Krishna janmastami: ಕೃಷ್ಣ ಜನ್ಮಾಷ್ಟಮಿಯ ಫೋಟೋಶೂಟ್‌‌ಗೆ ಇಲ್ಲಿದೆ 4 ಐಡಿಯಾ - Vistara News

ಶ್ರೀ ಕೃಷ್ಣ ಜನ್ಮಾಷ್ಟಮಿ

Krishna janmastami: ಕೃಷ್ಣ ಜನ್ಮಾಷ್ಟಮಿಯ ಫೋಟೋಶೂಟ್‌‌ಗೆ ಇಲ್ಲಿದೆ 4 ಐಡಿಯಾ

Krishna janmastami: ಇನ್ನೇನು ಕೃಷ್ಣಜನ್ಮಾಷ್ಟಮಿ ಸಮೀಪಿಸುತ್ತಿದೆ. ಆಗಲೇ ಎಲ್ಲೆಡೆ ಬಾಲಗೋಪಾಲನ ನಾನಾ ಅವತಾರಗಳ ಫೋಟೋಶೂಟ್‌ಗಳು ಆರಂಭಗೊಂಡಿದೆ. ಮುದ್ದು ಬೆಣ್ಣೆ ಕೃಷ್ಣನಿಂದಿಡಿದು, ರಾಧಾ-ಕೃಷ್ಣರ ಅಂದದ ಪೋಟ್ರೈಟ್‌ಗಳಿಗೆ ಮಾನ್ಯತೆ ಹೆಚ್ಚಾಗಿದೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Here are 4 ideas for krishna janmashtami photoshoot
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೃಷ್ಣಜನ್ಮಾಷ್ಟಮಿ (Krishna janmastami) ಸಮೀಪಿಸುತ್ತಿದೆ. ಆಗಲೇ ಎಲ್ಲೆಡೆ ಕೃಷ್ಣನ ನಾನಾ ಅವತಾರಗಳ ಫೋಟೋಶೂಟ್‌ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಪರಿಣಾಮ, ಎಲ್ಲೆಡೆ ಕೃಷ್ಣಜನ್ಮಾಷ್ಟಮಿ ಥೀಮ್‌ ಫೋಟೋಶೂಟ್‌ ಟ್ರೆಂಡಿಯಾಗಿದೆ.

Here are 4 ideas for krishna janmashtami photoshoot
Here are 4 ideas for krishna janmashtami photoshoot

ಕೃಷ್ಣನ ಅವತಾರಕ್ಕೂ ಫೋಟೋಶೂಟ್‌ :

“ಪ್ರತಿ ಮನೆಯಲ್ಲೂ ಮಕ್ಕಳಿಗೆ ಒಮ್ಮೆಯಾದರೂ ಸರಿಯೇ! ಕೃಷ್ಣ ಅಥವಾ ರಾಧೆಯ ಅವತಾರವನ್ನು ಹಾಕಿಸಿರುತ್ತಾರೆ. ಫೋಟೋ ತೆಗೆಸಿ ಸಂತಸ ಪಟ್ಟಿರುತ್ತಾರೆ. ಬಾಲ ಕೃಷ್ಣನಿಂದಿಡಿದು ರಾಧಾ-ಕೃಷ್ಣನಂತೆ ಫೋಟೋಶೂಟ್‌ ಮಾಡಿಸುವುದು ಹೆಚ್ಚಾಗಿದೆ. ಈ ಕಾನ್ಸೆಪ್ಟ್ ಇದೀಗ ಮತ್ತಷ್ಟು ಬೆಳವಣಿಗೆ ಕಂಡಿದೆ. ಚಿಣ್ಣರಿಗೆ ಮಾತ್ರವಲ್ಲ, ಇದೀಗ ಟೀನೇಜ್‌ ಹುಡುಗ-ಹುಡುಗಿಯರು ಕೂಡ ರಾಧಾ-ಕೃಷ್ಣರ ಫೋಟೋಶೂಟ್‌ ಮಾಡಿಸಲಾರಂಭಿಸಿದ್ದಾರೆ.

Here are 4 ideas for krishna janmashtami photoshoot
Here are 4 ideas for krishna janmashtami photoshoot

ಇದಕ್ಕೆ ಪೂರಕ ಎಂಬಂತೆ, ಪೌರಾಣಿಕ ಹಿನ್ನೆಲೆಯ ಫೋಟೋಶೂಟ್‌ ಮಾಡುವ ಫೋಟೋಗ್ರಾಫರ್ಸ್ ಕೂಡ ಸುಲಭವಾಗಿ ದೊರೆಯುತ್ತಿದ್ದಾರೆ. ಪ್ರಿ ಹಾಗೂ ವೆಡ್ಡಿಂಗ್‌ ಶೂಟ್‌ ಮಾಡುವವರು ಒಂದು ಹೆಜ್ಜೆ ಮುಂದೆ ಹೋಗಿ, ಈ ಕಾನ್ಸೆಪ್ಟ್ಗಳಿಗೂ ಫೋಟೋಶೂಟ್‌ ಮಾಡಿಕೊಡುತ್ತಿದ್ದಾರೆ. ಹಾಗಾಗಿ ಕೃಷ್ಣಜನ್ಮಾಷ್ಟಮಿಯ ಫೋಟೋಶೂಟ್‌ ಇತ್ತೀಚೆಗೆ ಹೆಚ್ಚಾಗಿದೆ ಎನ್ನುತ್ತಾರೆ ಫೋಟೋಗ್ರಾಫರ್‌ .

