Site icon Vistara News

Krishna janmastami: ಕೃಷ್ಣ ಜನ್ಮಾಷ್ಟಮಿಯ ಫೋಟೋಶೂಟ್‌‌ಗೆ ಇಲ್ಲಿದೆ 4 ಐಡಿಯಾ

Here are 4 ideas for krishna janmashtami photoshoot

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೃಷ್ಣಜನ್ಮಾಷ್ಟಮಿ (Krishna janmastami) ಸಮೀಪಿಸುತ್ತಿದೆ. ಆಗಲೇ ಎಲ್ಲೆಡೆ ಕೃಷ್ಣನ ನಾನಾ ಅವತಾರಗಳ ಫೋಟೋಶೂಟ್‌ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಪರಿಣಾಮ, ಎಲ್ಲೆಡೆ ಕೃಷ್ಣಜನ್ಮಾಷ್ಟಮಿ ಥೀಮ್‌ ಫೋಟೋಶೂಟ್‌ ಟ್ರೆಂಡಿಯಾಗಿದೆ.

ಕೃಷ್ಣನ ಅವತಾರಕ್ಕೂ ಫೋಟೋಶೂಟ್‌ :

“ಪ್ರತಿ ಮನೆಯಲ್ಲೂ ಮಕ್ಕಳಿಗೆ ಒಮ್ಮೆಯಾದರೂ ಸರಿಯೇ! ಕೃಷ್ಣ ಅಥವಾ ರಾಧೆಯ ಅವತಾರವನ್ನು ಹಾಕಿಸಿರುತ್ತಾರೆ. ಫೋಟೋ ತೆಗೆಸಿ ಸಂತಸ ಪಟ್ಟಿರುತ್ತಾರೆ. ಬಾಲ ಕೃಷ್ಣನಿಂದಿಡಿದು ರಾಧಾ-ಕೃಷ್ಣನಂತೆ ಫೋಟೋಶೂಟ್‌ ಮಾಡಿಸುವುದು ಹೆಚ್ಚಾಗಿದೆ. ಈ ಕಾನ್ಸೆಪ್ಟ್ ಇದೀಗ ಮತ್ತಷ್ಟು ಬೆಳವಣಿಗೆ ಕಂಡಿದೆ. ಚಿಣ್ಣರಿಗೆ ಮಾತ್ರವಲ್ಲ, ಇದೀಗ ಟೀನೇಜ್‌ ಹುಡುಗ-ಹುಡುಗಿಯರು ಕೂಡ ರಾಧಾ-ಕೃಷ್ಣರ ಫೋಟೋಶೂಟ್‌ ಮಾಡಿಸಲಾರಂಭಿಸಿದ್ದಾರೆ.

ಇದಕ್ಕೆ ಪೂರಕ ಎಂಬಂತೆ, ಪೌರಾಣಿಕ ಹಿನ್ನೆಲೆಯ ಫೋಟೋಶೂಟ್‌ ಮಾಡುವ ಫೋಟೋಗ್ರಾಫರ್ಸ್ ಕೂಡ ಸುಲಭವಾಗಿ ದೊರೆಯುತ್ತಿದ್ದಾರೆ. ಪ್ರಿ ಹಾಗೂ ವೆಡ್ಡಿಂಗ್‌ ಶೂಟ್‌ ಮಾಡುವವರು ಒಂದು ಹೆಜ್ಜೆ ಮುಂದೆ ಹೋಗಿ, ಈ ಕಾನ್ಸೆಪ್ಟ್ಗಳಿಗೂ ಫೋಟೋಶೂಟ್‌ ಮಾಡಿಕೊಡುತ್ತಿದ್ದಾರೆ. ಹಾಗಾಗಿ ಕೃಷ್ಣಜನ್ಮಾಷ್ಟಮಿಯ ಫೋಟೋಶೂಟ್‌ ಇತ್ತೀಚೆಗೆ ಹೆಚ್ಚಾಗಿದೆ ಎನ್ನುತ್ತಾರೆ ಫೋಟೋಗ್ರಾಫರ್‌ .

