ಪ್ರಮುಖ ಸುದ್ದಿ
Turmoil In Russia: ಮಾಸ್ಕೋದಲ್ಲಿ ರಕ್ತಪಾತ ಬೇಡವೆಂದ ವ್ಯಾಗ್ನರ್ ಗ್ರೂಪ್ ಬಾಸ್, ಒಂದೇ ದಿನದಲ್ಲಿ ಬಂಡಾಯ ಥಂಡಾ
Turmoil In Russia: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹಣಿಯಲು ವ್ಯಾಗರ್ ಗ್ರೂಪ್ ಸಂಚು ರೂಪಿಸಿತ್ತು. ಇದಕ್ಕಾಗಿ, ಮಾಸ್ಕೋ ಮೇಲೆ ದಾಳಿ ನಡೆಸಲು ಸೈನಿಕರು ಹೊರಟಿದ್ದರು. ಆದರೆ, ಇದೇ ವೇಳೆ
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ರಷ್ಯಾ ಖಾಸಗಿ ಸೇನಾಪಡೆ ವ್ಯಾಗ್ನರ್ ಗ್ರೂಪ್ ಬಂಡಾಯವು ಒಂದೇ ದಿನದಲ್ಲಿ ಥಂಡಾ ಹೊಡೆದಂತಿದೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ದಾಳಿ (Turmoil In Russia) ನಡೆಸುವ ಮೂಲಕ ಪುಟಿನ್ ಅವರಿಗೆ ಬಿಸಿ ಮುಟ್ಟಿಸಲು ಹೊರಟಿದ್ದ ಸೈನಿಕರನ್ನು ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಅವರು ತಡೆದಿದ್ದು, ರಕ್ತಪಾತ ಬೇಡ ಎಂಬ ಆದೇಶ ಹೊರಡಿಸಿದ್ದಾರೆ. ಹಾಗಾಗಿ, ಬಂಡಾಯವು ಒಂದೇ ದಿನದಲ್ಲಿ ಶಮನವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ದಾಳಿ ನಡೆಸಲು ಆರ್ಟಿಲರ್, ಯುದ್ಧ ಟ್ಯಾಂಕರ್‌ಗಳ ಸಮೇತ ವ್ಯಾಗ್ನರ್ ಸೈನಿಕರು ಹೊರಟಿದ್ದರು. ಮಾಸ್ಕೋದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿ ಸೈನಿಕರು ಬೀಡುಬಿಟ್ಟಿದ್ದರು. ಮಾಸ್ಕೋ ಮೇಲೆ ದಾಳಿ ನಡೆಸಲು ಸಕಲ ರೀತಿಯಲ್ಲಿ ಸಜ್ಜಾಗಿದ್ದರು. ಆದರೆ, ವ್ಯಾಗ್ನರ್ ಸೈನಿಕರು ದಾಳಿ ನಡೆಸಿದರೆ ಮಾಸ್ಕೋದಲ್ಲಿ ಭಾರಿ ಪ್ರಮಾಣದ ರಕ್ತಪಾತವಾಗುವ ಸಾಧ್ಯತೆ ಇರುವುದರಿಂದ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು ಎಂದು ಯೆವ್ಗೆನಿ ಪ್ರಿಗೋಜಿನ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: Turmoil In Russia: ಮಾಸ್ಕೋದತ್ತ ವ್ಯಾಗ್ನರ್ ಸೇನೆ ಲಗ್ಗೆ, ರಷ್ಯಾದಿಂದಲೇ ವ್ಲಾಡಿಮಿರ್ ಪುಟಿನ್ ಪಲಾಯನ
ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಡಾಯವೆದ್ದಿರುವ ಯೆವ್ಗೆನಿ ಪ್ರಿಗೋಜಿನ್ ಅವರು ಈಗಾಗಲೇ ಹಲವು ನಗರಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ಪುಟಿನ್ ವಿರುದ್ಧದ ದಂಗೆ ಎಂದು ಯೆವ್ಗೆನಿ ಪ್ರಿಗೋಜಿನ್ ಘೋಷಿಸಿದ್ದಾರೆ. ಹಾಗಾಗಿ, ಮಾಸ್ಕೋ ಮೇಲೆ ದಾಳಿ ನಡೆಸುವ ಮೂಲಕ ಪುಟಿನ್‌ಗೆ ಬಿಸಿ ಮುಟ್ಟಿಸಬೇಕು ಎಂಬ ಉದ್ದೇಶದಿಂದ ಮುನ್ನುಗ್ಗಲಾಗಿತ್ತು. ಈಗ ದಾಳಿಯನ್ನು ನಿಲ್ಲಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ. ಹಾಗಾಗಿ, ನಾನಾ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.
ವ್ಲಾಡಿಮಿರ್ ಪುಟಿನ್ ಪಲಾಯನ?