Here are 4 ideas for krishna janmashtami photoshoot

ಜನ್ಮಾಷ್ಟಮಿ ಫೋಟೋಶೂಟ್‌ ಪ್ಯಾಕೇಜ್‌ :

ಪ್ರತಿ ವರ್ಷವೂ ಕೃಷ್ಣನ ಫೋಟೋಶೂಟ್‌ಗಾಗಿಯೇ ಸಾಕಷ್ಟು ಸ್ಟುಡಿಯೋಗಳು ಪ್ಯಾಕೇಜ್‌ ರೀತಿಯಲ್ಲಿ ಸೌಲಭ್ಯಗಳನ್ನು ನೀಡುತ್ತವೆ. ಅಲ್ಲದೇ ಕೃಷ್ಣನ ಅಲಂಕಾರಕ್ಕೆ ಬೇಕಾಗಿರುವ ಎಲ್ಲಾ ಬಗೆಯ ಅಲಂಕಾರಿಕ ಸಾಮಗ್ರಿಗಳನ್ನು ಒದಗಿಸುತ್ತವೆ. ಅಷ್ಟೇಕೆ? ಈ ಪ್ಯಾಕೇಜ್‌ನಲ್ಲಿ ಫೋಟೋಗ್ರಾಫರ್‌ನಿಂದಿಡಿದು, ಬಾಡಿಗೆಗೆ ಫೋಟೋ ಕ್ಲಿಕ್ಕಿಸುವ ಸ್ಥಳ ಅಂದರೇ, ಸ್ಟಾಟ್‌ ಸೇರಿದಂತೆ ಎಲ್ಲವನ್ನೂ ಪ್ಯಾಕೇಜ್‌ಗೆ ತಕ್ಕಂತೆ ಒದಗಿಸುತ್ತವೆ. ಹಣ ನೀಡಿದರಾಯಿತಷ್ಟೇ! ಎನ್ನುತ್ತಾರೆ ಬಾಲಕೃಷ್ಣನ ಫೋಟೋಶೂಟ್‌ ಮಾಡಿಸಿದ ಪೋಷಕರಾದ ಕಿರಣ್‌ ಹಾಗೂ ಲಕ್ಷ್ಮಿ.

Here are 4 ideas for krishna janmashtami photoshoot

ಕೃಷ್ಣ ಜನ್ಮಾಷ್ಟಮಿ ಫೋಟೋಶೂಟ್‌ಗೆ 4 ಐಡಿಯಾ :

· ಆನ್‌ಲೈನ್‌ನಲ್ಲೂ ಸಾಕಷ್ಟು ಫೋಟೋ ಸ್ಟುಡಿಯೋಗಳು ಬಜೆಟ್‌ ಫ್ರೆಂಡ್ಲಿ ಜನ್ಮಾಷ್ಟಮಿ ಫೋಟೋಶೂಟ್‌ ಪ್ಯಾಕೇಜ್‌ ನೀಡುತ್ತವೆ ಉಪಯೋಗಿಸಿಕೊಳ್ಳಿ.
· ಆಯಾ ವಯಸ್ಸಿಗೆ ತಕ್ಕಂತೆ ಥೀಮ್‌ ಆಯ್ಕೆ ಮಾಡಿ, ಸ್ಟೈಲಿಂಗ್‌ ಮಾಡಿ.
· ಫೋಟೋ ಕಾಂಪಿಟೇಷನ್‌ಗೆ ಕಳುಹಿಸುವುದಾದಲ್ಲಿ, ಪ್ರೊಫೆಷನಲ್‌ ಫೋಟೋಗ್ರಾಫಿ ಮಾಡಿಸಿ.
· ನೀವೇ ಖುದ್ದು ಫೋಟೋಶೂಟ್‌ ಮಾಡುವುದಾದಲ್ಲಿ ಬಾಡಿಗೆಗೆ
ಔಟ್‌ಫಿಟ್ಸ್ ಪಡೆದು ಮಾಡಿ. ಖರ್ಚು ಕಡಿಮೆಯಾಗುವುದು.

Here are 4 ideas for krishna janmashtami photoshoot
Here are 4 ideas for krishna janmashtami photoshoot

( ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಫ್ಯಾಷನ್

krishna janmashtami 2024: ಹೀಗಿತ್ತು ಸೆಲೆಬ್ರಿಟಿಗಳ ಕೃಷ್ಣ ಜನ್ಮಾಷ್ಟಮಿ ಸಂಭ್ರಮ!

