ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ (Ram Mandir) ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಜನವರಿ 22ರಂದು ರಾಮ ಲಲ್ಲಾ (Ram Lalla) ಪ್ರಾಣ ಪ್ರತಿಷ್ಠಾಪನೆ (Pran Pratishta) ಕಾರ್ಯಕ್ರಮ ನಡೆಯಲಿದೆ. ಹಿಂದೂಗಳ ಬಹುಬೇಡಿಕೆಯಂತೆ ನಿರ್ಮಾಣವಾಗುತ್ತಿರುವ ಈ ರಾಮ ಮಂದಿರವು ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ನಾಗರ ಶೈಲಿಯ (Nagar Style Temple) ಈ ದೇವಸ್ಥಾನಕ್ಕೆ ಒಂಚೂರು ಕಬ್ಬಿಣವನ್ನು (No iron Used) ಬಳಸಿಲ್ಲ! ಒಟ್ಟು 71 ಎಕರೆಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ(Vistara explainer).
ಒಟ್ಟಾರೆಯಾಗಿ 71 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಭವ್ಯವಾದ ದೇವಾಲಯದ ಸಂಕೀರ್ಣವನ್ನು ಒಟ್ಟು ಆರು ಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಗರ್ಭಗುಡಿ ಮತ್ತು ಗುಣ ಮಂಟಪ, ರಂಗ ಮಂಟಪ, ನೃತ್ಯ ಮಂಟಪ, ಕೀರ್ತನೆಯ ಮಂಟಪ, ಪ್ರಾರ್ಥನಾ ಮಂಟಪಗಳಿವೆ. ಮೂರು ಮಹಡಿಯ ಈ ದೇಗಲದ ಪ್ರತಿ ಮಹಡಿಯು 19.5 ಅಡಿ ಎತ್ತರವಿದೆ. ಒಟ್ಟಾರೆ ದೇವಾಲಯವು 161 ಅಡಿ ಎತ್ತರವಿದೆ.
श्री राम जन्मभूमि मन्दिर के प्रवेश द्वार पर आज गज, सिंह, हनुमान जी और गरुड़ जी की मूर्तियाँ स्थापित की गईं हैं।
— Shri Ram Janmbhoomi Teerth Kshetra (@ShriRamTeerth) January 4, 2024
ये मूर्तियाँ राजस्थान के ग्राम बंसी पहाड़पुर के हल्के गुलाबी रंग के बलुआ पत्थर से बनी हैं।
Murtis of elephant, lion, Hanuman Ji & Garuda have been installed at the… pic.twitter.com/ACINxlum0p
ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಪ್ರಕಾರ, ಮೂರು ಅಂತಸ್ತಿನ ದೇವಾಲಯವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ದೇವಸ್ಥಾನದ ನಿರ್ಮಾಣದಲ್ಲಿ ಎಲ್ಲಿಯೂ ಕಬ್ಬಿಣವನ್ನು ಬಳಸುತ್ತಿಲ್ಲ. ದೇವಾಲಯವು ಪೂರ್ವದಿಂದ ಪಶ್ಚಿಮಕ್ಕೆ 380 ಅಡಿ ಉದ್ದವಿದ್ದು, 250 ಅಡಿ ಅಗಲವಿದೆ. 161 ಅಡಿ ಎತ್ತರವಿದೆ. ಸಂಕೀರ್ಣದಲ್ಲಿ ಒಟ್ಟು 392 ಕಂಬಗಳು 44 ಬಾಗಿಲುಗಳಿವೆ.
ಮೊದಲ ಮಹಡಿಯಲ್ಲಿ ರಾಮ ಲಲ್ಲಾ
ದೇವಾಲಯದ ಮೊದಲನೇ ಮಹಡಿಯ ಗರ್ಭಗುಡಿಯಲ್ಲಿ ಬಾಲ ರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ಮತ್ತು ಶ್ರೀ ರಾಮನ ದರ್ಬಾರ ಕೂಡ ಇರಲಿದೆ. ರಾಮ ಮಂದಿರ ಸಂಕೀರ್ಣದಲ್ಲಿ ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನ ಮತ್ತು ಕೀರ್ತನೆಯ ಮಂಟಪಗಳು ಇರಲಿವೆ. ದೇವಾಲಯದ ಗೋಡೆ ಮತ್ತು ಕಂಬಳ ಮೇಲೆ ದೇವರು, ದೇವತೆಗಳ ಕೆತ್ತನಗೆಳು ಇರಲಿವೆ. ಪೂರ್ವ ದಿಕ್ಕಿನಿಂದ ದೇವಾಲಯಕ್ಕೆ ಪ್ರವೇಶ ನೀಡಲಾಗಿದ್ದು, ಇದು ಸಿಂಗ್ ದ್ವಾರವಾಗಿದ್ದು, ಒಟ್ಟು 32 ಮೆಟ್ಟಿಲುಗಳಿವೆ. ದೇವಾಲಯದ ಸಂಕೀರ್ಣವು ಅಂಗವಿಕಲರು ಮತ್ತು ವೃದ್ಧರ ಅನುಕೂಲಕ್ಕಾಗಿ ಇಳಿಜಾರು ಮತ್ತು ಲಿಫ್ಟ್‌ಗಳನ್ನು ಕೂಡ ಹೊಂದಿದೆ.