ಉಕ್ರೇನ್ ಮೇಲೆ ಯುದ್ಧ ಸಾರಿ, ಸಾವಿರಾರು ಜನರ ಸಾವಿಗೆ ಕಾರಣವಾಗಿರುವ ವ್ಲಾಡಿಮಿರ್ ಪುಟಿನ್ ಈಗ ದೇಶದಿಂದಲೇ ಪಲಾಯನ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ವ್ಯಾಗ್ನರ್ ಗ್ರೂಪ್ ಪಡೆಗಳು ಹಾಗೂ ಯೆವ್ಗೆನಿ ಪ್ರಿಗೋಜಿನ್ ಎಂಬ ಹಠಮಾರಿ ಸೇನಾಧಿಪತಿಯ ದಂಗೆಗೆ ಬೆಚ್ಚಿ ಪಲಾಯನ ಮಾಡಿರಬಹುದು. ವ್ಲಾಡಿಮಿರ್ ಪುಟಿನ್ ಸಂಚರಿಸುತ್ತಿದ್ದ ವಿಮಾನವು ರಡಾರ್ ಸಂಪರ್ಕ ಕಳೆದುಕೊಂಡಿರುವ ಕಾರಣ ಇಂತಹ ಗುಮಾನಿ ಇದೆ. ಆದರೆ, ಕ್ರೆಮ್ಲಿನ್ ಈ ಆರೋಪವನ್ನು ಅಲ್ಲಗಳೆದಿದೆ.
ದೇಶ
Women’s Reservation Bill : ಮಹಿಳಾ ಮೀಸಲಾತಿ ವಿರೋಧಿಸಿದವರಿಗೆ ಭೀತಿ ಶುರುವಾಗಿದೆ; ಮೋದಿ ಲೇವಡಿ
ಮಹಿಳಾ ಮೀಸಲಾತಿ ವಿಧೇಯಕವನ್ನು (Women’s Reservation Bill) ತೀವ್ರವಾಗಿ ವಿರೋಧಿಸಿದ ರಾಜಕೀಯ ಪಕ್ಷಗಳು ಮಹಿಳೆಯರ ಏಕತೆ ಮತ್ತು ಶಕ್ತಿಯಿಂದಾಗಿ ಸಂಸತ್ತಿನಲ್ಲಿ ಅದನ್ನು ಅನಿವಾರ್ಯವಾಗಿ ಬೆಂಬಲಿಸಬೇಕಾಯಿತು ಎಂದು ಪ್ರಧಾನಿ ಮೋದಿ ಹೇಳಿದರು
ನವದೆಹಲಿ: ಈ ಹಿಂದೆ ಮಹಿಳಾ ಮೀಸಲಾತಿ ವಿಧೇಯಕವನ್ನು (Women’s Reservation Bill) ವಿರೋಧಿಸಿದ್ದ ಮತ್ತು ಮೂರು ದಶಕಗಳಿಂದ ಬಾಕಿ ಉಳಿಸಿಕೊಂಡಿದ್ದ ರಾಜಕೀಯ ಪಕ್ಷಗಳು ಈಗ ಸಂಸತ್ತಿನ ಉಭಯ ಸದನಗಳಲ್ಲಿ ದಾಖಲೆಯ ಮತಗಳಿಂದ ವಿಧೇಯಕ ಅಂಗೀಕಾರವಾಗಿರುವುದನ್ನು ಕಂಡು ಭೀತಿಗೆ ಒಳಗಾಗಿ ನಡುಗುತ್ತಿವೆ ಎಂದು ಪ್ರಧಾನಿ ನರೇಂದ್ರ (PM Narendra Modi) ಮೋದಿ ಶನಿವಾರ ಹೇಳಿದ್ದಾರೆ.
ವಾರಣಾಸಿಯ (ಕಾಶಿ) ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದ ನಾರಿ ಶಕ್ತಿ ವಂದನ ಕಾರ್ಯಕ್ರಮದಲ್ಲಿ 5,000 ಮಹಿಳೆಯರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ ಅವರು “ಕಳೆದ ಮೂರು ದಶಕಗಳಿಂದ ಈ ವಿಧೇಯಕ ಬಾಕಿ ಉಳಿದಿತ್ತು. ಆದರೆ ಸಂಸತ್ತಿನ ಉಭಯ ಸದನಗಳಲ್ಲಿ ತಾಯಂದಿರು ಮತ್ತು ಸಹೋದರಿಯರ ಏಕತೆ ಮತ್ತು ಶಕ್ತಿಯಿಂದಾಗಿ ಅದು ಅಂಗೀಕಾರಗೊಂಡಿದೆ. ಇದೇ ವೇಳೆ ವಿಧೇಯಕವನ್ನು ಸತತವಾಗಿ ವಿರೋಧಿಸಿದ್ದ ರಾಜಕೀಯ ಪಕ್ಷಗಳು ಅನಿವಾರ್ಯವಾಗಿ ಬೆಂಬಲಕ್ಕೆ ನಿಂತತು. ಆ ಎಲ್ಲ ರಾಜಕೀಯ ಪಕ್ಷಗಳು ಮಹಿಳೆಯರ ಬಗ್ಗೆ ಹೆದರುತ್ತಿವೆ. ಅವರು ನಡುಗುತ್ತಿದ್ದಾರೆ. ಹೀಗಾಗಿ ವಿಧೇಯಕವನ್ನು ಬೆಂಬಲಿಸಿದರು ಮತ್ತು ಅದನ್ನು ಸಂಸತ್ತಿನ ಉಭಯ ಸದನಗಳಲ್ಲಿ ದಾಖಲೆಯ ಮತಗಳಿಂದ ಅಂಗೀಕರಿಸಿದರು ಎಂದು ಅವರು ಹೇಳಿದರು.