krishna janmashtami 2024:ರಾಷ್ಟ್ರಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದಕ್ಕೆ ಸೆಲೆಬ್ರೆಟಿಗಳು ಕೂಡ ಹೊರತಾಗಿಲ್ಲ! ತಮ್ಮ ಮಕ್ಕಳನ್ನು ಕೃಷ್ಣ-ರಾಧೆಯಂತೆ ಸಿಂಗರಿಸಿ ಸೆಲೆಬ್ರೇಟ್‌ ಮಾಡಿದ್ದಾರೆ. ಇನ್ನು, ಕೆಲವರು ತಮ್ಮ ಬಾಲ್ಯದ ಕೃಷ್ಣನ ಪೋಟೋಗಳನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Krishna Janmastami 2024
ಚಿತ್ರ ಕೃಪೆ : ಇನ್ಸ್‌ಟಾಗ್ರಾಮ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಷ್ಟ್ರದಾದ್ಯಂತ ಎಲ್ಲೆಡೆ ಕೃಷ್ಣ ಜನ್ಮಾಷ್ಟಮಿಯನ್ನು (krishna janmashtami 2024) ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಾಮಾನ್ಯ ಜನರಿಂದಿಡಿದು, ಸೆಲೆಬ್ರೆಟಿಗಳು ಕೂಡ ಗೋಕುಲಾಷ್ಟಮಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಕೆಲವರು, ತಮ್ಮ ಮಕ್ಕಳನ್ನು ಕೃಷ್ಣ-ರಾಧೆಯಂತೆ ಸಿಂಗರಿಸಿ, ಸೆಲೆಬ್ರೇಟ್‌ ಮಾಡಿದ್ದಾರೆ. ಇನ್ನು, ಕೆಲವರು ತಮ್ಮ ಬಾಲ್ಯದಲ್ಲಿನ ಕೃಷ್ಣನ ಪೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡರೇ, ಮತ್ತೇ ಕೆಲವರು ಗೋಪಾಲಕನ ಹಾಡುಗಳಿಗೆ ಕುಣಿದು ಕುಪ್ಪಳಿಸಿ ವಿಡಿಯೋ ಮಾಡಿ ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ. ಈ ಎಲ್ಲದರ ಈ ಕುರಿತಂತೆ ಇಲ್ಲಿದೆ ವರದಿ.

ಸೆಲೆಬ್ರೆಟಿಗಳ ಕೃಷ್ಣ ಜನ್ಮಾಷ್ಟಮಿ

ಸಾಕಷ್ಟು ಬಾಲಿವುಡ್‌ ಹಾಗೂ ಸ್ಯಾಂಡಲ್‌ವುಡ್‌ ತಾರೆಯರು ತಮ್ಮದೇ ಆದ ರೀತಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದ್ದಾರೆ. ಹಿರಿಯ-ಕಿರಿಯ ತಾರೆಯರು ಕೃಷ್ಣನ ಪೂಜೆಯನ್ನು ಮಾಡುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಕೆಲವು ನಟ-ನಟಿಯರು, ಕೃಷ್ಣನ ಮಂದಿರಗಳಿಗೆ ಭೇಟಿ ಇತ್ತ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಶೇರ್‌ ಮಾಡಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್‌ನ ಹಿರಿಯ ನಟಿ ಹೇಮಾ ಮಾಲಿನಿ, ತಮ್ಮ ನೃತ್ಯ ರೂಪಕದ ವಿಡಿಯೋ ಹಂಚಿಕೊಂಡಿದ್ದು, ನಟ ರಾಜ್‌ ಗ್ರೋವರ್‌ ಕೃಷ್ಣನನ್ನು ಎತ್ತಿ ಹಿಡಿದು ಆಚರಿಸಿದ್ದಾರೆ. ನಟಿ ದೀಪಿಕಾ ದಾಸ್‌ ಸೇರಿದಂತೆ ಹಲವು ನಟಿಯರು ಕೃಷ್ಣನ ತೊಟ್ಟಿಲು ತೂಗುವ, ಆರಾಧಿಸುವ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಸೆಲೆಬ್ರೆಟಿಗಳ ಮುದ್ದು ಮಕ್ಕಳ ಸೆಲೆಬ್ರೇಷನ್‌

ನಟಿ ಪ್ರಣೀತಾ, ತಮ್ಮ ಮೊದಲ ಮಗುವಿನ ಕೃಷ್ಣನ ಅವತಾರದ ತುಂಟಾಟದ ವಿಡಿಯೋ ಕ್ಲಿಪ್‌ ಹಂಚಿಕೊಂಡಿದ್ದಾರೆ. ಇನ್ನು ನಟಿ ಶ್ವೇತಾ ಶ್ರೀವಾತ್ಸವ್‌ ತಮ್ಮ ಮಗಳನ್ನು ರಾಧೆಯಂತೆ ಸಿಂಗರಿಸಿದ್ದಾರೆ. ನಟಿ ಮಮತಾ ರಾವುತ್‌ ಕಂದಮ್ಮನನ್ನು ಕೃಷ್ಣನಂತೆ ಅಲಂಕರಿಸಿದ್ದಾರೆ. ಇದೇ ರೀತಿ ನಟಿ ರಾಧಿಕಾ ಪಂಡಿತ್‌ರಿಂದ ಹಿಡಿದು, ಟೆಲಿಲೋಕದ ತಾರೆಯರು ಕೂಡ ಮಕ್ಕಳನ್ನು ಘನಶ್ಯಾಮನಂತೆ ಸಿಂಗರಿಸಿ ಸಂತಸ ಪಟ್ಟಿದ್ದಾರೆ.

