Site icon Vistara News

Abu Dhabi police: ಯುಎಇಯಲ್ಲಿ 1.5 ಕೋಟಿ ರೂ. ವಂಚಿಸಿದ ಕೇರಳ ಮೂಲದ ವ್ಯಕ್ತಿಯ ಬಂಧನ

Abu Dhabi police

Abu Dhabi police

ಅಬುಧಾಬಿ: ಯುಎಇಯ ಲುಲು ಗ್ರೂಪ್‌ (LuLu Group)ನಿಂದ 600,000 ದಿರ್ಹಾಮ್ (1.5 ಕೋಟಿ ರೂ.) ವಂಚಿಸಿದ ನಂತರ ಮಾರ್ಚ್ 25ರಿಂದ ತಲೆಮರೆಸಿಕೊಂಡಿದ್ದ ಭಾರತೀಯ ಉದ್ಯೋಗಿಯನ್ನು ಅಬುಧಾಬಿ ಪೊಲೀಸರು (Abu Dhabi police) ಬಂಧಿಸಿದ್ದಾರೆ. ಆರೋಪಿಯನ್ನು ಕೇರಳದ ಕಣ್ಣೂರು ಜಿಲ್ಲೆಯ ಮುಹಮ್ಮದ್ ನಿಯಾಸ್ (38) ಎಂದು ಗುರುತಿಸಲಾಗಿದೆ. ಈತ ಅಬುಧಾಬಿಯ ಖಲಿದಿಯಾ ಮಾಲ್‌ನ ಲುಲು ಹೈಪರ್‌ ಮಾರ್ಕೆಟ್‌ನಲ್ಲಿ ನಗದು ಕಚೇರಿ ಉಸ್ತುವಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.

“ವಂಚನೆಯ ಕುರಿತು ಅಬುಧಾಬಿಯ ಅಲ್-ಖಲೀದಿಯಾ ಪೊಲೀಸ್ ಕೇಂದ್ರಕ್ಕೆ ಲುಲು ಗ್ರೂಪ್‌ ದೂರು ನೀಡಿತ್ತು. ತಕ್ಷಣ ಅಪರಾಧ ತನಿಖಾ ತಂಡಗಳು ಮಾಹಿತಿಯನ್ನು ಸಂಗ್ರಹಿಸಿದೆ. ಇದರಿಂದಾಗಿ ಶೀಘ್ರದಲ್ಲಿಯೇ ಅಪರಾಧಿಯನ್ನು ಬಂಧಿಸಲು ಸಾಧ್ಯವಾಯಿತು. ಸದ್ಯ ಆರೋಪಿಯನ್ನು ಪ್ರಾಸಿಕ್ಯೂಟರ್ ಮುಂದೆ ಹಾಜರುಪಡಿಸಲಾಗಿದೆʼʼ ಎಂದು ಮೂಲಗಳು ತಿಳಿಸಿವೆ.

“ತ್ವರಿತವಾಗಿ ಸ್ಪಂದಿಸಿದ್ದಕ್ಕಾಗಿ ಅಬುಧಾಬಿ ಪೊಲೀಸರ ಜನರಲ್ ಕಮಾಂಡ್‌ಗೆ ಲುಲು ಗ್ರೂಪ್‌ನ ಅಧಿಕೃತರು ಧನ್ಯವಾದ ಅರ್ಪಿಸಿದ್ದಾರೆ. ದಾಖಲೆಯ ಅವಧಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದೆ” ಎಂದು ವರದಿಯೊಂದು ಹೇಳಿದೆ.

