Site icon Vistara News

Adhika Masa 2023 : ಇಂದಿನಿಂದ ಅಧಿಕಮಾಸ; ಹೇಗಿರಲಿದೆ ನಿಮ್ಮ ಭವಿಷ್ಯ?

Adhika Masa 2023

ಆಚಾರ್ಯ ಶ್ರೀ ವಿಠ್ಠಲ ಭಟ್ಟ ಕೆಕ್ಕಾರು
ಅಧಿಕ ಮಾಸ (Adhika Masa 2023) ಇಂದಿನಿಂದ ಆರಂಭಗೊಂಡಿದೆ. ಅಧಿಕ ಮಾಸವನ್ನು ಮಲ ಮಾಸ ಅಥವಾ ಪುರುಷೋತ್ತಮ ಮಾಸ ಎಂದೂ ಕರೆಯಲಾಗುತ್ತದೆ. ಸರಾಸರಿ 33 ತಿಂಗಳಿಗೊಮ್ಮೆ ಬರುವ ಅಧಿಕಮಾಸವು ಬಹಳ ಮಹತ್ವವಾದುದು ಮತ್ತು ಪವಿತ್ರವಾದ ಮಾಸವಾಗಿದ್ದು, ದೇವರ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾದ ಸಮಯವಾಗಿದೆ.

ಅಧಿಕ ಮಾಸದ ಮಹತ್ವವೇನು? ಅದರ ಲೆಕ್ಕಾಚಾರ ಹೇಗೆ? ಯಾವ ದೇವರ ಆರಾಧನೆ ಮಾಡಬೇಕು? ಯಾವ ಕೆಲಸ ಮಾಡಬಹುದು? ಯಾವ ಕೆಲಸ ಮಾಡಬಾರದು ಎಂದು ತಿಳಿಯಲು ಈ ವಿಡಿಯೋ ನೋಡಿ.

ದ್ವಾದಶ ರಾಶಿಗಳ ಭವಿಷ್ಯ

ಮೇಷ: ನಿಮ್ಮ ಸ್ವಾಭಿಮಾನಕ್ಕೆ/ ಅಹಂಗೆ ಪೆಟ್ಟು ಬೀಳುವ ಕೆಲ ಘಟನೆಗಳು ನಿಮ್ಮ ಕಾರ್ಯಕ್ಷೇತ್ರದಲ್ಲಿ ನಡೆಯಲಿದೆ. ವೃಥಾ ಓಡಾಟಗಳು/ ಖರ್ಚುಗಳು ಈ ಅಧಿಕಮಾಸದಲ್ಲಿ ಜಾಸ್ತಿ. ನಿಮ್ಮ ಶರೀರರದ ತೂಕ ಹೆಚ್ಚಾಗುತ್ತದೆ. ಬೊಜ್ಜಿನ ಸಮಸ್ಯೆಗಳು ವೃದ್ಧಿಯಾಗಲಿದೆ. ನೀವು ಕೈ ಹಾಕಿದ ಕೆಲಸಗಳನ್ನು ಹಾಳು ಮಾಡಲು ನಿಮ್ಮ ಶತ್ರುಗಳು ಅಲ್ಲೇ ಇರುತ್ತಾರೆ. ಬಹಳ ಯಶಸ್ಸಿನತ್ತ ಸಾಗುತ್ತಿರುವ ನಿಮ್ಮ ಮಕ್ಕಳನ್ನು ದಾರಿ ತಪ್ಪಿಸುವವರು ನಿಮ್ಮ ಮಕ್ಕಳ ಜೊತೆಯಲ್ಲಿಯೇ ಇದ್ದಾರೆ. ಸರಿಯಾಗಿ ಗಮನಿಸಿ ತಪ್ಪಿಸಿ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ;