ಇದನ್ನೂ ಓದಿ: Krishna Janmashtami Fancy Dress Tips: ಕೃಷ್ಣನ ಫ್ಯಾನ್ಸಿ ಡ್ರೆಸ್‌ ಮಾಡುವವರಿಗೆ ಇಲ್ಲಿದೆ 5 ಟಿಪ್ಸ್!

ಮಾಡೆಲ್‌ಗಳ ಕೃಷ್ಣನ ಆರಾಧನೆ

ಇತರೇ ಕ್ಷೇತ್ರದವರಂತೆ ಫ್ಯಾಷನ್‌ ಕ್ಷೇತ್ರದ ಸೆಲೆಬ್ರೆಟಿಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಈ ಗೋಕುಲಾಷ್ಟಮಿಯನ್ನು ಮಾಡರ್ನ್‌ ಶೈಲಿಯಲ್ಲಿ ಆಚರಿಸಿ, ಸಂಭ್ರಮಿಸಿದ್ದಾರೆ. ಕೃಷ್ಣನ ಹಾಡುಗಳಿಗೆ ವಿಡಿಯೋ ರೀಲ್ಸ್ ಮಾಡಿ, ಖುಷಿ ಪಟ್ಟಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಪ್ರವಾಸ

Krishna Janmashtami: ವೃಂದಾವನ, ಮಥುರಾ ಪ್ರವಾಸ: ಕೃಷ್ಣನೂರಿಗೆ ಪಯಣ ಬೆಳೆಸಿದರೆ, ಇವನ್ನು ನೋಡಲು ಮರೆಯದಿರಿ!

ಉತ್ತರ ಪ್ರದೇಶದ ವೃಂದಾವನ ಮಥುರಾಗಳಲ್ಲಿ ಪ್ರವಾಸ ಮಾಡುವ ಕನಸಿದ್ದವರು ಅಲ್ಲಿ ಯಾವೆಲ್ಲ ಜಾಗಗಳನ್ನು ನೋಡಿ ಬರಬಹುದು (Travel guide) ಎಂಬುದನ್ನು ನೋಡೋಣ ಬನ್ನಿ.

VISTARANEWS.COM


on

krishna janmabhoomi
Koo

ಶ್ರೀಕೃಷ್ಣನೆಂದರೆ ದ್ವಾರಕೆ (Krishna Janmashtami) ಎಂದು ಆತನ ದರ್ಶನ ಪಡೆಯಲು ದ್ವಾರಕೆಗೆ ಹೋಗುವ ಮಂದಿ ಒಂದೆಡೆಯಾದರೆ, ಉತ್ತರ ಪ್ರದೇಶದ ಮಥುರಾ, ವೃಂದಾವನಗಳೂ ಕೂಡಾ ಕೃಷ್ಣಭಕ್ತರ ತವರು. ಇಲ್ಲಿ ಶ್ರೀಕೃಷ್ಣ ತನ್ನ ಬಾಲ್ಯ ಕಳೆದ ವೃಂದಾವನವನ್ನು, ಮಥುರೆಯನ್ನೂ (Mathura travel) ನೋಡಿ ಬರುವುದು ಬಹುತೇಕ ಕೃಷ್ಣನ ಭಕ್ತರ ಜೀವಿತಾವಧಿಯ ಕನಸುಗಳಲ್ಲಿ ಒಂದು. ಉತ್ತರ ಪ್ರದೇಶದ ವೃಂದಾವನ ಮಥುರಾಗಳಲ್ಲಿ ಪ್ರವಾಸ ಮಾಡುವ ಕನಸಿದ್ದವರು ಅಲ್ಲಿ ಯಾವೆಲ್ಲ ಜಾಗಗಳನ್ನು ನೋಡಿ ಬರಬಹುದು (Travel guide) ಎಂಬುದನ್ನು ನೋಡೋಣ ಬನ್ನಿ.

prem mandir vrindavan
kamsa kila matura

ಪ್ರೇಮಮಂದಿರ, ವೃಂದಾವನ: ಕೃಷ್ಣನ ಬಹು ಪ್ರಸಿದ್ಧ ದೇವಾಲಯಗಳಲ್ಲಿ ಪ್ರೇಮಮಂದಿರವೂ ಒಂದು. ಇಲ್ಲಿನ ಗೋಡೆಗಳಲ್ಲಿರುವ ಅತ್ಯಾಕರ್ಷನ ಚಿತ್ರಕಲೆಯು ಭಕ್ತಾದಿಗಳನ್ನು ತನ್ನೆಡೆಗೆ ಸೆಳೆಯುತ್ತದೆ. ರಾತ್ರಿ ಅತ್ಯದ್ಭುತ ಲೈಟಿಂಗ್‌ ವ್ಯವಸ್ಥೆಯನ್ನೂ ಇಲ್ಲಿ ಮಾಡುವುದರಿಂದ ರಾತ್ರಿ ಇಲ್ಲಿಗೆ ಭೇಟಿ ನೀಡುವುದು ಅದ್ಭುತ ಅನುಭವವನ್ನು ನೀಡುತ್ತದೆ. ಇದಲ್ಲದೆ, ಇಸ್ಕಾನ್‌ನಿಂದ ನಿರ್ಮಿತವಾದ ಶ್ರೀಕೃಷ್ಣ ಬಲರಾಮ ಮಂದಿರವೂ ಕೂಡಾ ವೃಂದಾವನದ ಪ್ರಮುಖ ಆಕರ್ಷಣೆಗಳಲ್ಲೊಂದು.

