ಬೆಂಗಳೂರು: ಭಾರತದ ನಂ.1 ಸ್ಥಳೀಯ ಭಾಷೆಗಳ ಸುದ್ದಿ ವಿತರಣ ವೇದಿಕೆಯಾದ ಡೈಲಿಹಂಟ್ (Dailyhunt) ಹಾಗೂ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಿರು- ವೀಡಿಯೊ ಆಪ್ ಜೋಶ್ (Josh) ಜೊತೆ ಸೇರಿ ಅಯೋಧ್ಯೆ ರಾಮ ಮಂದಿರ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆ (Pran Prathishta) ಹಿನ್ನೆಲೆಯಲ್ಲಿ ʼಶ್ರೀ ರಾಮ ಮಂತ್ರ ಚಾಂಟ್ ರೂಮ್ʼ (Shri Ram Mantra Chant Room) ಆರಂಭಿಸಿವೆ.
ಶ್ರೀರಾಮ ನಾಮದ ಸಾಮೂಹಿಕ ವರ್ಚುವಲ್ ಪಠಣಕ್ಕಾಗಿ ಈ ಬೃಹತ್ ಡಿಜಿಟಲ್ ಚಾಂಟ್ ರೂಮ್ ಮೀಸಲಾಗಿದೆ. ಈ ಪ್ರಶಾಂತ ಸ್ಥಳವು ಶ್ರೀರಾಮನ ಮೇಲಿನ ಭಕ್ತಿಯನ್ನು ಕೇಂದ್ರೀಕರಿಸುವ ಆಧ್ಯಾತ್ಮಿಕ ಮಂತ್ರಗಳನ್ನು ಪಠಿಸಲು ಸಾಮೂಹಿಕವಾಗಿ ತೊಡಗಿಸಿಕೊಳ್ಳಲು ಬಳಕೆದಾರರನ್ನು ಆಹ್ವಾನಿಸುತ್ತದೆ. ಪಠಣ ಕೊಠಡಿಯು “ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್” ಮಂತ್ರದ ಮೊಟ್ಟಮೊದಲ ಡಿಜಿಟಲ್ ಪಠಣ ಸೆಷನ್ ಅನ್ನು ಆಯೋಜಿಸಿದೆ. ಸಾಮೂಹಿಕ ಪಠಣಕ್ಕಾಗಿ ವರ್ಚುವಲ್ ಕೋಣೆಗೆ ಸೇರುವ ಮೂಲಕ ಬಳಕೆದಾರರು 11, 108 ಅಥವಾ 1008 ಬಾರಿ ಮಂತ್ರವನ್ನು ಪಠಿಸಬಹುದು. ಪೂರ್ಣಗೊಂಡ ನಂತರ, ಇಲ್ಲಿ ಭಾಗವಹಿಸಿದ ಎಲ್ಲರೂ ಈ ಐತಿಹಾಸಿಕ ಘಟನೆಯಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಗುರುತಿಸುವ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.
ಜೋಶ್‌ನಲ್ಲಿ ಶ್ರೀರಾಮ ಮಂತ್ರ ಪಠಣ ಕೊಠಡಿಗೆ ಸೇರಲು ಮತ್ತು ಶ್ರೀರಾಮನಿಗೆ ಮೀಸಲಾಗಿರುವ ವಿಶೇಷ ಪುಟವನ್ನು ಅನ್ವೇಷಿಸಲು ಪ್ರೇಕ್ಷಕರಿಗೆ ಅನುಕೂಲ ಕಲ್ಪಿಸಲಾಗಿದೆ. ಬಳಕೆದಾರರು ಥೀಮ್ ಬ್ಯಾಕ್‌ಡ್ರಾಪ್‌ಗಳೊಂದಿಗೆ ಫಿಲ್ಟರ್‌ಗಳನ್ನು ಅನ್ವಯಿಸುವ ಮೂಲಕ ಮತ್ತು ಶ್ರೀರಾಮನಿಗೆ ಮೀಸಲಾಗಿರುವ ಹಾಡುಗಳ ಕ್ಯುರೇಟೆಡ್ ಪ್ಲೇ ಪಟ್ಟಿಯನ್ನು ಅನ್ವಯಿಸುವ ಮೂಲಕ ತಮ್ಮ ಅನುಭವವನ್ನು ಹೆಚ್ಚಿಸಬಹುದು. ಜೋಶ್ ಅಪ್ಲಿಕೇಶನ್ ಬಳಕೆದಾರರು ಪಠಣ ಕೋಣೆಗೆ ಸೇರಲು, ಈ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಲು ಸ್ನೇಹಿತರು ಮತ್ತು ಕುಟುಂಬವನ್ನು ಸಹ ಆಹ್ವಾನಿಸಬಹುದು.
