Site icon Vistara News

Kantara | ಚೇತನ್‌ ಹೇಳಿಕೆ ಚೀಪ್‌ ಪಬ್ಲಿಸಿಟಿ ಅಷ್ಟೆ: ಹಿಂದುತ್ವ, ಬ್ರಾಹ್ಮಣತ್ವ ಒಂದೇ ಎಂದ ಪೇಜಾವರ ಶ್ರೀಗಳು

Pejavara sri

ಮಂಡ್ಯ: ಕಾಂತಾರ ಸಿನಿಮಾದ ಚರ್ಚೆ ನಡೆಸುವ ವೇಳೆ ಭೂತಾರಾಧನೆ ಹಿಂದು ಸಂಸ್ಕೃತಿಯಲ್ಲ ಎಂದು ಚಿತ್ರ ನಟ ಚೇತನ್‌ ಅಹಿಂಸಾ ಹೇಳಿದ್ದನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಆಕ್ಷೇಪಿಸಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿರುವ ಪ್ರಸಿದ್ಧ ಹೊಳೆ ಆಂಜನೇಯ ಸ್ವಾಮಿ‌ ದೇವಾಲಯಕ್ಕೆ ಆಗಮಿಸಿದ್ದ ಶ್ರೀಗಳು ಚೇತನ್‌ ಅವರು ಅಗ್ಗದ ಪ್ರಚಾರಕ್ಕಾಗಿ ಇಂಥ ಹೇಳಿಕೆಗಳನ್ನು ನೀಡಿದ್ದಾರೆ ಎಂದರು. ಅವರು ಪ್ರಚಾರಕ್ಕಾಗಿ ಹೇಳಿರುವುದರಿಂದ ನಾವು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಎಂದರು.

ʻʻಅವರವರ ನಂಬಿಕೆ ಆಚರಣೆಗಳನ್ನು ವಿರೋಧಿಸುವುದು ತಪ್ಪು. ಅವರು ಯಾವ ನೆಲೆಯಲ್ಲಿ ಮಾತನಾಡಿದ್ದಾರೋ ನನಗೆ ಅರ್ಥವಾಗಿಲ್ಲ. ಅವರವರು ನೋಡುವ ದೃಷ್ಟಿಕೋನದಲ್ಲಿ ಎಲ್ಲಾ ಅಡಗಿರುತ್ತದೆʼʼ ಎಂದು ಹೇಳಿದ ಶ್ರೀಗಳು, ʻʻಹಿಂದುತ್ವ ಹಾಗೂ ಬ್ರಾಹ್ಮಣತ್ವ ಬೇರೆ ಬೇರೆ ಅಲ್ಲ. ಹಿಂದುತ್ವ ವಿಶಾಲವಾದದ್ದು. ಅದರೊಳಗೆ ಬ್ರಾಹ್ಮಣತ್ವವೂ ಬರುತ್ತದೆʼʼ ಎಂದರು.

ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀಗಳನ್ನು ದೇವಾಲಯದ ಅರ್ಚಕರು ಗೌರವಿಸಿದರು. ದೇವರ ದರ್ಶನ ಬಳಿಕ ಭಕ್ತರು ಹಾಗೂ ಆಡಳಿತ ಮಂಡಳಿಯ ಜೊತೆ ಮಾತುಕತೆ ನಡೆಸಿದ ವಿಶ್ವ ಪ್ರಸನ್ನ ತೀರ್ಥರು, ʻʻದೇವಸ್ಥಾನದ ಆವರಣದಲ್ಲಿ ಜಲಮೂಲವಿದೆ. ಉಸಿರಿರುವ ಈ ಸ್ಥಳವನ್ನು ಸರ್ಕಾರ ವಿಶೇಷ ಅನುಧಾನದಲ್ಲಿ ಅಭಿವೃದ್ಧಿ ಪಡಿಸಬೇಕು. ಸರ್ಕಾರ ಕೂಡಲೆ ಕ್ರಮ ಕೈಗೊಂಡು ಅಭಿವೃದ್ಧಿ ಪಡಿಸಲಿʼʼ ಎಂದು ಮನವಿ ಮಾಡಿದರು.

ಇದನ್ನೂ ಓದಿ | Kantara Movie | ನಟ ಚೇತನ್‌ ಮೇಲೆ ಮತ್ತೊಂದು ಕೇಸ್‌; ಭೂತಕೋಲ ಹಿಂದು ಸಂಸ್ಕೃತಿಯಲ್ಲವೆಂದಿದ್ದಕ್ಕೆ ವಿರೋಧ

Exit mobile version