nidhivana
kamsa kila matura

ನಿಧಿವನ, ವೃಂದಾವನ: ನಿಧಿವನವೆಂದರೆ ಒಂದು ಪುಟ್ಟ ಕಾಡು. ಇಲ್ಲಿನ ಮರಗಳೇ ಒಂದು ವಿಶಿಷ್ಟ ಬಗೆಯಂಥವು. ವೃಂದಾವನ ನಗರಿಯೊಳಗೇ ಇರುವ ಈ ನಿಧಿವನದ ಬಗ್ಗೆ ಈ ಊರ ಮಂದಿಯಲ್ಲಿ ವಿಶಿಷ್ಟ ನಂಬಿಕೆಯಿದೆ. ಶ್ರೀಕೃಷ್ಣ ಗೋಪಿಕೆಯರ ಜೊತೆ ರಾಸಲೀಲೆಯಾಡುತ್ತಿದ್ದ ಜಾಗ ಇದೆಂದೂ, ಇಂದಿಗೂ ಕೃಷ್ಣ ಇಲ್ಲಿಗೆ ರಾಸಲೀಲೆಯಾಡಲು ಭೇಟಿ ನೀಡುತ್ತಾನೆಂದೂ ನಂಬಿರುವ ಜನತೆ, ಈ ನಿಧಿವನದ ಕಡೆಗಿರುವ ತಮ್ಮ ಮನೆಗಳ ಕಿಟಕಿ ಬಾಗಿಲುಗಳನ್ನು ಕತ್ತಲಾದೊಡನೆ ಮುಚ್ಚಿಕೊಳ್ಳುವ ಆಚರಣೆಯಿದೆ. ಕತ್ತಲಾದರೆ, ನಿಧಿವನದ ಕಡೆ ನೋಡಬಾರದೆಂದೂ ಇಲ್ಲಿನ ಮಂದಿ ಅಘೋಷಿತ ನಿಯಮ. ಇನ್ನೂ ಕೆಲವರ ಪ್ರಕಾರ, ಶ್ರೀಕೃಷ್ಣ ಗೋಪಿಕೆಯರ ಜೊತೆಗೆ ಇಲ್ಲಿ ರಾಸಲೀಲೆಯಾಡುವುದನ್ನು ನೋಡಿದ ರಾಧೆ, ಆತನ ನಡವಳಿಕೆಯಿಂದ ಬೇಸತ್ತು, ಇಲ್ಲಿಗೆ ಬಂದವರು ಸಮಸ್ಯೆಗೆ ಸಿಲುಕುತ್ತಾರೆಂದೂ, ಇಲ್ಲಿ ಹಕ್ಕಿ ಪಿಕ್ಕಿಗಳ್ಯಾವುದೂ ಬರಬಾರದೆಂದೂ, ಸೂರ್ಯನ ಬೆಳಕೂ ಸುಳಿಯದಂತೆ ಕತ್ತಲು ಕವಿದಿರಲಿ ಎಂದೂ ಶಾಪವಿತ್ತಳು ಎಂಬ ಕಥೆಯೂ ಇದೆ. ಇನ್ನೂ ಕೆಲವರ ಪ್ರಕಾರ, ಶ್ರೀಕೃಷ್ಣನೂ ರಾಧೆಯೂ ಇಲ್ಲಿ ಖಾಸಗಿ ಸಮಯ ಕಳೆಯುವುದರಿಂದ ಯಾರಿಗೂ ಕತ್ತಲಾದ ಮೇಲೆ ಇಲ್ಲಿಗೆ ಪ್ರವೇಶವಿಲ್ಲ ಎಂದೂ ಹೇಳಲಾಗುತ್ತದೆ. ಒಟ್ಟಿನಲ್ಲಿ ನಿಧಿವನವೆಂದರೆ ಇದಿಗೂ ರಹಸ್ಯವೇ!

mathura krishna temple
kamsa kila matura

ಶ್ರೀಕೃಷ್ಣ ಜನ್ಮಸ್ಥಾನ, ಮಥುರಾ: ಜನ್ಮಭೂಮಿ ಹೆಸರಿನಲ್ಲೇ ಕರೆಯಲ್ಪಡುವ ಈ ದೇಗುಲದೊಳಗೆ ಕೃಷ್ಣ ಹುಟ್ಟಿದನೆನ್ನಲಾದ ಸೆರೆಮನೆಯೂ ಇದೆ. ಇದೇ ಸ್ಥಳದಲ್ಲಿ ಸೆರೆಮನೆಯಲ್ಲಿ ಕೃಷ್ಣ ಜನಿಸಿದ ಎಂದು ಇಲ್ಲಿನ ಸ್ಥಳಪುರಾಣವು ಹೇಳುತ್ತದೆ. ಜನ್ಮಾಷ್ಠಮಿಯ ಸಂದರ್ಭ ಇಲ್ಲಿಗೆ ಭೇಟಿ ನೀಡುವುದು ವಿಶೇಷ. ದೇವಸ್ಥಾನಕ್ಕೆ ಅಂಟಿಕೊಂಡಂತೆ ಔರಂಗಜೇಬನು ಕಟ್ಟಿಸಿದ ಈದ್ಗಾ ಮಸೀದಿಯನ್ನೂ ಇಲ್ಲಿ ಕಾಣಬಹುದು.

