Ram Mandir: ಅಯೋಧ್ಯೆಗೆ ತೆರಳುವವರಿಗೆ ನೆರವಾಗಲಿದೆ ಈ ವಿಶೇಷ ಆ್ಯಪ್‌! - Vistara News

ದೇಶ

Ram Mandir: ಅಯೋಧ್ಯೆಗೆ ತೆರಳುವವರಿಗೆ ನೆರವಾಗಲಿದೆ ಈ ವಿಶೇಷ ಆ್ಯಪ್‌!

Ram Mandir: ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಪ್ರವಾಸಿಗರ ಅನುಕೂಲಕ್ಕಾಗಿ ʼಹೋಲಿ ಅಯೋಧ್ಯಾʼ ಎಂಬ ಹೊಸ ಅಪ್ಲಿಕೇಷನ್‌ನನ್ನು ಪರಿಚಯಿಸಿದೆ. ಇದರ ಮೂಲಕ ಸುಲಭವಾಗಿ ಹೋಮ್‌ ಸ್ಟೇ ಬುಕ್‌ ಮಾಡಬಹುದು.

VISTARANEWS.COM


on

holly ayodhya app
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಯೋಧ್ಯೆ: ಕೋಟ್ಯಂತರ ಹಿಂದೂಗಳ ಕನಸು ನನಸಾಗಿಸಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ (Ram Mandir) ತಲೆ ಎತ್ತುತ್ತಿದೆ. ಜನವರಿ 22ರಂದು ಮಧ್ಯಾಹ್ನ 12.20ಕ್ಕೆ ಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನರವೇರಲಿದೆ. ಹೀಗಾಗಿ ರಾಮಮಂದಿರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಈ ಮಧ್ಯೆ ಯಾತ್ರಾರ್ಥಿಗಳಿಗೆ ಅಯೋಧ್ಯೆ ಆಡಳಿತ ಗುಡ್‌ನ್ಯೂಸ್‌ ನೀಡಿದೆ. ಪ್ರವಾಸಿಗರ ಅನುಕೂಲಕ್ಕಾಗಿ ʼಹೋಲಿ ಅಯೋಧ್ಯಾʼ (Holy Ayodhya) ಎಂಬ ಹೊಸ ಅಪ್ಲಿಕೇಷನ್‌ನನ್ನು ಪರಿಚಯಿಸಿದೆ.

ಆ್ಯಪ್‌ನ ವೈಶಿಷ್ಟ್ಯ

ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (Ayodhya Development Authority-ADA) ʼಹೋಲಿ ಅಯೋಧ್ಯಾʼ ಆ್ಯಪ್‌ ಅನ್ನು ಅಭಿವೃದ್ಧಿ ಪಡಿಸಿದೆ. ಇದು ಅಯೋಧ್ಯೆಯಲ್ಲಿ ಕಡಿಮೆ ಬೆಲೆಯ ಹೋಂ ಸ್ಟೇಗಳನ್ನು ಹುಡುಕಲು ಪ್ರಯಾಣಿಕರಿಗೆ ಸಹಾಯ ಮಾಡುತ್ತದೆ. ಪ್ರಸ್ತುತ ಈ ಆ್ಯಪ್‌ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯ. ಈ ಆ್ಯಪ್‌ ಮೂಲಕ ಕನಿಷ್ಠ 1,000 ರೂ.ಗಳಿಂದ ಆರಂಭವಾಗುವ ಕೊಠಡಿಗಳು ದೊರೆಯುತ್ತವೆ. ಇದರಲ್ಲಿ ಹೋಟೆಲ್‌ಗಿಂತ ಹೆಚ್ಚಾಗಿ ಹೋಂಸ್ಟೇಗಳಿಗೆ ಆದ್ಯತೆ ನೀಡಲಾಗಿದೆ. ಅಯೋಧ್ಯೆ ನಗರದ ಸುಮಾರು 500 ಕಟ್ಟಡಗಳ 2,200 ಕೊಠಡಿಗಳು ಹೋಮ್‌ ಸ್ಟೇಗಳಾಗಿ ನೋಂದಣಿ ಮಾಡಿದ್ದು, ಪ್ರವಾಸಿಗರು ಇಲ್ಲಿ ತಂಗಬಹುದು ಎಂದು ಮೂಲಗಳು ತಿಳಿಸಿವೆ.

ಬುಕ್ಕಿಂಗ್‌ ವಿವರ

ಈ ಆ್ಯಪ್‌ ಬಳಸಿ ಯಾವುದೇ ಹೋಂಸ್ಟೇಯಲ್ಲಿ ಕೊಠಡಿಯನ್ನು ಕಾಯ್ದಿರಿಸಲು ಪ್ರಯಾಣಿಕರು ಮುಂಗಡ ಪಾವತಿ ಮಾಡುವುದು ಕಡ್ಡಾಯ. ಜತೆಗೆ ಪ್ರಸ್ತುತ ಬಳಸುತ್ತಿರುವ ಫೋನ್ ಸಂಖ್ಯೆ ಒದಗಿಸಬೇಕು. ಚೆಕ್-ಇನ್ ಸಮಯದ 24 ಗಂಟೆಗಳ ಮೊದಲು ಕಾಯ್ದಿರಿಸುವಿಕೆಯನ್ನು ರದ್ದುಗೊಳಿಸಬೇಕು. ಬಳಿಕ ಕ್ಯಾನ್ಸಲ್‌ ಮಾಡಿದರೆ ಯಾವುದೇ ಮರುಪಾವತಿ ದೊರೆಯುವುದಿಲ್ಲ. ಕೊಠಡಿಗಳು ಮಧ್ಯಾಹ್ನ 2 ಗಂಟೆಗೆ ಚೆಕ್ ಇನ್ ಆಗುತ್ತವೆ.

ಏತನ್ಮಧ್ಯೆ ಸುಮಾರು 8,000 ಆಹ್ವಾನಿತರನ್ನು ಸ್ವಾಗತಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತಿದೆ. ಸುಮಾರು 5,000 ಸಂತರು ಪ್ರಾನ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜನವರಿ 22ರಂದು ಅತಿ ಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಪ್ರತ್ಯೇಕ ಪಥ ನಿರ್ಮಿಸಲಾಗುವುದು. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿಯಲ್ಲಿ ಅಯೋಧ್ಯೆಗೆ ನಿತ್ಯ 3ರಿಂದ 5 ಲಕ್ಷ ಜನರ ಭೇಟಿ ನಿರೀಕ್ಷೆ!