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕರಿಸಿದ ಬಳಿಕ ಕಾಶಿಗೆ ಬಂದಿರುವದು ಅದೃಷ್ಟದ ವಿಷಯ ಎಂಬುದಾಗಿಯೂ ಇದೇ ವೇಳೆ ಮೋದಿ ಹೇಳಿದರು.
ಕಾಶಿಯಲ್ಲಿ ಮಾತೃಶಕ್ತಿಯ ವೈಭವ
ಕಾಶಿ ನಗರ ತಾಯಿ ಕೂಷ್ಮಾಂಡ, ತಾಯಿ ಶೃಂಗಾರ ಗೌರಿ, ತಾಯಿ ಅನ್ನಪೂರ್ಣ ಮತ್ತು ತಾಯಿ ಗಂಗಾ ಇರುವ ಪವಿತ್ರ ನಗರ. ಮಾತೃಶಕ್ತಿಯ ವೈಭವವು ಈ ಸ್ಥಳದ ಪ್ರತಿಯೊಂದು ಭಾಗಕ್ಕೂ ಅಂಟಿಕೊಂಡಿದೆ. ವಿಂಧ್ಯಾವಾಸಿನಿ ದೇವಿ ಕೂಡ ಬನಾರಸ್ ನಿಂದ ಬಹಳ ದೂರದಲ್ಲಿಲ್ಲ. ಅಹಲ್ಯಾಬಾಯಿ ಹೋಳ್ಕರ್ ಅವರ ಸತ್ಕಾರ್ಯಗಳಿಗೆ ಕಾಶಿ ನಗರವು ಸಾಕ್ಷಿಯಾಗಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ : Women’s Reservation Bill: ಮೋದಿಯವರ ಮಹಿಳಾ ಮೀಸಲಾತಿ 2024, 2029, 2034ರಲ್ಲೂ ಜಾರಿಯಾಗಲ್ಲ: ಸಿದ್ದರಾಮಯ್ಯ
ಮಹಾದೇವನಿಗಿಂತ ಮೊದಲು ತಾಯಿ ಪಾರ್ವತಿ ಮತ್ತು ಗಂಗೆಯನ್ನು ಪೂಜಿಸುವ ಜನರು ನಾವು. ನಮ್ಮ ಕಾಶಿ ರಾಣಿ ಲಕ್ಷ್ಮಿಬಾಯಿಯಂತವರ ಜನ್ಮಸ್ಥಳವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷ್ಮಿಬಾಯಿಯಂತಹ ರಾಣಿಯಿಂದ ಹಿಡಿದು ಮಿಷನ್ ಚಂದ್ರಯಾನವನ್ನು ಮುನ್ನಡೆಸಿದ ಮಹಿಳಾ ವಿಜ್ಞಾನಿಗಳವರೆಗೆ ನಾವು ಪ್ರತಿ ಅವಧಿಯಲ್ಲೂ ಮಹಿಳಾ ನಾಯಕತ್ವದ ಶಕ್ತಿಯನ್ನು ಸಾಬೀತುಪಡಿಸಿದ್ದೇವೆ ಎಂದು ಮೋದಿ ಅವರು ಹೇಳಿದರು. ನಾರಿ ಶಕ್ತಿ ವಂದನ ಕಾಯ್ದೆಯು ವಿಶಾಲ ದೃಷ್ಟಿಕೋನವನ್ನು ಹೊಂದಿದೆ ಎಂದು ಅವರು ನುಡಿದರು.
ಮಹಿಳೆಯರ ಸಬಲೀಕರಣ
ಮಹಿಳೆಯರು ಸಾಧನೆಗೆ ಯಾರ ಸಹಾಯ ಅಗತ್ಯವಿಲ್ಲದಂತಹ ವ್ಯವಸ್ಥೆಯನ್ನು ರಚಿಸಲು ನಾವು ಬಯಸುತ್ತೇವೆ. ಇದಕ್ಕಾಗಿ, ಕಾನೂನಿನ ಜೊತೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ಬಲಪಡಿಸುವುದು ಅವಶ್ಯಕ. ಆದ್ದರಿಂದ, ಈ ಕಾನೂನನ್ನು ನಾರಿ ಶಕ್ತಿ ವಂದನ್ ಕಾಯ್ದೆ ಎಂದು ಹೆಸರಿಸಿದ್ದೇವೆ. ಕೆಲವು ಜನರಿಗೆ ಇದರಲ್ಲಿಯೂ ವಂದನ್ ಎಂಬ ಪದದೊಂದಿಗೆ ಸಮಸ್ಯೆಗಳಿವೆ. ನಾವು ನಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಪೂಜಿಸದಿದ್ದರೆ ಇನ್ನೇನು ಮಾಡಬಹುದು? ಮಹಿಳಾ ಶಕ್ತಿಯನ್ನು ಪೂಜಿಸುವುದರ ಅರ್ಥವೇನೆಂದು ಈ ಜನರಿಗೆ ಅರ್ಥವಾಗುವುದಿಲ್ಲ. ಇಂತಹ ನಕಾರಾತ್ಮಕ ಚಿಂತನೆಯನ್ನು ತಪ್ಪಿಸುವ ಮೂಲಕ ನಾವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಬೇಕು ಎಂಬುದಾಗಿ ಮೋದಿ ಹೇಳಿದರು.
