Site icon Vistara News

Hanuman Chalisa : ಏನಿದು ಹನುಮಾನ್‌ ಚಾಲೀಸಾ? ಇದರ ಮಹತ್ವವೇನು?

Hanuman Chalisa: Significance and importance Of Reciting Hanuman Chalisa in kannada

anjaneya

ಬೆಂಗಳೂರು: ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ ಯಾವುದೇ ಶಕ್ತಿಗಳನ್ನು ಸಹಿಸುವುದಿಲ್ಲ. ಬಜರಂಗ ದಳ, ಪಿಎಫ್‌ಐ ಸೇರಿದಂತೆ ಯಾವುದೇ ಸಂಘಟನೆಗಳಾದರೂ ನಿಷೇಧವೂ (Bajaranga dal ban) ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ‌ (Congress Manifesto) ಹೇಳಿದೆ. ಈ ಭರವಸೆಯ ವಿರುದ್ಧ ಹಿಂದೂ ಸಂಘಟನೆಗಳು ಸಿಡಿದೆದ್ದಿದ್ದು, ಪ್ರತಿಭಟನೆ ನಡೆಸುತ್ತಿವೆ. ಬಜರಂಗ ದಳ ಸಂಘಟನೆಯು ಮೇ 4ರಂದು ರಾಜ್ಯಾದ್ಯಂತ ಹನುಮಾನ್‌ ಚಾಲೀಸಾ (Hanuman Chalisa) ಪಠಣವನ್ನು ಆಯೋಜಿಸಿದೆ.

ಹನುಮಾನ್‌ ಚಾಲೀಸಾ ಎಂದರೆ ಏನು? ಇದಕ್ಕಿರುವ ಮಹತ್ವವೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಏನಿದು ಹನುಮಾನ್‌ ಚಾಲೀಸಾ?

ಶ್ರೀ ರಾಮಚಂದ್ರನ ಪರಮ ಭಕ್ತ ಹನುಮಂತನನ್ನು ಸ್ತುತಿಸುವ ನಲವತ್ತು ಪದ್ಯ ಚರಣಗಳನ್ನು ʻಹನುಮಾನ್‌ ಚಾಲೀಸಾʼ ಎಂದು ಕರೆಯಲಾಗುತ್ತದೆ. ಶ್ರೀ ರಾಮಚ೦ದ್ರನ ಪರಮಭಕ್ತರಾಗಿದ್ದ ಸಂತಪಟ್ಟ ಪಡೆದ ಕವಿ ಗೋಸ್ವಾಮಿ ತುಳಸೀದಾಸರು ಹನುಮಾನ್ ಚಾಲೀಸಾ ರಚಿಸಿದವರು. ಹನುಮಾನ್ ಚಾಲೀಸಾದಲ್ಲಿ ನಲವತ್ತು ಪದ್ಯ ಚರಣಗಳಿರುವುದರಿಂದ ಈ ಕಾರಣಕ್ಕಾಗಿಯೇ ಇದರ ಹೆಸರು “ಚಾಲೀಸಾ” ಎ೦ದಾಗಿದೆ.

ಹನುಮಾನ್ ಚಾಲೀಸಾಗೆ ದೈವತ್ವವು ತಳುಕುಹಾಕಿಕೊ೦ಡಿದೆ. ಇದರ ಪಠಣದಿಂದ ಮನುಷ್ಯನು ಎಲ್ಲ ರೀತಿಯ ಸಂಕಷ್ಟಗಳಿಂದ ಪಾರಾಗಬಹುದು, ಅಧೈರ್ಯವನ್ನು ಹೋಗಲಾಡಿಸಿಕೊಂಡು, ದುಃಖಗಳಿಂದ ಮುಕ್ತಿ ಪಡೆಯಬಹುದು ಎಂದು ನಂಬಲಾಗಿದೆ. ಮುಖ್ಯವಾಗಿ ಶನಿಕಾಟ ಹೊಂದಿರುವವರು ರಕ್ಷಣೆಯಾಗಿ ಹನುಮಾನ್‌ ಚಾಲೀಸಾ ಓದುತ್ತಾರೆ.

