Site icon Vistara News

Gold Rate Today: ಸತತ ಏರಿಕೆ ಬಳಿಕ ಚಿನ್ನದ ದರ ಯಥಾಸ್ಥಿತಿ; ಇಷ್ಟಿದೆ ಇಂದಿನ ಬೆಲೆ

Gold Rate Today

Gold Rate Increased 500 Rupees Per 10 Gram In Bengaluru Today

ಬೆಂಗಳೂರು: ಕಳೆದ ಒಂದು ವಾರದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಭಾನುವಾರ (ಮಾರ್ಚ್‌ 31) ತುಸು ನಿಯಂತ್ರಣ ಕಂಡಿದೆ. ಭಾನುವಾರ ಚಿನ್ನದ ಬೆಲೆಯಲ್ಲಿ (Gold Rate Today) ಯಾವುದೇ ಏರಿಳಿತ ಉಂಟಾಗಿಲ್ಲ. ಇದರಿಂದಾಗಿ ಗ್ರಾಹಕರು ತುಸು ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯ ರಾಜಧಾನಿಯಲ್ಲಿ (Bengaluru) ಭಾನುವಾರ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 6,275 ರೂ. ಇದೆ. ಇನ್ನು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 6,845 ರೂ. ಇದೆ. ಶನಿವಾರ 22 ಕ್ಯಾರಟ್‌ ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 25 ರೂ. ಮತ್ತು 28 ರೂ. ಕಡಿತವಾಗಿತ್ತು.

ಬೆಲೆಯೇರಿಕೆಗೆ ಬೆಚ್ಚಿಬಿದ್ದ ಜನ

ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಅದರಲ್ಲೂ, ಮಾರ್ಚ್‌ 27, 28 ಹಾಗೂ 29ರಂದು ಚಿನ್ನದ ಬೆಲೆಯು ಕ್ರಮವಾಗಿ 22, 38 ಹಾಗೂ 142 ರೂಪಾಯಿ ಏರಿಕೆಯಾಗಿತ್ತು. ಚಿನ್ನದ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಅದರಲ್ಲೂ, ಮದುವೆ ಸೀಸನ್‌ ಆರಂಭವಾಗಿದ್ದು, ಚಿನ್ನಕ್ಕೆ ಭಾರಿ ಬೇಡಿಕೆ ಉಂಟಾಗಿದೆ. ಮೇಕಿಂಗ್‌ ಚಾರ್ಜ್‌ ಸೇರಿ ಹಲವು ಶುಲ್ಕ ಹಿಡಿದು 10 ಗ್ರಾಂ ಚಿನ್ನಕ್ಕೆ 70 ಸಾವಿರ ರೂ. ನೀಡಬೇಕಾದ ಕಾರಣ ಬಡವರು ಹಾಗೂ ಮಧ್ಯಮ ವರ್ಗದವರು ಚಿನ್ನದ ಬದಲು ಆರ್ಟಿಫಿಶಿಯಲ್‌ ಆಭರಣಗಳ ಮೊರೆ ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ62,50068,180
ಮುಂಬಯಿ62,750 68,450
ಬೆಂಗಳೂರು62,750 68,450
ಚೆನ್ನೈ63,70069,490

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

1) ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

2) ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

3) ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

4) ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: Davanagere News: ನೀತಿ ಸಂಹಿತೆ ಉಲ್ಲಂಘನೆ; 1.63 ಲಕ್ಷ ರೂ. ನಗದು, 2.70 ಲಕ್ಷ ರೂ. ಚಿನ್ನಾಭರಣ ಜಪ್ತಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version