Site icon Vistara News

Baba Vanga: 2024 ವರ್ಷವಿಡೀ ಭಯಾನಕ! ಬಾಬಾ ವಂಗಾ ಭವಿಷ್ಯ

Baba vanga

ದೆಹಲಿ: ಬಾಬಾ ವಂಗಾ (Baba Vanga) ಅವರ ಭವಿಷ್ಯವಾಣಿಯನ್ನು ಸಾಕಷ್ಟು ಮಂದಿ ನಂಬುತ್ತಾರೆ. ಇದಕ್ಕೆ ಮುಖ್ಯ ಕಾರಣ ಬಲ್ಗೇರಿಯಾದ (Bulgaria) ಈ ಅಂಧ ಮಹಿಳೆಯು ಹಲವು ವರ್ಷಗಳ ಹಿಂದೆಯೇ ನುಡಿಡಿರುವ ಬಹುತೇಕ ಭವಿಷ್ಯವಾಣಿಗಳು ನಿಜವಾಗಿವೆ. ಹೀಗಾಗಿ ಬಾಬಾ ವಂಗಾ ಅವರು ನುಡಿದಿರುವ ಭವಿಷ್ಯದ ಬಗ್ಗೆ ಕೇಳಲು ಬಹುತೇಕ ಮಂದಿ ಕುತೂಹಲದಿಂದ ಕಾಯುತ್ತಿರುತ್ತಾರೆ.

ವಾಂಜೆಲಿಯಾ ಪಾಂಡೆವಾ ಗುಶ್ಟೆರೋವಾ ಎಂಬ ಹೆಸರಿನ ಬಲ್ಗೇರಿಯನ್ ಮಹಿಳೆ ಬಾಬಾ ವಂಗಾ ತಮ್ಮ ಜೀವಿತಾವಧಿಯಲ್ಲಿ ಹಲವಾರು ಭವಿಷ್ಯವಾಣಿಗಳನ್ನು ಮಾಡಿದ್ದಾರೆ. ಎರಡು ದಶಕಗಳ ಹಿಂದೆಯೇ ಅವರು ನಿಧನರಾಗಿರುವ ಅವರ ಭವಿಷ್ಯವಾಣಿಗಳ ಬಗ್ಗೆ ಜನರು ನಿರಂತರ ಚರ್ಚೆ ಮಾಡುತ್ತಿರುತ್ತಾರೆ.

ಬಾಬಾ ವಂಗಾ ಅವರು ಈ ಹಿಂದೆ ಅಮೆರಿಕದ (america) ಮೇಲೆ ಉಗ್ರರ ದಾಳಿ, ಬರಾಕ್‌ ಒಬಾಮಾ (Barack Obama) ಅಮೆರಿಕ ಅಧ್ಯಕ್ಷರಾಗುವುದು, ಬ್ರೆಕ್ಸಿಟ್‌ (Brexit), ಡಯಾನಾ (Diana) ಸಾವಿನ ಕುರಿತು ನುಡಿದಿರುವ ಹಲವು ಭವಿಷ್ಯಗಳು ನಿಜವಾಗಿವೆ. ಇದೀಗ 2024ರ ಕುರಿತು ಅವರು ನುಡಿದಿರುವ ಭವಿಷ್ಯವಾಣಿ ಇಂತಿದೆ.

ಇದನ್ನೂ ಓದಿ: RBI News: ಆರ್‌ಬಿಐ ಯುಪಿಐ ಮೂಲಕ ಇನ್ನು ನಗದು ಠೇವಣಿ ಸೌಲಭ್ಯ; ಎಟಿಎಂ ಕಾರ್ಡ್‌ ಅಗತ್ಯವಿಲ್ಲ

ಹವಾಮಾನ ಬದಲಾವಣೆಗಳು


ಜಗತ್ತಿನಲ್ಲಿ 2024ರಲ್ಲಿ ತೀವ್ರ ಹವಾಮಾನ ಬದಲಾವಣೆಗಳು ಸಂಭವಿಸುತ್ತದೆ. ನೈಸರ್ಗಿಕ ವಿಕೋಪಗಳನ್ನು ಹೆಚ್ಚಾಗುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಈ ಕುರಿತು ಸಂಶೋಧನೆ ನಡೆಸಿರುವ ವಿಜ್ಞಾನಿಗಳು ಈ ಬಾರಿ ಜಾಗತಿಕ ಶಾಖದ ಅಲೆಗಳು ಶೇ. 67ರಷ್ಟು ಹೆಚ್ಚಾಗಿ ಸಂಭವಿಸುತ್ತಿವೆ ಮತ್ತು ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ವಿಶ್ವ ಹವಾಮಾನ ಸಂಸ್ಥೆಯು ನೈಸರ್ಗಿಕ ವಿಕೋಪಗಳಿಗೆ ಕಾರಣವಾಗುವ ಸಂಗತಿಗಳನ್ನು ಗುರುತಿಸಿದ್ದು,ಈಗಾಗಲೇ ಮುನ್ಸೂಚನೆಯನ್ನೂ ನೀಡಿದ್ದಾರೆ.