ವೃಷಭ : ಈ ಅಧಿಕ ಮಾಸದಲ್ಲಿ ಬಾಳಸಂಗಾತಿ ಹಾಗೂ ತಾಯಿ ಇವರಿಬ್ಬರಲ್ಲಿ ಯಾರು ಹೆಚ್ಚು ಎಂಬಂತಹ ಇಕ್ಕಟ್ಟು ನಿಮಗೆ ಎದುರಾಗಬಹುದು. ಕೆಲಸದ ಸ್ಥಳದಲ್ಲಿ ಒತ್ತಡಗಳು ಜಾಸ್ತಿ ಆಗುತ್ತವೆ. ಪರೀಕ್ಷೆ ಬರೆಯಲು ಹೋದವರಿಗೆ ಓದಿದ್ದೊಂದು, ಇಲ್ಲಿ ಪ್ರಶ್ನೆಗಳಿರುವುದೊಂದು ಎಂಬ ಸ್ಥಿತಿ. ಮಾತಿಗೆ ಕಟ್ಟು ಬಿದ್ದು ನಿಮಗೆ ಇಷ್ಟವಿಲ್ಲದವರ ಹತ್ತಿರ ಸಹಾಯ ಕೇಳಬೇಕಾಗುತ್ತದೆ. ಯಾರೊಂದಿಗೂ ಯಾವ ವಿಚಾರದಲ್ಲಿಯೂ ಚಾಲೆಂಜ್‌ ಮಾಡಬೇಡಿ. ಯಾವುದೇ ಹೊಸ ಪದಾರ್ಥಗಳನ್ನು ಬಳಸುವ ಮುನ್ನ ಎಚ್ಚರ ವಹಿಸಿ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ;

ಮಿಥುನ : ಈ ಅಧಿಕ ಮಾಸದಲ್ಲಿ ದುಡ್ಡು ಖರ್ಚು ಆಗುತ್ತಿರುತ್ತದೆ. ಆದರೆ ನಿಮಗೆ ಪ್ರಯೋಜನ ಸಿಗುವುದಿಲ್ಲ. ಸುಖಾ ಸುಮ್ಮನೆ ಮನೆಯಲ್ಲಿ, ಕುಟುಂಬದಲ್ಲಿ ಜಗಳ, ಮನಸ್ತಾಪವಾಗಬಹುದು. ನಿಮ್ಮ ಪ್ರಮುಖವಾದ ಕೆಲವು ಆಲೋಚನೆಗಳು ಬುಡಮೇಲೆ ಆಗಬಹುದು, ಅಂದುಕೊಂಡದ್ದು ಒಂದು ಆಗದೇ ಇರಬಹುದು. ಕಾಲು ನೋವು ಬಹಳ ಜಾಸ್ತಿ ಆಗುತ್ತದೆ. ಉದ್ಯೋಗ ಸ್ಥಳದಲ್ಲಿ ಅವಮಾನಗಳಾಗಬಹುದು. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ;

ಕರ್ಕಟಕ: ಈ ಅಧಿಕಮಾಸದ ಸಂದರ್ಭದಲ್ಲಿ ನಿಮಗೆ ಬಹಳ ಸಹಾಯ ಮಾಡುತ್ತೇವೆ ಎಂದು ಹೇಳಿ ಮೋಸ ಮಾಡುವವರಿದ್ದಾರೆ ಎಚ್ಚರಿಕೆ. ಶರೀರದಲ್ಲಿ ಉಷ್ಣ ಜಾಸ್ತಿಯಾಗಿ ಆರೋಗ್ಯಬಾಧೆ ಕಾಡಬಹುದು. ನಿಮ್ಮ ಸ್ಥಾನ ಬಲ, ಗತ್ತು ನೋಡಿ ಬಹಳ ಮಂದಿ ಹೊಟ್ಟೆಕಿಚ್ಚು ಪಡುತ್ತಾರೆ. ನಿಮಗೆ ಕುತ್ತಿಗೆ ಹಾಗೂ ಬೆನ್ನಿನ ಭಾಗದಲ್ಲಿ ನೋವು ಜಾಸ್ತಿಯಾಗಬಹುದು. ನಿಮಗೆ ಪ್ರಮುಖವಾದ ವಿಚಾರಗಳು ಬೇಗ ಮರೆತು ಹೋಗುತ್ತದೆ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ;

