Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ - Vistara News

ವಿದೇಶ

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

Pak Woman: ದೈವನಿಂದೆಯ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿ ಮಹಿಳೆಯೊಬ್ಬಳ ಮೇಲೆ ಜನರು ಹಲ್ಲೆಗೆ ಮುಂದಾದರು. ಈ ವೇಳೆ, ಮಧ್ಯ ಪ್ರವೇಶಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ.

VISTARANEWS.COM


on

Crowd mistakes Arabic words as Quran Verses on the kurta and Pak Women mobbed
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಅರೇಬಿಕ್ ಅಕ್ಷರಗಳ (Arabic Text) ಮುದ್ರಣವಿರುವ ಕುರ್ತಾ ತೊಟ್ಟಿದ್ದಕ್ಕೆ ಪಾಕಿಸ್ತಾನ ಮಹಿಳೆ (Pak Woman) ಮೇಲೆ ಗುಂಪೊಂದು ಹಲ್ಲೆ ಮುಂದಾದ ಘಟನೆ ನಡೆದಿದೆ(Woman Mobbed in Lahore). ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು, ಆ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ(Pakistan Police). ಧರ್ಮನಿಂದೆಯ (blasphemy) ಆರೋಪ ಹೊತ್ತಿರುವ ಮಹಿಳೆ, ತನ್ನ ಪತಿಯೊಂದಿಗೆ ಅರೇಬಿಕ್ ಅಕ್ಷರಗಳ ಮುದ್ರಣವಿರುವ ಕುರ್ತಾವನ್ನು ಧರಿಸಿ ಲಾಹೋರ್‌ನ ರೆಸ್ಟೋರೆಂಟ್‌ಗೆ ಭೇಟಿ ನೀಡಿದಾಗ, ಕೆಲವರು ಅದನ್ನು ಕುರಾನ್ ಸಾಲುಗಳೆಂದು (Quran Verses) ಭಾವಿಸಿ ಆಕೆಯ ಮೇಲೆ ಹಲ್ಲೆಗೆ ಮುಂದಾದರು ಎಂದು ತಿಳಿದು ಬಂದಿದೆ.

ಹಲವರಿದ್ದ ಗುಂಪು, ಮಹಿಳಯ ಧರಿಸಿದ್ದ ಕುರ್ತಾವನ್ನು ತೆಗೆಯುವಂತೆ ಪಟ್ಟು ಹಿಡಿದರು. ಆಗ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆ ಮಹಿಳೆಯನ್ನು ಗುಂಪಿನಿಂದ ರಕ್ಷಣೆ ಮಾಡಲಾಯಿತು. ಗುಂಪನ್ನು ಸಮಾಧಾನಪಡಿಸಲು ಪ್ರಯತ್ನಿಸಿದ ಮತ್ತು ಮಹಿಳೆಯನ್ನು ರೆಸ್ಟೋರೆಂಟ್‌ನಿಂದ ಹೊರಗೆ ಕರೆದೊಯ್ದ ಮಹಿಳಾ ಅಧಿಕಾರಿಯನ್ನು ಪೊಲೀಸರು ಶ್ಲಾಘಿಸಿದರು.

ಪೊಲೀಸ್ ಅಧಿಕಾರಿ ಸೈಯದಾ ಶೆಹರ್ಬಾನೊ ನಖ್ವಿ ಯಾವುದೇ ಹಿಂಸಾಚಾರವನ್ನು ನಡೆಸದಂತೆ ಜನರನ್ನು ಒತ್ತಾಯಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಹಿಳೆಯು ತನ್ನ ಪತಿಯೊಂದಿಗೆ ಶಾಪಿಂಗ್‌ಗೆ ಹೋಗಿದ್ದಳು. ಅವಳು ಕುರ್ತಾವನ್ನು ಧರಿಸಿದ್ದಳು, ಅದರಲ್ಲಿ ಕೆಲವು ಪದಗಳನ್ನು ಬರೆಯಲಾಗಿದೆ. ಅದನ್ನು ನೋಡಿದ ಕೆಲವರು ಕುರ್ತಾವನ್ನು ತೆಗೆಯುವಂತೆ ಕೇಳಿದರು. ಆಗ ಗೊಂದಲ ಉಂಟಾಗಿದೆ ಎಂದು ನಖ್ವಿ ಹೇಳಿದ್ದಾರೆ.

