾಮರಸ್ ಲುಕ್

“ನಟಿಯರು ಸೀರೆಯಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಡಿಫರೆಂಟ್ ಹಾಗೂ ವಿಭಿನ್ನ ಡಿಸೈನರ್ ಸೀರೆಗಳಲ್ಲಿ ಕಾಣಿಸಿಕೊಳ್ಳುವುದು ಬಾಲಿವುಡ್‌ನಲ್ಲಿ ಹೆಚ್ಚು . ಇತ್ತೀಚೆಗೆ ಸೌತ್ ಇಂಡಿಯನ್ ಸಿನಿಮಾ ತಾರೆಯರೂ ಕೂಡ ಈ ಸಾಲಿಗೆ ಸೇರಿದ್ದಾರೆ. ಇನ್ನು ನಟಿ ಶ್ರೀ ಲೀಲಾ ಬಹಳಷ್ಟು ಬಾರಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಬಾರಿ ಕಾಣಿಸಿಕೊಂಡಿರುವ ಕಟ್ ವರ್ಕ್ ಸೀರೆ ಮಾತ್ರ ವಿಭಿನ್ನವಾಗಿದ್ದು ಸೀರೆ ಪ್ರಿಯರನ್ನು ಸೆಳೆದಿರುವುದರೊಂದಿಗೆ ಹೊಸ ಟ್ರೆಂಡ್‌ಗೆ ನಾಂದಿ ಹಾಡಿದೆ. ಮುಂಬರುವ ಸೀಸನ್‌ನಲ್ಲಿ ಸೀರೆ ಲೋಕದಲ್ಲಿ ಹಂಗಾಮ ಎಬ್ಬಿಸುವ ಮುನ್ಸೂಚನೆ ನೀಡಿದೆ. ಸಿಕ್ವಿನ್ಸ್ ವಿನ್ಯಾಸದೊಂದಿಗೆ ಈ ಡಿಸೈನರ್ ಸೀರೆಯ ಕಟ್ ವರ್ಕ್ ಮನಮೋಹಕವಾಗಿ ಅವರಿಗೆ ಗ್ಲಾಮರಸ್ ಲುಕ್ ನೀಡಿದೆ” ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಏನಿದು ಕಟ್ ವರ್ಕ್ ಸೀರೆ ?

ಸೀರೆಯ ಒಡಲು ಮಾತ್ರವಲ್ಲ, ಇಡಿ ಸೀರೆ ಕಟ್ ವರ್ಕ್‌ನಿಂದ ಕೂಡಿದೆ. ಈ ಸೀರೆ ಬಟರ್‌ಫೈ ವಿನ್ಯಾಸದಲ್ಲಿ ಕಟ್ ವರ್ಕ್ ಮಾಡಲಾಗಿದ್ದು, ಪಾರದರ್ಶಕವಾಗಿದೆ. ಬಾಟಲ್ ಗ್ರೀನ್ ಬಣ್ಣದ ಈ ಸೀರೆ ಕೇವಲ ಕಟ್ ವರ್ಕ್‌ನಿಂದ ಕೂಡಿರುವುದು ಮಾತ್ರವಲ್ಲ, ಸಿಕ್ವೀನ್ಸ್ ಡಿಸೈನ್ನಿಂದ ಕೂಡಿದ್ದು, ಮಿನುಗುತ್ತಿದೆ. ಇನ್ನು ಇದಕ್ಕೆ ಧರಿಸಿರುವ ವೆಲ್ಟೆಟ್ ಬ್ಲೌಸ್ ಸೀರೆಯನ್ನು ಮತ್ತಷ್ಟು ಆಕರ್ಷಕವಾಗಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಶ್ರೀ ಲೀಲಾ ಸೀರೆ ಲವ್

ಸಿಕ್ವೀನ್ಸ್ ಕಟ್ ವರ್ಕ್ ಸೀರೆಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಶ್ರೀ ಲೀಲಾ, ಪದಗಳ ಮೂಲಕ ವರ್ಣಿಸಿ, ತಮ್ಮ ಸೀರೆ ಪ್ರೇಮವನ್ನು ವ್ಯಕ್ತಪಡಿಸಿ, ಅಭಿಮಾನಿಗಳ ಮನ ಗೆದ್ದಿದ್ದಾರೆ.

ಸಾವನ್ ಗಾಂಧಿ ಡಿಸೈನರ್ ಸೀರೆ

“ಕಟ್ ವರ್ಕ್ ಸೀರೆಯನ್ನು ಆಕರ್ಷಕವಾಗಿರಿಸುವುದು ಮಾತ್ರವಲ್ಲ, ನಟಿ ಶ್ರೀ ಲೀಲಾರನ್ನು ಮತ್ತಷ್ಟು ಗ್ಲಾಮರಸ್ ಆಗಿಸಿದೆ” ಎಂದು ಸ್ಟೇಟಸ್‌ನಲ್ಲಿ ಹೇಳಿಕೊಂಡಿರುವ ಡಿಸೈನರ್ ಸಾವನ್ ಗಾಂಧಿಯವರ ಈ ಸೀರೆಗೆ ರಶ್ಮಿತಾಪ ಅವರ ಸ್ಟೈಲಿಂಗ್ ಸಾಥ್ ನೀಡಿದೆ. ಇನ್ನು ಪ್ರಣವ್ ಮಹೇಶ್ವರಿಯವರ ಫೋಟೋಗ್ರಾಫಿ ಫೋಟೋವನ್ನು ಮತ್ತಷ್ಟು ಅಂದವಾಗಿಸಿದೆ ಎನ್ನಬಹುದು.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Milan Fashion Week 2024: ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ ಡಿಸೈನರ್‌ ಧ್ರುವ ಕುಮಾರ್‌ ನ್ಯೂ ಮೆನ್ಸ್ ವೇರ್‌ ಕಲೆಕ್ಷನ್ಸ್ ಅನಾವರಣ

Exit mobile version