ಜನ್ಮಾಷ್ಟಮಿ ಫೋಟೋಶೂಟ್‌ ಪ್ಯಾಕೇಜ್‌ :

ಪ್ರತಿ ವರ್ಷವೂ ಕೃಷ್ಣನ ಫೋಟೋಶೂಟ್‌ಗಾಗಿಯೇ ಸಾಕಷ್ಟು ಸ್ಟುಡಿಯೋಗಳು ಪ್ಯಾಕೇಜ್‌ ರೀತಿಯಲ್ಲಿ ಸೌಲಭ್ಯಗಳನ್ನು ನೀಡುತ್ತವೆ. ಅಲ್ಲದೇ ಕೃಷ್ಣನ ಅಲಂಕಾರಕ್ಕೆ ಬೇಕಾಗಿರುವ ಎಲ್ಲಾ ಬಗೆಯ ಅಲಂಕಾರಿಕ ಸಾಮಗ್ರಿಗಳನ್ನು ಒದಗಿಸುತ್ತವೆ. ಅಷ್ಟೇಕೆ? ಈ ಪ್ಯಾಕೇಜ್‌ನಲ್ಲಿ ಫೋಟೋಗ್ರಾಫರ್‌ನಿಂದಿಡಿದು, ಬಾಡಿಗೆಗೆ ಫೋಟೋ ಕ್ಲಿಕ್ಕಿಸುವ ಸ್ಥಳ ಅಂದರೇ, ಸ್ಟಾಟ್‌ ಸೇರಿದಂತೆ ಎಲ್ಲವನ್ನೂ ಪ್ಯಾಕೇಜ್‌ಗೆ ತಕ್ಕಂತೆ ಒದಗಿಸುತ್ತವೆ. ಹಣ ನೀಡಿದರಾಯಿತಷ್ಟೇ! ಎನ್ನುತ್ತಾರೆ ಬಾಲಕೃಷ್ಣನ ಫೋಟೋಶೂಟ್‌ ಮಾಡಿಸಿದ ಪೋಷಕರಾದ ಕಿರಣ್‌ ಹಾಗೂ ಲಕ್ಷ್ಮಿ.

ಕೃಷ್ಣ ಜನ್ಮಾಷ್ಟಮಿ ಫೋಟೋಶೂಟ್‌ಗೆ 4 ಐಡಿಯಾ :

· ಆನ್‌ಲೈನ್‌ನಲ್ಲೂ ಸಾಕಷ್ಟು ಫೋಟೋ ಸ್ಟುಡಿಯೋಗಳು ಬಜೆಟ್‌ ಫ್ರೆಂಡ್ಲಿ ಜನ್ಮಾಷ್ಟಮಿ ಫೋಟೋಶೂಟ್‌ ಪ್ಯಾಕೇಜ್‌ ನೀಡುತ್ತವೆ ಉಪಯೋಗಿಸಿಕೊಳ್ಳಿ.
· ಆಯಾ ವಯಸ್ಸಿಗೆ ತಕ್ಕಂತೆ ಥೀಮ್‌ ಆಯ್ಕೆ ಮಾಡಿ, ಸ್ಟೈಲಿಂಗ್‌ ಮಾಡಿ.
· ಫೋಟೋ ಕಾಂಪಿಟೇಷನ್‌ಗೆ ಕಳುಹಿಸುವುದಾದಲ್ಲಿ, ಪ್ರೊಫೆಷನಲ್‌ ಫೋಟೋಗ್ರಾಫಿ ಮಾಡಿಸಿ.
· ನೀವೇ ಖುದ್ದು ಫೋಟೋಶೂಟ್‌ ಮಾಡುವುದಾದಲ್ಲಿ ಬಾಡಿಗೆಗೆ
ಔಟ್‌ಫಿಟ್ಸ್ ಪಡೆದು ಮಾಡಿ. ಖರ್ಚು ಕಡಿಮೆಯಾಗುವುದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version