ಜನವರಿ 22ರಂದು ರಾಮ ಮಂದಿರ ಉದ್ಘಾಟನೆಯಾಗಲಿದ್ದು, ಅಯೋಧ್ಯೆಯಲ್ಲಿ ಈಗ ಪ್ರವಾಸೋದ್ಯಮ ಚಟುವಟಿಕೆಗಳ ಗರಿಗೆದರಿವೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಹೊಸದಾಗಿ ಅಭಿವೃದ್ಧಿ ಪಡಿಸಿರುವ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳನ್ನು ಉದ್ಘಾಟಿಸಿದ್ದರು. ಇದರೊಂದಿಗೆ ಅಯೋಧ್ಯೆಗೆ ಸಂಪರ್ಕಿಸುವ ಮಾರ್ಗಗಳು ಸುಲಭಗೊಂಡಿವೆ. ಹಾಗಾಗಿ ಅಯೋಧ್ಯೆಯಲ್ಲಿ ಈಗ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಾಗಿದ್ದು, ಜನವರಿಯಲ್ಲಿ ಪ್ರತಿ ದಿನ ಅಯೋಧ್ಯೆಗೆ ಸುಮಾರು 3ರಿಂದ 5 ಲಕ್ಷ ಜನರು ಭೇಟಿ ನೀಡಲಿದ್ದಾರೆಂದು ಅಂದಾಜಿಸಲಾಗಿದೆ.

ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಉದ್ಘಾಟನೆಗೆ 8,000 ಜನರು ಮತ್ತು ದೇವಾಲಯವನ್ನು ತೆರೆದ ನಂತರ ಕನಿಷ್ಠ ಒಂದು ತಿಂಗಳವರೆಗೆ ಪ್ರತಿದಿನ 3-5 ಲಕ್ಷ ಸಂದರ್ಶಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು 2022ರಲ್ಲಿ 8,342.7% ವಾರ್ಷಿಕ ಪ್ರವಾಸೋದ್ಯಮ ಬೆಳವಣಿಗೆಯೊಂದಿಗೆ ನಂಬಲಾಗದ ರೀತಿಯಲ್ಲಿ ಏರಿಕೆಯನ್ನು ದಾಖಲಿಸಿತ್ತು. ಈ ಪೈಕಿ ಅಯೋಧ್ಯೆ ಜಿಲ್ಲೆಯಲ್ಲಿ 2.36 ಕೋಟಿ ದೇಶೀಯ ಮತ್ತು 1,465 ವಿದೇಶಿ ಪ್ರವಾಸಿಗರನ್ನು ಆಗಮಿಸಿದ್ದಾರೆ. 

ಇದನ್ನೂ ಓದಿ: Ram Mandir: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ 7 ದಿನ ಯಾವೆಲ್ಲ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Arvind Kejriwal: ಕೇಜ್ರಿವಾಲ್‌ಗೆ ಮತ್ತೆ ಹಿನ್ನಡೆ; ಜಾಮೀನು ವಿಸ್ತರಣೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

Arvind Kejriwal:ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿದ್ದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಏಳು ಹಂತದ ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನವಾದ ಜೂನ್ 1ರವರೆಗೆ ರಿಲೀಫ್‌ ಸಿಕ್ಕಿತ್ತು. ಇದೀಗ ತಮ್ಮ ಆರೋಗ್ಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಜಾಮೀನು ಅವಧಿಯನ್ನು ಮತ್ತಷ್ಟು ದಿನ ವಿಸ್ತರಿಸುವಂತೆ ಕೋರಿ ಕೇಜ್ರಿವಾಲ್‌ ಅರ್ಜಿ ಸಲ್ಲಿಸಿದ್ದರು.

VISTARANEWS.COM


on

Aravind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನೂರಾರು ಕೋಟಿ ರೂ. ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಭಾರೀ ಹಿನ್ನಡೆಯಾಗಿದೆ. ತಮ್ಮ ಮಧ್ಯಂತರ ಜಾಮೀನು ಅವಧಿಯನ್ನು ಮತ್ತಷ್ಟು ವಿಸ್ತರಿಸುವಂತೆ ಕೋರಿ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿದ್ದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಏಳು ಹಂತದ ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನವಾದ ಜೂನ್ 1ರವರೆಗೆ ರಿಲೀಫ್‌ ಸಿಕ್ಕಿತ್ತು. ಇದೀಗ ತಮ್ಮ ಆರೋಗ್ಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಜಾಮೀನು ಅವಧಿಯನ್ನು ಮತ್ತಷ್ಟು ದಿನ ವಿಸ್ತರಿಸುವಂತೆ ಕೋರಿ ಕೇಜ್ರಿವಾಲ್‌ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಕೆ.ವಿ ವಿಶ್ವನಾಥನ್‌ ಇದ್ದ ನ್ಯಾಯಪೀಠ, ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ್ದು, ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮುಂದಿನ ದಿನಗಳಲ್ಲಿ ನಡೆಸಲಿದ್ದಾರೆ ಎಂದು ಹೇಳಿದೆ. ಅಲ್ಲದೇ ಈ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಅವರಿಗೆ ಹಸ್ತಾಂತರಿಸಿದೆ. ಹೀಗಾಗಿ ಜಾಮೀನು ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಕೇಜ್ರಿವಾಲ್‌ ಜೂ.2ರಂದು ತಿಹಾರ್‌ ಜೈಲಿಗೆ ಮರಳಬೇಕಾಗಿದೆ.

