Star Saree Fashion: ಏನಿದು ನಟಿ ಶ್ರೀಲೀಲಾ ಧರಿಸಿ ಮಿಂಚಿದ ಆಕರ್ಷಕ ಕಟ್ ವರ್ಕ್ ಸೀರೆ? - Vistara News

ಫ್ಯಾಷನ್

Star Saree Fashion: ಏನಿದು ನಟಿ ಶ್ರೀಲೀಲಾ ಧರಿಸಿ ಮಿಂಚಿದ ಆಕರ್ಷಕ ಕಟ್ ವರ್ಕ್ ಸೀರೆ?

ಬಹುಭಾಷಾ ತಾರೆ ನಟಿ ಶ್ರೀ ಲೀಲಾ ಆಕರ್ಷಕ ಸಿಕ್ವೀನ್ಸ್ ಕಟ್ ವರ್ಕ್ ಸೀರೆಯಲ್ಲಿ (Star Saree Fashion) ಕಾಣಿಸಿಕೊಂಡಿದ್ದು, ಅವರು ಉಟ್ಟ ಈ ಸೀರೆಗೆ ಸೋಷಿಯಲ್ ಮೀಡಿಯಾ ಅಭಿಮಾನಿಗಳು ಮಾರುಹೋಗಿದ್ದಾರೆ. ಏನಿದು ಕಟ್ ವರ್ಕ್ ಸೀರೆ? ಇದರ ವಿನ್ಯಾಸಕರು ಯಾರು ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Star Saree Fashion
ಚಿತ್ರಗಳು : ಶ್ರೀಲೀಲಾ, ನಟಿ, ಚಿತ್ರಕೃಪೆ : ಪ್ರಣವ್ ಮಹೇಶ್ವರಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಕರ್ಷಕ ಸಿಕ್ವೀನ್ಸ್ ಕಟ್ ವರ್ಕ್ ಸೀರೆಯಲ್ಲಿ (Star Saree Fashion) ನಟಿ ಶ್ರೀ ಲೀಲಾ ಮಿನುಗಿದ್ದಾರೆ. ಕನ್ನಡದ ಕಿಸ್ ಸಿನಿಮಾದ ಮೂಲಕ ಸಿನಿಮಾದಲ್ಲಿ ಎಂಟ್ರಿ ನೀಡಿ ಇದೀಗ ಇತರೇ ಭಾಷೆಗಳಲ್ಲೂ ಕಾಣಿಸಿಕೊಳ್ಳುತ್ತಿರುವ ಬಹುಭಾಷಾ ತಾರೆ ನಟಿ ಶ್ರೀ ಲೀಲಾ ಮೊದಲಿನಿಂದಲೂ ಗ್ಲಾಮರಸ್ ನಟಿ ಎಂದೇ ಖ್ಯಾತಿ ಗಳಿಸಿದವರು. ಹೆಚ್ಚಾಗಿ ವೆಸ್ಟರ್ನ್ ಔಟ್‌ಫಿಟ್‌ನಲ್ಲೆ ಕಾಣಿಸಿಕೊಳ್ಳುವ ಇವರು, ಇದೀಗ ಡಿಸೈನರ್ ಸಾವನ್ ಗಾಂಧಿಯವರ ಆಕರ್ಷಕ ಕಟ್ ವರ್ಕ್ ಸೀರೆಯಲ್ಲಿ ಮಿಂಚಿದ್ದಾರೆ. ಇವರ ಈ ಲುಕ್‌ಗೆ ಸೋಷಿಯಲ್ ಮೀಡಿಯಾ ಫ್ಯಾನ್ಸ್ ಫಿದಾ ಆಗಿದ್ದಾರೆ.

Actress Sri Leela looks glamorous in saree too

ಸೀರೆಯಲ್ಲೂ ನಟಿ ಶ್ರೀ ಲೀಲಾ ಗ್ಲಾಮರಸ್ ಲುಕ್

“ನಟಿಯರು ಸೀರೆಯಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಡಿಫರೆಂಟ್ ಹಾಗೂ ವಿಭಿನ್ನ ಡಿಸೈನರ್ ಸೀರೆಗಳಲ್ಲಿ ಕಾಣಿಸಿಕೊಳ್ಳುವುದು ಬಾಲಿವುಡ್‌ನಲ್ಲಿ ಹೆಚ್ಚು . ಇತ್ತೀಚೆಗೆ ಸೌತ್ ಇಂಡಿಯನ್ ಸಿನಿಮಾ ತಾರೆಯರೂ ಕೂಡ ಈ ಸಾಲಿಗೆ ಸೇರಿದ್ದಾರೆ. ಇನ್ನು ನಟಿ ಶ್ರೀ ಲೀಲಾ ಬಹಳಷ್ಟು ಬಾರಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಬಾರಿ ಕಾಣಿಸಿಕೊಂಡಿರುವ ಕಟ್ ವರ್ಕ್ ಸೀರೆ ಮಾತ್ರ ವಿಭಿನ್ನವಾಗಿದ್ದು ಸೀರೆ ಪ್ರಿಯರನ್ನು ಸೆಳೆದಿರುವುದರೊಂದಿಗೆ ಹೊಸ ಟ್ರೆಂಡ್‌ಗೆ ನಾಂದಿ ಹಾಡಿದೆ. ಮುಂಬರುವ ಸೀಸನ್‌ನಲ್ಲಿ ಸೀರೆ ಲೋಕದಲ್ಲಿ ಹಂಗಾಮ ಎಬ್ಬಿಸುವ ಮುನ್ಸೂಚನೆ ನೀಡಿದೆ. ಸಿಕ್ವಿನ್ಸ್ ವಿನ್ಯಾಸದೊಂದಿಗೆ ಈ ಡಿಸೈನರ್ ಸೀರೆಯ ಕಟ್ ವರ್ಕ್ ಮನಮೋಹಕವಾಗಿ ಅವರಿಗೆ ಗ್ಲಾಮರಸ್ ಲುಕ್ ನೀಡಿದೆ” ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

What is cut work saree?

ಏನಿದು ಕಟ್ ವರ್ಕ್ ಸೀರೆ ?