Dwarkadhish Temple, Mathura
kamsa kila matura

ಶ್ರೀದ್ವಾರಕಾಧೀಶ ದೇವಸ್ಥಾನ, ಮಥುರಾ: ಇದು ಮಥುರಾದ ಅತ್ಯಂತ ಹಳೆಯ ಹಾಗೂ ಅತ್ಯಂತ ದೊಡ್ಡ ದೇವಸ್ಥಾನಗಳಲ್ಲಿ ಒಂದು. ಇದು ವಿಶ್ರಾಮ್‌ ಘಾಟ್‌ನ ಬಳಿಯಲ್ಲೇ ಇದ್ದು ಇದನ್ನು ೧೮೧೪ರಲ್ಲಿ ನಿರ್ಮಿಸಲಾಯಿತು ಎಂದು ಇತಿಹಾಸ ಹೇಳುತ್ತದೆ. ಕೃಷ್ಣ ಜನ್ಮಾಷ್ಠಮಿ ಹಾಗೂ ಹೋಳಿ ಹಬ್ಬದ ಸಂದರ್ಭಗಳಲ್ಲಿ ಈ ದೇಗುಲದಲ್ಲಿ, ವಿಶೇಷ ಪೂಜೆ ಸಂಭ್ರಮಾಚರಣೆಗಳು ನಡೆಯುತ್ತದೆ.

kamsa kila matura
kamsa kila matura

ಕಂಸ ಕಿಲಾ, ಮಥುರಾ: ಮಥುರೆಯ ರಾಜ ಕಂಸನ ಅರಮನೆಯೆಂದು ಹೇಳಲಾಗುವ ಕೋಟೆ ಇಲ್ಲಿನ ಕೃಷ್ಣ ಗಂಗಾ ಘಾಟ್‌ ಹಾಗೂ ಗೋಘಾಟ್‌ನ ಬಳಿ ಇದೆ. ಇಲ್ಲಿ ಹಿಂದೂ ಹಾಗೂ ಮುಸ್ಲಿಂ ಶೈಲಿಯ ಮಿಶ್ರಣವಿರುವ ಕೋಟೆಯನ್ನು ಕಾಣಬಹುದು.

ನಂದಗಾಂವ್‌, ಮಥುರಾ: ನಂದಗಾಂವ್‌ ಎಂಬ ಪುಟ್ಟ ಹಳ್ಳಿ ರಾಧೆಯ ಊರು ಬರ್ಸಾನಾದಿಂದ ೮ ಕಿಮೀ ದೂರದಲ್ಲಿದೆ. ಇಲ್ಲಿ ಕೃಷ್ಣ ಆಟವಾಡಿಕೊಂಡು ತನ್ನ ಸಾಕು ತಾಯಿ ಯಶೋಧೆ ಹಾಗೂ ನಂದನ ಮನೆಯಲ್ಲಿ ಬೆಳೆದ ಎಂದು ಪುರಾಣದ ಕಥೆಗಳು ಹೇಳುತ್ತವೆ. ಕೃಷ್ಣನ ಬಾಲಲೀಲೆಗಳಿರುವ ನಂದಗೋಕುಲ ಇದೇ. ಹೋಳಿ ಹಾಗೂ ಜನ್ಮಾಷ್ಠಮಿಯ ಸಂದರ್ಭ ಭಕ್ತರು ನಂದಗಾಂವ್‌ನಲ್ಲಿ ನೆರೆಯುತ್ತಾರೆ.

ಕೇವಲ ಇಷ್ಟೇ ಅಲ್ಲ, ಮಥುರಾ, ವೃಂದಾವನದ ಗಲ್ಲಿಗಲ್ಲಿಗಳೂ ಕೃಷ್ಣನ, ರಾಧೆಯ ಕಥೆ ಹೇಳುತ್ತವೆ. ಅಲ್ಲಿಯ ಘಾಟ್‌ಗಳು, ರಸ್ತೆರಸ್ತೆಯಲ್ಲೂ ಎಡತಾಕುವ ದೇವಸ್ಥಾನಗಳು, ಕೃಷ್ಣರಾಧೆಯರ ಹೆಸರನ್ನೇ ಹೇಳುತ್ತವೆ. ಒಂದಿಷ್ಟು ದಿನಗಳು ಮಥುರೆ, ವೃಂದಾವನದಲ್ಲಿ ಕಳೆಯುವ ಸಮಯವೂ ಇರಬೇಕು ಅಷ್ಟೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀಕೃಷ್ಣ; ತಾನು ದೇವರೆನ್ನುತ್ತಲೇ ಮನುಷ್ಯರೊಡನೆ ಒಡನಾಡಿದವ