ರಾಮ ಮಂದಿರ ಸಂಕೀರ್ಣದ ನಾಲ್ಕು ಮೂಲೆಗಳಲ್ಲಿ ಸೂರ್ಯ ದೇವ, ದೇವಿ ಭಗವತಿ, ಗಣೇಶ ಭಗವಾನ್ ಮತ್ತು ಭಗವಾನ್ ಶಿವನ ದೇಗುಲಗಳು ಇರಲಿವೆ. ಹಾಗೆಯೇ ಉತ್ತರದಲ್ಲಿ ತಾಯಿ ಅನ್ನಪೂರ್ಣೆ ಮತ್ತು ದಕ್ಷಿಣ ಭಾಗದಲ್ಲಿ ಹನುಮಾನ ಮಂದಿರಗಳು ಇರಲಿವೆ. ಮುಖ್ಯ ದೇಗುಲದ ಸಮೀಪವೇ ಐತಿಹಾಸಿಕ ಭಾವಿ ಸೀತಾ ಕೂಪ ಇರಲಿದೆ.
अयोध्या में निर्माणाधीन श्रीराम जन्मभूमि मंदिर की विशेषताएं:
— Shri Ram Janmbhoomi Teerth Kshetra (@ShriRamTeerth) January 4, 2024
1. मंदिर परम्परागत नागर शैली में बनाया जा रहा है।
2. मंदिर की लंबाई (पूर्व से पश्चिम) 380 फीट, चौड़ाई 250 फीट तथा ऊंचाई 161 फीट रहेगी।
3. मंदिर तीन मंजिला रहेगा। प्रत्येक मंजिल की ऊंचाई 20 फीट रहेगी। मंदिर में कुल… pic.twitter.com/BdKNdATqF6
ಇನ್ನು ರಾಮ ಮಂದಿರ ಸಂಕೀರ್ಣದೊಳಗೆ ಮಹರ್ಷಿ ವಾಲ್ಮಿಕಿ, ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ನಿಶಾದ್ ರಾಜ್, ಮಾತಾ ಶಬರಿ ಮತ್ತು ದೇವಿ ಅಹಲ್ಯ ಮಂದಿರಗಳೂ ನಿರ್ಮಾಣ ವಾಗಲಿವೆ. ಮಂದಿರ ಸಂಕೀರ್ಣದ ನೈಋತ್ಯ ಭಾಗದಲ್ಲಿ ಕುಬೇರ ತಿಳ ಮತ್ತು ಭಗವಾನ್ ಶಿವನ ದೇಗುಲವನ್ನು ಜೀರ್ಣೋದ್ಧಾರ ಮಾಡಲಾಗುವುದು ಮತ್ತು ಜಟಾಯು ವಿಗ್ರಹವನ್ನು ಸ್ಥಾಪಿಸಲಾಗುವುದು.
ಮಂದಿರದ ಅಡಿಪಾಯ ಹೇಗಿದೆ?
ದೇವಾಲಯದ ಅಡಿಪಾಯವನ್ನು 14-ಮೀಟರ್ ದಪ್ಪದ ರೋಲರ್-ಕಾಂಪ್ಯಾಕ್ಟ್ ಕಾಂಕ್ರೀಟ್ (RCC) ಪದರದಿಂದ ಮಾಡಲಾಗಿದೆ. ಇದು ಕೃತಕ ಬಂಡೆಯ ರೀತಿಯಲ್ಲಿರುತ್ತದೆ. ನೆಲದ ತೇವಾಂಶದಿಂದ ರಕ್ಷಿಸಲು ಗ್ರಾನೈಟ್ ಬಳಸಿ 21 ಅಡಿ ಎತ್ತರದ ಸ್ತಂಭವನ್ನು ನಿರ್ಮಿಸಲಾಗಿದೆ. ಮಂದಿರ ಸಂಕೀರ್ಣವು ಒಳಚರಂಡಿ ಸಂಸ್ಕರಣಾ ಘಟಕ, ನೀರು ಸಂಸ್ಕರಣಾ ಘಟಕ, ಅಗ್ನಿ ಸುರಕ್ಷತೆಗಾಗಿ ನೀರು ಸರಬರಾಜು ಮತ್ತು ಸ್ವತಂತ್ರ ವಿದ್ಯುತ್ ಕೇಂದ್ರವನ್ನು ಸಹ ಹೊಂದಿದೆ.
