Site icon Vistara News

Non-NATO Ally | ಪಾಕಿಸ್ತಾನಕ್ಕೆ ಮತ್ತೊಂದು ಸಂಕಟ! ಕಳಚಲಿದೆಯಾ ಅಮೆರಿಕದ ನ್ಯಾಟೋಯೇತರ ಮಿತ್ರ ರಾಷ್ಟ್ರ ಪಟ್ಟ?

Non-Nato Ally

ವಾಷಿಂಗ್ಟನ್: ಆರ್ಥಿಕ ಸಂಕಟದಿಂದ ತತ್ತರಿಸುತ್ತಿರುವ ಪಾಕಿಸ್ತಾನಕ್ಕೆ ಈಗ ಮತ್ತೊಂದು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ಹಿಂದೆಯೇ ಅಮೆರಿಕವು, ಪಾಕಿಸ್ತಾನಕ್ಕೆ ಆರ್ಥಿಕ ನೆರವು ಒದಗಿಸುವುದನ್ನು ನಿಲ್ಲಿಸಿದೆ. ಹಾಗಿದ್ದೂ, ಪಾಕಿಸ್ತಾನವು ಅಮೆರಿಕದ ನಾನ್-ನ್ಯಾಟೋ (NATO) ಪ್ರಮುಖ ಮಿತ್ರ ರಾಷ್ಟ್ರಗಳ ಪಟ್ಟಿಯಲ್ಲಿ ಜಾಗ ಪಡೆದುಕೊಂಡಿತ್ತು. ಇದೀಗ, ಅಮೆರಿಕದ ಸಂಸದರೊಬ್ಬರು ನ್ಯಾನ್-ನ್ಯಾಟೋ ಪ್ರಮುಖ ಮಿತ್ರ (Non-NATO Ally) ರಾಷ್ಟ್ರಗಳ ಪಟ್ಟಿಯಿಂದ ಪಾಕಿಸ್ತಾನವನ್ನು ಕೈ ಬಿಡುವ ಬಗ್ಗೆ ವಿಧೇಯಕವನ್ನು ಮಂಡಿಸಿದ್ದಾರೆ.

ಅರಿಝೋನಾದ ಫಿಫ್ತ್ ಡಿಸ್ಟ್ರಿಕ್ಟ್ ಪ್ರತಿನಿಧಿಸುವ ಸಂಸದ ಆ್ಯಂಡಿ ಬಿಗ್ಸ್ ಅವರು ಈ ವಿಧೇಯಕವನ್ನು ಮಂಡಿಸಿದ್ದಾರೆ. ನ್ಯಾಟೋಯೇತರ ಪ್ರಮುಖ ಮಿತ್ರ ರಾಷ್ಟ್ರವಾಗಿ ಪಾಕಿಸ್ತಾನವನ್ನು ಕೈ ಬಿಡುವ ಬಗ್ಗೆ ಯೋಚಿಸಲಾಗುತ್ತಿದೆ. ಈಗ ವಿಧೇಯಕವನ್ನು ಮಂಡಿಸಲಾಗಿದೆಯಷ್ಟೇ. ಅಮೆರಿಕ ಅಧ್ಯಕ್ಷರು ಈ ವಿಧೇಯಕಕ್ಕೆ ಅಂಕಿತ ಹಾಕುವ ಮುನ್ನ ಅಮೆರಿಕ ಕಾಂಗ್ರೆಸ್‌ನ ಸೆನೆಟ್ ಹಾಗೂ ಜನಪ್ರತಿನಿಧಿಗಳ ಸಭೆ ತನ್ನ ಒಪ್ಪಿಗೆಯನ್ನು ನೀಡಬೇಕಾಗುತ್ತದೆ. ಆ ಮೇಲಷ್ಟೇ ಅದು ಕಾನೂನು ಆಗಿ ಜಾರಿಯಾಗಲಿದೆ.

ಸಾಮಾನ್ಯವಾಗಿ ವೈಯಕ್ತಿಕವಾಗಿ ಮಂಡಿಸಲಾದ ಈ ರೀತಿ ವಿಧೇಯಕಗಳು ಕಾನೂನು ಆಗಿ ಬದಲಾಗುವುದು ಬಹಳ ವಿರಳ. ಆದರೆ, ಪಾಕಿಸ್ತಾನದ ಕಡೆಗೆ ಅಮೆರಿಕ ಜನರು ಯಾವ ಭಾವನೆಗಳನ್ನು ಹೊಂದಿದ್ದಾರೆಂಬುದನ್ನು ಈ ವಿಧೇಯಕ ಸಾಂಕೇತಿಸುತ್ತದೆ. ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರ ಬಿಂದುವಾಗಿದ್ದು, ಸರ್ಕಾರಿ ಪ್ರಾಯೋಜಿತ ಉಗ್ರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪವನ್ನು ಹೊತ್ತಿವೆ.

ಇದನ್ನೂ ಓದಿ | Shehbaz Sharif | ಪಾಕಿಸ್ತಾನ ಪಾಠ ಕಲಿತಿದೆ, ನಮಗೆ ಭಾರತದ ಜತೆ ಯುದ್ಧ ಬೇಡ: ಪಾಕ್‌ ಪಿಎಂ

Exit mobile version