ನಂತರ, ಪೊಲೀಸ್ ಠಾಣೆಗೆ ಕರೆದೊಯ್ದ ಮಹಿಳೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆಯಾಚಿಸಿದರು. “ನನಗೆ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿರಲಿಲ್ಲ. ಕುರ್ತಾ ಉತ್ತಮ ವಿನ್ಯಾಸ ಹೊಂದಿದ್ದರಿಂದ ಖರೀದಿಸಿದ್ದೇನೆ” ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಈ ಸುದ್ದಿಯನ್ನೂ ಓದಿ: ದೇವ ನಿಂದನೆ ಆರೋಪ: ನಾನೇ ದೇವರು ಎಂದ ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್‌ ದಾಖಲಿಸಲು ಜೆಡಿಎಸ್‌ ಆಗ್ರಹ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

United Kingdom: ‘ಪ್ರಯಾಣಕ್ಕೆಅಪಾಯಕಾರಿ’ ದೇಶಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿದ ಬ್ರಿಟನ್​!

VISTARANEWS.COM


on

Pakistan
Koo

ನವದೆಹಲಿ: ಬ್ರಿಟನ್ ನ​ (United Kingdom) ಯುನೈಟೆಡ್ ಕಿಂಗ್​ಡಮ್​ ವಿದೇಶಾಂಗ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್​​ಸಿಡಿಒ) ನಾಗರಿಕರಿಗೆ ಪ್ರಯಾಣಿಸಲು ‘ತುಂಬಾ ಅಪಾಯಕಾರಿ’ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನವನ್ನು ಸೇರಿಸಿದೆ ಎಂದು ಮ್ಯಾಂಚೆಸ್ಟರ್ ಈವಿನಿಂಗ್ ನ್ಯೂಸ್ ಅನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ಶುಕ್ರವಾರ ವರದಿ ಮಾಡಿದೆ. ಎಫ್​​ಸಿಡಿಒ ನಿಷೇಧಿಸಿದ ಒಟ್ಟು ಪ್ರದೇಶಗಳ ಸಂಖ್ಯೆ ಇದೀಗ 24ಕ್ಕೆ ಏರಿದೆ.

ಈ ಪಟ್ಟಿಯು ಅಪರಾಧ, ಯುದ್ಧ, ಭಯೋತ್ಪಾದನೆ, ರೋಗ, ಹವಾಮಾನ ಪರಿಸ್ಥಿತಿಗಳು, ನೈಸರ್ಗಿಕ ವಿಪತ್ತುಗಳು ಮತ್ತು ಪ್ರಯಾಣಿಕರ ಸುರಕ್ಷತೆಗೆ ಬೆದರಿಕೆಗಳು ಸೇರಿದಂತೆ ಸಂಭಾವ್ಯ ಅಪಾಯಗಳನ್ನು ಆಧರಿಸಿದೆ. ರಷ್ಯಾ, ಉಕ್ರೇನ್, ಇಸ್ರೇಲ್, ಇರಾನ್, ಸುಡಾನ್, ಲೆಬನಾನ್, ಬೆಲಾರಸ್ ಮತ್ತು ಪ್ಯಾಲೆಸ್ಟೈನ್ ಪ್ರದೇಶಗಳು ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡ ದೇಶಗಳಾಗಿವೆ. ಈ ತಾಣಗಳು ಪ್ರಸ್ತುತ ಗಮನಾರ್ಹ ಯುದ್ಧ ಮತ್ತು ಮಿಲಿಟರಿ ಸಂಘರ್ಷಗಳಲ್ಲಿ ತೊಡಗಿವೆ.

