Site icon Vistara News

Festive Fashion | ಕೃಷ್ಣ ಜನ್ಮಾಷ್ಟಮಿ ಸಂಭ್ರಮಕ್ಕೆ ಸಾಂಪ್ರದಾಯಿಕ ಉಡುಗೆ ಸಾಥ್‌

Festive Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕೃಷ್ಣ ಜನ್ಮಾಷ್ಟಮಿಯಂದು ಮಕ್ಕಳೊಂದಿಗೆ ನೀವೂ ಕೂಡ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಳ್ಳಿ. ಇದು ಹಬ್ಬದ ಸಂಭ್ರಮ ದುಪಟ್ಟಾಗಲು ಕಾರಣವಾಗುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಮಕ್ಕಳೊಂದಿಗೆ ಮಕ್ಕಳಾಗಿ ಟ್ರೆಡಿಷನಲ್‌ ಉಡುಗೆ-ತೊಡುಗೆಗಳಲ್ಲಿ ಕಾಣಿಸಿಕೊಂಡಲ್ಲಿ ಹಬ್ಬದ ಸಂತೋಷ ಹೆಚ್ಚಾಗುವುದು, ಹಬ್ಬದ ಸಂಪ್ರದಾಯ ಕೂಡ ಮುಂದುವರಿಸಿದಂತಾಗುವುದು ಎನ್ನುತ್ತಾರೆ. ಈ ಬಗ್ಗೆ ಒಂದಿಷ್ಟು ವಿವರ ನೀಡಿದ್ದಾರೆ.

ಇನ್ನು, ಯಾವುದೇ ಹಬ್ಬದ ಸಂಭ್ರಮ ಹಾಗೂ ಸಂತೋಷ ಹೆಚ್ಚಾಗುವುದು ನಾವು ಧರಿಸುವ ಉಡುಗೆ-ತೊಡುಗೆಗಳಿಂದ. ಹಬ್ಬದ ದಿನದಂದು ವೆಸ್ಟರ್ನ್ವೇರ್‌ ಧರಿಸಿದಲ್ಲಿ ನಾಟ್‌ ಓಕೆ. ನಮ್ಮ ಸಂಪ್ರದಾಯ ಹಾಗೂ ಸಂಸ್ಕೃತಿ ಬಿಂಬಿಸುವಂತಹ ಉಡುಪುಗಳನ್ನು ಇಲ್ಲವೇ ಸೀರೆಯನ್ನು ಧರಿಸಬೇಕು. ಆಗಷ್ಟೇ ನೋಡಲು ಮನಮೋಹಕವಾಗಿ ಕಾಣುವುದು ಎನ್ನುತ್ತಾರೆ ಮಾಡೆಲ್‌ ಸವಿತಾ ರೆಡ್ಡಿ. ಅವರ ಪ್ರಕಾರ, ಪ್ರತಿ ಹಬ್ಬಕ್ಕೂ ಒಂದೊಂದು ಬಗೆಯ ಉಡುಗೆಗಳು ಬಿಡುಗಡೆಗೊಳ್ಳುತ್ತವೆ. ಸಾಂಪ್ರದಾಯಿಕ ಫ್ಯಾಷನ್‌ ಟ್ರೆಂಡಿಯಾಗುತ್ತದೆ ಎನ್ನುತ್ತಾರೆ.

ಟ್ರೆಡಿಷನಲ್‌ ಉಡುಗೆ ಆಯ್ಕೆ ಮಾಡಿ

ಆದಷ್ಟೂ ಕಂಪ್ಲೀಟ್‌ ಟ್ರೆಡಿಷನಲ್‌ ಲುಕ್‌ ನೀಡುವ ಟ್ರೆಡಿಷನಲ್‌ ಲುಕ್‌ಗೆ ಸೈ ಎನ್ನಿ. ರೇಷ್ಮೆ ಇಲ್ಲವೇ ಕಾಟನ್‌ ಸಿಲ್ಕ್‌ ಅಥವಾ ಗ್ರ್ಯಾಂಡ್‌ ಲುಕ್‌ ನೀಡುವ ಫ್ಯಾಬ್ರಿಕ್‌ನದ್ದನ್ನು ಚೂಸ್‌ ಮಾಡಿ. ಹುಡುಗರಾದಲ್ಲಿ ಧೋತಿ, ಜುಬ್ಬಾ, ಪೈಜಾಮ ಉತ್ತಮ. ಹುಡುಗಿಯರಾದಲ್ಲಿ ಲಂಗ-ದಾವಣಿ. ಉದ್ದ-ಲಂಗ, ಸೀರೆ ಧರಿಸಿದರೇ ಚೆನ್ನಾಗಿ ಕಾಣುವುದು ಎನ್ನುತ್ತಾರೆ.

ಮಕ್ಕಳೊಂದಿಗೆ ಮ್ಯಾಚ್‌ ಮಾಡಿ

ನೀವು ಧರಿಸುವ ಉಡುಗೆ ಮಕ್ಕಳೊಂದಿಗೆ ಮ್ಯಾಚ್‌ ಮಾಡಿದಾಗ ಮಕ್ಕಳಿಗೂ ಖುಷಿಯಾಗುತ್ತದೆ. ಜತೆಗೆ ಟ್ರೆಂಡಿಯಾಗುತ್ತದೆ. ಟ್ರೆಂಡ್‌ನಲ್ಲಿರುವ ಒಂದೇ ಶೈಲಿಯ ಫ್ಯಾಬ್ರಿಕ್‌ನಲ್ಲಿ ಡಿಸೈನರ್‌ವೇರ್‌ ಹೊಲೆಸಿದಾಗ ಎಲ್ಲರೂ ಒಂದೇ ರೀತಿ ಕಾಣುವಂತೆ ಉಡುಗೆಯನ್ನು ಧರಿಸಬಹುದು. ಟ್ವಿನ್ನಿಂಗ್‌ ಮಾಡಬಹುದು. ಫೋಟೋಗಳಲ್ಲಿಯೂ ನೋಡಲು ಚೆನ್ನಾಗಿ ಕಾಣುತ್ತದೆ.

ಕೃಷ್ಣನೊಂದಿಗೆ ರಾಧೆಯಾಗಿ ಸಿಂಗಾರಗೊಳ್ಳಿ

ಫೋಟೋಶೂಟ್‌ ಮಾಡುವುದಾದಲ್ಲಿ ಕೃಷ್ಣನ ಡ್ರೆಸ್‌ನಲ್ಲಿರುವ ಮಕ್ಕಳೊಂದಿಗೆ ಹುಡುಗಿಯರು ಅಥವಾ ಹೆಣ್ಣು ಮಕ್ಕಳು ರಾಧೆಯ ಉಡುಪಿನಲ್ಲಿ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ದಾವಣಿ-ಲಂಗ ಧರಿಸಿ ಜುವೆಲರಿ ಹಾಕಿಕೊಂಡು ಅಲಂಕರಿಸಿಕೊಳ್ಳುವುದು ಅಗತ್ಯ. ಆಗ ನೋಡಲು ಎಲ್ಲರೂ ಆಕರ್ಷಕವಾಗಿ ಕಾಣುತ್ತಾರೆ. ಹಬ್ಬದ ಸಂಭ್ರಮ ಹೆಚ್ಚಾಗುತ್ತದೆ.


(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ| Gown Fashion: ಮನಮೋಹಕ ಜಾರ್ಜೆಟ್‌ ಗೌನ್ ಜಾದೂ

Exit mobile version