ಇದನ್ನು ಸಂತ ತುಳಸೀದಾಸರು ರಚಿಸಿದ ಸಂದರ್ಭದ ಕುರಿತು ಅನೇಕ ಕತೆಗಳಿವೆ. ವಾಲ್ಮೀಕಿ ಮಹರ್ಷಿಯ ಅವತಾರವೆಂದು ತುಳಸೀದಾಸರನ್ನು ಬಣ್ಣಿಸಲಾಗುತ್ತಿದ್ದು, ಹರಿದ್ವಾರದಲ್ಲಿ ಕುಂಭಮೇಳ ನಡೆಯುವ ಸಂದರ್ಭದಲ್ಲಿ ತುಳಸಿದಾಸರು ಸಮಾಧಿ ಸ್ಥಿತಿಯಲ್ಲಿ ಹನುಮಾನ್ ಚಾಲೀಸವನ್ನು ರಚಿಸಿದರೆಂದು ಹೇಳಲಾಗಿದೆ.

ಇನ್ನೊಂದು ಕತೆಯ ಪ್ರಕಾರ ತಮ್ಮ ಮಾತು ಕೇಳದ ತುಳಸೀದಾಸರನ್ನು ದೊರೆ ಅಕ್ಬರ್‌ ಬಂಧಿಸಿಟ್ಟಿದ್ದ. ಈ ಸಂದರ್ಭದಲ್ಲಿ ಅವರು ಹನುಮಾನ್‌ ಚಾಲೀಸಾ ರಚಿಸಿದರು. ಇದರ ರಚನೆ ಪೂರ್ಣವಾಗುತ್ತಿದ್ದಂತೆಯೇ ವಾನರ ಸೇನೆ ಅಕ್ಬರನ ಅರಮನೆಗೆ ದಾಳಿ ನಡೆಸಿತ್ತು. ಇದರಿಂದ ಹೆದರಿದ ಅಕ್ಬರ್‌ ತುಳಸೀದಾಸರನ್ನು ಬಿಡುಗಡೆ ಮಾಡಿ ಕ್ಷಮೆಯಾಚಿಸಿದ.

ಹನುಮನ ವಿಚಾರಧಾರೆಯ ಅರಿವು! ಈ ಉಪನ್ಯಾಸವನ್ನು ಇಲ್ಲಿ ಕೇಳಿ

ಪಠಣದಿಂದ ಪ್ರಯೋಜನವೇನು?

ತುಳಸಿದಾಸರು ಹೇಳಿರುವಂತೆ ಹನುಮಾನ್ ಚಾಲೀಸಾವನ್ನು ಪಠಿಸುವವರೆಲ್ಲರಿಗೂ ಹನುಮಂತನ ಅನಂತ ಅನುಗ್ರಹ ಪ್ರಾಪ್ತಿಯಾಗುತ್ತದೆ. ದಿವ್ಯವಾದ ಹನುಮಾನ್ ಚಾಲೀಸಾವು ಬಹಳ ಶಕ್ತಿಶಾಲಿಯಾಗಿದೆ. ಇದರ ಪಠಣದಿಂದ ನಿಮ್ಮೆಲ್ಲ ಮನೋಕಾಮನೆಗಳು ಈಡೇರುತ್ತವೆ. ಶನಿ ಮತ್ತು ಮಂಗಳಗ್ರಹದ ಕ್ಲೇಶವಿದ್ದಾಗ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಧನಾತ್ಮಕ ಪರಿಣಾಮ ಉಂಟಾಗುತ್ತದೆ, ನಿರ್ದಿಷ್ಟ ಶ್ಲೋಕಗಳ ಪಠಣದಿಂದ ನಿರ್ದಿಷ್ಟ ಫಲಿತಾಂಶಗಳು ದೊರೆಯುತ್ತವೆ.

