Site icon Vistara News

Maha Shivaratri 2023 : ಮಹಾ ಶಿವರಾತ್ರಿಯ ಈ ದಿನ ಈ ನಾಲ್ಕು ರಾಶಿಯವರಿಗೆ ಶನಿ ದೇವರ ಕೃಪೆ ಇದೆ!

Maha Shivaratri 2023

Maha Shivaratri 2023

ಮಹಾದೇವ ಶಿವನನ್ನು ಆರಾಧಿಸುವ ಶಿವರಾತ್ರಿ (Maha Shivaratri 2023) ಇಂದು. ಈ ದಿನ ಕೆಲವು ರಾಶಿಯ ವ್ಯಕ್ತಿಗಳಿಗೆ ಶನಿ ದೇವರ ಕೃಪೆ ಲಭಿಸಲಿದೆ. ಏಕೆಂದರೆ ಇಂದು ಮೂರು ಗ್ರಹಗಳು, ಒಂದೇ ರಾಶಿಯಲ್ಲಿ ಅಂದರೆ ಕುಂಭ ರಾಶಿಯಲ್ಲಿ ಸ್ಥಿತವಾಗಿರಲಿದೆ. ಹಾಗಾಗಿ ತ್ರಿಗ್ರಹ ಯೋಗ ಉಂಟಾಗಿದೆ.

ಫೆಬ್ರವರಿ 13ಕ್ಕೆ ಸೂರ್ಯ ಗ್ರಹವು ಕುಂಭ ರಾಶಿ ಪ್ರವೇಶಿಸಿತ್ತು. ಅದೇ ರಾಶಿಯಲ್ಲಿ ಶನಿ ಮತ್ತು ಚಂದ್ರ ಅಸ್ಥವಾದ ಸ್ಥಿತಿಯಲ್ಲಿವೆ. ಶಿವರಾತ್ರಿಯ ಸಮಯದಲ್ಲಿ ಒಂದೇ ರಾಶಿಯಲ್ಲಿ ಮೂರೂ ಗ್ರಹಗಳು ಇರುವುದರಿಂದ ಕೆಲ ರಾಶಿಯವರಿಗೆ ಒಳಿತಾಗಲಿದೆ.

ಶಿವರಾತ್ರಿಯಂದು ಶನಿ, ಸೂರ್ಯ ಮತ್ತು ಚಂದ್ರ ಗ್ರಹಗಳು ಒಂದೇ ರಾಶಿಯಲ್ಲಿರುವುದನ್ನು ದುರ್ಲಭ ಸಂಯೋಗವೆಂದೇ ಹೇಳಬಹುದಾಗಿದೆ. ಈ ಯೋಗದಲ್ಲಿ ಸಾಡೇಸಾತಿ ಮತ್ತು ಅರ್ಧಾಷ್ಟಮಗಳಿಂದ ಸಂಕಟ ಪಡುತ್ತಿರುವ ಜಾತಕದವರು ಶಿವನ ಪೂಜೆ ಮಾಡಿದರೆ ಒಳಿತಾಗುತ್ತದೆ. ಜೊತೆಗೆ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದೇ ಸಂದರ್ಭದಲ್ಲಿ ಮೇಷ, ವೃಶ್ಚಿಕ, ಮಕರ ಮತ್ತು ಕುಂಭ ರಾಶಿಯ ವ್ಯಕ್ತಿಗಳಿಗೆ ಸೌಭಾಗ್ಯ ಮತ್ತು ಸಮೃದ್ಧಿ ಲಭಿಸಲಿದೆ. ಹಾಗಾದರೆ ಈ ಸಂದರ್ಭದಲ್ಲಿ ಶನಿಯ ಕೃಪೆಯಿಂದ ಈ ನಾಲ್ಕು ರಾಶಿಯವರಿಗೆ ಯಾವ ರೀತಿಯಲ್ಲಿ ಒಳಿತು ಸಿಗಲಿದೆ ಎಂಬುದನ್ನು ನೋಡೋಣ.

