Site icon Vistara News

Shravana 2024: ಶ್ರಾವಣ ಉಪವಾಸದ ವೇಳೆ ಈ 5 ಪಾನೀಯ ಆರೋಗ್ಯಕರ

Shravana 2024

ದೇಶಾದ್ಯಂತ ಅತ್ಯಂತ ಭಕ್ತಿ ಮತ್ತು ಸಂತೋಷದಿಂದ (Shravana 2024) ಆಚರಿಸಲಾಗುವ ಶ್ರಾವಣ ಮಾಸ (Shravana Masa) ಹಿಂದೂ ಚಂದ್ರನ ಕ್ಯಾಲೆಂಡರ್‌ನಲ್ಲಿ (Hindu Lunar calendar) ಪವಿತ್ರವಾದ ತಿಂಗಳು (sacred month). ಇದು ಸಾಂಸ್ಕೃತಿಕ ಚೈತನ್ಯ ಮತ್ತು ಧಾರ್ಮಿಕ ಮಹತ್ವಕ್ಕಾಗಿ ಹೆಸರುವಾಸಿಯಾಗಿದೆ. ಇಂದಿನಿಂದ (ಆ.5) ಶ್ರಾವಣ ಮಾಸ ಆರಂಭ. ಬಹುತೇಕ ಹಿಂದೂಗಳು ಈ ತಿಂಗಳು ಪೂರ್ತಿ ದೇವರ ಪೂಜೆ, ಧ್ಯಾನ, ಜಪ, ತಪಗಳಲ್ಲಿ ನಿರತರಾಗುತ್ತಾರೆ. ಹೆಚ್ಚಿನವರು ಸೋಮವಾರ, ಮಂಗಳವಾರ, ಶುಕ್ರವಾರ, ಶನಿವಾರದಂದು ಉಪವಾಸ ವ್ರತ ಕೈಗೊಳ್ಳುತ್ತಾರೆ.

ಶ್ರಾವಣ ಮಾಸ ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾಗಿದೆ. ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಆಚರಣೆಗಳಲ್ಲಿ ಉಪವಾಸವೂ ಒಂದಾಗಿದೆ. ಶಿವ ಭಕ್ತರು ಶಿವನ ಆಶೀರ್ವಾದ ಪಡೆಯಲು ಈ ತಿಂಗಳ ಪ್ರತಿ ಸೋಮವಾರ ಉಪವಾಸವನ್ನು ಆಚರಿಸುತ್ತಾರೆ.

ಜನರು ಈ ಸಂದರ್ಭದಲ್ಲಿ ಮಾಂಸಾಹಾರಿ ಆಹಾರಗಳು, ಈರುಳ್ಳಿ, ಬೆಳ್ಳುಳ್ಳಿ ಸೇವನೆಯನ್ನು ತ್ಯಜಿಸುತ್ತಾರೆ.
ಉಪವಾಸದೊಂದಿಗೆ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗಿರುತ್ತದೆ. ದೇವರ ಧ್ಯಾನ, ಪೂಜೆಯಲ್ಲಿ ನಿರತರಾಗಿರುವಾಗ ದೇಹದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಉಪವಾಸದ ಸಮಯದಲ್ಲಿ ಸೇವಿಸಬಹುದಾದ ಕೆಲವು ಆರೋಗ್ಯಕರ ಪಾನೀಯಗಳು ಇಲ್ಲಿವೆ.

Shravana Masa


ಎಳನೀರು

ತೆಂಗಿನ ನೀರು ಉಪವಾಸ ನಿರತರಿಗೆ ಅತ್ಯತ್ತಮ ಆಯ್ಕೆಯಾಗಿದೆ. ಇದು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬನ್ನು ಹೊಂದಿದ್ದು, ಡಿಟಾಕ್ಸ್ ಪಾನೀಯವಾಗಿದೆ. ತೆಂಗಿನ ನೀರಿನಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್, ಕಾರ್ಬೋಹೈಡ್ರೇಟ್‌ ಮತ್ತು ಸಕ್ಕರೆಯ ಅದ್ಭುತ ಮೂಲವಾಗಿದೆ. ಇದು ಆರೋಗ್ಯಕರ ದೇಹದ ಬೆಳವಣಿಗೆಗೆಯನ್ನು ಉತ್ತೇಜಿಸುತ್ತದೆ.