ನಾರಿ ಶಕ್ತಿ ವಂದನ್ ಅಧಿನಿಯಮ್ ಕಾನೂನು “ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ” ಎಂದು ಮೋದಿ ಹೇಳಿದರು.
ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ
ಇಲ್ಲಿನ ಗಂಜಾರಿ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ತಮ್ಮ ಸರ್ಕಾರ ದೇಶದ ದೂರದ ಪ್ರದೇಶಗಳು ಸೇರಿದಂತೆ ಪ್ರತಿಯೊಂದು ಮೂಲೆಯಲ್ಲೂ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದರು.
1,115 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ 16 ಅಟಲ್ ಅವಸಿಯಾ ವಿದ್ಯಾಲಯಗಳನ್ನು (ವಸತಿ ಶಾಲೆಗಳು) ಮೋದಿ ಉದ್ಘಾಟಿಸಿದರು. ಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.
ದೇಶ
Organ Donation : ಅಂಗಾಂಗ ದಾನ ಮಾಡಿದವರ ಅಂತ್ಯ ಸಂಸ್ಕಾರಕ್ಕೆ ಸಕಲ ಸರ್ಕಾರಿ ಗೌರವ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಅಂಗಾಂಗ ದಾನಿಗಳಿಗೆ (Organ Donation) ಸಂಪೂರ್ಣ ಸರ್ಕಾರಿ ಗೌರವಗಳನ್ನು ಘೋಷಿಸಿದ್ದಾರೆ.
ಚೆನ್ನೈ: ಈ ಸೌಲಭ್ಯ ಕರ್ನಾಟಕದಲ್ಲಿ ಅಲ್ಲ. ತಮಿಳುನಾಡಲ್ಲಿ. ಶನಿವಾರ ಅಲ್ಲಿನ ಸಿಎಂ ಎಂ. ಕೆ ಸ್ಟಾಲಿನ್ ಅವರು ಈ ಘೋಷಣೆ ಮಾಡಿದ್ದಾರೆ. ಅಂಗಾಂಗ ದಾನಿಗಳ ಅಂತ್ಯಕ್ರಿಯೆಗೆ ತಮ್ಮ ಸರ್ಕಾರ ಸಂಪೂರ್ಣ ಸರ್ಕಾರಿ ಗೌರವಗಳನ್ನು ನೀಡಲಿದೆ ಎಂದು ಪ್ರಕಟಿಸಿದ್ದಾರೆ. ಮೆದುಳು ನಿಷ್ಕ್ರಿಯಗೊಂಡವರು ಮತ್ತು ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬಂದ ಅವರ ಕುಟುಂಬ ಸದಸ್ಯರ ತ್ಯಾಗವನ್ನು ಗೌರವಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಅಂಗಾಂಗ ದಾನದಲ್ಲಿ ತಮಿಳುನಾಡು ದೇಶದಲ್ಲಿ ಮುಂಚೂಣಿ ಸ್ಥಾನ ಪಡೆದಿದೆ. ಮೆದುಳು ನಿಷ್ಕ್ರಿಯಗೊಂಡವರ ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬರುವ ಕುಟುಂಬಗಳಿಂದಾಗಿ ತಮಿಳು ನಾಡಿಗೆ ಈ ಗೌರವ ಲಭಿಸಿದೆ ” ಎಂದು ಡಿಎಂಕೆ ಮುಖ್ಯಸ್ಥರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ನಲ್ಲಿ ಪ್ರಕಟಿಸಿದ್ದಾರೆ.
உடல் உறுப்பு தானத்தின் மூலம் நூற்றுக்கணக்கான நோயாளிகளுக்கு வாழ்வளிக்கும் அரும்பணியில் நாட்டின் முன்னணி மாநிலமாகத் தமிழ்நாடு தொடர்ந்து விளங்கி வருகின்றது.
— M.K.Stalin (@mkstalin) September 23, 2023
குடும்ப உறுப்பினர்கள் மூளைச்சாவு நிலையை அடைந்த துயரச் சூழலிலும், அவர்களின் உடல் உறுப்புகளைத் தானமாக அளித்திட முன்வரும்…
ಮೆದುಳು ನಿಷ್ಕ್ರಿಯಗೊಂಡ ಮತ್ತು ಅವರ ಅಂಗಾಂಗಗಳನ್ನು ಇತರರಿಗೆ ದಾನ ಮಾಡಿದ ವ್ಯಕ್ತಿಗಳಿಗೆ ಇನ್ನು ಮುಂದೆ ಅಂತಿಮ ವಿಧಿಗಳನ್ನು ನೆರವೇರಿಸುವಾಗ ರಾಜ್ಯ ಸರ್ಕಾರದ ಗೌರವಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ ಈ ಘೋಷಣೆಯನ್ನು ಶ್ಲಾಘಿಸಿದ ಪಿಎಂಕೆ ಮುಖ್ಯಸ್ಥ ಅನ್ಬುಮಣಿ ರಾಮದಾಸ್, ‘ಮೆದುಳು ನಿಷ್ಕ್ರಿಯಗೊಂಡವರು’ ಎಂದು ಘೋಷಿಸಲ್ಪಟ್ಟವರ ನಿಸ್ವಾರ್ಥ ತ್ಯಾಗಕ್ಕೆ ಇದಕ್ಕಿಂತ ಬೇರೆ ಯಾವುದೇ ಗೌರವ ಸಿಗದು ಎಂದು ಹೇಳಿದ್ದಾರೆ.
