ಕಿವ್, ಉಕ್ರೇನ್: ಖಾರ್ಕಿವ್‌ನ (Kharkiv) ಪೂರ್ವ ಪ್ರದೇಶದಲ್ಲಿ ಕಿರಾಣಿ ಅಂಗಡಿ (grocery store) ಮತ್ತು ಕೆಫೆಯ ಮೇಲೆ ದಾಳಿ ನಡೆಸಿದ ರಷ್ಯಾ(Rocket Strike By Russia), ಕನಿಷ್ಠ 49 ಜನರನ್ನು ಕೊಂದು (49 people killed) ಹಾಕಿದೆ ಎಂದು ಉಕ್ರೇನಿಯನ್ ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Ukrainian President Volodymyr Zelensky ) ಅವರು ರಷ್ಯಾದ ಗಡಿಯಲ್ಲಿರುವ ಯುದ್ಧ-ಪೀಡಿತ ಪ್ರದೇಶದ ಕುಪಿಯಾನ್ಸ್ಕ್ ಜಿಲ್ಲೆಯಲ್ಲಿ ದಾಳಿ ಮಾಡಲಾಗಿದೆ. ಮಾಸ್ಕೋದ ಪಡೆಗಳು ಉಕ್ರೇನಿಯನ್ ಪಡೆಗಳಿಗೆ ಕಳೆದ ವರ್ಷ ಕಳೆದುಕೊಂಡ ಪ್ರದೇಶವನ್ನು ಮರಳಿ ವಶಪಡಿಸಿಕೊಳ್ಳಲು ಪರಸ್ಪರ ಕಾದಾಟಕ್ಕೆ ಇಳಿದಿವೆ(Russia Ukraine War).
ಸಾಮಾನ್ಯ ಕಿರಾಣಿ ಅಂಗಡಿಯನ್ನು ರಾಕೆಟ್‌ಗಳ ಮೂಲಕ ದಾಳಿ ನಡೆಸಿದ ರಷ್ಯಾದ ಕ್ರೂರ ಅಪರಾಧವು ಸಂಪೂರ್ಣವಾಗಿ ಉದ್ದೇಶಪೂರ್ವಕ ಭಯೋತ್ಪಾದಕ ದಾಳಿಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ದಾಳಿಯಲ್ಲಿ ಕನಿಷ್ಠ 49 ಜರು ಮೃತಪಟ್ಟಿದ್ದಾರೆ ಎಂದು ಉಕ್ರೇನಿಯನ್ ಪ್ರಾಸಿಕ್ಯೂಟರ್ ಅವರು ಖಚಿತಪಡಿಸಿದ್ದಾರೆ.
ರಷ್ಯಾ ನಡೆಸಿದ ಭೀಕರ ದಾಳಿಯ ಕುರಿತಾದ ಫೋಟೊಂದವನ್ನು ಝೆಲೆನ್ಸ್ಕಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದಾಳಿ ವೇಳೆ ಮೃತಪಟ್ಟವರ ಮೇಲೆ ಮಹಿಳೆಯೊಬ್ಬಳು ಮೊಣಕಾಲೂರಿದ್ದು ಮತ್ತು ಆಕೆಯ ಸುತ್ತ ಶವಗಳ ರಾಶಿ ಇದೆ. ಪಕ್ಷಲ್ಲದೇ ರಕ್ಷಣಾ ಕಾರ್ಯಕರ್ತರು ಇರುವುದನ್ನು ಫೋಟೋದಲ್ಲಿ ಕಾಣಬಹುದು.
ಈ ಸುದ್ದಿಯನ್ನೂ ಓದಿ: Russia Ukraine war | ತಿರುಗೇಟು ಕೊಟ್ಟ ಉಕ್ರೇನ್, ಒಂದೇ ದಿನ ರಷ್ಯಾದ 800 ಯೋಧರ ಹತ್ಯೆ ಎಂದು ಸೇನೆ ಘೋಷಣೆ
ಗ್ರೋಜಾ ಗ್ರಾಮದಲ್ಲಿ ಮಧ್ಯಾಹ್ನ 1:15ರ ಸುಮಾರಿಗೆ ಕೆಫೆ ಮತ್ತು ಅಂಗಡಿ ಮೇಲೆ ದಾಳಿ ನಡೆದಿದೆ ಎಂದು ಖಾರ್ಕಿವ್ ಪ್ರದೇಶದ ಮುಖ್ಯಸ್ಥ ಒಲೆಗ್ ಸಿನೆಗುಬೊವ್ ಹೇಳಿದ್ದಾರೆ. ದಾಳಿಗೊಳಗಾದ ಗ್ರಾಮವು ಮುಂಚೂಣಿಯಲ್ಲಿರುವ ಪಟ್ಟಣವಾದ ಕುಪಿಯಾನ್ಸ್ಕ್‌ನ ಪಶ್ಚಿಮಕ್ಕೆ 30 ಕಿಲೋಮೀಟರ್ ದೂರದಲ್ಲಿದೆ. ಯುದ್ಧ ಆರಂಭಕ್ಕಿಂತ ಮುಂಚೆ ಈ ಗ್ರಾಮದಲ್ಲಿ ಸುಮಾರು 500 ಜನರು ವಾಸವಾಗಿದ್ದರು ಎಂದು ಅಂದಾಜಿಸಲಾಗಿದೆ.
ಚೀನಾ ನಡೆಸಿದ ರಾಕೆಟ್ ದಾಳಿಯಲ್ಲಿ 6 ವರ್ಷದ ಬಾಲಕನೂ ಮೃತಪಟ್ಟಿದ್ದಾನೆ. ಅಲ್ಲದೇ ಒಂದು ಮಗು ತೀವ್ರವಾಗಿ ಗಾಯಗೊಂಡಿದೆ. ರಕ್ಷಣಾ ಕಾರ್ಯಕರ್ತರು ಸ್ಥಳದಲ್ಲಿ ರಕ್ಷಣೆ ಹಾಗ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಖಾರ್ಕಿವ್ ಪ್ರದೇಶದ ಮುಖ್ಯಸ್ಥ ಒಲೆಗ್ ಸಿನೆಗುಬೊವ್ ಹೇಳಿದ್ದಾರೆ.