ನಿನ್ನೆಯಷ್ಟೇ ದೆಹಲಿ ಸಚಿವೆ ಆತಿಶಿ (Atishi) ಅವರು ಅರವಿಂದ್‌ ಕೇಜ್ರಿವಾಲ್‌ ಅವರ ಆರೋಗ್ಯದ ಕುರಿತು ಮಾಹಿತಿಯೊಂದನ್ನು ನೀಡಿದ್ದು, ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಕ್ಯಾನ್ಸರ್‌ ಇದೇಯೇ ಎಂಬ ಪ್ರಶ್ನೆ ಮೂಡಿಸಿದೆ. ಹಾಗಾಗಿ, ಜೂನ್‌ 2ರಂದು ದೆಹಲಿ ಸಿಎಂ ಮತ್ತೆ ಜೈಲಿಗೆ ಹೋಗುವುದಿಲ್ಲ ಎಂದು ಹೇಳಲಾಗುತ್ತಿತ್ತು.

“ಅರವಿಂದ್‌ ಕೇಜ್ರಿವಾಲ್‌ ಅವರ ಆರೋಗ್ಯ ತಪಾಸಣೆ ಮಾಡಿಸಲಾಗಿದ್ದು, ಅವರ ಕೇಟೊನ್‌ ಪ್ರಮಾಣವು ಜಾಸ್ತಿಯಾಗಿದೆ. ಏಕಾಏಕಿ ತೂಕ ಕಡಿಮೆಯಾಗುವುದು, ಜಾಸ್ತಿಯಾಗುವುದನ್ನು ನೋಡಿದರೆ ಅವರಿಗೆ ಗಂಭೀರ ಕಾಯಿಲೆ ಇರುವ ಸಾಧ್ಯತೆ ಇದೆ. ಕಿಡ್ನಿ ಸಮಸ್ಯೆ ಅಥವಾ ಕ್ಯಾನ್ಸರ್‌ ಸೇರಿ ಯಾವುದೇ ಗಂಭೀರ ಕಾಯಿಲೆ ಇರಬಹುದು. ಹಾಗಾಗಿ, ಅರವಿಂದ್‌ ಕೇಜ್ರಿವಾಲ್‌ ಅವರು ಜೂನ್‌ 2ರಂದು ಜೈಲಿಗೆ ಹೋಗುವ ಬದಲು ಜೂನ್‌ 9ರಂದು ತೆರಳುವ ಕುರಿತು ನ್ಯಾಯಾಲಯಕ್ಕೆ ಮನವಿ ಮಾಡಿದೆ. ಅವರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡುವಂತೆ ಕೋರಲಾಗಿದೆ” ಎಂಬುದಾಗಿ ಆತಿಶಿ ತಿಳಿಸಿದ್ದರು.

ಏನಿದು ಅಬಕಾರಿ ನೀತಿ ಹಗರಣ?

ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ. ದೆಹಲಿ ಸರ್ಕಾರವು ನಗರದ ಪ್ರಮುಖ ಮದ್ಯದ ವ್ಯಾಪಾರವನ್ನು ಪರಿಷ್ಕರಿಸುವ ನೀತಿಯನ್ನು ರೂಪಿಸಿದ್ದು, ವ್ಯಾಪಾರಿಗಳಿಗೆ ಪರವಾನಗಿ ಶುಲ್ಕದ ಬದಲಾವಣೆ ಸೇರಿದಂತೆ ಹಲವು ಬದಲಾವಣೆ ಮಾಡಿತ್ತು. ಆದರೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಇದರಲ್ಲಿ ಅಕ್ರಮಗಳನ್ನು ಆರೋಪಿಸಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ಕೋರಿದ್ದರು. ನಂತರ ನೀತಿಯನ್ನು ರದ್ದುಗೊಳಿಸಲಾಯಿತು.

ಇದನ್ನೂ ಓದಿ:Human trafficking Case: ದೇಶಾದ್ಯಂತ NIA ರೇಡ್‌; ಮಾನವ ಕಳ್ಳಸಾಗಣೆ ಜಾಲ ಬಯಲು

ಸಿಬಿಐ ಮತ್ತು ಇಡಿ ಪ್ರಕಾರ, ಎಎಪಿ ನಾಯಕರು ಅಬಕಾರಿ ನೀತಿಯ ಅಡಿಯಲ್ಲಿ ಪರವಾನಗಿ ನೀಡಲು ರಾಜಕಾರಣಿಗಳು ಮತ್ತು ಮದ್ಯದ ಉದ್ಯಮಿಗಳ ಗುಂಪಿನಿಂದ ₹ 100 ಕೋಟಿ ಕಿಕ್‌ಬ್ಯಾಕ್‌ಗಳನ್ನು ಸ್ವೀಕರಿಸಿದ್ದಾರೆ. ಆರೋಪಪಟ್ಟಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದ್ದು, ಅಬಕಾರಿ ನೀತಿ ಪ್ರಕರಣದ ಎಲ್ಲಾ ಆರೋಪಿಗಳು ಅಬಕಾರಿ ನೀತಿಯನ್ನು ರೂಪಿಸಲು ದೆಹಲಿ ಸಿಎಂ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿತ್ತು.

Continue Reading

ದೇಶ

Gurmeet Ram Rahim: 22ವರ್ಷಗಳ ಹಳೆಯ ಕೊಲೆ ಕೇಸ್‌; ಗುರ್ಮೀತ್ ರಾಮ್​ ರಹೀಮ್​ ಖುಲಾಸೆ

Gurmeet Ram Rahim:ರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಸಿಬಿಐ ಕೋರ್ಟ್ ಪಂಚಕುಲ ಗುರ್ಮೀತ್ ರಾಮ್ ರಹೀಮ್‌ಗೆ 2021 ರಲ್ಲಿ ಜೀವಾವಧಿ ಶಿಕ್ಷೆ ಮತ್ತು 31 ಲಕ್ಷ ರೂಪಾಯಿ ದಂಡ ವಿಧಿಸಿತ್ತು. 2002ರಲ್ಲಿ ರಂಜೀತ್ ಸಿಂಗ್ ಕೊಲೆಯಾಗಿದ್ದರು. ಸಿಬಿಐ ನ್ಯಾಯಾಲಯವು 19 ವರ್ಷಗಳ ನಂತರ ರಾಮ್ ರಹೀಮ್ ದೋಷಿ ಎಂದು ತೀರ್ಪು ನೀಡಿತ್ತು. ಜುಲೈ 10, 2002 ರಂದು ಕುರುಕ್ಷೇತ್ರ ಜಿಲ್ಲೆಯ ಖಾನ್‌ಪುರ್ ಕೊಲ್ಯಾನ್ ಗ್ರಾಮದ ತನ್ನ ಹೊಲಗಳ ಬಳಿ ರಂಜಿತ್ ಸಿಂಗ್ ಕ್ಯಾಂಪ್‌ನ ಮ್ಯಾನೇಜರ್ ಆಗಿದ್ದರು. ರಂಜಿತ್ ಕೊಲೆಯಾದ ಒಂದು ವರ್ಷದ ನಂತರ, 2003 ರಲ್ಲಿ, ಅವರ ಕುಟುಂಬವು ಕೊಲೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಮನವಿ ಮಾಡಿತ್ತು.