Continue Reading

ಕರ್ನಾಟಕ

ಉರ್ದು ಶಾಲೆಯಲ್ಲಿ ಜನ್ಮಾಷ್ಟಮಿ; ಕೃಷ್ಣ, ರಾಧೆ, ರುಕ್ಮಿಣಿಯರ ವೇಷದಲ್ಲಿ ಗಮನ ಸೆಳೆದ ಮಕ್ಕಳು

ಮುಸ್ಲಿಂ ಮಕ್ಕಳೇ ಹೆಚ್ಚಿರುವ ಶಾಲೆಯಲ್ಲಿ ಕೃಷ್ಣ, ರಾಧೆ, ರುಕ್ಮಿಣಿಯರ ವೇಷಭೂಷಣ ತೊಟ್ಟು, ಗ್ರಾಮದ ಮುಖ್ಯ ಬೀದಿಗಳಲ್ಲಿ ಸಾಮೂಹಿಕವಾಗಿ ಹೆಜ್ಜೆ ಹಾಕುವ ಮೂಲಕ ನೋಡುಗರ ಗಮನ ಸೆಳೆದರು.

VISTARANEWS.COM


on

ಜನ್ಮಾಷ್ಟಮಿ
ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧೆಯರ ವೇಷಭೂಷಣಗಳಿಂದ ಗಮನ ಸೆಳೆದರು.
Koo

ವಿಜಯನಗರ: ರಾಜ್ಯದಲ್ಲಿ ಧರ್ಮ ಸಂಘರ್ಷ, ಕೋಮುಗಲಭೆಗಳು ನಡೆಯುತ್ತಿರುವ ನಡುವೆ ಉರ್ದು ಶಾಲೆಯೊಂದರಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಲಾಗಿದೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಹಿಂದೂ – ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಶಾಲೆಯಲ್ಲಿ 94 ಜನ ವಿದ್ಯಾರ್ಥಿಗಳು ಓದುತ್ತಿದ್ದು, ಅದರಲ್ಲಿ 83 ವಿದ್ಯಾರ್ಥಿಗಳು ಮುಸ್ಲಿಮರಿದ್ದಾರೆ. ಉಳಿದ 11 ಜನ ಇತರ ಜಾತಿಯ ಮಕ್ಕಳಿದ್ದಾರೆ. ಆದರೆ ಮುಸ್ಲಿಂ ಮಕ್ಕಳೇ ಹೆಚ್ಚಿರುವ ಶಾಲೆಯಲ್ಲಿ ಕೃಷ್ಣ, ರಾಧೆ, ರುಕ್ಮಿಣಿಯರ ವೇಷಭೂಷಣ ತೊಟ್ಟು, ಗ್ರಾಮದ ಮುಖ್ಯ ಬೀದಿಗಳಲ್ಲಿ ಸಾಮೂಹಿಕವಾಗಿ ಹೆಜ್ಜೆ ಹಾಕುವ ಮೂಲಕ ನೋಡುಗರ ಗಮನ ಸೆಳೆದರು.

ಮುಖ್ಯ ಶಿಕ್ಷಕ ಎಲ್.ರೆಡ್ಡಿ ನಾಯ್ಕ ಮಾತನಾಡಿ, ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳು ಸೇರಿ ಎಲ್ಲ ಹಬ್ಬಗಳನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಇದಕ್ಕೆಲ್ಲ ಗ್ರಾಮಸ್ಥರು, ಶಾಲೆಯ ವಿದ್ಯಾರ್ಥಿಗಳ ಪಾಲಕರ ಸಹಕಾರ ಇದ್ದು, ಈ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನೂ ವಿಶೇಷವಾಗಿ ಆಚರಿಸಲಾಗಿದೆ ಎಂದರು.

ಎಸ್‌ಡಿಎಂಸಿ ಸದಸ್ಯರಾದ ರೇಷ್ಮಾ, ಗುಲ್ಜರ್, ಹಜರತ್ ಬೇಗಂ, ಶಿಕ್ಷಕಿಯರಾದ ಶಾಕೀರಾ ಬೇಗಂ, ಶೇಖ್ ಮುಮ್ತಾಜ್, ಗೌರವ ಶಿಕ್ಷಕರಾದ ಶಬೀನಾ, ಸಕ್ರಹಳ್ಳಿ ರವಿಕುಮಾರ್ ಇದ್ದರು.

ಇದನ್ನೂ ಓದಿ | Krishna Janmashtami | ವಿಟ್ಲಪಿಂಡಿಯೊಂದಿಗೆ ಉಡುಪಿ ಕೃಷ್ಣಜನ್ಮಾಷ್ಟಮಿ ಸಂಭ್ರಮ ಸಂಪನ್ನ

Continue Reading

ಉಡುಪಿ

ಉಡುಪಿ ಶ್ರೀಕೃಷ್ಣನಿಗೆ ಇಂದು ಸಂಭ್ರಮದ ಲೀಲೋತ್ಸವ

ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಶ್ರೀಕೃಷ್ಣನಿಗೆ ಪರ್ಯಾರ ಶ್ರೀ ವಿದ್ಯಾಸಾಗರ ತೀರ್ಥರು ಅರ್ಘ್ಯಪ್ರಧಾನ ಮಾಡಿದರು.