ಭೀತಿಯನ್ನು ಎದುರಿಸುವವರು ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ಋಣಾತ್ಮಕ ಶಕ್ತಿಗಳನ್ನು ದೂರ ಮಾಡಿಕೊಳ್ಳಬಹುದು. ಇದರಿಂದ ರಾತ್ರಿ ಸುಖ ನಿದ್ರೆ ಸಾಧ್ಯವಾಗುತ್ತದೆ. ನಿದ್ರೆಯಲ್ಲಿ ಹೆದರುವ ಮಕ್ಕಳು ಕೂಡ ಹನುಮಾನ್ ಚಾಲೀಸಾವನ್ನು ತಪ್ಪದೇ ಓದಬೇಕು. ವಿಶೇಷವಾಗಿ ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಪಠಿಸುವ ಮೂಲಕ ಜೀವನದಲ್ಲಿ ಎದುರಾಗುವ ಪೀಡೆಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗಿದೆ.

ಯಾವಾಗ ಓದಬೇಕು?

ಶಾಸ್ತ್ರ ಪುರಾಣಗಳ ಪ್ರಕಾರ ಹನುಮಾನ್ ಚಾಲೀಸಾವನ್ನು ದಿನಕ್ಕೆ 100 ಬಾರಿ ಪಠಿಸಬೇಕು. ನಿಮ್ಮ ಬಳಿ ಅಷ್ಟು ಬಾರಿ ಪಠಿಸಲು ಸಮಯವಿಲ್ಲದೇ ಇದ್ದರೆ ಕನಿಷ್ಠ 7, 11 ಅಥವಾ 21 ಬಾರಿ ಪಠಿಸಿಸಬಹುದು. ಹನುಮಾನ್‌ ಚಾಲೀಸಾ ಪಠಿಸುವ ಮೊದಲು ಗಣಪತಿಯನ್ನು ಮತ್ತು ಶ್ರೀ ರಾಮನನ್ನು ನೆನೆಯಲೇ ಬೇಕು.

ಬೆಳಗ್ಗೆ ಮತ್ತು ಸಂಜೆ ದೇವರ ಭಜನೆ ಮಾಡುವಂತೆ ಹನುಮಾನ್‌ ಚಾಲೀಸಾವನ್ನು ಪಠಿಸಬಹುದು. ಕೆಲವರು ಮಲಗುವ ಮೊದಲೂ ಪಠಿಸುವುದುಂಟು. ಆದರೆ ಬರೀ ನೆಲದ ಮೇಲೆ, ಹಾಸಿಗೆಯ ಮೇಲೆ ಕುಳಿತು ಚಾಲೀಸಾ ಪಠಿಸಬಾರದೆಂಬ ನಿಯಮವಿದೆ. ಕೆಂಪು ಬಟ್ಟೆಯ ಮೇಲೆ ಕುಳಿತು ಚಾಲೀಸಾ ಪಠಿಸುವುದು ಹೆಚ್ಚು ಶ್ರೇಯಸ್ಕರ.

ವಿಶೇಷವಾಗಿ ಶನಿಗ್ರಹದ ಪ್ರಭಾವದಿಂದ ಉಪಟಳ ಇರುವ ವ್ಯಕ್ತಿಗಳು ಪ್ರತಿ ಶನಿವಾರ ರಾತ್ರಿ ಎಂಟು ಬಾರಿ ಪಠಿಸಿ ಮಲಗುವ ಮೂಲಕ ವಿಪತ್ತಿನಿಂದ ಪಾರಾಗಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳಿದೆ.