VISTARANEWS.COM


on

Gurmeet Ram Rahim
Koo

ನವದೆಹಲಿ: ಇದು 22 ವರ್ಷಗಳ ಹಳೆಯ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್​ ರಹೀಮ್​(Gurmeet Ram Rahim) ರನ್ನು ಹೈಕೋರ್ಟ್​ ಖುಲಾಸೆಗೊಳಿಸಿದೆ. ಡೇರಾ ಸಚ್ಚಾ ಸೌಧಾ(Dera Sacha Sauda) ಮ್ಯಾನೇಜರ್ ಆಗಿದ್ದ ರಂಜಿತ್ ಸಿಂಗ್(Ranjith Singh) ಅವರ ಕೊಲೆ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಹಾಗೂ ಇತರ ನಾಲ್ವರನ್ನು ನಿರ್ದೋಷಿಗಳೆಂದು ಹೈಕೋರ್ಟ್‌ ಘೋಷಿಸಿದ್ದು, ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಈ ಹಿಂದೆ ಈ ಪ್ರಕರಣದಲ್ಲಿ ಎಲ್ಲಾ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ(Life imprisonment) ನೀಡಿ ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಸಿಬಿಐ ನ್ಯಾಯಲಯದ ತೀರ್ಪನ್ನು ರಾಮ್​ ರಹೀಮ್ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು.

ರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಸಿಬಿಐ ಕೋರ್ಟ್ ಪಂಚಕುಲ ಗುರ್ಮೀತ್ ರಾಮ್ ರಹೀಮ್‌ಗೆ 2021 ರಲ್ಲಿ ಜೀವಾವಧಿ ಶಿಕ್ಷೆ ಮತ್ತು 31 ಲಕ್ಷ ರೂಪಾಯಿ ದಂಡ ವಿಧಿಸಿತ್ತು. 2002ರಲ್ಲಿ ರಂಜೀತ್ ಸಿಂಗ್ ಕೊಲೆಯಾಗಿದ್ದರು. ಸಿಬಿಐ ನ್ಯಾಯಾಲಯವು 19 ವರ್ಷಗಳ ನಂತರ ರಾಮ್ ರಹೀಮ್ ದೋಷಿ ಎಂದು ತೀರ್ಪು ನೀಡಿತ್ತು. ಜುಲೈ 10, 2002 ರಂದು ಕುರುಕ್ಷೇತ್ರ ಜಿಲ್ಲೆಯ ಖಾನ್‌ಪುರ್ ಕೊಲ್ಯಾನ್ ಗ್ರಾಮದ ತನ್ನ ಹೊಲಗಳ ಬಳಿ ರಂಜಿತ್ ಸಿಂಗ್ ಕ್ಯಾಂಪ್‌ನ ಮ್ಯಾನೇಜರ್ ಆಗಿದ್ದರು. ರಂಜಿತ್ ಕೊಲೆಯಾದ ಒಂದು ವರ್ಷದ ನಂತರ, 2003 ರಲ್ಲಿ, ಅವರ ಕುಟುಂಬವು ಕೊಲೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಮನವಿ ಮಾಡಿತ್ತು.

ಆದರೆ ಆಗಿನ ಸರ್ಕಾರ ಅವರ ಮನವಿಯನ್ನು ನಿರ್ಲಕ್ಷ್ಯ ಮಾಡಿತ್ತು. ಇದಾದ ನಂತರ ಅವರ ಕುಟುಂಬ ಸದಸ್ಯರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮೊರೆ ಹೋಗಿದ್ದರು. ಹೈಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ನಾಲ್ಕು ವರ್ಷಗಳ ನಂತರ, ಅಂದರೆ 2007 ರಲ್ಲಿ, ಸಿಬಿಐ ಕೆಲವು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: Viral Video: BMW ಕಾರು ಬಾನೆಟ್‌ ಮೇಲೆ ವ್ಯಕ್ತಿ…ಬ್ಯುಸಿ ರಸ್ತೆಯಲ್ಲಿ ಬಾಲಕನ ಪುಂಡಾಟ; ವಿಡಿಯೋ ವೈರಲ್‌

ಅಕ್ಟೋಬರ್ 18, 2021 ರಂದು ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಗುರ್ಮೀತ್ ರಾಮ್ ರಹೀಮ್ ದೋಷಿ ಎಂದು ತೀರ್ಪು ನೀಡಿತ್ತು. ನ್ಯಾಯಾಲಯ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸೇರಿದಂತೆ 5 ಅಪರಾಧಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

Continue Reading

ದೇಶ

Cyclone Remal: ರೆಮಲ್‌ ಚಂಡಮಾರುತದ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ; 16 ಮಂದಿಯನ್ನು ಬಲಿ ಪಡೆದ ಭೀಕರ ಮಳೆ

Cyclone Remal: ಪ್ರಬಲ ಚಂಡಮಾರುತ ರೆಮಲ್‌ ಅಬ್ಬರಕ್ಕೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಅಕ್ಷರಶಃ ನಲುಗಿ ಹೋಗಿವೆ. ರೆಮಲ್ ಚಂಡಮಾರುತದ ಕಾರಣದಿಂದ ಬಂಗಾಳ ಕೊಲ್ಲಿಯ ಕರಾವಳಿಯಲ್ಲಿ ಭೂಕುಸಿತ ಉಂಟಾಗಿದ್ದು, ಬಾಂಗ್ಲಾದೇಶ ಮತ್ತು ಭಾರತದಾದ್ಯಂತ 16 ಮಂದಿಯನ್ನು ಬಲಿ ಪಡೆದುಕೊಂಡಿದೆ. ಬಾಂಗ್ಲಾದೇಶದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಉಳಿದ ಸಾವು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಈ ಪೈಕಿ ಕೆಲವರು ಸಂತ್ರಸ್ತ ಶಿಬಿರಕ್ಕೆ ಸ್ಥಳಾಂತರಿಸುವ ವೇಳೆ ಮೃತಪಟ್ಟರೆ, ಇನ್ನು ಹಲವರು ಭೀಕರ ಮಳೆಯಿಂದ ಮನೆ ಕುಸಿದು, ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

