Site icon Vistara News

Dina Bhavishya : ಅಧಿಕ ಮಾಸದ ಮೊದಲ ದಿನ ಈ ರಾಶಿಯವರಿಗೆ ಶುಭ ಸುದ್ದಿ ಖಚಿತ!

horoscope today Dina Bhavishya

ಮಂಗಳವಾರವಾದ ಇಂದಿನಿಂದ ಅಧಿಕಮಾಸ (Adhika Masa 2023) ಆರಂಭವಾಗುತ್ತಿದೆ. ಸರಾಸರಿ 33 ತಿಂಗಳಿಗೊಮ್ಮೆ ಬರುವ ಈ ಅಧಿಕಮಾಸವು ಬಹಳ ಮಹತ್ವವಾದುದು ಮತ್ತು ಪವಿತ್ರವಾದ ಮಾಸವಾಗಿದೆ. ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವಂತಿಲ್ಲ. ಆದರೆ ದೇವರ ಪ್ರಾರ್ಥನೆಗೆ, ವ್ರತಗಳಾಚರಣೆಗೆ ಸೂಕ್ತವಾದ ಮಾಸವಾಗಿದೆ. ಚಂದ್ರನು ಸೋಮವಾರ ಮಧ್ಯರಾತ್ರಿ 12:39 ಕ್ಕೆ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಹೀಗಾಗಿ ವೃಷಭ, ಕಟಕ, ಕನ್ಯಾ, ತುಲಾ, ಮಕರ, ಕುಂಭ ರಾಶಿಯವರು ಇಂದು ಚಂದ್ರನ ಬೆಂಬಲ ಪಡೆಯಲಿದ್ದಾರೆ. ಅಧಿಕ ಶ್ರಾವಣದ ಮೊದಲ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ, ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (18-07-2023)

ಶ್ರೀ ಶಕೇ 1945, ಶೋಭಕೃತ್‌ ನಾಮ ಸಂವತ್ಸರ, ದಕ್ಷಿಣಾಯನ,
ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ

ತಿಥಿ: ಪಾಡ್ಯ 26:09 ವಾರ: ಮಂಗಳವಾರ
ನಕ್ಷತ್ರ: ಪುಷ್ಯ 31:56 ಯೋಗ: ಹರ್ಷಣ 09:34
ಕರಣ: ಕಿಂಸ್ತುಘ್ನ 13:03 ಇಂದಿನ ವಿಶೇಷ: ಅಧಿಕ ಶ್ರಾವಣ ಮಾಸ ಪ್ರಾರಂಭ.
ಅಮೃತಕಾಲ: ಮಧ್ಯರಾತ್ರಿ 12 ಗಂಟೆ 49 ನಿಮಿಷದಿಂದ 02 ಗಂಟೆ 37 ನಿಮಿಷದವರೆಗೆ.

ಸೂರ್ಯೋದಯ : 06:02 ಸೂರ್ಯಾಸ್ತ : 06:50

ರಾಹುಕಾಲ : ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ಇದನ್ನೂ ಓದಿ: Adhika Masa 2023 : ಅಧಿಕ ಮಾಸದ ಲೆಕ್ಕಾಚಾರ ಹೇಗೆ? ಮಹತ್ವವೇನು?

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

ಮೇಷ: ಕಾರಣಾಂತರಗಳಿಂದ ಮೋಸ ಹೋಗುವ ಸಾಧ್ಯತೆ. ಹಣಕಾಸು ಪ್ರಗತಿ ಸಾಧಾರಣ. ಹೊಸದೊಂದು ವಸ್ತು ಖರೀದಿಯಿಂದ ಸಂತೋಷ. ಆರೋಗ್ಯದಲ್ಲಿ ಉತ್ತಮ ಫಲ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ವೃಷಭ: ಶಾಂತ ಮನಸ್ಥಿತಿ ಉತ್ಸಾಹ ತುಂಬಿ ಕಾರ್ಯದಲ್ಲಿ ಯಶಸ್ಸು ದೊರೆಯುವುದು. ದಿನದ ಮಟ್ಟಿಗೆ ಖರ್ಚು ಹೆಚ್ಚು. ಪ್ರೀತಿ ಪಾತ್ರರಿಂದ ಕಿರಿಕಿರಿ ಸಾಧ್ಯತೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ದಿನದ ಕೊನೆಯಲ್ಲಿ ಯಾವುದಾದರೂ ಸುದ್ದಿ ದುಃಖ ತರುವುದು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