Indian Railway sends notice to lord Hanuman Chalisa: Significance and importance Of Reciting Hanuman Chalisa in kannada Hanuman for land encroachment

ಹನುಮಾನ್ ಚಾಲೀಸಾ ಹೀಗಿದೆ…

ದೋಹಾ
ಶ್ರೀ ಗುರು ಚರಣ ಸರೋಜ ರಜ ನಿಜಮನ ಮುಕುರ ಸುಧಾರಿ ।
ವರಣೌ ರಘುವರ ವಿಮಲಯಶ ಜೋ ದಾಯಕ ಫಲಚಾರಿ ॥
ಬುದ್ಧಿಹೀನ ತನುಜಾನಿಕೈ ಸುಮಿರೌ ಪವನ ಕುಮಾರ ।
ಬಲ ಬುದ್ಧಿ ವಿದ್ಯಾ ದೇಹು ಮೋಹಿ ಹರಹು ಕಲೇಶ ವಿಕಾರ ॥

ಧ್ಯಾನಂ
ಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಸಮ್ ।
ರಾಮಾಯಣ ಮಹಾಮಾಲಾ ರತ್ನಂ ವಂದೇ-(ಅ)ನಿಲಾತ್ಮಜಮ್ ॥
ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಮ್ ।
ಭಾಷ್ಪವಾರಿ ಪರಿಪೂರ್ಣ ಲೋಚನಂ ಮಾರುತಿಂ ನಮತ ರಾಕ್ಷಸಾಂತಕಮ್ ॥

ಚೌಪಾಈ
ಜಯ ಹನುಮಾನ ಜ್ಞಾನ ಗುಣ ಸಾಗರ ।
ಜಯ ಕಪೀಶ ತಿಹು ಲೋಕ ಉಜಾಗರ ॥ 1 ॥

ರಾಮದೂತ ಅತುಲಿತ ಬಲಧಾಮಾ ।
ಅಂಜನಿ ಪುತ್ರ ಪವನಸುತ ನಾಮಾ ॥ 2 ॥

ಮಹಾವೀರ ವಿಕ್ರಮ ಬಜರಂಗೀ ।
ಕುಮತಿ ನಿವಾರ ಸುಮತಿ ಕೇ ಸಂಗೀ ॥3 ॥

ಕಂಚನ ವರಣ ವಿರಾಜ ಸುವೇಶಾ ।
ಕಾನನ ಕುಂಡಲ ಕುಂಚಿತ ಕೇಶಾ ॥ 4 ॥

ಹಾಥವಜ್ರ ಔ ಧ್ವಜಾ ವಿರಾಜೈ ।
ಕಾಂಥೇ ಮೂಂಜ ಜನೇವೂ ಸಾಜೈ ॥ 5॥

ಶಂಕರ ಸುವನ ಕೇಸರೀ ನಂದನ ।
ತೇಜ ಪ್ರತಾಪ ಮಹಾಜಗ ವಂದನ ॥ 6 ॥

ವಿದ್ಯಾವಾನ ಗುಣೀ ಅತಿ ಚಾತುರ ।
ರಾಮ ಕಾಜ ಕರಿವೇ ಕೋ ಆತುರ ॥ 7 ॥

ಪ್ರಭು ಚರಿತ್ರ ಸುನ್ ಸುನ್ ಕೋ ರಸಿಯಾ ।
ರಾಮಲಖನ ಸೀತಾ ಮನ ಬಸಿಯಾ ॥ 8॥

ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ ।
ವಿಕಟ ರೂಪಧರಿ ಲಂಕ ಜಲಾವಾ ॥ 9 ॥