VISTARANEWS.COM


on

Cyclone Remal
Koo

ಕೋಲ್ಕತ್ತಾ: ಈ ವರ್ಷದ ಮೊದಲ ಪ್ರಬಲ ಚಂಡಮಾರುತ ರೆಮಲ್‌ (Cyclone Remal) ಅಬ್ಬರಕ್ಕೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಅಕ್ಷರಶಃ ನಲುಗಿ ಹೋಗಿವೆ. ರೆಮಲ್ ಚಂಡಮಾರುತದ ಕಾರಣದಿಂದ ಬಂಗಾಳ ಕೊಲ್ಲಿಯ ಕರಾವಳಿಯಲ್ಲಿ ಭೂಕುಸಿತ ಉಂಟಾಗಿದ್ದು, ಬಾಂಗ್ಲಾದೇಶ ಮತ್ತು ಭಾರತದಾದ್ಯಂತ 16 ಮಂದಿಯನ್ನು ಬಲಿ ಪಡೆದುಕೊಂಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಮಳೆಯಿಂದಾಗಿ ಹಲವು ಮಂದಿ ಗಾಯಗೊಂಡಿದ್ದು, ಅನೇಕ ಮನೆಗಳು, ಮರಗಳು ಧರೆಗುರುಳಿವೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ವಿದ್ಯುತ್ ಮಾರ್ಗಗಳಿಗೆ ತೀವ್ರ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಗಂಟೆಗೆ 135 ಕಿ.ಮೀ ವೇಗದಲ್ಲಿ ಬೀಸಿದ ಚಂಡಮಾರುತವು ಭಾನುವಾರ ತಡರಾತ್ರಿ ಬಾಂಗ್ಲಾದೇಶದ ದಕ್ಷಿಣ ಬಂದರು ಮೊಂಗ್ಲಾ ಮತ್ತು ಪಶ್ಚಿಮ ಬಂಗಾಳದ ಪಕ್ಕದ ಸಾಗರ್ ದ್ವೀಪಗಳ ಸುತ್ತಮುತ್ತಲಿನ ಪ್ರದೇಶವನ್ನು ದಾಟಿದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಉಳಿದ ಸಾವು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಈ ಪೈಕಿ ಕೆಲವರು ಸಂತ್ರಸ್ತ ಶಿಬಿರಕ್ಕೆ ಸ್ಥಳಾಂತರಿಸುವ ವೇಳೆ ಮೃತಪಟ್ಟರೆ, ಇನ್ನು ಹಲವರು ಭೀಕರ ಮಳೆಯಿಂದ ಮನೆ ಕುಸಿದು, ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ವಿದ್ಯುತ್ ಸ್ಪರ್ಶದಿಂದ ನಾಲ್ವರು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂಡಮಾರುತದ ಪ್ರಭಾವ ವಿದ್ಯುತ್ ಮಾರ್ಗಗಳ ಮೇಲೂ ಬೀರಿದ್ದು, ಹಲವು ಕರಾವಳಿ ಪ್ರದೇಶಗಳಿಗೆ ಸಂಪರ್ಕ ಕಡಿತಗೊಂಡಿದೆ. ಪರಿಣಾಮ ಬಾಂಗ್ಲಾದೇಶದ ಲಕ್ಷಾಂತರ ಮಂದಿ ಮತ್ತು ಪಶ್ಚಿಮ ಬಂಗಾಳದ ಸಾವಿರಾರು ಮಂದಿ ವಿದ್ಯುತ್‌ ಇಲ್ಲದೆ ಪರದಾಡುವಂತಾಗಿದೆ. ಪಶ್ಚಿಮ ಬಂಗಾಳದಲ್ಲಿ ಕನಿಷ್ಠ 1,200 ವಿದ್ಯುತ್‌ ಕಂಬಗಳು ಧರೆಗುರುಳಿವೆ ಮತ್ತು 300 ಮಣ್ಣಿನ ಗುಡಿಸಲುಗಳು ನೆಲಸಮವಾಗಿದೆ ಎಂದು ಅಂದಾಜಿಸಲಾಗಿದೆ.

ʼʼಅಪಘಾತಗಳನ್ನು ತಪ್ಪಿಸಲು ಕೆಲವು ಪ್ರದೇಶಗಳಿಗೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಇತ್ತ ಮರಗಳು ಬಿದ್ದು ಅನೇಕ ಕರಾವಳಿ ಪಟ್ಟಣಗಳ ವಿದ್ಯುತ್‌ ಪೂರೈಕೆಗೆ ಅಡ್ಡಿಯಾಗಿದೆʼʼ ಎಂದು ಬಾಂಗ್ಲಾದೇಶದ ವಿದ್ಯುತ್ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಬೀದಿಗಳಿಗೆ ನುಗ್ಗಿದ ನೆರೆ

ಚಂಡಮಾರುತ ಕಾರಣದಿಂದ ಮೇ 27ರಂದು ಭೀಕರ ಮಳೆಯಾಗಿದ್ದು, ಕೋಲ್ಕತ್ತಾದ ಹಲವು ಬೀದಿಗಳಿಗೆ ನೆರೆ ನೀರು ನುಗ್ಗಿದೆ. ಅನೇಕ ಕಡೆ ಗೋಡೆಗಳು ಕುಸಿದು ಬಿದ್ದಿದ್ದು, ಕನಿಷ್ಠ 52 ಮರಗಳು ಧರೆಗುರುಳಿವೆ. ಭಾನುವಾರ ಸುಮಾರು 50 ವಿಮಾನಗಳ ಹಾರಾಟವನ್ನು ನಿರ್ಬಂಧಿಸಲಾಗಿದ್ದು, ಸದ್ಯ ಸಂಚಾರ ಆರಂಭಿಸಿವೆ. ರೈಲು ಸಂಚಾರವನ್ನು ಪುನರಾರಂಭಿಸಲಾಗಿದೆ.

