Site icon Vistara News

Varamahalakshmi Festival : ಡಿಕೆ ಶಿವಕುಮಾರ್‌ ನಂಬುವ ಕಬ್ಬಾಳಮ್ಮ ದೇವಿಗೆ ನೋಟಿನಿಂದಲೇ ಅಲಂಕಾರ, ಎಷ್ಟೊಂದು ಹಣ ನೋಡಿ!

Decoration with currency

ರಾಮನಗರ: ವರಮಹಾಲಕ್ಷ್ಮಿ ಹಬ್ಬವನ್ನು (Varamahalakshmi Festival) ರಾಜ್ಯಾದ್ಯಂತ ಭಕ್ತಿ ಮತ್ತು ಶ್ರದ್ಧೆಗಳಿಂದ ಆಚರಿಸಲಾಗುತ್ತಿದೆ. ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ (Varamahalakshmi Pooja) ದೇವರ ಮುಂದೆ ಹಣ (Keeping money in front of godess) ಇಟ್ಟು ದುಪ್ಪಟ್ಟಾಗಲಿ ಎಂದು ಜನ ಹಾರೈಸುತ್ತಿದ್ದಾರೆ. ಪೂಜೆ, ಅಲಂಕಾರಗಳ ನಡುವೆ ಇಲ್ಲಿ ದುಡ್ಡಿಗೇ ಮಹತ್ವ. ಕೆಲವರು ಗರಿಗರಿ ನೋಟುಗಳನ್ನು ಇದಕ್ಕಾಗಿಯೇ ಬ್ಯಾಂಕ್‌ನಿಂದ ತಂದಿರುತ್ತಾರೆ.

ಸಾಮಾನ್ಯವಾಗಿ ಎಲ್ಲರೂ ಹಣವನ್ನು ದೇವರ ಮುಂದೆ ಇಟ್ಟು ಖುಷಿಪಡುತ್ತಾರೆ. ಆದರೆ, ಇಲ್ಲಿನ ದೇವಸ್ಥಾನವೊಂದರಲ್ಲಿ ದೇವರನ್ನೇ ಹಣದಿಂದ ಅಲಂಕಾರ (Decoration of Godess by Money) ಮಾಡಿದ್ದಾರೆ. ಇದು ಶಕ್ತಿದೇವತೆ ಕಬ್ಬಾಳಮ್ಮನಿಗೆ ದುಡ್ಡಿನಿಂದಲೇ ಅಲಂಕಾರ ಮಾಡಿದ ಸ್ಟೋರಿ.

ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದಲ್ಲಿ ಶಕ್ತಿ ದೇವತೆ ಕಬ್ಬಾಳಮ್ಮನ ಗುಡಿ ಇದೆ. ಇದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಪಾರ ನಂಬಿಕೆಯಿಟ್ಟಿರುವ ದೇವಾಲಯ ಎಂದೇ ಪ್ರತೀತಿ. ಅವರು ಊರಿಗೆ ಬಂದಾಗಲೆಲ್ಲ ಈ ಗುಡಿಗೆ ಭೇಟಿ ನೀಡುತ್ತಾರೆ.

Decoration with currency

ಈ ದೇವಿಗೆ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಹಣದಿಂದಲೇ ಅಲಂಕಾರ ಮಾಡಲಾಗಿದೆ! 2 ಸಾವಿರ, 500, 200, 100 ರೂಪಾಯಿ ನೋಟಿನಿಂದ ಅಲಂಕಾರ ಮಾಡಿರುವ ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಬ್ಬಾಳಮ್ಮ ದೇವಾಲಯದ ಈ ಅಲಂಕಾರ ನೋಡಿ ಬಂದವರೆಲ್ಲ ಚಿತ್ರ ತೆಗೆದು ಖುಷಿಪಡುತ್ತಿದ್ದಾರೆ. ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Varamahalakshmi Festival: ವ್ರತಗಳಲ್ಲೇ ಶ್ರೇಷ್ಠ ಈ ವರಮಹಾಲಕ್ಷ್ಮಿ ಹಬ್ಬ: ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ!

ಹುಬ್ಬಳ್ಳಿಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ

ಹುಬ್ಬಳ್ಳಿಯ ಜನತಾಬಜಾರ್ ಮಹಾಲಕ್ಣ್ಮೀ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬರ ನಿಮಿತ್ತ ವಿಶೇಷ ಪೂಜೆ ನಡೆದಿದೆ.

ಮಹಾಲಕ್ಷ್ಮೀಯನ್ನು ಫಲಪುಷ್ಪ, ಆಭರಣ ಹಾಗೂ ಹಣದಿಂದ ಶೃಂಗಾರ ಮಾಡಿದರೆ ಲಕ್ಷ್ಮೀವೆಂಕಟೇಶ್ವರನಿಗೆ ವಿಶೇಷ ಪೂಜೆ ಸಂದಿದೆ. ಭಕ್ತರಿಗೆ ಅರಿಶಿಣ, ಕುಂಕುಮ, ಹಸಿರು ಬಳೆ ವಿತರಣೆ ಮಾಡುವ ಮೂಲಕ ಸಂಭ್ರಮ‌ ಸಡಗರದಿಂದ‌ ವರಮಹಾಲಕ್ಷ್ಮಿ ಹಬ್ಬದ ಆಚರಣೆ ನಡೆಯಿತು.


ಮೈಸೂರಿನಲ್ಲಿ ಮಹಾಲಕ್ಷ್ಮಿ ಹಬ್ಬದ ಸಡಗರ

ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಕೊಲ್ಲಾಪುರ ಮಹಾಲಕ್ಷ್ಮಿ ದೇವಾಲಯದಲ್ಲಿ ಪೂಜೆ, ಪುನಸ್ಕಾರ ನಡೆಯುತ್ತಿದ್ದು, ಮುತ್ತೈದೆಯರು ಬಾಗಿನ ವಿನಿಮಯ ಮಾಡಿಕೊಂಡರು. ಭಕ್ತರು ದೇವಾಲಯಕ್ಕೆ ತಂಡೋಪತಂಡವಾಗಿ ಆಗಮಿಸುತ್ತಿದ್ದು, ಅರಿಶಿನ, ಕುಂಕುಮ, ಬಳೆ, ತಾಂಬೂಲ ಅರ್ಪಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ವರಮಹಾಲಕ್ಷ್ಮಿ ಹಬ್ಬ Varamahalakshmi Festival ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ಪೂಜೆ Varamahalakshmi Pooja ದೇವರ ಮುಂದೆ ಹಣ ಇಟ್ಟು ಪೂಜೆ Keeping money in front of godess ದೇವರಿಗೇ ಹಣದಿಂದ ಅಲಂಕಾರ Decoration of Godess by Money

Exit mobile version