ಸೀರೆಯ ಒಡಲು ಮಾತ್ರವಲ್ಲ, ಇಡಿ ಸೀರೆ ಕಟ್ ವರ್ಕ್‌ನಿಂದ ಕೂಡಿದೆ. ಈ ಸೀರೆ ಬಟರ್‌ಫೈ ವಿನ್ಯಾಸದಲ್ಲಿ ಕಟ್ ವರ್ಕ್ ಮಾಡಲಾಗಿದ್ದು, ಪಾರದರ್ಶಕವಾಗಿದೆ. ಬಾಟಲ್ ಗ್ರೀನ್ ಬಣ್ಣದ ಈ ಸೀರೆ ಕೇವಲ ಕಟ್ ವರ್ಕ್‌ನಿಂದ ಕೂಡಿರುವುದು ಮಾತ್ರವಲ್ಲ, ಸಿಕ್ವೀನ್ಸ್ ಡಿಸೈನ್ನಿಂದ ಕೂಡಿದ್ದು, ಮಿನುಗುತ್ತಿದೆ. ಇನ್ನು ಇದಕ್ಕೆ ಧರಿಸಿರುವ ವೆಲ್ಟೆಟ್ ಬ್ಲೌಸ್ ಸೀರೆಯನ್ನು ಮತ್ತಷ್ಟು ಆಕರ್ಷಕವಾಗಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

Sri Leela Saree Love

ಶ್ರೀ ಲೀಲಾ ಸೀರೆ ಲವ್

ಸಿಕ್ವೀನ್ಸ್ ಕಟ್ ವರ್ಕ್ ಸೀರೆಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಶ್ರೀ ಲೀಲಾ, ಪದಗಳ ಮೂಲಕ ವರ್ಣಿಸಿ, ತಮ್ಮ ಸೀರೆ ಪ್ರೇಮವನ್ನು ವ್ಯಕ್ತಪಡಿಸಿ, ಅಭಿಮಾನಿಗಳ ಮನ ಗೆದ್ದಿದ್ದಾರೆ.

Sawan Gandhi Designer Saree

ಸಾವನ್ ಗಾಂಧಿ ಡಿಸೈನರ್ ಸೀರೆ

“ಕಟ್ ವರ್ಕ್ ಸೀರೆಯನ್ನು ಆಕರ್ಷಕವಾಗಿರಿಸುವುದು ಮಾತ್ರವಲ್ಲ, ನಟಿ ಶ್ರೀ ಲೀಲಾರನ್ನು ಮತ್ತಷ್ಟು ಗ್ಲಾಮರಸ್ ಆಗಿಸಿದೆ” ಎಂದು ಸ್ಟೇಟಸ್‌ನಲ್ಲಿ ಹೇಳಿಕೊಂಡಿರುವ ಡಿಸೈನರ್ ಸಾವನ್ ಗಾಂಧಿಯವರ ಈ ಸೀರೆಗೆ ರಶ್ಮಿತಾಪ ಅವರ ಸ್ಟೈಲಿಂಗ್ ಸಾಥ್ ನೀಡಿದೆ. ಇನ್ನು ಪ್ರಣವ್ ಮಹೇಶ್ವರಿಯವರ ಫೋಟೋಗ್ರಾಫಿ ಫೋಟೋವನ್ನು ಮತ್ತಷ್ಟು ಅಂದವಾಗಿಸಿದೆ ಎನ್ನಬಹುದು.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Milan Fashion Week 2024: ಮಿಲಾನ್‌ ಫ್ಯಾಷನ್‌ ವೀಕ್‌ನಲ್ಲಿ ಡಿಸೈನರ್‌ ಧ್ರುವ ಕುಮಾರ್‌ ನ್ಯೂ ಮೆನ್ಸ್ ವೇರ್‌ ಕಲೆಕ್ಷನ್ಸ್ ಅನಾವರಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Ready Saree Fashion Tips: ರೆಡಿ ಸೀರೆ ಪ್ರಿಯರು ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

ಫಟಾಫಟ್ ಸೀರೆ ಉಡುವ ಯುವತಿಯರ ವಾರ್ಡ್ರೋಬ್‌ ಲಿಸ್ಟ್‌ಗೆ ಇದೀಗ ರೆಡಿ ಸೀರೆಗಳು (Ready Saree Fashion Tips) ಸೇರಲಾರಂಭಿಸಿವೆ. ಹಾಗಾದಲ್ಲಿ, ಈ ಸೀರೆಗಳನ್ನು ಆಯ್ಕೆ ಮಾಡುವುದು ಹೇಗೆ? ಇವುಗಳನ್ನು ಸ್ಟೈಲಿಶ್‌ ಆಗಿ ಸ್ಟೈಲಿಂಗ್‌–ಡ್ರೇಪಿಂಗ್‌ ಮಾಡುವುದು ಹೇಗೆ? ಎಂಬುದರ ಬಗ್ಗೆ ಸೀರೆ ಡ್ರೇಪಿಂಗ್‌ ಸ್ಪೆಷಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Ready Saree Fashion Tips
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರೆಡಿಮೇಡ್‌ ಸೀರೆಗಳು (Ready Saree Fashion Tips) ಇದೀಗ ಯುವತಿಯರನ್ನು ಸೆಳೆದಿದ್ದು, ಲೆಕ್ಕವಿಲ್ಲದಷ್ಟು ಬಗೆಯ ಡಿಸೈನ್‌ನಲ್ಲಿ ಈ ಸೀರೆಗಳು ಸೀರೆ ಲೋಕಕ್ಕೆ ಕಾಲಿಟ್ಟಿವೆ. ಆದರೆ, ಎಲ್ಲಾ ರೆಡಿ ಸೀರೆಗಳು ಒಂದೇ ಬಗೆಯಲ್ಲಿ ಕಾಣಿಸುವುದಿಲ್ಲ. ಒಂದೊಂದು ಡಿಫರೆಂಟ್‌ ಲುಕ್‌ ನೀಡುತ್ತವೆ. ಹಾಗಾಗಿ ರೆಡಿ ಸೀರೆಗಳನ್ನು ಖರೀದಿಸುವಾಗ ಅವುಗಳ ವಿನ್ಯಾಸ ನೋಡಿ ಆಯ್ಕೆ ಮಾಡುವುದು ಹಾಗೂ ನಂತರ ಸ್ಟೈಲಿಂಗ್‌-ಡ್ರೇಪಿಂಗ್‌ ಮಾಡುವ ರೀತಿ-ನೀತಿ ಪಾಲಿಸುವುದು ಮುಖ್ಯ ಎನ್ನುತ್ತಾರೆ ಸೀರೆ ಡ್ರೇಪರ್‌ ನವನೀತಾ.
ಹೌದು, ಇಂದು ಫಟಾಫಟ್ ಆಗಿ ಸೀರೆ ಉಡುವ ಯುವತಿಯರ ವಾರ್ಡ್ರೋಬ್‌ ಲಿಸ್ಟ್‌ಗೆ ಬಗೆಬಗೆಯ ರೆಡಿಮೇಡ್‌ ಸೀರೆಗಳು ದಾಳಿ ಇಡಲಾರಂಭಿಸಿವೆ. ಒಂದಕ್ಕಿಂತ ಒಂದು ಆಕರ್ಷಕ ವಿನ್ಯಾಸದಲ್ಲಿ ದೊರೆಯುತ್ತಿವೆ. ಆದರೆ, ಈ ಸೀರೆಗಳನ್ನು ಖರೀದಿಸುವಾಗ ಮಾತ್ರ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಕೊಟ್ಟ ಬೆಲೆಗೆ ತಕ್ಕನಾಗಿ ಉಡಬಹುದು ಹಾಗೂ ನಾನಾ ಸ್ಟೈಲಿಂಗ್‌ನಲ್ಲಿ ಡ್ರೇಪಿಂಗ್‌ ಮಾಡಿ ಆಕರ್ಷಕವಾಗಿ ಕಾಣಿಸಬಹುದು ಎನ್ನುವ ಸೀರೆ ಡ್ರೇಪರ್ ಮೋಹಿನಿ ಒಂದಿಷ್ಟು ಐಡಿಯಾಗಳನ್ನು ನೀಡಿದ್ದಾರೆ.

