Site icon Vistara News

ಚಾಮರಾಜಪೇಟೆ ಮೈದಾನ | ಹಿಂದೂಗಳ ಮೈದಾನದಲ್ಲಿ ಮುಸ್ಲಿಮರ ಪ್ರಾರ್ಥನೆಗೆ ಬಿಡ್ತೀರಾ ಎಂದು ಕೇಳಿದ ವಕ್ಫ್‌

Chamarajpet News

ನವದೆಹಲಿ: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ರಾಷ್ಟ್ರೀಯ ಮಹತ್ವದ ಕಾರ್ಯಕ್ರಮ ಇಲ್ಲವೇ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರೆ ನಮಗೆ ಸಮಸ್ಯೆ ಇಲ್ಲ. ಆದರೆ, ಇತರ ಧಾರ್ಮಿಕ ಕಾರ್ಯಕ್ರಮ ನಡೆಸಿದರೆ, ಧಾರ್ಮಿಕ ಹಬ್ಬಗಳನ್ನು ಆಚರಿಸಿದರೆ ಅದು ನಮಗೆ ಹಿತವಾಗುವುದಿಲ್ಲ- ಹೀಗೆಂದು ವಕ್ಫ್‌ ಬೋರ್ಡ್‌ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದೆ.

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಬಹುದು ಎಂಬರ್ಥದಲ್ಲಿ ಹೈಕೋರ್ಟ್‌ನ ದ್ವಿಸದಸ್ಯ ಪೀಠ ನೀಡಿರುವ ಆದೇಶವನ್ನು ಪ್ರಶ್ನಿಸಿ ವಕ್ಫ್‌ ಬೋರ್ಡ್‌ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿತ್ತು. ದ್ವಿಸದಸ್ಯ ಪೀಠದ ಮುಂದೆ ವಕ್ಫ್‌ ಬೋರ್ಡ್‌ ಪರವಾಗಿ ವಾದ ಮಂಡಿಸಿದ ವಕೀಲ ದುಷ್ಯಂತ್‌ ದವೆ ಅವರು ವಕ್ಫ್‌ ಮಂಡಳಿ ಜಾಗದಲ್ಲಿ ಬೇರೆ ಧರ್ಮದ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗದು ಎಂದರು.

ʻʻಗಣೇಶೋತ್ಸವ ಒಂದು ಧಾರ್ಮಿಕ ಹಬ್ಬವಾಗಿದೆ. ಅನ್ಯ ಸಮುದಾಯದ ಧಾರ್ಮಿಕ ಆಚರಣೆಯಾಗಿದೆ. ಇದನ್ನು ಈದ್ಗಾ ಮೈದಾನದಲ್ಲಿ ಆಚರಿಸಲು ಅವಕಾಶ ನೀಡಲಾಗದು. ಬೇರೆ ಯಾವುದಾದರೂ ಸಾಂಸ್ಕೃತಿಕ ಕಾರ್ಯಕ್ರಮವೋ, ರಾಷ್ಟ್ರೀಯ ಕಾರ್ಯಕ್ರಮವೋ ಆಗಿದ್ದರೆ ಅವಕಾಶ ಕೊಡುತ್ತಿದ್ದೆವು. ಅಷ್ಟಕ್ಕೂ ಒಬ್ಬ ಮುಸ್ಲಿಮ್‌ ಸಮುದಾಯ ವ್ಯಕ್ತಿಗೆ ಹಿಂದೂ ಧಾರ್ಮಿಕ ಮಹತ್ವದ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆಯೇʼʼ ಎಂದು ಪ್ರಶ್ನಿಸಿದರು.

ʻಅಷ್ಟಕ್ಕೂ ಕೊನೆಯದಾಗಿ ಹೇಳುವುದೇನೆಂದರೆ, ಈದ್ಗಾ ಮೈದಾನ್‌ ನನಗೆ ಸೇರಿದ್ದು. ಒಂದೊಮ್ಮೆ ನಾನು ಇನ್ನೊಂದು ಧಾರ್ಮಿಕ ಸಂಘಟನೆಗೆ ಯಾವುದೇ ಕಾರ್ಯಕ್ರಮ ಮಾಡಲು ಅವಕಾಶ ಕೊಡದಿರಲು ನಿರ್ಧರಿಸಿದರೆ, ಕೋರ್ಟ್‌ ಕೂಡಾ ಮಧ್ಯಪ್ರವೇಶಿಸುವಂತಿಲ್ಲʼʼ ಎಂದು ವಕ್ಫ್‌ ಮಂಡಳಿ ಪ್ರತಿನಿಧಿಯಾಗಿ ದುಷ್ಯಂತ್‌ ದವೆ ವಾದಿಸಿದರು.

ಈ ಹಿಂದೆಂದೂ ಇಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಿರಲಿಲ್ಲ. ಈಗ ಕೇವಲ ರಾಜಕೀಯಕ್ಕಾಗಿ ವಿವಾದ ಎಬ್ಬಿಸಲಾಗಿದೆ ಎಂದು ಕಪಿಲ್‌ ಸಿಬಲ್‌ ವಾದಿಸಿದರು.

ಇದನ್ನೂ ಓದಿ| ಚಾಮರಾಜಪೇಟೆ ಮೈದಾನದಲ್ಲಿ 2006ರಲ್ಲಿ ಗಣೇಶೋತ್ಸವ, ಶಿವರಾತ್ರಿ ಆಚರಣೆ ನಡೆದಿತ್ತು?


Exit mobile version