ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಶನಿವಾರ (ಜೂನ್ 15) ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಭಾನುವಾರ (ಜೂನ್ 16) ಯಥಾಸ್ಥಿತಿ ಕಾಯ್ದುಕೊಂಡಿರುವುದು ಗ್ರಾಹಕರಿಗೆ ತುಸು ರಿಲೀಫ್ ತಂದಿದೆ. ಬೆಂಗಳೂರಿನಲ್ಲಿ ಇಂದು (Gold Rate Today) 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 6,650 ರೂ. ಇದ್ದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 7,255 ರೂ. ಇದೆ. ಚಿನ್ನದ ಬೆಲೆ ಏರಿಕೆ ಕಾಣದ ಹಿನ್ನೆಲೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾನುವಾರ ಚಿನ್ನ ಖರೀದಿಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಒಂದೇ ದಿನ ಗ್ರಾಂ ಚಿನ್ನದ ಬೆಲೆಯು 67 ರೂಪಾಯಿ ಜಾಸ್ತಿಯಾಗಿದ್ದು ಗ್ರಾಹಕರಲ್ಲಿ ಆತಂಕ ಮೂಡಿಸಿತ್ತು. ಭಾನುವಾರ ಇನ್ನಷ್ಟು ಏರಿಕೆಯಾಗುವ ಭೀತಿ ಇತ್ತು. ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆಯು ನಾಲ್ಕು ಬಾರಿ ಏರಿಕೆ ಕಂಡರೆ, ಎರಡು ಬಾರಿ ಮಾತ್ರ ಇಳಿಕೆ ಕಂಡಿತ್ತು. ಇನ್ನು ನಾಲ್ಕು ಬಾರಿ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಭಾನುವಾರ ಬೆಳ್ಳಿಯ ಬೆಲೆಯಲ್ಲೂ ಯಾವುದೇ ವ್ಯತ್ಯಾಸ ಆಗಿಲ್ಲ. ಬೆಂಗಳೂರಿನಲ್ಲಿ ಇಂದು ಒಂದು ಗ್ರಾಂ ಬೆಳ್ಳಿಯ ಬೆಲೆಯು 90.30 ರೂ. ಇದೆ.
ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
ದಿಲ್ಲಿ | ₹ 6,665 | ₹ 7,270 |
ಮುಂಬೈ | ₹ 6,650 | ₹ 7,255 |
ಬೆಂಗಳೂರು | ₹ 6,650 | ₹ 7,255 |
ಚೆನ್ನೈ | ₹ 6,705 | ₹ 7,315 |
ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು
ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.
ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.
ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.
ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.
ಇದನ್ನೂ ಓದಿ: Gold Heist: ಜ್ಯುವೆಲರಿ ಶಾಪ್‌ಗೆ ನುಗ್ಗಿ ಚಿನ್ನ ಕದ್ದ 20 ಕಳ್ಳರು; ಸಿನಿಮಾ ಸ್ಟೈಲಲ್ಲೇ ದರೋಡೆ ಮಾಡಿದ ವಿಡಿಯೊ ಇಲ್ಲಿದೆ!