Ready Saree Fashion Tips

ರೆಡಿಮೇಡ್‌ ಸೀರೆ ಆಯ್ಕೆ

ರೆಡಿಮೇಡ್‌ ಸೀರೆಗಳನ್ನು ಆಯ್ಕೆ ಮಾಡುವಾಗ ಮೊದಲು ಅವು ಟ್ರೆಂಡ್‌ನಲ್ಲಿವೆಯೇ ಎಂಬುದನ್ನು ನೋಡಿಕೊಳ್ಳಬೇಕು. ಇದಕ್ಕಾಗಿ ಬಾಲಿವುಡ್‌ ಸೆಲೆಬ್ರೆಟಿಗಳ ಸೋಷಿಯಲ್‌ ಮೀಡಿಯಾ ಪೋಸ್ಟ್ ನೋಡಿದಲ್ಲಿ ಹೊಸ ಟ್ರೆಂಡಿ ರೆಡಿ ಸೀರೆಗಳ ಬಗ್ಗೆ ತಿಳಿದುಕೊಳ್ಳಬಹುದು.

Ready Saree Fashion Tips

ಪರ್ಸನಾಲಿಟಿಗೆ ತಕ್ಕಂತಿರಲಿ ಸೀರೆ ಆಯ್ಕೆ

ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ರೆಡಿ ಸೀರೆ ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಸೆರಗು ಒಂದು ಕಡೆ, ಪಲ್ಲು ಒಂದು ಕಡೆ ಸರಿಯಾಗಿ ಕೂರದಿರಬಹುದು. ಅಲ್ಲದೇ, ಸ್ಲಿಮ್‌ ಇರುವವರ ರೆಡಿ ಸೀರೆ ದಪ್ಪ ಇರುವವರಿಗೆ ಆಗದಿರಬಹುದು. ಹಾಗಾಗಿ ಈ ಸೀರೆಗಳನ್ನು ಉಡುವವರ ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಬೇಕು.

ಇಂಡೋ-ವೆಸ್ಟರ್ನ್‌ ರೆಡಿ ಸೀರೆ ಆಯ್ಕೆ

ಬಹುತೇಕ ರೆಡಿ ಸೀರೆಗಳು ಇಂಡೋ–ವೆಸ್ಟರ್ನ್ ಲುಕ್‌ ನೀಡುತ್ತವೆ. ಟ್ರೆಡಿಷನಲ್‌ ಲುಕ್‌ ನೀಡುವ ರೆಡಿ ಸೀರೆಗಳು ಹೆಚ್ಚಿನ ಡಿಸೈನ್‌ನಲ್ಲಿ ದೊರೆಯುವುದಿಲ್ಲ. ಹಾಗಾಗಿ ಆದಷ್ಟೂ ಟ್ರೆಡಿಷನಲ್‌ ಸೀರೆಗಳನ್ನು ರೆಡಿಮೇಡ್‌ ಆಗಿ ಖರೀದಿಸದಿರಿ. ಬದಲಿಗೆ ವೆಸ್ಟರ್ನ್‌ ಲುಕ್‌ ನೀಡುವಂತಹದ್ದನ್ನೇ ಸೆಲೆಕ್ಟ್‌ ಮಾಡಿ.

Ready Saree Fashion Tips

ಸೀರೆ ಡ್ರೇಪಿಂಗ್‌ಗೆ ಪ್ರಾಮುಖ್ಯತೆ

ಸೀರೆ ಖರೀದಿಸುವಾಗ ಮೊದಲೇ ನೀವು ಆಯ್ಕೆ ಮಾಡುವ ರೆಡಿ ಸೀರೆ ಹೇಗೆಲ್ಲಾ ಉಡಬಹುದು ಎಂಬುದನ್ನು ಮೊದಲೇ ತಿಳಿದುಕೊಳ್ಳಿ. ಎಲ್ಲದಕ್ಕಿಂತ ಹೆಚ್ಚಾಗಿ, ತೀರಾ ಸಿಂಪಲ್‌ ಆಗಿ ಉಡುವುದಾದಲ್ಲಿ ರೆಡಿ ಸೀರೆ ಖರೀದಿಸುವುದೇ ಬೇಕಾಗಿಲ್ಲ. ಕೆಲವು ಮೂರ್ನಾಲ್ಕು ಶೈಲಿಯಲ್ಲಿ ಡ್ರೇಪಿಂಗ್‌ ಮಾಡುವ ರೆಡಿ ಸೀರೆಗಳು ದೊರೆಯುತ್ತವೆ. ಅಂತದ್ದನ್ನೇ ಕೊಳ್ಳಿ. ಆದಷ್ಟೂ ಡ್ರೇಪಿಂಗ್‌ಗೆ ಪ್ರಾಮುಖ್ಯತೆ ನೀಡಿ.

ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿ ಮಹಿಳೆಯರನ್ನು ಸೆಳೆಯುತ್ತಿವೆ ಈ 3 ಟ್ರೆಡಿಷನಲ್‌ ಮಾಟಿಗಳು

ರೆಡಿ ಸೀರೆ ಸ್ಟೈಲಿಂಗ್‌ ಹೀಗಿರಲಿ

ರೆಡಿ ಸೀರೆಗಳ ಸ್ಟೈಲಿಂಗ್‌ ಆಯಾ ಸೀರೆಯ ವಿನ್ಯಾಸಕ್ಕೆ ಮ್ಯಾಚ್‌ ಆಗುವಂತಿರಲಿ. ಉದಾಹರಣೆಗೆ, ಕಾಕ್‌ಟೈಲ್‌ ರೆಡಿ ಸೀರೆ, ಪಾರ್ಟಿವೇರ್‌ ರೆಡಿ ಸೀರೆ, ಗೌನ್‌ ರೆಡಿ ಸೀರೆ, ಲೆಹೆಂಗಾ ರೆಡಿ ಸೀರೆ ಹೀಗೆ ಆಯಾ ಸೀರೆಯ ವಿನ್ಯಾಸಕ್ಕೆ ತಕ್ಕಂತೆ ಸ್ಟೈಲಿಂಗ್‌ ಇರಲಿ. ಹೇರ್‌ಸ್ಟೈಲ್‌ ಸೇರಿದಂತೆ ಮೇಕಪ್‌ ಕೂಡ ಹೊಂದಬೇಕು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Fish Spa Awareness: ಫಿಶ್‌ ಸ್ಪಾಗೂ ಮುನ್ನ ನೂರು ಬಾರಿ ಯೋಚಿಸಿ!