ಭೀಮ ರೂಪಧರಿ ಅಸುರ ಸಂಹಾರೇ ।
ರಾಮಚಂದ್ರ ಕೇ ಕಾಜ ಸಂವಾರೇ ॥ 10 ॥

ಲಾಯ ಸಂಜೀವನ ಲಖನ ಜಿಯಾಯೇ ।
ಶ್ರೀ ರಘುವೀರ ಹರಷಿ ಉರಲಾಯೇ ॥ 11 ॥

ರಘುಪತಿ ಕೀನ್ಹೀ ಬಹುತ ಬಡಾಯೀ ।
ತುಮ ಮಮ ಪ್ರಿಯ ಭರತ ಸಮ ಭಾಯೀ ॥ 12 ॥

ಸಹಸ್ರ ವದನ ತುಮ್ಹರೋ ಯಶಗಾವೈ ।
ಅಸ ಕಹಿ ಶ್ರೀಪತಿ ಕಂಠ ಲಗಾವೈ ॥ 13 ॥

ಸನಕಾದಿಕ ಬ್ರಹ್ಮಾದಿ ಮುನೀಶಾ ।
ನಾರದ ಶಾರದ ಸಹಿತ ಅಹೀಶಾ ॥ 14 ॥

ಯಮ ಕುಬೇರ ದಿಗಪಾಲ ಜಹಾಂ ತೇ ।
ಕವಿ ಕೋವಿದ ಕಹಿ ಸಕೇ ಕಹಾಂ ತೇ ॥ 15 ॥

ತುಮ ಉಪಕಾರ ಸುಗ್ರೀವಹಿ ಕೀನ್ಹಾ ।
ರಾಮ ಮಿಲಾಯ ರಾಜಪದ ದೀನ್ಹಾ ॥ 16 ॥

ತುಮ್ಹರೋ ಮಂತ್ರ ವಿಭೀಷಣ ಮಾನಾ ।
ಲಂಕೇಶ್ವರ ಭಯೇ ಸಬ ಜಗ ಜಾನಾ ॥ 17 ॥

ಯುಗ ಸಹಸ್ರ ಯೋಜನ ಪರ ಭಾನೂ ।
ಲೀಲ್ಯೋ ತಾಹಿ ಮಧುರ ಫಲ ಜಾನೂ ॥ 18 ॥

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ ।
ಜಲಧಿ ಲಾಂಘಿ ಗಯೇ ಅಚರಜ ನಾಹೀ ॥ 19 ॥