ಇದನ್ನೂ ಓದಿ : Gautam Adani : ಅದಾನಿ ಭೇಟಿ ಮಾಡಿದ ಶರದ್ ಪವಾರ್; ರಾಹುಲ್ ಮಾತಿಗೆ ಕಿಮ್ಮತ್ತಿಲ್ಲ ಎಂದ ಬಿಜೆಪಿ!
ತಮ್ಮ ಅಂಗಾಂಗಗಳನ್ನು ದಾನ ಮಾಡಿ ಅನೇಕ ಜೀವಗಳನ್ನು ಉಳಿಸುವವರಿಗೆ ಇದಕ್ಕಿಂತ ಉತ್ತಮ ಗೌರವ ಮತ್ತು ಮಾನ್ಯತೆ ನೀಡಲು ಸಾಧ್ಯವಿಲ್ಲ” ಎಂದು ಅವರು ಪಕ್ಷದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಂಗಾಂಗ ದಾನದಲ್ಲಿ ಪಾರದರ್ಶಕತೆಯನ್ನು ತರುವಂತೆ ಪಿಎಂಕೆ ನಾಯಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆಯುವ ಜನರಿಗೆ ಅಂಗಾಂಗಗಳ ಹಂಚಿಕೆಯಲ್ಲಿ ಆದ್ಯತೆ ನೀಡಬೇಕು ಎಂಬುದಾಗಿಯೂ ಅವರು ಹೇಳಿದ್ದಾರೆ.
ಉಡುಪಿ
Chaitra Kundapura : ವಂಚಕಿ ಚೈತ್ರಾ ಜತೆಗೆ ಕುಂದಾಪುರದ ಹೆಸರು ಬಳಸಬೇಡಿ; ತಾತ್ಕಾಲಿಕ ನಿರ್ಬಂಧ ವಿಧಿಸಿದ ಕೋರ್ಟ್
Chaitra Kundapura : ವಂಚಕಿ ಚೈತ್ರಾ ಜತೆ ಕುಂದಾಪುರದ ಹೆಸರು ಬಳಸಬಾರದು ಎಂಬ ಅರ್ಜಿದಾರರ ದಾವೆಗೆ ಕೋರ್ಟ್ ತಾತ್ಕಾಲಿಕವಾಗಿ ಓಕೆ ಎಂದಿದೆ. ಮುಂದಿನ ವಿಚಾರಣೆಯ ಬಳಿಕ ಇದಕ್ಕೆ ಸ್ಪಷ್ಟತೆ ಸಿಗಲಿದೆ.
ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ (Bynduru BJP Ticket) ಕೊಡಿಸುವುದಾಗಿ ಗೋವಿಂದ ಪೂಜಾರಿ (Govinda Poojari) ಅವರಿಗೆ ಐದು ಕೋಟಿ ರೂ. ವಂಚನೆ ಮಾಡಿರುವ ಕುಂದಾಪುರ ಮೂಲದ ಫೈರ್ ಬ್ರಾಂಡ್ ಭಾಷಣಕಾರ್ತಿ ಚೈತ್ರಾ (Chaitra Kundapura) ಹೆಸರು ಈಗ ಎಲ್ಲೆಡೆ ಫೇಮಸ್. ಆದರೆ, ಈಕೆಯ ಹೆಸರನ್ನು ಪದೇಪದೆ ವಂಚನೆಯ ಹೆಸರಲ್ಲಿ ಬಳಸುತ್ತಿರುವುದು ಕುಂದಾಪುರ (Kundapura Name of a town) ಎಂಬ ಊರಿಗೆ ಅಪಮಾನ ಮಾಡಿದಂತಾಗುತ್ತಿದೆ. ಹೀಗಾಗಿ ಆಕೆಯ ಹೆಸರಿನ ಜತೆಗಿರುವ ʻಕುಂದಾಪುರʼ ಹೆಸರನ್ನು ಬಳಸದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಎಂದು ಕುಂದಾಪುರದ ವ್ಯಕ್ತಿಯೊಬ್ಬರು ಕೋರ್ಟ್ ಮೊರೆ ಹೊಕ್ಕಿದ್ದರು. ಈ ಕೋರ್ಟ್ ಈ ಬೇಡಿಕೆಗೆ ತಾತ್ಕಾಲಿಕ ಅಸ್ತು (Court restricts media from using Kundapuara name with Chaitra) ಎಂದಿದೆ.
ವಂಚನೆ ಪ್ರಕರಣವಾಗಿರುವುದರಿಂದ, ಬಿಜೆಪಿ ಟಿಕೆಟ್ ವಂಚನೆಯಾಗಿರುವುದರಿಂದ, ಪ್ರಧಾನ ಆರೋಪಿ ಸಾಕಷ್ಟು ಜನಪ್ರಿಯಳಾಗಿರುವುದರಿಂದ ಆಕೆಯ ಹೆಸರು ಮತ್ತು ಸುದ್ದಿ ಗಮನ ಸೆಳೆದಿತ್ತು. ಹೀಗಾಗಿ ಆಕೆಯೊಂದಿಗೆ ಆಕೆಯ ಊರಿನ ಹೆಸರೂ ಜತೆಯಾಗಿ ಬರುತ್ತಿತ್ತು. ಇದು ಸಹಜವಾಗಿ ಅಲ್ಲಿನ ಜನರಿಗೆ ಬೇಸರ ಉಂಟು ಮಾಡಿದೆ.