ನೀವು ಫಿಶ್‌ ಸ್ಪಾ ಪ್ರಿಯರೇ? ಕಂಡ ಕಂಡಲ್ಲೆಲ್ಲಾ ಈ ಪೆಡಿಕ್ಯೂರ್‌ ಮಾಡಿಸಿ, ಸಂತಸ ಪಡುತ್ತೀರಾ! ಹಾಗಾದಲ್ಲಿ ಎಚ್ಚರವಹಿಸಿ. ಈ ವಿಧಾನದಿಂದ ನಿಮ್ಮ ಪಾದಗಳಿಗೆ ಕ್ಷಣಕಾಲ ರಿಲ್ಯಾಕ್ಸೆಷನ್‌ ದೊರಕಿದರೂ ನಂತರ ನಿಮಗೆ ತಿಳಿಯದಂತೆಯೇ ಸೋಂಕು ತಗುಲಬಹುದು (Fish Spa Awareness) ಎನ್ನುತ್ತಾರೆ ಸ್ಕಿನ್‌ ಸ್ಪೆಷಲಿಸ್ಟ್‌ಗಳು.

VISTARANEWS.COM


on

Fish Spa awareness
ಚಿತ್ರಕೃಪೆ: ಇನ್‌ಸ್ಟಾಗ್ರಾಮ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀವು ಫಿಶ್‌ ಸ್ಪಾ ಪ್ರಿಯರೇ? ಎಲ್ಲಾದರೂ ಫಿಶ್‌ ಸ್ಪಾ ಕಂಡಾಕ್ಷಣ ನಿಮ್ಮ ಪಾದಾರವಿಂದಗಳನ್ನು ಮೀನುಗಳಿಗೆರುವ ನೀರಿನ ಟ್ಯಾಂಕ್‌ನಲ್ಲಿಟ್ಟು, ನ್ಯಾಚುರಲ್‌ ಪೆಡಿಕ್ಯೂರ್‌ ಇದು ಎಂದು ಸಂತಸ ಪಡುತ್ತೀರಾ! ಹಾಗಾದಲ್ಲಿ, ಇದಕ್ಕೂ ಮುನ್ನ, ಒಮ್ಮೆ ಈ ಲೇಖನ ಓದಿ ಬಿಡಿ (Fish Spa Awareness) ಎನ್ನುತ್ತಾರೆ ಸ್ಕಿನ್‌ ಸ್ಪೆಷಲಿಸ್ಟ್‌ಗಳು.

Fish Spa awareness

ಸ್ವಚ್ಛತೆಗೆ ಆದ್ಯತೆ ನೀಡಿ

ಕೆಲವು ಮಾಲ್‌ಗಳಲ್ಲಿ , ರೆಸಾರ್ಟ್‌ಗಳಲ್ಲಿ, ಎಕ್ಸಿಬೀಷನ್‌ಗಳಲ್ಲಿ, ಜಾತ್ರೆ, ವಸ್ತು ಪ್ರದರ್ಶನಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಅತಿ ಕಡಿಮೆ ಬೆಲೆಗೆ ಫಿಶ್‌ ಸ್ಪಾ ಮಾಡಿಸಿಕೊಳ್ಳಿ ಎಂಬ ನಾಮಫಲಕ ತಗುಲಿ ಹಾಕಿಕೊಂಡಿರುವುದನ್ನು ನಾವು ನೋಡಿರುತ್ತೇವೆ. ಒಂದೇ ಉದ್ದದ ಟ್ಯಾಂಕ್‌ನಲ್ಲಿ ನಾಲ್ಕೈದು ಮಂದಿ ಕಾಲು ಇಳೆ ಬಿಟ್ಟು, ಆರಾಮವಾಗಿ ರಿಲ್ಯಾಕ್ಸ್ ಮಾಡುತ್ತಿರುವುದನ್ನು ಕಾಣುತ್ತಿರುತ್ತೇವೆ. ಅರ್ಧ ಗಂಟೆ, ಒಂದು ಗಂಟೆಗೆ ಇಂತಿಷ್ಟು ಎಂದು ಕೂಲಾಗಿ ಸ್ಪಾ ಟ್ರೀಟ್‌ಮೆಂಟ್‌ ಪಡೆಯುವುದನ್ನು ಕಣ್ಣಾರೆ ಕಂಡಿರುತ್ತೇವೆ. ಆದರೆ, ಇಂತಹ ಆಮಿಷಕ್ಕೆ ನೀವು ಮನಸೋಲಬೇಡಿ. ಕಡಿಮೆ ಬೆಲೆಯಲ್ಲಿ ಫಿಶ್‌ ಸ್ಪಾ ಸಿಗುತ್ತದಲ್ಲ! ಎಂದು ಮುಂದಾಗಬೇಡಿ ಎನ್ನುತ್ತಾರೆ ಸ್ಕಿನ್‌ ಸ್ಪೆಷಲಿಸ್ಟ್‌ಗಳು. ಇನ್ನು, ಸ್ಪಾಗೆ ನೀವು ಒಳಗಾಗಲೇ ಬೇಕಿದ್ದಲ್ಲಿ ಮೊದಲು ಅಲ್ಲಿನ ವಾತಾವರಣ ಹಾಗೂ ಟ್ಯಾಂಕ್‌ ಸ್ವಚ್ಛತೆಗೆ ಮಾನ್ಯತೆ ನೀಡಿರುವುದನ್ನು ನೋಡಿ ಮುಂದುವರೆಯಿರಿ ಎಂದು ಎಚ್ಚರಿಸುತ್ತಾರೆ.

Fish Spa awareness

ನಿಮಗೆ ಇದು ಗೊತ್ತೇ!

ಸಾಮಾನ್ಯವಾಗಿ ಫಿಶ್‌ ಸ್ಪಾಗಳಲ್ಲಿ ಡೆಡ್‌ ಸ್ಕಿನ್‌ ತಿನ್ನುವ ಗಾರ್ರಾ ರುಫಾ ಮೀನುಗಳನ್ನು ಬಳಸಲಾಗುತ್ತದೆ. ಇಲ್ಲಿ ಬಳಸುವ ನೀರಿನಿಂದ ಅತಿ ಸುಲಭವಾಗಿ ಬ್ಯಾಕ್ಟಿರಿಯಾ ಹಾಗೂ ಮೈಕ್ರೋ ವೈರಸ್‌ಗಳು ನಿಮ್ಮ ದೇಹವನ್ನು ಪ್ರವೇಶಿಸುವ ಸಾಧ್ಯತೆಗಳಿವೆಯಂತೆ. ಗಾಯ ಹಾಗೂ ಚರ್ಮಸಂಬಂಧಿ ಖಾಯಿಲೆ ಇರುವವರೇನಾದರೂ ಈ ಫಿಶ್‌ ಸ್ಪಾ ಬಳಸಿದ್ದಲ್ಲಿ, ಅಲ್ಲಿಯೇ ಕಾಲನ್ನು ಹಾಕಿ ಪೆಡಿಕ್ಯೂರ್‌ಗೆ ಒಳಗಾಗುವವರಿಗೂ ಸೋಂಕು ತಗುಲಬಹುದಂತೆ. ಈ ಹಿನ್ನೆಲೆಯಲ್ಲಿ, ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಫಿಶ್‌ ಸ್ಪಾ ಬ್ಯಾನ್‌ ಕೂಡ ಮಾಡಲಾಗಿದೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ಸ್‌.