ಅಫ್ಘಾನಿಸ್ತಾನ, ಬುರ್ಕಿನಾ ಫಾಸೊ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಚಾಡ್, ಹೈಟಿ, ಇರಾಕ್, ಇಸ್ರೇಲ್, ಲೆಬನಾನ್, ಲಿಬಿಯಾ, ಮಾಲಿ, ನೈಜರ್, ಉತ್ತರ ಕೊರಿಯಾ, ಸೊಮಾಲಿಯಾ, ಸೊಮಾಲಿಲ್ಯಾಂಡ್, ದಕ್ಷಿಣ ಸುಡಾನ್, ಸಿರಿಯಾ, ವೆನೆಜುವೆಲಾ ಮತ್ತು ಯೆಮೆನ್ ಕಪ್ಪುಪಟ್ಟಿಯಲ್ಲಿರುವ ದೇಶಗಳು. ಹೆಚ್ಚುವರಿಯಾಗಿ, ವಿದೇಶಾಂಗ ಕಚೇರಿ ಕೆಂಪು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೆಂಪು ಪಟ್ಟಿಯಲ್ಲಿರುವ ದೇಶಗಳು ‘ಸಂಪೂರ್ಣವಾಗಿ ಅಗತ್ಯವಲ್ಲದಿದ್ದರೆ’ ಪ್ರಯಾಣವನ್ನು ತಪ್ಪಿಸಬೇಕಾದ ಪ್ರದೇಶಗಳಾಗಿವೆ. ಈ ಪಟ್ಟಿಯಲ್ಲಿ ಪಾಕಿಸ್ತಾನವೂ ಸೇರಿದೆ.

ಪಾಕ್​ನಲ್ಲಿ ಸಾವು ನೋವುಗಳು

2023 ರಲ್ಲಿ 789 ಭಯೋತ್ಪಾದಕ ದಾಳಿಗಳು ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಂದ ಪಾಕಿಸ್ತಾನವು 1,524 ಹಿಂಸಾಚಾರ ಸಂಬಂಧಿತ ಸಾವುನೋವುಗಳು ಮತ್ತು 1,463 ಗಾಯಗಳಿಗೆ ಸಾಕ್ಷಿಯಾಗಿದೆ ಎಂದು ಪಾಕಿಸ್ತಾನದ ಸುದ್ದಿ ವೆಬ್​​ಸೈಟ್​ ಡಾನ್ ವರದಿಯಲ್ಲಿ ತಿಳಿಸಿದೆ. ನಾಗರಿಕರು ಮತ್ತು ಕಾನೂನುಬಾಹಿರರು ಸೇರಿದಂತೆ ಒಟ್ಟು ಸಾವುನೋವುಗಳು ಆರು ವರ್ಷಗಳ ಗರಿಷ್ಠ ಮಟ್ಟ ತಲುಪಿವೆ/ ಇದು 2018 ರಲ್ಲಿ ದಾಖಲಾದ ಸಂಖ್ಯೆಗಳನ್ನು ಮೀರಿದೆ ಮತ್ತು 2017 ರ ನಂತರದ ಗರಿಷ್ಠ ಸಂಖ್ಯೆಯನ್ನು ಸೂಚಿಸುತ್ತದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Iran- Israel War : ಮುಂದಿನ 48 ಗಂಟೆಗಳೊಳಗೆ ಇರಾನ್-ಇಸ್ರೇಲ್ ಭೀಕರ ಯುದ್ಧ ಶುರು!

ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳು ಹಿಂಸಾಚಾರದ ಪ್ರಮುಖ ಕೇಂದ್ರ ಬಿಂದುಗಳಾಗಿ ಹೊರಹೊಮ್ಮಿವೆ. ಇದು ಒಟ್ಟು ಸಾವುನೋವುಗಳಲ್ಲಿ 90% ಕ್ಕಿಂತ ಹೆಚ್ಚು ಮತ್ತು 84% ದಾಳಿಗಳನ್ನು ಒಳಗೊಂಡಿದೆ, ಇದು ಭಯೋತ್ಪಾದನೆಯಿಂದ ಭದ್ರತಾ ಪಡೆ ಕಾರ್ಯಾಚರಣೆಗಳವರೆಗಿನ ಘಟನೆಗಳನ್ನು ಒಳಗೊಂಡಿದೆ.