ಮಾರ್ಚ್ 25ರಂದು ಮುಹಮ್ಮದ್ ನಿಯಾಸ್ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ವಂಚನೆಯ ಪ್ರಕರಣ ಬೆಳಕಿಗೆ ಬಂದಿತ್ತು. ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕೃತರು ದೂರು ನೀಡಿದ್ದರು. ಆರೋಪಿ 15 ವರ್ಷಗಳಿಂದ ಲುಲು ಗ್ರೂಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತು ತನ್ನ ಕುಟುಂಬದೊಂದಿಗೆ ಅಬುಧಾಬಿಯಲ್ಲಿ ವಾಸಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಕಂಪನಿಯ ಅಧಿಕಾರಿಗಳು ಈ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಜನಿಕಾಂತ್ ಹೆಸರಲ್ಲಿ ಲಕ್ಷ ಲಕ್ಷ ದೋಚಿದ ಕಾಸ್ಟಿಂಗ್ ಡೈರೆಕ್ಟರ್‌

ಬೆಂಗಳೂರು: ನಟಿ ಆಗಬೇಕೆಂಬ ಮಹಾದಾಸೆಗೆ ಬಿದ್ದ ಯುವತಿಯೊಬ್ಬಳು ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿದ್ದಾಳೆ. ಸ್ಟಾರ್‌ ನಟರ ಹೆಸರೇಳಿಕೊಂಡು ವ್ಯಕ್ತಿಯೊಬ್ಬ ಯುವತಿಯಿಂದ ಹಣ ಸುಲಿಗೆ (Fraud Case) ಮಾಡಿದ್ದಾನೆ.

ರಜನಿಕಾಂತ್ ಅವರ ಹೊಸ ಸಿನಿಮಾ Thalaiver 171- code red ಸಿನಿಮಾ ಹೆಸರು ಬಳಸಿಕೊಂಡು ಮೋಸ ಮಾಡಲಾಗಿದೆ. ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ಎಂಬಾತ ರಜನಿಕಾಂತ್ ಚಿತ್ರದಲ್ಲಿ ಪಾತ್ರವೊಂದು ಖಾಲಿ ಇದೆ ಎಂದು ಇನ್‌ಸ್ಟಾಗ್ರಾಂ ವಿಡಿಯೊವನ್ನು ಹರಿಬಿಟ್ಟಿದ್ದ.

ಇದನ್ನೂ ಓದಿ: Namma Metro: ಮೆಟ್ರೋ ಮಹಿಳಾ ಸಿಬ್ಬಂದಿಗೆ ಮೈ-ಕೈ ಮುಟ್ಟಿ ಕಿರಿಕಿರಿ; ಸಹಕರಿಸದೇ ಹೋದ್ರೆ ವರ್ಗಾವಣೆ ಬೆದರಿಕೆ

ಇದನ್ನು ನೋಡಿ ಯುವತಿಯೊಬ್ಬಳು ಸುರೇಶ್ ಕುಮಾರ್‌ನನ್ನು ಸಂಪರ್ಕ ಮಾಡಿದ್ದಳು. ನಂತರ ಕಾಸ್ಟಿಂಗ್‌ಗೆ ಇಷ್ಟು ಹಣ ಖರ್ಚಾಗುತ್ತೆ ಎಂದು ಸಬೂಬು ಹೇಳಿ, ಹಂತ ಹಂತವಾಗಿ 3,94,000 ರೂ. ಹಣವನ್ನು ದೋಚಿದ್ದಾನೆ. ಇತ್ತ ಯುವತಿಯಿಂದ ಹಣ ಸುಲಿಗೆ ಮಾಡಿ, ಅವಕಾಶವನ್ನು ಕೊಡದೆ, ಹಣವನ್ನೂ ವಾಪಾಸ್ ಕೊಡದೆ ಪರಾರಿ ಆಗಿದ್ದಾನೆ. ಇತ್ತ ಹಣವೂ ಇಲ್ಲದೆ ಅವಕಾಶವೂ ಇಲ್ಲದೇ ಮೋಸ ಹೋದ ಯುವತಿ ಕಂಗಲಾಗಿದ್ದಾಳೆ. ಕಾಸ್ಟಿಂಗ್ ಡೈರೆಕ್ಟರ್ ಸುರೇಶ್ ಕುಮಾರ್ ವಿರುದ್ಧ ಐಟಿ ಆಕ್ಟ್ ನಡಿ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version