ಮಿಥುನ: ಜೀವನದಲ್ಲಿನ ಅಭದ್ರತೆ ಮಾನಸಿಕ ಒತ್ತಡ ಉಂಟುಮಾಡುವ ಸಾಧ್ಯತೆ. ಹೂಡಿಕೆಗೆ ಸಂಬಂಧಿಸಿದ ವ್ಯವಹಾರದಲ್ಲಿ ಪ್ರಗತಿ. ಕಚೇರಿ ಕೆಲಸಗಳು ನಿಧಾನವಾಗಿ ಸಾಗುವುದು. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಕಟಕ: ಬಿಡುವಿಲ್ಲದ ಕೆಲಸದಿಂದ ಆಯಾಸ. ಕುಟುಂಬದ ಸಂತಸ ಹೆಚ್ಚಿಸಲು ಪ್ರಯತ್ನ. ಸಭೆ-ಸಮಾರಂಭಗಳಲ್ಲಿ ಭಾಗಿಯಾಗುವ ಸಾಧ್ಯತೆ. ಸ್ವಲ್ಪ ಖರ್ಚಿನ ದಿನ. ಬಹುದಿನಗಳ ಕನಸು ನನಸಾಗುವ ಸಮಯ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಸಿಂಹ: ಆಪ್ತರು ನಿಮ್ಮ ತಾಳ್ಮೆ ಪರಿಕ್ಷಿಸುವರು. ಯಾವುದೇ ವಿಷಯಗಳಲ್ಲಿ ದೃಢ ನಿರ್ಧಾರ, ರಾಜಿಯಾಗದ ಗುಣ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ದಿನದ ಮಧ್ಯಭಾಗದಲ್ಲಿ ಸ್ವಲ್ಪ ಮನೋ ಒತ್ತಡ. ಉದ್ಯೋಗ ಆರೋಗ್ಯದಲ್ಲಿ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಕನ್ಯಾ: ಆಪ್ತರೊಂದಿಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುವಿರಿ. ಅತಿಯಾದ ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಹಣಕಾಸು ಪ್ರಗತಿ ಸಾಧಾರಣ. ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

ತುಲಾ: ಇಂದು ನಿಮ್ಮ ಆರೋಗ್ಯ ಉತ್ತಮ. ಅನಿವಾರ್ಯ ಕಾರಣಗಳಿಂದ ಖರ್ಚು ಸಾಧ್ಯತೆ. ಕುಟುಂಬದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ. ನಿಮ್ಮ ಹಿಂದೆ ಪಿತೂರಿ ಮಾಡುವ ಜನರ ಬಗ್ಗೆ ಎಚ್ಚರಿಕೆ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 3

ವೃಶ್ಚಿಕ: ಆಹಾರದ ವ್ಯತ್ಯಾಸದಿಂದ ಆರೋಗ್ಯ ಹದಗೆಡುವ ಸಾಧ್ಯತೆ. ಆಪ್ತರೊಂದಿಗಿನ ಮಾತುಕತೆಯಲ್ಲಿ ವ್ಯತಿರಿಕ್ತವಾದ ಪರಿಣಾಮದಿಂದಾಗಿ ಜಗಳವಾಗುವ ಸಾಧ್ಯತೆ, ಆದಷ್ಟು ಮಾತು ನಿಯಂತ್ರಣದಲ್ಲಿರಲಿ. ಇದರ ಮಧ್ಯೆ ಉದ್ಯೋಗದ ಸ್ಥಳದಲ್ಲಿ ಕೌಶಲ್ಯದ ಕೆಲಸ ನಿಮಗೆ ಯಶಸ್ಸು ತಂದು ಕೊಡುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಧನಸ್ಸು: ಅತಿಯಾದ ಒತ್ತಡದ ಕಾರ್ಯ ನಿಮ್ಮ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ. ಆಪ್ತರೊಂದಿಗೆ ಪ್ರಯಾಣ ಮಾಡುವ ವಿಚಾರ ಮಾಡುವಿರಿ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಅಧಿಕ ಮಾಸದಲ್ಲಿ ಯಾವ ಕಾರ್ಯ ಮಾಡಿದರೆ ಒಳಿತಾಗುತ್ತೆ? ತಿಳಿಯಲು ಈ ವಿಡಿಯೋ ನೋಡಿ.

ಮಕರ: ನಿಸ್ವಾರ್ಥ ಮನೋಭಾವದ ನಿಮ್ಮ ಕಾರ್ಯ ಸಿದ್ಧಿಗೆ ಕಾರಣವಾಗಲಿದೆ. ಈ ಹಿಂದೆ ಮಾಡಿದ ಹೂಡಿಕೆ ವ್ಯವಹಾರವು ಇಮ್ಮಡಿ ಲಾಭ ತರುವ ಸಾಧ್ಯತೆಗಳು ಹೆಚ್ಚು. ಅನಗತ್ಯವಾಗಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

ಕುಂಭ: ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಅಗತ್ಯ. ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಇರುವವರು ಹೆಚ್ಚು ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು. ವ್ಯಾಪಾರದಲ್ಲಿ ಪ್ರಗತಿ. ಹೊಸದಾಗಿ ಕಾರ್ಯ ಪ್ರಾರಂಭಿಸುವುದು ದಿನದ ಮಟ್ಟಿಗೆ ಬೇಡ. ಭವಿಷ್ಯದ ಬಗೆಗೆ ಅತಿಯಾಗಿ ಚಿಂತಿಸಿ ಮನಸ್ಥಿತಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 9

ಇದನ್ನೂ ಓದಿ : Adhika Masa 2023 : ಅಧಿಕಮಾಸದಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ!

ಮೀನ: ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯದಿಂದ ಮಾನಸಿಕ ಅಸಮತೋಲನ. ನಡೆದು ಹೋದ ಘಟನೆಗಳ ಬಗ್ಗೆ ಚಿಂತಿಸಿ ಫಲವಿಲ್ಲ. ಅತಿಥಿಗಳ ಆಗಮನ ಹರ್ಷ ತರುವುದು. ಉದ್ಮೋಗದಲ್ಲಿ ಸಾಧಾರಣ ಫಲ. ಕೌಟಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 6

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Exit mobile version