ಇದನ್ನೂ ಓದಿ: Cyclone Remal: ರೆಮಲ್‌ ಚಂಡ ಮಾರುತದ ಅಬ್ಬರ ಶುರು; ಬಾಂಗ್ಲಾದೇಶ, ಪ.ಬಂಗಾಳ ಸೇರಿದಂತೆ ಹಲವಡೆ ಭಾರೀ ಮಳೆ, ಭೂಕುಸಿತ ಸಾಧ್ಯತೆ

10 ಲಕ್ಷ ಮಂದಿಯ ಸ್ಥಳಾಂತರ

ಭಾರತ ಮತ್ತು ಬಾಂಗ್ಲಾದೇಶದ ಕನಿಷ್ಠ 10 ಲಕ್ಷ ಮಂದಿಯನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ʼʼನದಿ ನೀರಿನ ಮಟ್ಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳ ಜನರನ್ನು ನಿರಾಶ್ರಿತ ಶಿಬಿರಗಳಿಗೆ ಕರೆದೊಯ್ಯಲಾಗಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Continue Reading

ದೇಶ

Munnar Tour: ಪ್ರಕೃತಿಯ ನಡುವೆ ಅವಿತಿರುವ ಸೌಂದರ್ಯದ ಗಣಿ ಮುನ್ನಾರ್! ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು

ಪ್ರಕೃತಿಯ ನಡುವೆ ವಿಶ್ರಾಂತಿ ಬಯಸುವವರಿಗೆ ಮುನ್ನಾರ್ (Munnar Tour) ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ವಾರಾಂತ್ಯದ ವಿಹಾರದ ಆಯ್ಕೆಗಳನ್ನು ನೀಡುತ್ತವೆ. ಮುನ್ನಾರ್ ಪ್ರದೇಶದಲ್ಲಿ (Munnar Tour) ಕೆಲವು ಗುಪ್ತ ನಿಧಿಗಳಿದ್ದು ಅವುಗಳನ್ನು ಹುಡುಕಿಕೊಂಡು ಹೊರಟರೆ ಬದುಕಿನಲ್ಲಿ ಮತ್ತೊಮ್ಮೆ ಚೈತನ್ಯವನ್ನು ತುಂಬಿಕೊಂಡು ಮರಳಬಹುದು. ಮುನ್ನಾರ್ ಕುರಿತ ವಿಸ್ತೃತ ಪರಿಚಯ ಇಲ್ಲಿದೆ.

VISTARANEWS.COM


on

By

Munnar Tour
Koo

ಪ್ರಕೃತಿಯ ನಡುವೆ ಕಾಲ ಕಳೆಯುವುದು ಯಾರಿಗೆ ಇಷ್ಟವಿಲ್ಲ? ಕಚೇರಿ ಕೆಲಸದ ಜಂಜಾಟವನ್ನು ಬಿಟ್ಟು, ನಿತ್ಯದ ಓಡಾಟಕ್ಕೆ ಬ್ರೇಕ್ ಹಾಕಿ ಕೊಂಚ ಹೊತ್ತು ಪ್ರಕೃತಿಯ ಮಡಿಲಲ್ಲಿ ಹಾಯಾಗಿ ಕಳೆಯಬೇಕು ಎಂದರೆ ಭಾರತದ (india) ದಕ್ಷಿಣದ (south) ಕೇರಳ (kerala) ರಾಜ್ಯದಲ್ಲಿ ನೆಲೆಗೊಂಡಿರುವ ಪಶ್ಚಿಮ ಘಟ್ಟಗಳ (Western Ghats) ಕಾಡುಗಳಲ್ಲಿ ಅಡಗಿರುವ ಮುನ್ನಾರ್ ಗೆ (Munnar Tour) ಭೇಟಿ ನೀಡಬಹುದು.

ಚಹಾ ತೋಟಗಳಿಗೆ ಪ್ರಸಿದ್ಧವಾಗಿರುವ ಬೆಟ್ಟ, ಮಂಜು ಮತ್ತು ತಂಪಾದ ವಾತಾವರಣದಿಂದ ಮುಚ್ಚಲ್ಪಟ್ಟಿರುವ ಮುನ್ನಾರ್ ನಗರದಿಂದ ದೂರವಾಗಿ ಮನಸ್ಸಿನ ಶಾಂತಿಯನ್ನು ಹುಡುಕುವವರಿಗೆ ಆಕರ್ಷಕ ತಾಣವಾಗಿದೆ.
ಮುನ್ನಾರ್‌ಗೆ ಭೇಟಿ ನೀಡಿದರೆ ನಿಮ್ಮೊಳಗಿನ ಚೈತನ್ಯವು ಪುನರುಜ್ಜೀವನಗೊಳ್ಳುವುದು ಎಂಬುದರಲ್ಲಿ ಸಂದೇಹವಿಲ್ಲ. ಮುನ್ನಾರ್ ಸುತ್ತಮುತ್ತ ಅನೇಕ ತಾಣಗಳಿವೆ. ವಾರಾಂತ್ಯದ ಪ್ರವಾಸದ ವೇಳೆ ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಬೇಡಿ.