ದುರ್ಗಮ ಕಾಜ ಜಗತ ಕೇ ಜೇತೇ ।
ತುಮ್ಹರೇ ತೇತೇ || 20||

ರಾಮ ದುಆರೇ ತುಮ ರಖವಾರೇ ।
ಹೋತ ನ ಆಜ್ಞಾ ಬಿನು ಪೈಸಾರೇ ॥ 21 ॥

ಸಬ ಸುಖ ಲಹೈ ತುಮ್ಹಾರೀ ಶರಣಾ ।
ತುಮ ರಕ್ಷಕ ಕಾಹೂ ಕೋ ಡರ ನಾ ॥ 22 ॥

ಆಪನ ತೇಜ ಸಮ್ಹಾರೋ ಆಪೈ ।
ತೀನೋಂ ಲೋಕ ಹಾಂಕ ತೇ ಕಾಂಪೈ ॥ 23 ॥

ಭೂತ ಪಿಶಾಚ ನಿಕಟ ನಹಿ ಆವೈ ।
ಮಹವೀರ ಜಬ ನಾಮ ಸುನಾವೈ ॥ 24 ॥

ನಾಸೈ ರೋಗ ಹರೈ ಸಬ ಪೀರಾ ।
ಜಪತ ನಿರಂತರ ಹನುಮತ ವೀರಾ ॥ 25 ॥

ಸಂಕಟ ಸೇ ಹನುಮಾನ ಛುಡಾವೈ ।
ಮನ ಕ್ರಮ ವಚನ ಧ್ಯಾನ ಜೋ ಲಾವೈ ॥ 26 ॥

ಸಬ ಪರ ರಾಮ ತಪಸ್ವೀ ರಾಜಾ ।
ತಿನಕೇ ಕಾಜ ಸಕಲ ತುಮ ಸಾಜಾ ॥ 27 ॥

ಔರ ಮನೋರಧ ಜೋ ಕೋಯಿ ಲಾವೈ ।
ತಾಸು ಅಮಿತ ಜೀವನ ಫಲ ಪಾವೈ ॥ 28 ॥

ಚಾರೋ ಯುಗ ಪ್ರತಾಪ ತುಮ್ಹಾರಾ ।
ಹೈ ಪ್ರಸಿದ್ಧ ಜಗತ ಉಜಿಯಾರಾ ॥ 29 ॥

ಸಾಧು ಸಂತ ಕೇ ತುಮ ರಖವಾರೇ ।
ಅಸುರ ನಿಕಂದನ ರಾಮ ದುಲಾರೇ ॥ 30 ॥

ಅಷ್ಠಸಿದ್ಧಿ ನವ ನಿಧಿ ಕೇ ದಾತಾ ।
ಅಸ ವರ ದೀನ್ಹ ಜಾನಕೀ ಮಾತಾ ॥ 31 ॥

ರಾಮ ರಸಾಯನ ತುಮ್ಹಾರೇ ಪಾಸಾ ।
ಸದಾ ರಹೋ ರಘುಪತಿ ಕೇ ದಾಸಾ ॥ 32 ॥

ತುಮ್ಹರೇ ಭಜನ ರಾಮಕೋ ಪಾವೈ ।
ಜನ್ಮ ಜನ್ಮ ಕೇ ದುಖ ಬಿಸರಾವೈ ॥ 33 ॥

ಅಂತ ಕಾಲ ರಘುಪತಿ ಪುರಜಾಯೀ ।
ಜಹಾಂ ಜನ್ಮ ಹರಿಭಕ್ತ ಕಹಾಯೀ ॥ 34 ॥

ಔರ ದೇವತಾ ಚಿತ್ತ ನ ಧರಯೀ ।
ಹನುಮತ ಸೇಯಿ ಸರ್ವ ಸುಖ ಕರಯೀ ॥ 35 ॥

ಸಂಕಟ ಕ(ಹ)ಟೈ ಮಿಟೈ ಸಬ ಪೀರಾ ।
ಜೋ ಸುಮಿರೈ ಹನುಮತ ಬಲ ವೀರಾ ॥ 36 ॥

ಜೈ ಜೈ ಜೈ ಹನುಮಾನ ಗೋಸಾಯೀ ।
ಕೃಪಾ ಕರಹು ಗುರುದೇವ ಕೀ ನಾಯೀ ॥ 37 ॥

ಜೋ ಶತ ವಾರ ಪಾಠ ಕರ ಕೋಯೀ ।
ಛೂಟಹಿ ಬಂದಿ ಮಹಾ ಸುಖ ಹೋಯೀ ॥ 38 ॥

ಜೋ ಯಹ ಪಡೈ ಹನುಮಾನ ಚಾಲೀಸಾ ।
ಹೋಯ ಸಿದ್ಧಿ ಸಾಖೀ ಗೌರೀಶಾ ॥ 39 ॥

ತುಲಸೀದಾಸ ಸದಾ ಹರಿ ಚೇರಾ ।
ಕೀಜೈ ನಾಥ ಹೃದಯ ಮಹ ಡೇರಾ ॥ 40 ॥

ದೋಹಾ
ಪವನ ತನಯ ಸಂಕಟ ಹರಣ ಮಂಗಳ ಮೂರತಿ ರೂಪ್ ।
ರಾಮ ಲಖನ ಸೀತಾ ಸಹಿತ – ಹೃದಯ ಬಸಹು ಸುರಭೂಪ್ ॥
ಸಿಯಾವರ ರಾಮಚಂದ್ರಕೀ ಜೈ । ಪವನಸುತ ಹನುಮಾನಕೀ ಜೈ । ಬೋಲೋ ಭಾಯೀ ಸಬ ಸಂತನಕೀ ಜೈ ।

ಇದನ್ನೂ ಓದಿ: Prerane : ಹನುಮಂತನ ಆದರ್ಶ ಮತ್ತು ಅದರ ಫಲ

Exit mobile version