ಇದನ್ನು ಗಮನಿಸಿದ ಕುಂದಾಪುರ ಮೂಲದ ಸದ್ಯ ಬೆಂಗಳೂರಿನಲ್ಲಿರುವ ವ್ಯಕ್ತಿಯೊಬ್ಬರು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆಕೆಯ ಹೆಸರಿನ ಜತೆ ಕುಂದಾಪುರದ ಹೆಸರು ತಳುಕು ಹಾಕುವುದು ಬೇಡ ಎಂದು ಕೋರಿದ್ದರು.
ಬೆಂಗಳೂರಿನ ಬಸವನಗುಡಿಯಲ್ಲಿ ಕಾಫಿ ಶಾಪ್ ಹೋಟೆಲ್ ಮಾಲೀಕರು ಆದ ಕುಂದಾಪುರ ಮೂಲದ ಗಣೇಶ್ ಶೆಟ್ಟಿ ದಾವೆ ಹೂಡಿದವರು. ನಾನು ಕುಂದಾಪುರ ಮೂಲದವನಾಗಿದ್ದು, ಹೋಟೆಲ್ ನಡೆಸುತ್ತಿದ್ದೇನೆ. ಹೋಟೆಲ್ ಗೆ ಬರುವ ಗ್ರಾಹಕರು ಕುಂದಾಪುರ ಬಗ್ಗೆ ವಿಚಾರಿಸತೊಡಗಿದ್ದಾರೆ. ಇದರಿಂದ ಕುಂದಾಪುರ ದೂಷಣೆಗೆ ಒಳಗಾಗುತ್ತಿದೆ. ಈ ಒಂದು ಘಟನೆಯಿಂದ ಅಲ್ಲಿನ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು ಎಂದು ಅವರು ದಾವೆಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.
ಕುಂದಾಪುರವು ಉಡುಪಿ ಜಿಲ್ಲೆಯ ಪ್ರಮುಖ ಪಟ್ಟಣವಾಗಿದೆ. 10 ಮತ್ತು 11ನೇ ಶತಮಾನದಲ್ಲಿ ಅಲುಪು ರಾಜವಂಶಸ್ಥರಾದ ಕುಂದವರ್ಮ ಅವರು ಕುಂದಾಪುರದಲ್ಲಿ ಆಳ್ವಿಕೆ ನಡೆಸಿದ್ದು. ಐತಿಹಾಸಿಕ ಕುಂದೇಶ್ವರ ದೇವಸ್ಥಾನ ಸಹ ನಿರ್ಮಿಸಿದ್ದಾರೆ. ಕದಂಬರು, ಚಾಲುಕ್ಯ, ಹೊಯ್ಸಳ, ವಿಜಯನಗರ ಅರಸರು ಕುಂದಾಪುರ ಪಟ್ಟಣದ ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಂತರ ಪೋರ್ಚಗೀಸರು, ಜರ್ಮನ್ನರು, ಟಿಪ್ಪುಸುಲ್ತಾನ್, ಬ್ರಿಟಿಷರು ಕುಂದಾಪುರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅನೇಕ ಐತಿಹಾಸಿಕ ದೇವಸ್ಥಾಗಳಿಂದ ಕುಂದಾಪುರ ಖ್ಯಾತಿ ಪಡೆದಿದೆ ಎಂದು ದಾವೆಯಲ್ಲಿ ವಿವರಿಸಲಾಗಿತ್ತು.
ವಂಚನೆ ಆರೋಪದಲ್ಲಿ ಚೈತ್ರಾ ಹಾಗೂ ಇತರೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೈತ್ರ ಸಹ ಕುಂದಾಪುರದ ಮೂಲದವರಾಗಿದ್ದಾರೆ. ಆದರೆ, ಈ ವಂಚನೆ ಪ್ರಕರಣಕ್ಕೆ ಮಾಧ್ಯಮಗಳು ಚೈತ್ರಾ ಹೆಸರು ಬಳಸುವಾಗ ಕುಂದಾಪುರ ಎಂಬುದಾಗಿ ಉಲ್ಲೇಖಿಸುತ್ತಿವೆ. ಇದರಿಂದ ಕುಂದಾಪುರ ಪಟ್ಟಣದ ಹೆಸರು ಮತ್ತು ಘನತೆಗೆ ಧಕ್ಕೆಯಾಗುತ್ತಿದೆ. ಕುಂದಾಪುರ ಎಂದು ಉಲ್ಲೇಖಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸುವುದು ಅವಹೇಳನಕಾರಿಯಾಗಿದೆ ಎಂದು ದಾವೆಯಲ್ಲಿ ಆಕ್ಷೇಪಿಸಲಾಗಿತ್ತು.