ಸಿಂಹ : ನಿಮ್ಮ ಪ್ರಾಮುಖ್ಯತೆಯನ್ನು ಜನ ಮರೆತು ಹೋಗುತ್ತಾರೆ. ನಿಮಗೆ ಅವಮಾನಗಳಾದರೆ ಅವರು ಆನಂದ ಪಡುತ್ತಾರೆ. ನೀವು ಬಹಳ ಆಸೆ ಹೊಂದಿರುತ್ತೀರಿ. ಬಹಳ ಕೆಲಸಗಳನ್ನು ಮಾಡಬೇಕು ಅಂದುಕೊಂಡಿರುತ್ತೀರಿ. ಆದರೆ ಆರೋಗ್ಯ ಸಹಕಾರಿಸುದಿಲ್ಲ. ಈ ಅಧಿಕ ಮಾಸದಲ್ಲಿ ನಿಮಗೆ ಸಿಟ್ಟು ಬಹಳ ಜಾಸ್ತಿಯಾಗಿರುತ್ತದೆ. ಇದರಿಂದ ನಿಮ್ಮ ಶತ್ರುಗಳ ಸಂಖ್ಯೆ ಕೂಡ ಜಾಸ್ತಿಯಾಗುತ್ತದೆ. ವಾಹನ ಚಾಲನೆ ಮಾಡುವಾಗ, ಪ್ರಯಾಣಿಸುವಾಗ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಮಾಡುವಾಗ ಎಚ್ಚರ ವಹಿಸಿ. ಬಿದ್ದು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆಗಳಿವೆ. ಅಡಿಗೆ ಮನೆಯಲ್ಲಿ ಸ್ತ್ರೀಯರು ಬೆಂಕಿ ಮುಂದೆ ಕೆಲಸ ಮಾಡುವಾಗ, ವಿದ್ಯುತ್‌‌ ಉಪಕರಣಗಳ ಬಳಸುವಾಗ ಅತಿ ಎಚ್ಚರ ವಹಿಸುವುದು ಅಗತ್ಯ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ;

ಕನ್ಯಾ: ಅಧಿಕ ಮಾಸದಲ್ಲಿ ಆರೋಗ್ಯ ಭಾದೆಯಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗಬಹುದು. ಕೈಗೆ ಬಂದಿದ್ದು ಬಾಯಿಗೆ ಬರುವುದಿಲ್ಲ ಎಂಬಂತಹ ಸ್ಥಿತಿ ನಿಮ್ಮದು. ವಿವಾಹಿತ ಸ್ತ್ರೀಯರು ತವರುಮನೆಯವರ ಜೊತೆ ಜಗಳ ಆಡಬಹುದು. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ;

ತುಲಾ: ಅಧಿಕ ಮಾಸದಲ್ಲಿ ಈ ರಾಶಿಯವರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಮಕ್ಕಳ ವಿಚಾರ ಬಿಸಿ ತುಪ್ಪವಾಗಿ ಪರಿಣಮಿಸಬಹುದು. ನಿಮ್ಮ ಮೇಲೆ ಸುಳ್ಳು ಆಪಾದನೆಗಳು ಬರಬಹುದು, ಎಚ್ಚರ ವಹಿಸಿ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ;

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ವೃಶ್ಚಿಕ : ಅಧಿಕಮಾಸದಲ್ಲಿ ತಂದೆಯವರ ಆರೋಗ್ಯದ ಬಗ್ಗೆ ಬಹಳ ಎಚ್ಚರವಹಿಸಿ. ತಂದೆ ಹಾಗೂ ನಿಮ್ಮ ನಡುವಿನ ಮನಸ್ತಾಪ ಹೆಚ್ಚಾಗುತ್ತದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಒಮ್ಮತ ಮೂಡದೇ ಸಮಸ್ಯೆ ಆಗುತ್ತದೆ. ಉದ್ಯೋಗ ಮಾಡುವ ಜಾಗದಲ್ಲಿ ಸಂಬಳ ಅಥವಾ ಸ್ತ್ರೀ ವಿಚಾರವಾಗಿ ಜಗಳಗಳು ಆಗಬಹುದು. ವ್ಯಾಪಾರದ ಸಲುವಾಗಿ ಸಾಲ ಪಡೆಯಲು ಬಹಳ ಓಡಾಟಗಳನ್ನು ಮಾಡುತ್ತೀರಿ. ಆರೋಗ್ಯ ಸುಧಾರಿಸುತ್ತದೆ. ಆದರೆ ಆರೋಗ್ಯ ಪಡೆಯಲು ನೀವು ಕಳೆದುಕೊಂಡಿದ್ದರ ಬಗ್ಗೆ ದುಃಖವಾಗುತ್ತದೆ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ;