Dailyhuntನಲ್ಲಿ ಬಳಕೆದಾರರು ಲೈವ್ ಫೀಡ್ ಮೂಲಕ ಅಯೋಧ್ಯೆ ರಾಮಮಂದಿರದ ಉದ್ಘಾಟನೆಯ ಲೈವ್-ಸ್ಟ್ರೀಮ್ ಅನುಭವವನ್ನು ಆನಂದಿಸಬಹುದು. ಆಡಿಯೋ ಅಪ್‌ಡೇಟ್‌ಗಳು, ಪಾಡ್‌ಕಾಸ್ಟ್‌ಗಳು, ರಾಮ ಕಥಾ ಮತ್ತಿತರ ಸಂಗತಿಗಳನ್ನು ಹುಡುಕಿ ಈವೆಂಟ್‌ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು.
“ಶ್ರೀ ರಾಮ ಮಂತ್ರ ಪಠಣ ಕೊಠಡಿ ನಮ್ಮ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು. ಈ ಡಿಜಿಟಲ್ ಉಪಕ್ರಮವು ರಾಮಮಂದಿರದ ಪ್ರತಿಷ್ಠಾಪನೆಯೊಂದಿಗೆ ಸೇರಿಕೊಂಡು ಹೊಸ ಅನುಭವವನ್ನು ನೀಡುತ್ತದೆ. ಶ್ರೀರಾಮ ಮಂತ್ರವನ್ನು ಪಠಿಸುವ ಆಧ್ಯಾತ್ಮಿಕ ಅಭ್ಯಾಸದಲ್ಲಿ ಸಾಮೂಹಿಕವಾಗಿ ತೊಡಗಿಸಿಕೊಳ್ಳಲು, ಮತ್ತು ಶಾಂತಿಯ ಭಾವನೆಯನ್ನು ಬೆಳೆಸಲು ಬಳಕೆದಾರರನ್ನು ಆಹ್ವಾನಿಸುತ್ತದೆ. ಜೋಶ್ ಮತ್ತು ಡೈಲಿಹಂಟ್‌ನಲ್ಲಿ ನಮ್ಮ ಮೀಸಲಾದ ಪುಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯವು ನಮ್ಮೊಂದಿಗೆ ಸೇರಬೇಕು” ಎಂದು ಜೋಶ್ ವಕ್ತಾರರು ತಿಳಿಸಿದ್ದಾರೆ.
ಈ ಉಪಕ್ರಮವು ರಾಷ್ಟ್ರವ್ಯಾಪಿ 10 ಲಕ್ಷ ಬಳಕೆದಾರರನ್ನು ಒಟ್ಟುಗೂಡಿಸಲಿದೆ. ಇದು ಭೌಗೋಳಿಕ ಗಡಿಗಳನ್ನು ಮೀರಿದ ಉಪಕ್ರಮ. ಇದು ಹೃದಯಗಳನ್ನು ಒಂದುಗೂಡಿಸಲಿದೆ. ಈ ಐತಿಹಾಸಿಕ ಈವೆಂಟ್‌ಗೆ ಸೇರಲು Dailyhunt ಮತ್ತು Joshಗೆ ಲಾಗ್ ಇನ್ ಮಾಡಲು ತಿಳಿಸಲಾಗಿದೆ.
