Site icon Vistara News

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

Crowd mistakes Arabic words as Quran Verses on the kurta and Pak Women mobbed

ನವದೆಹಲಿ: ಅರೇಬಿಕ್ ಅಕ್ಷರಗಳ (Arabic Text) ಮುದ್ರಣವಿರುವ ಕುರ್ತಾ ತೊಟ್ಟಿದ್ದಕ್ಕೆ ಪಾಕಿಸ್ತಾನ ಮಹಿಳೆ (Pak Woman) ಮೇಲೆ ಗುಂಪೊಂದು ಹಲ್ಲೆ ಮುಂದಾದ ಘಟನೆ ನಡೆದಿದೆ(Woman Mobbed in Lahore). ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು, ಆ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ(Pakistan Police). ಧರ್ಮನಿಂದೆಯ (blasphemy) ಆರೋಪ ಹೊತ್ತಿರುವ ಮಹಿಳೆ, ತನ್ನ ಪತಿಯೊಂದಿಗೆ ಅರೇಬಿಕ್ ಅಕ್ಷರಗಳ ಮುದ್ರಣವಿರುವ ಕುರ್ತಾವನ್ನು ಧರಿಸಿ ಲಾಹೋರ್‌ನ ರೆಸ್ಟೋರೆಂಟ್‌ಗೆ ಭೇಟಿ ನೀಡಿದಾಗ, ಕೆಲವರು ಅದನ್ನು ಕುರಾನ್ ಸಾಲುಗಳೆಂದು (Quran Verses) ಭಾವಿಸಿ ಆಕೆಯ ಮೇಲೆ ಹಲ್ಲೆಗೆ ಮುಂದಾದರು ಎಂದು ತಿಳಿದು ಬಂದಿದೆ.

ಹಲವರಿದ್ದ ಗುಂಪು, ಮಹಿಳಯ ಧರಿಸಿದ್ದ ಕುರ್ತಾವನ್ನು ತೆಗೆಯುವಂತೆ ಪಟ್ಟು ಹಿಡಿದರು. ಆಗ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆ ಮಹಿಳೆಯನ್ನು ಗುಂಪಿನಿಂದ ರಕ್ಷಣೆ ಮಾಡಲಾಯಿತು. ಗುಂಪನ್ನು ಸಮಾಧಾನಪಡಿಸಲು ಪ್ರಯತ್ನಿಸಿದ ಮತ್ತು ಮಹಿಳೆಯನ್ನು ರೆಸ್ಟೋರೆಂಟ್‌ನಿಂದ ಹೊರಗೆ ಕರೆದೊಯ್ದ ಮಹಿಳಾ ಅಧಿಕಾರಿಯನ್ನು ಪೊಲೀಸರು ಶ್ಲಾಘಿಸಿದರು.

ಪೊಲೀಸ್ ಅಧಿಕಾರಿ ಸೈಯದಾ ಶೆಹರ್ಬಾನೊ ನಖ್ವಿ ಯಾವುದೇ ಹಿಂಸಾಚಾರವನ್ನು ನಡೆಸದಂತೆ ಜನರನ್ನು ಒತ್ತಾಯಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಹಿಳೆಯು ತನ್ನ ಪತಿಯೊಂದಿಗೆ ಶಾಪಿಂಗ್‌ಗೆ ಹೋಗಿದ್ದಳು. ಅವಳು ಕುರ್ತಾವನ್ನು ಧರಿಸಿದ್ದಳು, ಅದರಲ್ಲಿ ಕೆಲವು ಪದಗಳನ್ನು ಬರೆಯಲಾಗಿದೆ. ಅದನ್ನು ನೋಡಿದ ಕೆಲವರು ಕುರ್ತಾವನ್ನು ತೆಗೆಯುವಂತೆ ಕೇಳಿದರು. ಆಗ ಗೊಂದಲ ಉಂಟಾಗಿದೆ ಎಂದು ನಖ್ವಿ ಹೇಳಿದ್ದಾರೆ.

ನಂತರ, ಪೊಲೀಸ್ ಠಾಣೆಗೆ ಕರೆದೊಯ್ದ ಮಹಿಳೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆಯಾಚಿಸಿದರು. “ನನಗೆ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿರಲಿಲ್ಲ. ಕುರ್ತಾ ಉತ್ತಮ ವಿನ್ಯಾಸ ಹೊಂದಿದ್ದರಿಂದ ಖರೀದಿಸಿದ್ದೇನೆ” ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಈ ಸುದ್ದಿಯನ್ನೂ ಓದಿ: ದೇವ ನಿಂದನೆ ಆರೋಪ: ನಾನೇ ದೇವರು ಎಂದ ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್‌ ದಾಖಲಿಸಲು ಜೆಡಿಎಸ್‌ ಆಗ್ರಹ

Exit mobile version