Fish Spa awareness

ಫಿಶ್‌ ಸ್ಪಾದಿಂದ ಬೆರಳು ಕಳೆದುಕೊಂಡಿದ್ದ ಮಹಿಳೆ ಕಥೆ

ಕಳೆದ 2018ರಲ್ಲಿ ವಿದೇಶಿ ಮಹಿಳೆಯೊಬ್ಬಳು ಥೈಲ್ಯಾಂಡ್‌ನ ಫಿಶ್‌ ಸ್ಪಾದಲ್ಲಿ ಪಾದಗಳಿಗೆ ಸೋಂಕು ತಗುಲಿಸಿಕೊಂಡು, ತನ್ನ ಬಲಪಾದದ ಎಲ್ಲಾ ಬೆರಳುಗಳನ್ನು ಕಳೆದುಕೊಂಡಿದ್ದಳು. ಇದು ಅಂದು ದೊಡ್ಡ ನ್ಯೂಸ್‌ ಆಗಿತ್ತು. ಹಾಲಿಡೇ ಮುಗಿಸಿ, ಮನೆಗೆ ವಾಪಾಸ್ಸಾದಾಗ ಜ್ವರದಿಂದ ನರಳಿದ್ದ ಮಹಿಳೆಗೆ ಸಾಕಷ್ಟು ಪರೀಕ್ಷೆಗಳನ್ನು ಮಾಡಿಸಿದಾಗ ಕಂಡು ಬಂದದ್ದು, ಫಿಶ್‌ ಸ್ಪಾದಲ್ಲಿದ್ದ (Osteomyelitis) ಬ್ಯಾಕ್ಟಿರಿಯಾದಿಂದ ಮೂಳೆ ಸೋಂಕು ತಗುಲಿತ್ತಂತೆ. ನಂತರ ಆಕೆಗೆ ಅರಿವಿಲ್ಲದಂತೆಯೇ ಆ ಬ್ಯಾಕ್ಟಿರಿಯಾಗಳು ಬೆರಳುಗಳನ್ನೇ ತಿಂದು ಹಾಕಿದ್ದವಂತೆ. ಈ ಘಟನೆ ಫಿಶ್‌ ಸ್ಪಾ ಪ್ರಿಯರಿಗೆ ಎಚ್ಚರಿಕೆ ಗಂಟೆ ಬಾರಿಸಿತ್ತು ಎನ್ನುತ್ತಾರೆ ಸ್ಕಿನ್‌ ಸ್ಪೆಷಲಿಸ್ಟ್ ಡಾ. ರುತಿಜಾ.

ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿ ಮಹಿಳೆಯರನ್ನು ಸೆಳೆಯುತ್ತಿವೆ ಈ 3 ಟ್ರೆಡಿಷನಲ್‌ ಮಾಟಿಗಳು

ಯಾರ್ಯಾರು ಫಿಶ್‌ ಪೆಡಿಕ್ಯೂರ್‌ಗೆ ಒಳಗಾಗಬಾರದು?

  • ಡಯಾಬೀಟಿಸ್‌ ಇರುವಂತಹ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಫಿಶ್‌ ಪೆಡಿಕ್ಯೂರ್‌ಗೆ ಒಳಗಾಗಬಾರದು.
  • ಇಮ್ಯೂನಿಟಿ ಕಡಿಮೆ ಇರುವವರು ಹಾಗೂ ಇಮ್ಯೂನಿಟಿ ಏರುಪೇರಾಗುವಂತವರು ಕೂಡ ಫಿಶ್‌ ಪೆಡಿಕ್ಯೂರ್‌ ಮಾಡಿಸಬಾರದು.
  • ಚರ್ಮದ ಖಾಯಿಲೆ ಇರುವವರು ಫಿಶ್‌ ಸ್ಪಾ ಮಾಡಿಸಬಾರದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Wedding Jewel Fashion: ವೆಡ್ಡಿಂಗ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿ ಮಹಿಳೆಯರನ್ನು ಸೆಳೆಯುತ್ತಿವೆ ಈ 3 ಟ್ರೆಡಿಷನಲ್‌ ಮಾಟಿಗಳು

ವೆಡ್ಡಿಂಗ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿ (Wedding Jewel Fashion) ಇದೀಗ ಕಿವಿಯ ಸೌಂದರ್ಯವನ್ನು ಹೆಚ್ಚಿಸುವ 3 ಶೈಲಿಯ ಟ್ರೆಡಿಷನಲ್‌ ಲುಕ್‌ ನೀಡುವ ಡಿಸೈನರ್‌ ಮಾಟಿಗಳು ಟ್ರೆಂಡಿಯಾಗಿವೆ. ಅವು ಯಾವುವು? ಆಯ್ಕೆ ಹೇಗಿರಬೇಕು? ಎಂಬುದರ ಬಗ್ಗೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Wedding Jewel Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ, ಶೆಟ್ಟಿ, ಬೆಂಗಳೂರು
ವೆಡ್ಡಿಂಗ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿ (Wedding Jewel Fashion) ಇದೀಗ ಕಿವಿಯ ಸೌಂದರ್ಯವನ್ನು ಹೆಚ್ಚಿಸುವ ನಾನಾ ಬಗೆಯ ಟ್ರೆಡಿಷನಲ್‌ ಲುಕ್‌ ನೀಡುವ ಡಿಸೈನರ್‌ ಮಾಟಿಗಳು ರೀ ಎಂಟ್ರಿ ನೀಡಿದ್ದು, ಅವುಗಳಲ್ಲಿ 3 ಶೈಲಿಯವು ಮಹಿಳೆಯರನ್ನು ಅಲಂಕರಿಸುತ್ತಿವೆ.

Wedding Jewel Fashion

ಟ್ರೆಡಿಷನಲ್‌ ಲುಕ್‌ಗೆ ಸಾಥ್‌ ನೀಡುವ ಮಾಟಿ

“ಕಿವಿಯ ಓಲೆಯೊಂದಿಗೆ ಧರಿಸುವ ಮಾಟಿಗಳು ಮೊದಲಿನಿಂದಲೂ ಟ್ರೆಡಿಷನಲ್‌ ಲುಕ್‌ ಬಯಸುವ ಮಹಿಳೆಯರ ಕಿವಿಯನ್ನು ಶೃಂಗರಿಸುತ್ತಿವೆ. ಮನೆಯ ಸಮಾರಂಭಗಳು ಅದರಲ್ಲೂ ಮದುವೆಯಂತಹ ದೊಡ್ಡ ಕ್ರಾರ್ಯಕ್ರಮಗಳಲ್ಲಿ ಮಾನಿನಿಯರನ್ನು ಸಿಂಗರಿಸುತ್ತಿವೆ. ಸಂತಸದ ವಿಚಾರವೆಂದರೇ, ಇದೀಗ ಮಾಡರ್ನ್‌ ಲುಕ್‌ ಬಯಸುವ ಯುವತಿಯರೂ ಕೂಡ ಇಷ್ಟಪಟ್ಟು ಧರಿಸತೊಡಗಿದ್ದಾರೆ” ಎನ್ನುತ್ತಾರೆ” ಜ್ಯುವೆಲ್‌ ಡಿಸೈನರ್‌ ಧೃತಿ. ಅವರ ಪ್ರಕಾರ, ಈ ಮಾಟಿಗಳು ಯುವತಿಯರ ಹೇರ್‌ಸ್ಟೈಲ್‌ ಸೌಂದರ್ಯಕ್ಕೂ ಸಾಥ್‌ ನೀಡುತ್ತಿವೆಯಂತೆ.