ಮೇಷ ರಾಶಿ

ಈ ಯೋಗದಿಂದ ಮೇಷ ರಾಶಿಯವರಿಗೆ ಶಿವನ ವಿಶೇಷ ಕೃಪೆ ಪ್ರಾಪ್ತವಾಗಲಿದೆ. ಯಾವುದೋ ಕೆಲಸ ತುಂಬಾ ಸಮಯಗಳಿಂದ ಅರ್ಧಕ್ಕೇ ನಿಂತು ಹೋಗಿದ್ದರೆ, ಅಂಥ ಕಾರ್ಯಗಳು ಈ ಸಂದರ್ಭದಲ್ಲಿ ಪೂರ್ಣವಾಗುತ್ತವೆ. ಜೊತೆಗೆ ಈ ರಾಶಿಯವರ ಮನೋಕಾಮನೆಗಳು ಈಡೇರುತ್ತವೆ. ಮೇಷ ರಾಶಿಯ ವ್ಯಕ್ತಿಗಳು ಈ ದಿನ ಭಕ್ತಿ ಮತ್ತು ಶ್ರದ್ಧೆಯಿಂದ ಶಿವನ ಪೂಜೆ ಮಾಡುವುದರ ಜೊತೆಗೆ ಜಲಾಭಿಷೇಕ ಮಾಡುವುದರಿಂದ ಒಳಿತಾಗುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ವ್ಯಕ್ತಿಗಳಿಗೆ ಈ ಸಮಯದಲ್ಲಿ ಮಹಾದೇವನ ಕೃಪೆ ಲಭಿಸಲಿದೆ. ಈ ರಾಶಿಯ ಅಧಿಪತಿ ಗ್ರಹವಾದ ಮಂಗಳ ಗ್ರಹವು ಮಾನಸಿಕವಾಗಿ ಈ ರಾಶಿಯ ವ್ಯಕ್ತಿಗಳಿಗೆ ಲಾಭವನ್ನು ತಂದುಕೊಡಲಿದೆ. ಇದರಿಂದ ಆಂತರ್ಯದಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ಉತ್ತಮ ವಿಚಾರಗಳ ಬಗ್ಗೆ ಒಲವು ಹೆಚ್ಚಲಿದೆ. ಹಾಗಾಗಿ ಶಿವರಾತ್ರಿಯಂದು ಶಿವಲಿಂಗದ ಮೇಲೆ ಜಲಾಭಿಷೇಕ ಮಾಡುವುದರಿಂದ ಸೌಭಾಗ್ಯ ಪ್ರಾಪ್ತಿಯಾಗುತ್ತದೆ.

ಮಕರ ರಾಶಿ

ಈ ರಾಶಿಯ ಅಧಿಪತಿ ಗ್ರಹ ಶನಿ ಗ್ರಹವೇ ಆಗಿರುವುದರಿಂದ ಈ ರಾಶಿಯ ವ್ಯಕ್ತಿಗಳಿಗೆ ತ್ರಿಗ್ರಹ ಯೋಗದಿಂದ ಲಾಭ ಉಂಟಾಗಲಿದೆ. ಜೊತೆಗೆ ಈ ರಾಶಿಯವರ ಮೇಲೆ ಶನಿ ಗ್ರಹದ ವಿಶೇಷ ಕೃಪೆ ಸಹ ಇರಲಿದೆ. ಈ ರಾಶಿಯ ವ್ಯಕ್ತಿಗಳು ಉದ್ಯೋಗ ಅಥವಾ ವ್ಯಾಪಾರ ಮಾಡುತ್ತಿದ್ದರೆ ಅದರಲ್ಲಿ ಸಫಲತೆ ದೊರಕಲಿದೆ. ಇದರ ಪರಿಣಾಮವಾಗಿ ಆದಾಯದಲ್ಲಿ ವೃದ್ಧಿ ಕಾಣಬಹುದಾಗಿದೆ. ಮನೆಯಲ್ಲಿ ಸುಖ ಮತ್ತು ಸಮೃದ್ಧಿ ನೆಲೆಸಲಿದೆ. ಸದ್ಯದಲ್ಲಿಯೇ ಉತ್ತಮ ಸಮಾಚಾರ ಕೇಳಲು ಸಿಗುತ್ತದೆ.

ಕುಂಭ ರಾಶಿ

ಶನಿ ಗ್ರಹದ ಅಧಿಪತ್ಯವಿರುವ ಕುಂಭ ರಾಶಿಯಲ್ಲಿಯೇ ಶನಿ ಸ್ಥಿತವಾಗಿದ್ದಾನೆ. ಜೊತೆಗೆ ತ್ರಿಗ್ರಹ ಯೋಗ ಉಂಟಾಗಿರುವುದರಿಂದ ಈ ರಾಶಿಯವರಿಗೆ ಮತ್ತಷ್ಟು ಒಳಿತಾಗಲಿದೆ. ಕೆಲಸ, ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯಲ್ಲಿ ಅನುಕೂಲ ಪರಿಣಾಮಗಳನ್ನು ಈ ಸಂದರ್ಭದಲ್ಲಿ ಕಾಣಬಹುದಾಗಿದೆ. ವಿವಾಹದಲ್ಲಿ ತೊಂದರೆಗಳು ಉಂಟಾಗುತ್ತಿದ್ದರೆ. ಈ ಸಮಯದಲ್ಲಿ ಅದರ ನಿವಾರಣೆಯಾಗುತ್ತದೆ. ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಶಿವನಿಗೆ ಜಲಾಭಿಷೇಕವನ್ನು ಮಾಡಬೇಕು. ಜೊತೆಗೆ ಅಗತ್ಯವಿರುವವರಿಗೆ ಸಾಮರ್ಥ್ಯಾನುಸಾರ ಯಾವುದಾದರು ವಸ್ತುಗಳನ್ನು ದಾನವಾಗಿ ನೀಡುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಇದನ್ನೂ ಓದಿ : Maha Shivaratri 2023 : ಶಿವನ ಮಹಾ ಮಹೋತ್ಸವ ಮಹಾ ಶಿವರಾತ್ರಿ

Exit mobile version