ಇದನ್ನೂ ಓದಿ: Chaitra Kundapura : ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಪರಪ್ಪನ ಅಗ್ರಹಾರಕ್ಕೆ; 14 ದಿನ ನ್ಯಾಯಾಂಗ ಬಂಧನ
ಹೀಗಾಗಿ ಮಾಧ್ಯಮಗಳು ಆಕೆಯ ವಿಚಾರ ಬಂದಾಗ ಕುಂದಾಪುರ ಎಂಬ ಹೆಸರನ್ನು ಉಲ್ಲೇಖಿಸದಂತೆ ಸೂಚನೆ ನೀಡಬೇಕು ಎಂದು ಅವರು ಕೋರಿದ್ದರು. ಜತೆಗೆ ಕುಂದಾಪುರ ಹೆಸರು ಉಲ್ಲೇಖಿಸಿ ಪ್ರಸಾರ ಮಾಡಿರುವ ಸುದ್ದಿ, ವೀಡಿಯೋ, ಲೇಖನ, ಪೋಸ್ಟ್, ಲಿಂಕ್‌ಗಳನ್ನು ಶಾಶ್ವತವಾಗಿ ತೆಗೆದುಹಾಕುವಂತೆ ಸೂಚಿಸಬೇಕು ಎಂದು ಕೂಡಾ ಕೇಳಿದ್ದರು.
ಇದೀಗ ಕೋರ್ಟ್ ಅವರ ದಾವೆಯನ್ನು ಸ್ವೀಕರಿಸಿದ್ದು ಮುಂದಿನ ವಿಚಾರಣೆಯ ವರೆಗೆ ಮಾಧ್ಯಮಗಳು ಆಕೆಯ ಹೆಸರಿನ ಜತೆಗೆ ಕುಂದಾಪುರ ಎಂಬ ಹೆಸರನ್ನು ಬಳಸದಂತೆ ತಾತ್ಕಾಲಿಕ ನಿರ್ಬಂಧವನ್ನು ವಿಧಿಸಿದೆ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ವಿಚಾರಣೆಯವರೆಗೆ ಈ ನಿರ್ಬಂಧವನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.
ದೇಶ
Illicit Affair : ಅಕ್ರಮ ಸಂಬಂಧ ನೋಡಿದ ಮಗನನ್ನೇ ಕೊಂದ ಹೆತ್ತಮ್ಮ; 2 ವರ್ಷದ ಬಳಿಕ ಪ್ರಿಯಕರನ ಜತೆ ಅರೆಸ್ಟ್
8 ವರ್ಷದ ಮಗುವಿನ ತಾಯಿ ಹಾಗೂ ಚಿಕ್ಕಪ್ಪ ಸೇರಿಕೊಂಡು (Illicit Affair) ಕತ್ತು ಹಿಸುಕಿ ಕೊಂದಿದ್ದಾರೆ. ಅವರು ಮಗುವಿನ ಮೃತ ದೇಹವನ್ನು ಹೊಲದಲ್ಲಿ ಕೊಂದ ನಂತರ ಸಮಾಧಿ ಮಾಡಿದ್ದರು.
ಜೈಪುರ : ತನ್ನ ಮತ್ತು ಭಾವನ ನಡುವಿನ ಅಕ್ರಮ ಸಂಬಂಧವನ್ನು (Illicit Affair) ನೋಡಿದ ಮಗುವನ್ನು ಕೊಂದು ಹಾಕಿದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ ಘಟನೆ ರಾಜಸ್ಥಾನದ ಭರತ್ಪುರದಲ್ಲಿ ನಡೆದಿದೆ. ಕೊಲೆ ಆರೋಪ ಹಾಗೂ ಸಾಕ್ಷಿ ನಾಶ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಭಾವನನ್ನು ಬಂಧಿಸಲಾಗಿದೆ. ಅವರಿಬ್ಬರು ಮಗುವಿನ ಕತ್ತು ಹಿಸುಕಿ ಕೊಂದು ಮೃತದೇಹವನ್ನು ಹೊಲದಲ್ಲಿ ಹೂತು ಹೋಗಿದ್ದರು. ಪ್ರಕರಣದ ಬಗ್ಗೆ ನಾನಾ ಹಂತಗಳಲ್ಲಿ ತನಿಖೆ ನಡೆದು ಎರಡು ವರ್ಷಗಳ ಬಳಿಕ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆರಂಭದಲ್ಲಿ ಅವರು ನಾನಾ ನೆಪ ಹೇಳಿ ಬಚಾವಾಗಿದ್ದರು. ಆದರೆ ಹತ್ಯೆಯಾದ ಮಗುವಿನ ತಂದೆಯ ನಿರಂತರ ಹೋರಾಟದ ಬಳಿಕ ಆರೋಪಿಗಳು ಕಾನೂನು ಬಲೆಗೆ ಬಿದ್ದಿದ್ದಾರೆ.
ಯಾಕೆ ಕೊಲೆ ಮಾಡಿದ್ದರು
ಬಂಧನಕ್ಕೊಳಗಾದವರನ್ನು ಕೃಷ್ಣ ಕಾಂತ್ ಮತ್ತು ತಾಯಿ ಹೇಮಲತಾ ಎಂದು ಗುರುತಿಸಲಾಗಿದೆ. ಕೃಷ್ಣಕಾಂತ್ ನ ಸಹೋದರನ ಪತ್ನಿಯೇ ಹೇಮಲತಾ. ಅವರಿಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು. ಒಂದು ದಿನ ಅವರಿಬ್ಬರು ಹೊಲದಲ್ಲಿ ಲೈಂಗಿಕ ಸಂಪರ್ಕ ನಡೆಸುತ್ತಿದ್ದಾಗ ಮಗ ಗೋಲು ಬಂದು ನೋಡಿದ್ದ. ಆತ ವಿಷಯವನ್ನು ಎಲ್ಲರಿಗೂ ತಿಳಿಸುತ್ತಾನೆ ಎಂಬ ಭಯದಿಂದ ಅವರಿಬ್ಬರೂ ಸೇರಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದರು.