Wedding Jewel Fashion

ಬ್ರೈಡಲ್‌ ಲುಕ್‌ಗೆ ಸಾಥ್‌

ಮದುಮಗಳ ಜುವೆಲರಿ ಸೆಟ್‌ನಲ್ಲಿ ಇದೀಗ ನಾನಾ ಬಗೆಯ ಮಾಟಿಗಳು ಟ್ರೆಂಡಿಯಾಗಿದ್ದು, ಅವುಗಳಲ್ಲಿ ಆಂಟಿಕ್‌ ಮಾಟಿಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ಇನ್ನು, ಸಾಮಾನ್ಯವಾಗಿ ಎರಡು ಬಗೆಯ ಮಾಟಿಗಳು ದೊರೆಯುತ್ತವೆ. ಅವುಗಳಲ್ಲಿ, ಕೂದಲಿಗೆ ಸಿಕ್ಕಿಸುವ ಮಾಟಿಗಳು ಹಾಗೂ ಕಿವಿಯ ಮುಂದಿನ ಭಾಗದಿಂದ ಕಿವಿಯ ಓಲೆಯ ಹಿಂದಿನ ಭಾಗಕ್ಕೆ ಸಿಕ್ಕಿಸುವ ಮಾಟಿಗಳು ದೊರೆಯುತ್ತವೆ. ಕೂದಲಿಗೆ ಸಿಕ್ಕಿಸುವಂತವು ಹೇರ್‌ಸ್ಟೈಲನ್ನು ಹೈಲೈಟ್‌ ಮಾಡುತ್ತವೆ. ಕಿವಿಯಿಂದ ಹಿಂದಿನ ಓಲೆಯ ಭಾಗಕ್ಕೆ ಧರಿಸುವಂತವು ಸಿಂಪಲ್ಲಾಗಿ ಕಾಣುತ್ತವೆ. ಒಟ್ಟಿನಲ್ಲಿ, ಮಹಿಳೆಯರಿಗೆ ಟ್ರೆಡಿಷನಲ್‌ ಲುಕ್‌ ನೀಡುತ್ತವೆ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ದಿಯಾ.

Wedding Jewel Fashion

ಪರ್ಲ್‌ ಲೇಯರ್‌ ಮಾಟಿ

ಮೂರ್ನಾಲ್ಕು ಸಾಲುಗಳ ಮುತ್ತಿನ ಎಳೆಗಳಿರುವ ಪರ್ಲ್‌ ಮಾಟಿಯು ಇಂದು ಮದುಮಗಳನ್ನು ಮಾತ್ರವಲ್ಲ, ಇತರೇ ಮಹಿಳೆಯರನ್ನು ಸೆಳೆದಿದೆ. ಮುತ್ತಿನ ಎಳೆಗಳಿರುವಂತವು ಇಂದು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.

Wedding Jewel Fashion

ಹರಳಿನ ಮಾಟಿ

ಇದು ಹಳೆಯ ಕಾಲದ ಡಿಸೈನ್‌ನ ಮಾಟಿಯಿದು. ಅಜ್ಜಿ ಕಾಲದ ಮಾಟಿ ಎಂದು ಕರೆಯಲಾಗುತ್ತಾದರೂ ಇದೀಗ ಚಾಲ್ತಿಯಲ್ಲಿರುವ ಟ್ರೆಡಿಷನಲ್‌ ಜ್ಯುವೆಲರಿಗಳಲ್ಲಿ ಇವು ಒಂದಾಗಿವೆ. ಕಿವಿಯ ಮುಂದಿನಿಂದ, ಓಲೆಯ ಹಿಂದಿನವರೆಗೆ ಎಳೆದು ಧರಿಸಲಾಗುತ್ತದೆ.

ಸಾದಾ ಗೋಲ್ಡ್ ಮಾಟಿ

ಸಾದಾ ಡಿಸೈನ್‌ನ ಮಾಟಿಗಳಲ್ಲಿ ನಾನಾ ಡಿಸೈನ್‌ನವು ಲಭ್ಯ. ಕೆಲವು ಸಾದಾ ಚೈನ್‌ನೊಂದಿಗೆ ಬೀಡ್ಸ್ ಡಿಸೈನ್‌ ಹೊಂದಿರುತ್ತವೆ. ಇಲ್ಲವೇ ಡಿಸ್ಕೋ ಚೈನ್‌, ರೋಪ್‌ ಚೈನ್‌ ಸೇರಿದಂತೆ ನಾನಾ ವಿನ್ಯಾಸದಲ್ಲಿ ದೊರೆಯುತ್ತವೆ.

ಇದನ್ನೂ ಓದಿ: Kangana Ranaut Saree Fashion: ದೇಸಿ ಸೀರೆ ನೇಯ್ದ ನೇಕಾರರಿಗೆ ಥ್ಯಾಂಕ್ಸ್ ಹೇಳಿದ ಕಂಗನಾ ರಣಾವತ್!

ಮಾಟಿ ಪ್ರಿಯರಿಗೆ ಟಿಪ್ಸ್

  • ಕಿವಿಗೆ ಹೊಂದುವಂತಹ ಡಿಸೈನ್‌ನವನ್ನು ಆಯ್ಕೆ ಮಾಡಿ.
  • ಚಿಕ್ಕ ಕಿವಿಗೆ ಲೇಯರ್‌ ಮಾಟಿ ಧರಿಸಿ. ಅಂದವಾಗಿ ಕಾಣಿಸುವುದು.
  • ದೊಡ್ಡ ಕಿವಿಗೆ ಆದಷ್ಟೂ ಸ್ಟೋನ್ಸ್ ಡಿಸೈನ್‌ನವನ್ನು ಧರಿಸಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Mens Stripe Shirt Fashion: ಮೆನ್ಸ್ ಕ್ಯಾಶುವಲ್‌ ಲುಕ್‌ಗೆ ರೀ ಎಂಟ್ರಿ ನೀಡಿದ ಸ್ಟ್ರೈಪ್ಡ್ ಶರ್ಟ್ಸ್

ಮೆನ್ಸ್ ಫ್ಯಾಷನ್‌ನಲ್ಲಿ ಇದೀಗ ಸ್ಟ್ರೈಪ್ಡ್ ಶರ್ಟ್ಸ್ (Mens Stripe Shirt Fashion) ರೀ ಎಂಟ್ರಿ ನೀಡಿವೆ. ಲೆನಿನ್‌, ಕಾಟನ್‌ ಫ್ಯಾಬ್ರಿಕ್‌ನವು ಸ್ಲಿಮ್‌ ಫಿಟ್‌ ಶೈಲಿಯಲ್ಲಿ ಬಿಡುಗಡೆಗೊಂಡಿವೆ. ಬ್ಲ್ಯೂ & ವೈಟ್‌ ಕಾಂಬಿನೇಷನ್‌ನವು ಹೆಚ್ಚು ಟ್ರೆಂಡಿಯಾಗಿವೆ. ಹಾಗಾದಲ್ಲಿ ಇವನ್ನು ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು ಎಂಬುದರ ಬಗ್ಗೆ ಮೆನ್ಸ್ ಸ್ಟೈಲಿಸ್ಟ್‌ಗಳು ಸಿಂಪಲ್‌ ಸಲಹೆ ನೀಡಿದ್ದಾರೆ.