ಧಾರ್ಮಿಕ ಹಿಂಸಾಚಾರದಲ್ಲಿ ವಿಷಯದಲ್ಲಿ ಆತಂಕಕಾರಿ ಹೆಚ್ಚಳ ಕಂಡುಬಂದಿದೆ. 2023 ರಲ್ಲಿ, ಧಾರ್ಮಿಕ ಸಮುದಾಯಗಳು ಮತ್ತು ಅವರ ಪೂಜಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಕೃತ್ಯಗಳು 203 ಜೀವಗಳನ್ನು ಬಲಿಪಡೆದಿವೆ. 2021 ರಿಂದ ಈ ರಾಷ್ಟ್ರವು ನಿರಂತರ ಹಿಂಸಾಚಾರ ಕಂಡಿದೆ.

Continue Reading

ದೇಶ

Iran- Israel War : ಮುಂದಿನ 48 ಗಂಟೆಗಳೊಳಗೆ ಇರಾನ್-ಇಸ್ರೇಲ್ ಭೀಕರ ಯುದ್ಧ ಶುರು!

Iran- Israel War: ಸಿರಿಯಾದ ಡಮಾಸ್ಕಸ್​ನಲ್ಲಿರುವ ತನ್ನ ರಾಯಭಾರ ಕಚೇರಿಯ ಮೇಲೆ ನಡೆದ ಭೀಕರ ದಾಳಿಗೆ ಇಸ್ರೇಲ್ ಕಾರಣ ಎಂದು ಆರೋಪಿಸಿದ ಇರಾನ್ 48 ಗಂಟೆಗಳಲ್ಲಿ ಇಸ್ರೇಲ್ ಮೇಲೆ ನೇರ ದಾಳಿ ನಡೆಸಬಹುದು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಇರಾನ್​​ ಸರ್ವೋಚ್ಚ ನಾಯಕ ಇಂತಹ ದಾಳಿಗೆ ಸಂಬಂಧಿಸಿದ ರಾಜಕೀಯ ಅಪಾಯಗಳನ್ನು ಎದುರಿಸುತ್ತಿದ್ದರೂ, ಇಸ್ರೇಲ್ ದಾಳಿಗೆ ಸಿದ್ಧತೆ ನಡೆಸುತ್ತಿದೆ ಎಂದು ವರದಿ ಹೇಳಿದೆ.

VISTARANEWS.COM


on

Iran- israel War
Koo

ನವದೆಹಲಿ: ಮುಂದಿನ 48 ಗಂಟೆಗಳಲ್ಲಿ ಇಸ್ರೇಲ್ ಮೇಲೆ ಇರಾನ್ (Iran- Israel War) ನೇರ ದಾಳಿ ನಡೆಸುವ ಸಾಧ್ಯತೆಯಿದೆ ಮತ್ತು ಯಹೂದಿ ಬಹುಸಂಖ್ಯಾತರಿರುವ ರಾಷ್ಟ್ರವು ಪ್ರತಿದಾಳಿಗೆ ಸಜ್ಜಾಗಿದೆ ಎಂದು ವರದಿಯೊಂದು ತಿಳಿಸಿದೆ. ವಾಲ್ ಸ್ಟ್ರೀಟ್ ಜರ್ನಲ್ ಶುಕ್ರವಾರ ಈ ಬಗ್ಗೆ ವರದಿ ಮಾಡಿದ್ದು, ಇರಾನಿನ ಸರ್ವೊಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಈ ಬಗ್ಗೆ ಸುಳಿವು ನೀಡಿದ್ದಾರೆ ಎನ್ನಲಾಗಿದೆ. ಗಾಜಾ ಪಟ್ಟಿಯಲ್ಲಿ ಹಮಾಸ್ ಜತೆಗೆ ಯುದ್ಧದಲ್ಲಿ ನಿರತವಾಗಿರುವ ಇಸ್ರೇಲ್,​ ಹಳೆಯ ಶತ್ರು ಇರಾನ್​ ಗೂ ಸೆಡ್ಡು ಹೊಡೆಯಬೇಕಾಗಿದೆ. ವರದಿಯ ಪ್ರಕಾರ ಮುಂದಿನ 48 ಗಂಟೆಯೊಳಗೆ ಭೀಕರ ಯುದ್ಧವೊಂದು ಸಂಭವಿಸುವ ಸಾಧ್ಯತೆಗಳಿವೆ.