ಮರಯೂರು

ಮುನ್ನಾರ್‌ನಿಂದ ಕೆಲವು ಕಿಲೋ ಮೀಟರ್‌ಗಳಷ್ಟು ದೂರದಲ್ಲಿರುವ ಮರಯೂರ್ ಕಬ್ಬಿನ ಎಸ್ಟೇಟ್‌ಗಳು, ಶ್ರೀಗಂಧದ ಕಾಡುಗಳು ಮತ್ತು ಇತಿಹಾಸಪೂರ್ವ ಡಾಲ್ಮೆನ್‌ಗಳಿಗೆ ಹೆಸರುವಾಸಿಯಾದ ಸಣ್ಣ ಪಟ್ಟಣವಾಗಿದೆ. ನೈಸರ್ಗಿಕ ಅದ್ಭುತಗಳನ್ನು ಒಳಗೊಂಡಿರುವ ಮರಯೂರಿನಲ್ಲಿ ಸಂದರ್ಶಕರು ಬಿಡುವಿನ ವೇಳೆಯಲ್ಲಿ ಕಬ್ಬಿನ ಗದ್ದೆಗಳ ಉದ್ದಕ್ಕೂ ನಡೆಯಬಹುದು. ಶಿಲಾಯುಗದ ಪ್ರಾಚೀನ ಡಾಲ್ಮೆನ್‌ಗಳನ್ನು ಅನ್ವೇಷಿಸಲು ಅಥವಾ ಹತ್ತಿರದಲ್ಲಿರುವ ತೂವನಂ ಜಲಪಾತಗಳಿಗೆ ಭೇಟಿ ನೀಡಬಹುದು. ಅವುಗಳು ತಮ್ಮ ಸುತ್ತಲೂ ಅದ್ಭುತವಾದ ನೈಸರ್ಗಿಕ ಸೌಂದರ್ಯವನ್ನು ಹೊಂದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಬೆಲ್ಲ ಮಾಡುವುದು ಮರಯೂರಿನ ವಿಶೇಷತೆಗಳಲ್ಲಿ ಒಂದಾಗಿದೆ.


ದೇವಿಕುಲಂ

ಮುನ್ನಾರ್‌ನಿಂದ 7 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ದೇವಿಕುಲಂ ಒಂದು ಸುಂದರವಾದ ರೆಸಾರ್ಟ್ . ಇಲ್ಲಿ ಪ್ರಕೃತಿಯು ತನ್ನ ಎಲ್ಲಾ ಸೌಂದರ್ಯವನ್ನು ಹಚ್ಚ ಹಸಿರಿನ ಕಣಿವೆಗಳು ಮತ್ತು ಮೌನವಾದ ಸರೋವರಗಳೊಂದಿಗೆ ಬಾಚಿ ಕೊಟ್ಟಿದೆ. ದೇವಿಕುಲಂ ಸರೋವರದಲ್ಲಿ ಶಾಂತವಾದ ದೋಣಿ ವಿಹಾರವನ್ನು ಆನಂದಿಸಬಹುದು. ಚಹಾ ತೋಟಗಳೊಂದಿಗೆ ರೋಲಿಂಗ್ ಬೆಟ್ಟಗಳಿಂದ ಆವೃತವಾಗಿದೆ.

ಸೀತಾದೇವಿ ಸರೋವರವು ಹೆಚ್ಚು ದೂರದಲ್ಲಿಲ್ಲ. ಇದು ಸಮೃದ್ಧ ಖನಿಜಾಂಶದ ಕಾರಣದಿಂದಾಗಿ ಔಷಧೀಯ ಪ್ರಯೋಜನಗಳನ್ನು ಹೊಂದಿದೆ ಎನ್ನಲಾಗುತ್ತದೆ. ಸಾಹಸಿ ಪ್ರವಾಸಿಗರು ಹೇರಳವಾದ ವನ್ಯಜೀವಿಗಳಿಂದ ತುಂಬಿರುವ ಕಾಡುಗಳ ಮೂಲಕ ಟ್ರೆಕ್ಕಿಂಗ್ ಹೋಗಬಹುದು. ಜೊತೆಗೆ ರಾಕ್ ಕ್ಲೈಂಬಿಂಗ್ ಚಟುವಟಿಕೆಗಳಲ್ಲಿ ತೊಡಗಬಹುದು.


ಚಿನ್ನಕನಲ್

ಮುನ್ನಾರ್‌ನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಚಿನ್ನಕನಲ್ ಮಂಜಿನ ಬೆಟ್ಟಗಳ ನಡುವೆ ಇರುವ ಸುಂದರವಾದ ಹಳ್ಳಿಯಾಗಿದೆ. ಧುಮ್ಮಿಕ್ಕುವ ಜಲಪಾತಗಳು, ಸಾಂಬಾರ ತೋಟಗಳು ಮತ್ತು ಪಶ್ಚಿಮ ಘಟ್ಟಗಳ ರಮಣೀಯ ನೋಟವು ಚಿನ್ನಕನಾಲ್ ಅನ್ನು ಶಾಂತಿಯನ್ನು ಬಯಸುವವರಿಗೆ ಸ್ವರ್ಗವನ್ನಾಗಿ ಮಾಡುತ್ತದೆ. ಈ ಸ್ಥಳದ ಒಂದು ಆಕರ್ಷಣೆಯೆಂದರೆ ಅಟ್ಟುಕಲ್ ಜಲಪಾತಗಳು. ಇದು ಪ್ರಕೃತಿಯೊಂದಿಗೆ ಭವ್ಯವಾಗಿ ಬೆರೆತುಹೋಗಿದೆ. ವಿಶಾಲವಾಗಿ ಹರಡಿರುವ ಟೀ ಎಸ್ಟೇಟ್‌ಗಳು ಮತ್ತು ಮಸಾಲೆ ತೋಟಗಳು ಇಲ್ಲಿನ ಆಕರ್ಷಣೆಯಾಗಿದೆ.


ಆನಮುಡಿ ಶಿಖರ

ರೋಮಾಂಚನವನ್ನು ಬಯಸುವ ಸಾಹಸಪ್ರಿಯರಿಗೆ ಆನಮುಡಿ ಶಿಖರವನ್ನು ಹತ್ತುವುದು ಮುನ್ನಾರ್‌ನಲ್ಲಿನ ನಡೆಸಬಹುದಾದ ಚಟುವಟಿಕೆಗಳ ಪಟ್ಟಿಯ ಮೇಲ್ಭಾಗದಲ್ಲಿರಬೇಕು. ಆನಮುಡಿಯು ದಕ್ಷಿಣ ಭಾರತದ ಅತ್ಯುನ್ನತ ಶಿಖರವೆಂಬ ಬಿರುದನ್ನು ಪಡೆದ ಕಾರಣ, ಅದರ ಎತ್ತರದ ಮೇಲ್ಭಾಗದ ನೋಟವು ಅದರ ಸುತ್ತಲಿನ ವಿವಿಧ ಕಣಿವೆಗಳು, ಕಾಡುಗಳು ಮತ್ತು ತೊರೆಗಳನ್ನು ಬಹಿರಂಗಪಡಿಸುತ್ತದೆ. ಅಲ್ಲಿಗೆ ಚಾರಣ ಮಾಡುವುದು ದುರ್ಬಲ ಹೃದಯದ ಜನರಿಗೆ ಸಾಧ್ಯವಿಲ್ಲ. ಪರ್ವತಾರೋಹಿಗಳು ಇಲ್ಲಿ ಮಾತ್ರ ಕಂಡುಬರುವ ಸ್ಥಳೀಯ ಪ್ರಭೇದಗಳಾದ ನೀಲಗಿರಿ ತಾಹ್ರ್ ಸೇರಿದಂತೆ ವಿವಿಧ ರೀತಿಯ ಸಸ್ಯಗಳು ಮತ್ತು ಪ್ರಾಣಿಗಳನ್ನು ಕಾಣಬಹುದು.