ರುಬ್ಪಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಚಂದನ್ಪುರ ಗ್ರಾಮದಲ್ಲಿ 2021 ರಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಮಗುವಿನ ತಂದೆ ಗ್ಯಾನ್ ಸಿಂಗ್ ತನ್ನ ಮಗ ಗೋಲು ಫೆಬ್ರವರಿ 2021 ರಲ್ಲಿ ಕಾಣೆಯಾದ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದರು. ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಮೂರು ದಿನಗಳ ನಂತರ ಗ್ರಾಮದ ಹೊಲದಲ್ಲಿ ಗೋಲು ಮೃತ ದೇಹ ಪತ್ತೆಯಾಗಿತ್ತು.
ಪೊಲೀಸರು ಕೊಲೆಗಾರರನ್ನು ಬಂಧಿಸಲು ತನಿಖೆಯನ್ನು ಪ್ರಾರಂಭಿಸಿದ್ದರೂ ಕೊಲೆಗಾರರನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಬಳಿಕ ಪೊಲೀಸರು ಡಿಸೆಂಬರ್ 2021 ರಂದು ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು. ಆದರೆ ಮಗುವಿನ ತಂದೆ ಬಿಟ್ಟುಕೊಡಲಿಲ್ಲ. ತನ್ನ ಮಗನ ಕೊಲೆಗಾರರನ್ನು ಕಂಡುಹಿಡಿಯದಿರುವ ಬಗ್ಗೆ ಜೈಪುರ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದರು ಹಾಗೂ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಈ ವಿಚಾರಣೆ ನಡೆಸಿದ ಜೈಪುರ ಹೈಕೋರ್ಟ್ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸುವಂತೆ ಆದೇಶಿಸಿತ್ತು.
ತಂಡ ರಚನೆ
ಬಯಾನಾದ ಸರ್ಕಲ್ ಆಫೀಸರ್ (ಸಿಒ) ನಿತಿರಾಜ್ ಸಿಂಗ್ ಅವರ ನೇತೃತ್ವದಲ್ಲಿ ಕೊಲೆ ಆರೋಪಿಗಳ ಪತ್ತೆ ತಂಡವನ್ನು ರಚಿಸಲಾಯಿತು. ಎಂಟು ವರ್ಷದ ಮಗುವಿನ ಕೊಲೆಗಾರರನ್ನು ಬಂಧಿಸಲು ಮತ್ತೊಮ್ಮೆ ತನಿಖೆಯನ್ನು ಪ್ರಾರಂಭಿಸಲಾಯಿತು. ಈ ವೇಳೆ ಮಗುವಿನ ಚಿಕ್ಕಪ್ಪ ಮತ್ತು ತಾಯಿ ಅಕ್ರಮ ಸಂಬಂಧ ಹೊಂದಿದ್ದಾರೆಂದು ತಿಳಿಯಿತು. ಚಿಕ್ಕಪ್ಪ ಕೃಷ್ಣ ಕಾಂತ್ ಮತ್ತು ತಾಯಿ ಹೇಮಲತಾ ಅವರು ಹೆಚ್ಚಿನ ವಿಚಾರಣೆಗೆ ಕರೆಯಲಾಗಿತ್ತು.
ಇದನ್ನೂ ಓದಿ : Murder Case : ನೀರಿನ ತೊಟ್ಟಿಯಲ್ಲಿ ತೇಲುತ್ತಿತ್ತು ಮಗುವಿನ ಶವ; ಮೊಮ್ಮಗಳನ್ನೇ ಕೊಂದು ಬಿಟ್ಟನಾ!
ಆರಂಭದಲ್ಲಿ, ಅವರಿಬ್ಬರು ಮಗುವಿನ ಕೊಲೆಯಲ್ಲಿ ತಮ್ಮ ಪಾತ್ರವನ್ನು ನಿರಾಕರಿಸಿದ್ದರು. ಆದಾಗ್ಯೂ, ಸಮಗ್ರ ವಿಚಾರಣೆಯ ನಂತರ ಅವರಿಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡರು. ತಾವಿಬ್ಬರೂ ಏಕಾಂತದಲ್ಲಿ ಇರುವ ಸಮಯವನ್ನು ಮಗುವು ನೋಡಿತ್ತು. ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಹೇಳಿಕೊಂಡರೆ ಎಂಬ ಭಯದಿಂದ ಕತ್ತು ಹಿಸುಕಿ ಕೊಂದಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲ ಆಗವಾಗ ಎರಡು ವರ್ಷ ಕಳೆದಿತ್ತು. ಆರೋಪಿಗಳು ಬಂಧನವಾದ ಬಳಿಕ ಗೋಲುವಿನ ತಂದೆಗೆ ಸಮಾಧಾನವಾಗಿದೆ.
-
ಕರ್ನಾಟಕ24 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಸುವಚನ18 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ9 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ವೈರಲ್ ನ್ಯೂಸ್4 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ದೇಶ14 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ಅಂಕಣ17 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ದೇಶ23 hours ago
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
-
South Cinema6 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!