ಧನಸ್ಸು: ಅಧಿಕ ಮಾಸದಲ್ಲಿ ಅದೃಷ್ಟವಶಾತ್ ಕೈಗೆ ಬಂದದ್ದು ಬಾಯಿಗೆ ಬರುವುದಿಲ್ಲ. ನಿಮಗೆ ಮಾತು ಕೊಟ್ಟವರು ಹಲವರು ಮಾತು ತಪ್ಪುತ್ತಾರೆ. ಆರೋಗ್ಯ ವಿಚಾರವಾಗಿ ಅನಿರೀಕ್ಷಿತ ಸಾಲಗಳು ಹೆಚ್ಚಾಗುತ್ತವೆ. ಉದ್ಯೋಗ ಮಾಡುವ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ಮೂಡಲಿದೆ. ನಿಮ್ಮ ಒಳ್ಳೆಯತನ, ಶಾಂತ ಸ್ವಭಾವ ಎಲ್ಲವನ್ನೂ ದುರುಪಯೋಗ ಮಾಡಿಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ;

ಮಕರ: ಏನೋ ಮಾಡುವುದಕ್ಕೆ ಹೋಗಿ ದೊಡ್ಡವರನ್ನು ಎದುರು ಹಾಕಿಕೊಳ್ಳುತ್ತೀರಿ. ಆರೋಗ್ಯ ವಿಚಾರವಾಗಿ ಬಹಳ ಸಾಲಗಳು ಆಗುತ್ತವೆ. ಮನೆಯವರಿಗೂ ತೊಂದರೆಯಾಗುವ ಸಾಧ್ಯತೆ ಇದೆ. ಬಿದ್ದು ಕಾಲು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆಗಳು ಜಾಸ್ತಿ ಇದೆ. ನೀವು ಕೇಳದೇ ಇದ್ದರೂ ಸಹ ನಿಮಗೆ ಸಹಾಯ ಮಾಡುತ್ತೇವೆ ಎಂದು ಹೇಳಿ ಬಂದು ಬಹಳವೇ ಸಮಸ್ಯೆ ಕೊಡುತ್ತಾರೆ. ಯಾರೋ ಪ್ರೇರೇಪಿಸಿದರೂ ಎಂದೋ ಅಥವಾ ಏನೋ ಮುಚ್ಚಿ ಹಾಕಲು ಸುಳ್ಳು ಹೇಳಿ ಸಿಕ್ಕಿ ಬೀಳುವ ಸಾಧ್ಯತೆಯೂ ಇದೆ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ;

ಕುಂಭ: ಅವಿವಾಹಿತರಿಗೆ ವಿವಾಹದ ವಿಚಾರದಲ್ಲಿ, ವಿವಾಹಿತರಿಗೆ ದಾಂಪತ್ಯದ ವಿಚಾರವಾಗಿ ಜಗಳ ಮನಸ್ತಾಪ ಆಗಬಹುದು. ನಿಮ್ಮ ಆಪ್ತ ಸ್ನೇಹಿತ ದುಡ್ಡಿನ ವಿಚಾರವಾಗಿ ನಿಮಗೆ ಬಹಳ ಸಮಸ್ಯೆ ಮಾಡುವ ಸಾಧ್ಯತೆಗಳಿವೆ. ಎಚ್ಚರ ವಹಿಸಿ. ಈ ಅಧಿಕ ಮಾಸದಲ್ಲಿ ಎಲ್ಲಿಗೂ ಪ್ರಯಾಣ ಮಾಡಬೇಡಿ. ಉದ್ಯೋಗ ಸ್ಥಳದಲ್ಲಿ ನಿಮ್ಮನ್ನು ಬಳಸಿಕೊಂಡು ಕೈ ಬಿಡುವ ಸಾಧ್ಯತೆ ಹೆಚ್ಚು. ನೀವು ಎಲ್ಲಾ ಕೆಲಸ ಕಾರ್ಯ ಮಾಡಿದರೂ ಸಹ ನಿಮ್ಮ ಬಗ್ಗೆ ಅಪಪ್ರಚಾರವಾಗಿ ತೊಂದರೆಯಾಗುತ್ತದೆ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ;

ಮೀನ: ಮಕ್ಕಳಿಗಾಗಿ ಸಾಲ ಮಾಡಬೇಕಾಗಿ ಬರಬಹುದು. ಆರೋಗ್ಯದಲ್ಲಿ ಬಹಳ ಎಚ್ಚರ ವಹಿಸಿ. ನೀರಿಗೆ ಸಂಬಂಧಿಸಿದ ಕಾಯಿಲೆ ಬರಬಹುದು. ನಿಮ್ಮ ದೌರ್ಬಲ್ಯದ ದುರುಪಯೋಗವಾಗಬಹುದು. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವಿಡಿಯೋ ನೋಡಿ;

ಇದನ್ನೂ ಓದಿ: Adhika Masa 2023 : ಅಧಿಕಮಾಸದಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ!

Exit mobile version