ಭಕ್ತಾದಿಗಳಿಗೆ ಸೌಲಭ್ಯ ಕೇಂದ್ರ
25,000 ಜನರ ಸಾಮರ್ಥ್ಯದ ಪಿಲ್ಗ್ರಿಮ್ಸ್ ಫೆಸಿಲಿಟಿ ಸೆಂಟರ್ (PFC) ಅನ್ನು ನಿರ್ಮಿಸಲಾಗುತ್ತಿದೆ, ಇದು ಯಾತ್ರಾರ್ಥಿಗಳಿಗೆ ವೈದ್ಯಕೀಯ ಸೌಲಭ್ಯಗಳು ಮತ್ತು ಲಾಕರ್ ಸೌಲಭ್ಯವನ್ನು ಒದಗಿಸುತ್ತದೆ. ಸಂಕೀರ್ಣವು ಸ್ನಾನದ ಪ್ರದೇಶ, ಸ್ನಾನಗೃಹ, ವಾಶ್ ಬೇಸಿನ್, ತೆರೆದ ಟ್ಯಾಪ್‌ಗಳು ಇತ್ಯಾದಿಗಳೊಂದಿಗೆ ಪ್ರತ್ಯೇಕ ಬ್ಲಾಕ್ ಅನ್ನು ಸಹ ಹೊಂದಿದೆ.
श्री राम जन्मभूमि मंदिर का भव्य सिंहद्वार
— Shri Ram Janmbhoomi Teerth Kshetra (@ShriRamTeerth) January 4, 2024
The Magnificent Sinh Dwar of Shri Ram Janmbhoomi Mandir.
📍Ayodhya pic.twitter.com/1BhjPpJh2N
ಪ್ರವೇಶ ದ್ವಾರದಲ್ಲಿ ಆನೆ, ಸಿಂಹ
ದೇವಾಲಯದ ಪ್ರವೇಶ ದ್ವಾರದಲ್ಲಿ ಆನೆ, ಸಿಂಹ, ಹನುಮಾನ್ ಮತ್ತು ಗರುಡನ ಪ್ರತಿಮೆಗಳನ್ನುಮೆಟ್ಟಿಲುಗಳ ಎರಡೂ ಬದಿಗಳಲ್ಲಿ ಜೋಡಿಸಲಾದ ಶ್ರೇಣೀಕೃತ ಚಪ್ಪಡಿಗಳ ಮೇಲೆ ಜೋಡಿಸಲಾಗಿದೆ. ಈ ಪ್ರತಿಮೆಗಳನ್ನು ರಾಜಸ್ಥಾನದ ಬಂಸಿ ಪಹಾರ್‌ಪುರ ಗ್ರಾಮದಿಂದ ಪಡೆದ ಗುಲಾಬಿ ಮರಳುಗಲ್ಲಿನಿಂದ ಕೆತ್ತಲಾಗಿದೆ. ಮಂದಿರವನ್ನು ಸಂಪೂರ್ಣವಾಗಿ ಭಾರತದ ಸಾಂಪ್ರದಾಯಿಕ ಮತ್ತು ಸ್ಥಳೀಯ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ ಮತ್ತು ಪರಿಸರ-ಜಲ ಸಂರಕ್ಷಣೆಗೆ ನಿರ್ದಿಷ್ಟ ಒತ್ತು ನೀಡಲಾಗಿದ್ದು, 70 ಎಕರೆ ಪ್ರದೇಶದಲ್ಲಿ ಶೇ.70ರಷ್ಟು ಹಸಿರನ್ನು ಕಾಪಾಡಿಕೊಳ್ಳಲಾಗಿದೆ.
ಈ ಸುದ್ದಿಯನ್ನೂ ಓದಿ: Ram Mandir: ಅಯೋಧ್ಯೆಗೆ ತೆರಳುವವರಿಗೆ ನೆರವಾಗಲಿದೆ ಈ ವಿಶೇಷ ಆ್ಯಪ್!