Shravana Masa


ಸೌತೆಕಾಯಿ ಪುದೀನಾ ರಸ

ಶೇ. 95ಕ್ಕಿಂತ ಹೆಚ್ಚು ನೀರನ್ನು ಹೊಂದಿರುವ ಸೌತೆಕಾಯಿ ಪೌಷ್ಟಿಕಾಂಶದಿಂದ ತುಂಬಿರುವ ಸಮೃದ್ಧ ಆಹಾರ. ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಉಪವಾಸ ನಿರತರು ಇದನ್ನು ಸೇವಿಸಬಹುದು. ಅಗತ್ಯ ಜೀವಸತ್ವ, ಖನಿಜಾಂಶಗಳು ಸೌತೆಕಾಯಿಗಳಲ್ಲಿ ಹೇರಳವಾಗಿವೆ.


ನಿಂಬೆ ನೀರು

ಉಪವಾಸದ ಸಮಯದಲ್ಲಿ ಸೇವಿಸುವ ಆರೋಗ್ಯಕರ ಪಾನೀಯವೆಂದರೆ ನಿಂಬೆ ನೀರು. ಶ್ರಾವಣ ಮಾಸದಲ್ಲಿ ಉಪವಾಸ ನಿರತರಾಗಿರುವವರು ನಿಂಬೆ ರಸ ಅಥವಾ ನಿಂಬೆ ಪಾನಕವನ್ನು ಕುಡಿಯುವುದು ಹೈಡ್ರೇಟೆಡ್ ಆಗಿರಲು ಮತ್ತು ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ಕೊಡಲು ಇದು ಸಹಾಯ ಮಾಡುತ್ತದೆ.


ಹಣ್ಣಿನ ರಸಗಳು

ಸೇಬು, ಕಿತ್ತಳೆ, ದಾಳಿಂಬೆ ಮತ್ತು ಇತರ ತಾಜಾ ಹಣ್ಣುಗಳನ್ನು ಜ್ಯೂಸ್ ಮಾಡಿ ಉಪವಾಸ ನಿರತರು ದಿನವಿಡೀ ಸೇವಿಸಬಹುದು. ಇದು ದೇಹವನ್ನು ಹೈಡ್ರೀಕರಿಸುವುದರ ಜೊತೆಗೆ ತಾಜಾ ಹಣ್ಣಿನ ರಸಗಳು ದೇಹದ ಆರೋಗ್ಯಕ್ಕೆ ಬೇಕಾದ ಪ್ರಮುಖ ಪೋಷಕಾಂಶಗಳನ್ನು ಪೂರೈಸುತ್ತವೆ.

ಇದನ್ನೂ ಓದಿ: Health Tips: ಪಾದಗಳ ಊತ, ನೋವನ್ನು ಕಡಿಮೆ ಮಾಡಲು ಇಲ್ಲಿದೆ ಸರಳ ಉಪಾಯ

Shravana Masa


ಚಿಯಾ ಬೀಜಗಳು

ಚಿಯಾ ಬೀಜದ ನೀರು ಅನೇಕ ಗಮನಾರ್ಹವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಉಪವಾಸದ ದಿನವನ್ನು ಪ್ರಾರಂಭಿಸಲು ತುಂಬಾ ಆರೋಗ್ಯಕರ ಮಾರ್ಗವಾಗಿದೆ. ಉತ್ಕರ್ಷಣ ನಿರೋಧಕಗಳು, ಖನಿಜಗಳು, ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಸಮೃದ್ಧಿಯಿಂದಾಗಿ, ಚಿಯಾ ಬೀಜಗಳು ದೇಹವನ್ನು ನಿರ್ಜಲೀಕರಣಗೊಳ್ಳದಂತೆತಡೆಯುತ್ತದೆ. ಹೆಚ್ಚು ಗಂಟೆಗಳ ಕಾಲ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ.

Exit mobile version