VISTARANEWS.COM


on

Mens Stripe Shirt Fashion
ಚಿತ್ರಗಳು: ಕಾರ್ತಿಕ್‌ ಆರ್ಯನ್‌, ನಟ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೆನ್ಸ್ ಫ್ಯಾಷನ್‌ನಲ್ಲಿ ಇದೀಗ ಮತ್ತೊಮ್ಮೆ ಸ್ಟ್ರೈಪ್ಡ್ ಶರ್ಟ್ಸ್ (Mens Stripe Shirt Fashion) ರೀ ಎಂಟ್ರಿ ನೀಡಿವೆ. ಈ ಹಿಂದೆ ಚಾಲ್ತಿಯಲ್ಲಿದ್ದ ಚಿಕ್ಕ ಸ್ಟ್ರೈಪ್ಸ್ ಶರ್ಟ್ಸ್, ಇದೀಗ ಸೈಡಿಗೆ ಸರಿದಿದ್ದು, ದೊಡ್ಡ ದೊಡ್ಡ ಸ್ಟ್ರೈಪ್ಸ್ ಶರ್ಟ್ಸ್ ಚಾಲ್ತಿಗೆ ಬಂದಿವೆ. ಅದರಲ್ಲೂ ಸ್ಲಿಮ್‌ ಫಿಟ್‌ ಹಾಗೂ ಲಾಂಗ್‌ ಸ್ಲೀವ್‌ನ ಈ ಶರ್ಟ್‌ಗಳು ಯುವಕರ ಸ್ಟೈಲ್‌ ಸ್ಟೇಟ್ಮೆಂಟ್‌ಗೆ ಸಾಥ್‌ ನೀಡುತ್ತಿವೆ.

Mens Stripe Shirt Fashion

ಮೆನ್ಸ್ ಕ್ಯಾಶುವಲ್‌ ಲುಕ್‌ಗೆ ಸ್ಟ್ರೈಪ್ಸ್ ಶರ್ಟ್ ಸಾಥ್

“ಮೆನ್ಸ್ ಫ್ಯಾಷನ್‌ನಲ್ಲಿ ಆಗಾಗ ನಾನಾ ಫ್ಯಾಬ್ರಿಕ್‌ನ ಹಾಗೂ ಶೇಡ್‌ನ ಶರ್ಟ್‌ಗಳು ಆಗಮಿಸುತ್ತಿರುತ್ತವೆ. ಅಲ್ಲದೇ, ಸೀಸನ್‌ಗೆ ತಕ್ಕಂತೆ ಬದಲಾಗುತ್ತಿರುತ್ತವೆ. ಇನ್ನು ಸ್ಟ್ರೈಪ್ಸ್ ಶರ್ಟ್ಸ್ ಮೊದಲಿನಿಂದಲೂ ಪುರುಷರ ಫ್ಯಾಷನ್‌ನಲ್ಲಿದ್ದು, ಉದ್ಯೋಗಸ್ಥರ ಲೈಫ್‌ಸ್ಟೈಲ್‌ನಲ್ಲಿ ಒಂದಾಗಿವೆ. ಕಚೇರಿಗೆ ತೆರಳುವ ಪುರುಷರ ಸಿಂಪಲ್‌ ಸ್ಟೈಲ್‌ ಸ್ಟೇಟ್‌ಮೆಂಟ್ಸ್‌ಗೆ ಇವು ಜೊತೆಯಾಗಿವೆ. ಇನ್ನು, ಫ್ಯಾಷೆನಬಲ್‌ ಯುವಕರ ವಿಷಯಕ್ಕೆ ಬಂದಲ್ಲಿ, ಈ ಶರ್ಟ್ಸ್ ಕೆಲಕಾಲ ಹುಡುಗರ ಫ್ಯಾಷನ್‌ನಿಂದ ದೂರವಿದ್ದವು. ಆದರೆ, ಇದೀಗ ಈ ಬಿಗ್‌ ಸ್ಟ್ರೈಪ್ಸ್ ಪ್ರಿಂಟ್ಸ್ ಯುವಕರಿಗೆ ಪ್ರಿಯವಾಗಿವೆ. ಇದಕ್ಕೆ ಕಾರಣ, ಕೊಂಚ ಬದಲಾದ ಲುಕ್‌ನಲ್ಲಿ ಹಾಗೂ ಕಾಂಬಿನೇಷನ್‌ನಲ್ಲಿ ಬಂದಿರುವುದು. ಕ್ಯಾಶುವಲ್‌ ಲುಕ್‌ಗೆ ಸಾಥ್‌ ನೀಡುತ್ತಿರುವುದು” ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್ ರಜತ್‌.

Mens Stripe Shirt Fashion

ಪಾಪ್ಯುಲರ್‌ ಆಗಿರುವ ಸ್ಟ್ರೈಪ್ಸ್ ಶರ್ಟ್ಸ್

ಈ ಸೀಸನ್‌ನಲ್ಲಿ ಅತಿ ಹೆಚ್ಚು ಪಾಪ್ಯುಲರ್‌ ಆಗಿರುವ ಸ್ಟ್ರೈಪ್ಸ್ ಶರ್ಟ್‌ಗಳೆಂದರೆ ಸ್ಲಿಮ್‌ ಫಿಟ್‌ ಶೈಲಿಯ ಲೆನಿನ್‌ ಹಾಗೂ ಕಾಟನ್‌ ಫ್ಯಾಬ್ರಿಕ್‌ನ ಬ್ಲ್ಯೂ & ವೈಟ್‌ ಕಾಂಬಿನೇಷನ್‌ನ ಶರ್ಟ್ಸ್ ಹಾಗೂ ಬ್ಲ್ಯಾಕ್‌ ಅಥವಾ ಗ್ರೇ ಶೇಡ್‌ನ ಶರ್ಟ್ಸ್. ಇನ್ನು, ಕೆಲವು ಪೀಚ್‌ ಹಾಗೂ ಪಿಸ್ತಾ ಶೇಡ್‌ನವು ಬಂದಿದ್ದು, ಒಂದಿಷ್ಟು ಹುಡುಗರಿಗೆ ಇಷ್ಟವಾಗಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Mens Stripe Shirt Fashion