ಸಿರಿಯಾದ ಡಮಾಸ್ಕಸ್​ನಲ್ಲಿರುವ ತನ್ನ ರಾಯಭಾರ ಕಚೇರಿಯ ಮೇಲೆ ನಡೆದ ಭೀಕರ ದಾಳಿಗೆ ಇಸ್ರೇಲ್ ಕಾರಣ ಎಂದು ಆರೋಪಿಸಿದ ಇರಾನ್ 48 ಗಂಟೆಗಳಲ್ಲಿ ಇಸ್ರೇಲ್ ಮೇಲೆ ನೇರ ದಾಳಿ ನಡೆಸಬಹುದು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಇರಾನ್​​ ಸರ್ವೋಚ್ಚ ನಾಯಕ ಇಂತಹ ದಾಳಿಗೆ ಸಂಬಂಧಿಸಿದ ರಾಜಕೀಯ ಅಪಾಯಗಳನ್ನು ಎದುರಿಸುತ್ತಿದ್ದರೂ, ಇಸ್ರೇಲ್ ವಿರುದ್ಧ ಪ್ರತಿಕಾರ ತೀರಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: Narendra Modi : ಅಂಬೇಡ್ಕರ್ ಮತ್ತೆ ಬಂದರೂ ಸಂವಿಧಾನ ಬದಲಾವಣೆ ಅಸಾಧ್ಯ; ಮೋದಿ ಹೀಗೆ ಹೇಳಲು ಕಾರಣವೇನು?

ಸಿರಿಯಾದಲ್ಲಿನ ದಾಳಿಗೆ ಇರಾನ್ ಇಸ್ರೇಲ್ ಅನ್ನು ದೂಷಿಸಿದೆ. ಆದರೆ ಇಸ್ರೇಲ್​ ದಾ ಳಿಯಲ್ಲಿ ತನ್ನ ಪಾತ್ರವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ ಮತ್ತು ನಿರಾಕರಿಸಿಲ್ಲ. ಏಪ್ರಿಲ್ 1 ರಂದು ಡಮಾಸ್ಕಸ್​​ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ಯುದ್ಧ ವಿಮಾನಗಳು ದಾಳಿ ನಡೆಸಿವೆ ಎನ್ನಲಾಗಿದೆ.

ಸಿರಿಯಾದ ರಾಜಧಾನಿಯಲ್ಲಿರುವ ಇರಾನಿನ ದೂತಾವಾಸವನ್ನು ನೆಲಸಮಗೊಳಿಸಿದ ದಾಳಿಯಲ್ಲಿ ಇರಾನಿನ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್​​​ ಮೊಹಮ್ಮದ್ ರೆಜಾ ಜಹೇದಿ ಮೃತಪಟ್ಟಿದ್ದಾರೆ. ಇಸ್ರೇಲ್ ದಾಳಿಯನ್ನು ತನ್ನ ವಿರುದ್ಧ ಹೋರಾಡುತ್ತಿರುವ ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸಿದ ಇರಾನಿನ ಮಿಲಿಟರಿ ಅಧಿಕಾರಿಗಳ ವಿರುದ್ಧ ಮಾಡಿದೆ ಎಂದು ಹೇಳಲಾಗುತ್ತಿದೆ.

ಇಸ್ರೇಲ್ ಮೇಲೆ ಸನ್ನಿಹಿತ ದಾಳಿಯ ಅಪಾಯಗಳನ್ನು ಒಪ್ಪಿಕೊಡಿರುವ ಅಮೇರಿಕ, ಅಲ್ಲಿರುವ ತನ್ನ ನಾಗರಿಕರಿಗೆ ಪ್ರಯಾಣದ ಕುರಿತ ಸಲಹೆಗಳನ್ನು ಬಿಡುಗಡೆ ಮಾಡಿದೆ. ತನ್ನ ದೂತಾವಾಸದ ಮೇಲಿನ ದಾಳಿಯ ನಂತರ, ಇಸ್ರೇಲ್ ದಾಳಿಗೆ ಪ್ರತಿಕ್ರಿಯಿಸುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ.

ಇಸ್ರೇಲ್​​ಗೆ ಶಿಕ್ಷೆಯಾಗಲೇಬೇಕು ” ಎಂದು ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ದಾಳಿ ನಂತದ ಹೇಳಿದ್ದಾರೆ.