ಜೋಶ್:
Josh ಎಂಬುದು ಮೇಡ್-ಇನ್-ಇಂಡಿಯಾ, ಶಾರ್ಟ್-ವೀಡಿಯೋ ಅಪ್ಲಿಕೇಶನ್. 2020ರ ಆಗಸ್ಟ್‌ನಲ್ಲಿ ಆರಂಭವಾಯಿತು. ಇದು ಭಾರತದ ಟಾಪ್ 1000+ ಅತ್ಯುತ್ತಮ ರಚನೆಕಾರರ ಸಂಗಮ. 20000 ಸೃಜನಶೀಲ ರಚನೆಕಾರರು, 10 ದೊಡ್ಡ ಸಂಗೀತ ಲೇಬಲ್‌ಗಳು, 1.5 ಕೋಟಿ ರಚನೆಕಾರರು, ಅತ್ಯುತ್ತಮ ದರ್ಜೆಯ ವಿಷಯ ರಚನೆ ಪರಿಕರಗಳು, ಹಾಟೆಸ್ಟ್ ಎಂಟರ್ಟೈನ್ಮೆಂಟ್ ಫಾರ್ಮ್ಯಾಟ್‌ಗಳು ಇಲ್ಲಿ ಲಭ್ಯ. ಪ್ಲೇ ಸ್ಟೋರ್‌ನಲ್ಲಿ 10 ಕೋಟಿ ಡೌನ್‌ಲೋಡ್‌ಗಳೊಂದಿಗೆ ಭಾರತದಲ್ಲಿ ಪ್ರಮುಖ ಕಿರು-ವೀಡಿಯೋ ಅಪ್ಲಿಕೇಶನ್ ಆಗಿದೆ. ಪ್ರಸ್ತುತ ಭಾರತದಲ್ಲಿ 15.3 ಕೋಟಿ ಮಾಸಿಕ ಸಕ್ರಿಯ ಬಳಕೆದಾರರು, 7.4 ಕೋಟಿ ದೈನಂದಿನ ಸಕ್ರಿಯ ಬಳಕೆದಾರರು ಇದ್ದಾರೆ.
ಡೈಲಿಹಂಟ್:
Dailyhunt ಭಾರತದ ನಂ.1 ಸ್ಥಳೀಯ ಭಾಷೆಯ ಸುದ್ದಿ ಹಂಚಿಕೆ ವೇದಿಕೆ. ಪ್ರತಿದಿನ 15 ಭಾಷೆಗಳಲ್ಲಿ 10 ಲಕ್ಷ ಸುದ್ದಿಗಳನ್ನು ನೀಡುತ್ತದೆ. Dailyhuntನಲ್ಲಿನ ಸುದ್ದಿಗಳು 50,000ಕ್ಕೂ ಹೆಚ್ಚು ಸುದ್ದಿ ಪಾಲುದಾರರಿಂದ ಅಧಿಕೃತವಾಗಿ ಹಂಚಲ್ಪಡುತ್ತದೆ. ‘ಶತಕೋಟಿ ಭಾರತೀಯರಿಗೆ ಸುದ್ದಿ ಮುಟ್ಟಿಸುವ, ಸಮೃದ್ಧ ಮನರಂಜನೆ ನೀಡುವ ಮತ್ತು ಬೆರೆಯಲು ಭಾರತೀಯ ವೇದಿಕೆʼ ಎಂಬುದು ಡೈಲಿಹಂಟ್‌ನ ಧ್ಯೇಯ. Dailyhunt ಪ್ರತಿ ತಿಂಗಳು 35 ಕೋಟಿ ಮಾಸಿಕ ಸಕ್ರಿಯ ಬಳಕೆದಾರರಿಗೆ ಸೇವೆ ಸಲ್ಲಿಸುತ್ತದೆ. ಪ್ರತಿ ದಿನ ಸಕ್ರಿಯ ಬಳಕೆದಾರರು ಇದರಲ್ಲಿ 30 ನಿಮಿಷ.