VISTARANEWS.COM


on

udupi
Koo

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಪರ್ಯಾಯ ಪೀಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರು ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರಧಾನ ಮಾಡಿದರು.

ಹಾಲು ಹಾಗೂ ನೀರಿನ ಮೂಲಕ ಶ್ರೀಗಳು ಚಂದ್ರನಿಗೆ ಹಾಗೂ ಕೃಷ್ಣ ದೇವರಿಗೆ ಅರ್ಘ್ಯ ಸಮರ್ಪಣೆ ಮಾಡಿದರು. ಅರ್ಘ್ಯ ಸಮರ್ಪಣೆ ಬಳಿಕ ಉಂಡೆ, ಚಕ್ಕುಲಿ ಇತ್ಯಾದಿಗಳನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದರು. ಮಹಾಮಂಗಳಾರತಿ, ಶ್ರೀಕೃಷ್ಣನಿಗೆ ಅರ್ಘ್ಯ ಸಮರ್ಪಣೆ ಸಂದರ್ಭ ಮಠದ ಅರ್ಚಕರು ಹಾಗೂ ಭಕ್ತರು ಉಪಸ್ಥಿತರಿದ್ದು ದೇವರ ದರ್ಶನ ಪಡೆದರು.

ಈ ವೇಳೆ ಖ್ಯಾತ ಖಳ ನಟ ರವಿಶಂಕರ್ ಅವರು ಶ್ರೀ ಕೃಷ್ಣನ ದರ್ಶನ ಪಡೆದರು. ಶ್ರೀಕೃಷ್ಣನಿಗೆ ವೈಭವದ ಲೀಲೋತ್ಸವ ಇವತ್ತು (ಆ.20) ಮಧ್ಯಾಹ್ನ ನಡೆಯಲಿದೆ.

Continue Reading
Advertisement
Dina Bhavishya
ಭವಿಷ್ಯ9 ಗಂಟೆಗಳು ago

Dina Bhavishya : ಭೂ ಸಂಬಂಧಿ ವ್ಯವಹಾರಗಳಲ್ಲಿ ಡಬಲ್‌ ಲಾಭ; ಬಹುದಿನಗಳ ಕನಸು ನನಸಾಗುವ ಕಾಲ

Hc grants interim bail to actor Darshan
ಸಿನಿಮಾ1 ದಿನ ago

Actor Darshan: ಈ ಕಾರಣಕ್ಕೆ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು; 6 ವಾರಗಳ ನಂತ್ರ ಮತ್ತೆ ಜೈಲು!

dina bhavishya
ಭವಿಷ್ಯ2 ದಿನಗಳು ago

Dina Bhavishya : ಅನಾವಶ್ಯಕ ವಾದದಲ್ಲಿ ಸಿಲಿಕಿಕೊಳ್ಳುವ ಸಾಧ್ಯತೆ ಎಚ್ಚರಿಕೆ ಇರಲಿ

Doctors at Fortis Hospital remove fish bone from man's stomach for 5 years
ಬೆಂಗಳೂರು2 ದಿನಗಳು ago

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

murder case
ಕೊಡಗು2 ದಿನಗಳು ago

Murder case : ಸುಳಿವೆ ಇಲ್ಲದಿರುವ ಕೊಲೆ ಪ್ರಕರಣ ಭೇದಿಸಿದ ಸುಂಟಿಕೊಪ್ಪ ಪೊಲೀಸರಿಗೆ ಸನ್ಮಾನ

ಬೆಂಗಳೂರು2 ದಿನಗಳು ago

Assault Case : ಬೆಂಗಳೂರಿನಲ್ಲೊಬ್ಬ ಸೈಕೋಪಾಥ್ ಪತಿ; ನಿಧಿಗಾಗಿ ಮಗುನಾ ಬಲಿ ಕೊಡೋಣವೆಂದು ಪತ್ನಿಗೆ ಕಿರುಕುಳ

Dina Bhavishya
ಭವಿಷ್ಯ3 ದಿನಗಳು ago

Dina Bhavishya : ಈ ದಿನ ಯಾವುದೇ ಕಾರಣಕ್ಕೂ ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ

Murder case
ಉತ್ತರ ಕನ್ನಡ3 ದಿನಗಳು ago

Murder Case : ಗಾರೆ ಕೆಲಸಕ್ಕೆ ಬಂದಿದ್ದ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪಾಪಿಗಳು

Medical negligence
ಪ್ರಮುಖ ಸುದ್ದಿ3 ದಿನಗಳು ago

Medical Negligence : ವಿಜಯನಗರದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ 5 ವರ್ಷದ ಮಗು ಬಲಿ; ಕೆರೆಗೆ ಕಾಲು ಜಾರಿ ಬಿದ್ದು ಯುವತಿ ಸಾವು

assault case
ಬೆಂಗಳೂರು3 ದಿನಗಳು ago

Assault case: ಕರ್ನಾಟಕದ ಲಾರಿ ಡ್ರೈವರ್‌ಗೆ ಕಪಾಳಮೋಕ್ಷ ಮಾಡಿದ ತಮಿಳುನಾಡು ಟ್ರಾಫಿಕ್‌ ಪೊಲೀಸ್‌!

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ12 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ4 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