ಟಾಪ್ ಸ್ಟೇಷನ್

ಟಾಪ್ ಸ್ಟೇಷನ್ ಮುನ್ನಾರ್ ನಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿರುವ ಒಂದು ಸುಂದರವಾದ ವ್ಯೂ ಪಾಯಿಂಟ್. ಸಮುದ್ರ ಮಟ್ಟದಿಂದ ಸರಿಸುಮಾರು 1,700 ಮೀಟರ್ ಎತ್ತರದಲ್ಲಿದೆ.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

ಈ ಸ್ಥಳವು ನಿಸರ್ಗ ಮತ್ತು ಛಾಯಾಗ್ರಹಣವನ್ನು ಇಷ್ಟಪಡುವ ಜನರಿಗೆ ಬಹಳ ಪ್ರಿಯವಾಗುವುದು. ಇಲ್ಲಿಂದ ಪಶ್ಚಿಮ ಘಟ್ಟಗಳ ವಿಹಂಗಮ ನೋಟಗಳನ್ನು ಆನಂದಿಸಬಹುದು. ಅವುಗಳ ವಿಶಾಲತೆ ಮತ್ತು ತಮಿಳುನಾಡಿನ ಬಯಲು ಪ್ರದೇಶಗಳನ್ನು ಕಾಣಬಹುದು. ಈ ವ್ಯೂಪಾಯಿಂಟ್‌ನ ಹೆಸರು ಹಳೆಯ ರೋಪ್‌ವೇ ನಿಲ್ದಾಣದಿಂದ ಹುಟ್ಟಿಕೊಂಡಿದೆ. ಇದನ್ನು ಮುನ್ನಾರ್‌ನಿಂದ ಕೆಳಗಿನ ತಗ್ಗು ಪ್ರದೇಶಗಳಿಗೆ ಚಹಾವನ್ನು ಸಾಗಿಸಲು ಬಳಸಲಾಗುತ್ತಿತ್ತು. ಹತ್ತಿರದ ಅಂಗಡಿಗಳಿಂದ ಬಿಸಿ ಬಿಸಿ ಚಹಾದ ಸವಿಯನ್ನು ಸವಿಯಬಹುದು.

Continue Reading
Advertisement
Veer Savarkar flyover
ಕರ್ನಾಟಕ1 min ago

Veer Savarkar flyover: ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಮಸಿ; ಎನ್‌ಎಸ್‌ಯುಐ ಕಾರ್ಯಕರ್ತರು ವಶಕ್ಕೆ

T20 World Cup 2024
ಕ್ರೀಡೆ24 mins ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಸಿಕ್ಸರ್​ ಬಾರಿಸಿದ ಭಾರತದ ಬ್ಯಾಟರ್​ಗಳಿವರು

Viral Video
ವೈರಲ್ ನ್ಯೂಸ್25 mins ago

Viral Video: ವಿಮಾನದ ರೆಕ್ಕೆ ಮೇಲೆ ನಡೆದುಕೊಂಡು ಹೊರ ಬಂದ ಪ್ರಯಾಣಿಕರು; ವೈರಲಾಯ್ತು ವಿಡಿಯೋ

self harming chandrashekar ವಾಲ್ಮೀಕಿ
ಪ್ರಮುಖ ಸುದ್ದಿ30 mins ago

ವಾಲ್ಮೀಕಿ ನಿಗಮ ಅಧೀಕ್ಷಕ ಆತ್ಮಹತ್ಯೆ ಪ್ರಕರಣ: ಮೂವರ ಮೇಲೆ ಎಫ್‌ಐಆರ್; ಡೆತ್‌ ನೋಟ್‌ನಲ್ಲಿರುವ ಸಚಿವ ಯಾರು?

Chetan and Naveen gowda
ಕರ್ನಾಟಕ43 mins ago

Prajwal Revanna Case: ಪೆನ್ ಡ್ರೈವ್ ಹಂಚಿಕೆ ಪ್ರಕರಣ; ಚೇತನ್, ನವೀನ್ ಗೌಡ ಎಸ್ಐಟಿ ವಶಕ್ಕೆ

Pushpa 2
ಸಿನಿಮಾ1 hour ago

Pushpa 2: ʼಪುಷ್ಪ 2ʼ ಸಿನಿಮಾ ತಂಡದಿಂದ ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; ಎರಡನೇ ಹಾಡು ರಿಲೀಸ್‌ಗೆ ಮುಹೂರ್ತ ಫಿಕ್ಸ್‌

Traffic Violation Case filed against driver if petrol runs out and vehicle stops on road
ಬೆಂಗಳೂರು1 hour ago

Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!

Aravind Kejriwal
ದೇಶ1 hour ago

Arvind Kejriwal: ಕೇಜ್ರಿವಾಲ್‌ಗೆ ಮತ್ತೆ ಹಿನ್ನಡೆ; ಜಾಮೀನು ವಿಸ್ತರಣೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

Success Story
ಕೃಷಿ2 hours ago

Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!

Radhika Pandit
ಸ್ಯಾಂಡಲ್ ವುಡ್2 hours ago

Radhika Pandit: ಅಭಿಮಾನಿಗಳ ಪ್ರಶ್ನೆ ಎದುರಿಸಲು ನಟಿ ರಾಧಿಕಾ ಪಂಡಿತ್ ಸಿದ್ಧ; ಹೊಸ ಸಿನಿಮಾ ಘೋಷಿಸ್ತಾರಾ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ21 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