ಸೈಬರ್ ದಾಳಿ

ಬಾಬಾ ವಂಗಾ ಸಾವನ್ನಪ್ಪಿದ್ದಾಗ ಇನ್ನೂ ಅಂತರ್ಜಾಲ ವ್ಯವಸ್ಥೆಯೇ ಸರಿಯಾಗಿ ಬೆಳೆದಿರಲಿಲ್ಲ. ಆದರೆ ಆಕೆ ಸಾವಿನ ಸಮಯದಲ್ಲಿ 2024 ರಲ್ಲಿ ಸೈಬರ್ ದಾಳಿಗಳು ಹೆಚ್ಚಾಗುವ ಮುನ್ಸೂಚನೆ ನೀಡಿದ್ದರು. ವಿಶೇಷವಾಗಿ ಪವರ್ ಗ್ರಿಡ್‌ ಮತ್ತು ನೀರಿನ ಸಂಸ್ಕರಣಾ ಯೋಜನೆಗಳಂತಹ ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಸೈಬರ್ ದಾಳಿಯಾಗುವ ಅಪಾಯವಿದೆ ಎಂದು ಅವರು ಹೇಳಿದ್ದರು.

ಆರ್ಥಿಕ ಬಿಕ್ಕಟ್ಟು

2024ರ ವರ್ಷವು ಜಾಗತಿಕವಾಗಿ ಆರ್ಥಿಕ ಬದಲಾವಣೆಯನ್ನು ಕಾಣುತ್ತದೆ. ಇದು ರಾಜಕೀಯ ಉದ್ವಿಗ್ನತೆಗೆ ಕಾರಣವಾಗಬಹುದು. ಸಾಲದ ಪ್ರಮಾಣ ಹೆಚ್ಚಾಗಬಹುದು. ಯುಎಸ್ ನಲ್ಲಿ ಹಣದುಬ್ಬರ, ಜಪಾನ್ ನಲ್ಲಿ ಆರ್ಥಿಕ ಕುಸಿತ, ಯುಕೆಯಲ್ಲಿ ಹೆಚ್ಚಿನ ಬಡ್ಡಿದರಗಳು ಮತ್ತು ಕಡಿಮೆ ಉತ್ಪಾದಕತೆ, ಚೀನಾ ದೇಶಕ್ಕೂ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎಂದು ಅವರು ಹೇಳಿದ್ದಾರೆ.

ರೋಗಗಳಿಗೆ ಚಿಕಿತ್ಸೆ

ಆಲ್ ಜ್ಹಮರ್ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ಔಷಧ ಲಭ್ಯವಾಗುವುದಾಗಿ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇತ್ತೀಚೆಗೆ ರಷ್ಯಾದಲ್ಲಿ ನಡೆಯುತ್ತಿರುವ ಕ್ಯಾನ್ಸರ್ ಬಗ್ಗೆ ಸಂಶೋಧನೆಯ ಬಗ್ಗೆ ಹೇಳಿಕೆ ನೀಡಿದ್ದು, ಶೀಘ್ರದಲ್ಲೇ ಕ್ಯಾನ್ಸರ್ ಲಸಿಕೆಗಳು ಲಭ್ಯವಾಗುವ ಸಾಧ್ಯತೆಯ ಬಗ್ಗೆ ತಿಳಿಸಿದ್ದರು.

ಯುದ್ಧ

2024ರಲ್ಲಿ ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಅಥವಾ ದಾಳಿಯ ಸಾಧ್ಯತೆ ಬಗ್ಗೆ ಸುಳಿವು ನೀಡಿರುವ ಬಾಬಾ ವಂಗಾ ಭಯೋತ್ಪಾದಕ ಚಟುವಟಿಕೆ ಹೆಚ್ಚಾಗುವ ಬಗ್ಗೆಯೂ ಸೂಚನೆ ನೀಡಿದ್ದಾರೆ.

Exit mobile version