ವರ್ಟಿಕಲ್‌ ಸ್ಟ್ರೈಪ್ಸ್ ಫ್ಯಾಷನ್‌

ಹಾರಿಝಾಂಟಲ್‌ ಸ್ಟ್ರೈಪ್ಸ್ ಶರ್ಟ್ಸ್ ದಪ್ಪನಾಗಿ ಅಥವಾ ಪ್ಲಂಪಿಯಾಗಿ ಕಾಣಿಸುವಂತೆ ಮಾಡುತ್ತವೆ. ಹಾಗಾಗಿ ವರ್ಟಿಕಲ್‌ ಸ್ಟ್ರೈಪ್ಸ್‌ನ ಶರ್ಟ್ಸ್ ಪುರುಷರನ್ನು ಸ್ಲಿಮ್‌ ಆಗಿ ಕಾಣಿಸುವಂತೆ ಬಿಂಬಿಸುತ್ತವೆ. ಹಾಗಾಗಿ ಮೆನ್ಸ್ ಫ್ಯಾಷನ್‌ನಲ್ಲಿ ಇವು ಟ್ರೆಂಡಿಯಾಗಲು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಮೆನ್ಸ್ ಫ್ಯಾಷನ್‌ ಡಿಸೈನರ್‌ ದಿಗಂತ್‌.

ಇದನ್ನೂ ಓದಿ: Students Fashion: ಕಾಲೇಜು ಹುಡುಗಿಯರ ಫ್ಯಾಷನ್‌ ಲಿಸ್ಟ್‌ಗೆ ಸೇರಿದ ಮಾರ್ಬಲ್‌ ಪ್ರಿಂಟೆಡ್‌ ಕ್ರಾಪ್‌ ಟಾಪ್ಸ್!

ಸ್ಟ್ರೈಪ್ಸ್ ಶರ್ಟ್ಸ್ ಮಿಕ್ಸ್ ಮ್ಯಾಚ್‌ ಮಾಡುವುದು ಹೀಗೆ

  • ಯಾವುದೇ ಜೀನ್ಸ್ ಪ್ಯಾಂಟ್‌ ಜೊತೆಗೂ ಇವನ್ನು ಧರಿಸಬಹುದು.
  • ನೋಡಲು ಕ್ಯಾಶುವಲ್‌ ಲುಕ್‌ ನೀಡುತ್ತವೆ. ಸೀಸನ್‌ಗೆ ತಕ್ಕಂತೆ ಲೇಯರ್‌ ಲುಕ್‌ ಕೂಡ ನೀಡಬಹುದು.
  • ಆಯಾ ಶೇಡ್‌ಗಳಿಗೆ ತಕ್ಕಂತೆಯೂ ಪ್ಯಾಂಟ್‌ ಧರಿಸಬಹುದು.
  • ಚಿಕ್ಕ ವರ್ಟಿಕಲ್‌ ಸ್ಟ್ರೈಪ್ಸ್ ಇರುವ ಶರ್ಟ್ಸ್ ಕಾಪೋರೇಟ್‌ ಮೆನ್ಸ್ ಲುಕ್‌ಗೆ ಸಹಕಾರಿ.
  • ದೊಡ್ಡ ವರ್ಟಿಕಲ್‌ ಸ್ಟ್ರೈಪ್ಸ್ ಶರ್ಟ್ಸ್ ಹುಡುಗರಿಗೆ ಆಕರ್ಷಕವಾಗಿ ಕಾಣಿಸುತ್ತವೆ.
  • ಈ ಶರ್ಟ್‌ ಜೊತೆಗೆ ಸನ್‌ಗ್ಲಾಸ್‌ ಧರಿಸಿದಲ್ಲಿ ನೋಡಲು ಚೆನ್ನಾಗಿ ಕಾಣಿಸುತ್ತದೆ.
  • ಸ್ನೀಕರ್‌ ಅಥವಾ ಸ್ಪೋಟ್ಸ್ ಶೂ ಇವುಗಳೊಂದಿಗೆ ಆಕರ್ಷಕವಾಗಿ ಕಾಣಿಸುತ್ತವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
TK Chathunni
ಕ್ರೀಡೆ32 seconds ago

TK Chathunni: ಭಾರತ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ, ಕೋಚ್​ ಟಿ.ಕೆ. ಚತುನ್ನಿ ನಿಧನ

Ready Saree Fashion Tips
ಫ್ಯಾಷನ್18 mins ago

Ready Saree Fashion Tips: ರೆಡಿ ಸೀರೆ ಪ್ರಿಯರು ಮರೆಯದೇ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಂಗತಿಗಳು

Virat Kohli
ಕ್ರೀಡೆ28 mins ago

Virat Kohli: ಅಮೆರಿಕ ವಿರುದ್ಧವಾದರೂ ವಿಶ್ವ ದಾಖಲೆ ನಿರ್ಮಿಸಲಿದ್ದಾರಾ ಕಿಂಗ್​ ಕೊಹ್ಲಿ?

Chandrababu Naidu
ದೇಶ51 mins ago

Chandrababu Naidu: ವಯಸ್ಸಲ್ಲಿ ಕಿರಿಯರಾದ ಮೋದಿ ಪಾದ ಮುಟ್ಟಲು ಮುಂದಾದ ಚಂದ್ರಬಾಬು ನಾಯ್ಡು; Video ಇದೆ

Benefits Of Eating Guava
ಆರೋಗ್ಯ58 mins ago

Benefits Of Eating Guava: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ಸೀಬೆಕಾಯಿ ತಿನ್ನಿ!

Actor Darshan
ಪ್ರಮುಖ ಸುದ್ದಿ1 hour ago

Actor Darshan: ಡೆವಿಲ್‌ ಗ್ಯಾಂಗ್‌ ಜತೆ ಸ್ಥಳ ಮಹಜರು; ಅಮಾಯಕನಂತೆ ಕೈಕಟ್ಟಿ ನಿಂತ ದರ್ಶನ್‌

FIFA World Cup
ಕ್ರೀಡೆ1 hour ago

FIFA World Cup: ವಿವಾದಾತ್ಮಕ ಗೋಲಿನಿಂದಾಗಿ ಭಾರತಕ್ಕೆ ಸೋಲು; ತನಿಖೆಗೆ ಕೋರಿದ ಎಐಎಫ್‌ಎಫ್‌

Terror attack
ದೇಶ1 hour ago

Terror attack: ಮಗುವಿಗಾಗಿ ಪ್ರಾರ್ಥಿಸಲು ಹೋಗಿದ್ದ ದಂಪತಿ; ಪತ್ನಿ ಎದುರೇ ಉಗ್ರರ ಗುಂಡಿಗೆ ಬಲಿಯಾದ ಪತಿ

Actor Darshan wife Vijayalakshmi will get divorce
ಸ್ಯಾಂಡಲ್ ವುಡ್1 hour ago

Actor Darshan: ಕೊಲೆ ಆರೋಪಿ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಡಿವೋರ್ಸ್‌?

Fish Spa awareness
ಫ್ಯಾಷನ್1 hour ago

Fish Spa Awareness: ಫಿಶ್‌ ಸ್ಪಾಗೂ ಮುನ್ನ ನೂರು ಬಾರಿ ಯೋಚಿಸಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