Iran- Israel war : ಇಸ್ರೆಲ್​, ಇರಾನ್​ಗೆ ಹೋಗದಂತೆ ವಿಶೇಷ ಸೂಚನೆ ನೀಡಿದ ಭಾರತ ಸರ್ಕಾರ; ಯಾಕೆ ಗೊತ್ತೇ?

ಇರಾನ್​ ಹಾಗೂ ಇಸ್ರೇಲ್ ನಡುವೆ ಶಸ್ತ್ರಾಸ್ತ್ರಗಳ ದಾಳಿ (Iran- Israel war : ಇಸ್ರೆಲ್​, ಇರಾನ್​ಗೆ ಹೋಗದಂತೆ ವಿಶೇಷ ಸೂಚನೆ ನೀಡಿದ ಭಾರತ ಸರ್ಕಾರ; ಯಾಕೆ ಗೊತ್ತೇ?) ನಡೆಯುತ್ತಿರುವ ಕಾರಣ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಸೂಚನೆ ಬರುವವರೆಗೆ ಇರಾನ್ ಅಥವಾ ಇಸ್ರೇಲ್​​ಗೆ ಪ್ರಯಾಣಿಸದಂತೆ ವಿದೇಶಾಂಗ ಸಚಿವಾಲಯ ಶುಕ್ರವಾರ ಎಲ್ಲಾ ಭಾರತೀಯರಿಗೆ ಸಲಹೆ ನೀಡಿದೆ. ಈಗಾಗಲೇ ಅಲ್ಲಿ ವಾಸಿಸುತ್ತಿರುವ ಭಾರತೀಯರು ಆಯಾ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ತಮ್ಮ ಇರುವಿಕೆಯನ್ನು ದಾಖಲು ಮಾಡಲು ಹೇಳಿದೆ.

“ಈ ಪ್ರದೇಶದಲ್ಲಿ ಸದ್ಯ ಉಂಟಾಗಿರುವ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆ ಬರುವವರೆಗೆ ಎಲ್ಲಾ ಭಾರತೀಯರು ಇರಾನ್ ಅಥವಾ ಇಸ್ರೇಲ್​​​ಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ. ಪ್ರಸ್ತುತ ಇರಾನ್ ಅಥವಾ ಇಸ್ರೇಲ್​​ಗೆ ಹೋದವರು ಅಥವಾ ಅಲ್ಲಿ ವಾಸಿಸುತ್ತಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ವಿನಂತಿ ಮಾಡಲಾಗಿದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

Continue Reading

ಪ್ರಮುಖ ಸುದ್ದಿ

Iran- Israel war : ಇಸ್ರೆಲ್​, ಇರಾನ್​ಗೆ ಹೋಗದಂತೆ ವಿಶೇಷ ಸೂಚನೆ ನೀಡಿದ ಭಾರತ ಸರ್ಕಾರ; ಯಾಕೆ ಗೊತ್ತೇ?

Iran- Israel war: ಈ ಎರಡೂ ದೇಶಗಳಲ್ಲಿ ಪ್ರಸ್ತುತ ಉಂಟಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇರಾನ್ ಅಥವಾ ಇಸ್ರೇಲ್​ಗೆ ಪ್ರಯಾಣಿಸದಂತೆ ಸಲಹೆ ಎಚ್ಚರಿಕೆ ನೀಡಲಾಗಿದೆ, ಅಲ್ಲಿರುವ ಭಾರತೀಯರು ಆಯಾ ರಾಯಭಾರ ಕಚೇರಿಯಲ್ಲಿ ತಮ್ಮ ಇರುವಿಕೆಯನ್ನು ದಾಖಲು ಮಾಡಬೇಕು ಎಂದು ವಿದೇಶಾಂಗ ಸಚಿವಾಲಯ ಒತ್ತಾಯಿಸಿದೆ

VISTARANEWS.COM


on

Israel war
Koo

ಬೆಂಗಳೂರು: ಇರಾನ್​ ಹಾಗೂ ಇಸ್ರೇಲ್ ನಡುವೆ ಶಸ್ತ್ರಾಸ್ತ್ರಗಳ ದಾಳಿ (Iran- Israel war : ಇಸ್ರೆಲ್​, ಇರಾನ್​ಗೆ ಹೋಗದಂತೆ ವಿಶೇಷ ಸೂಚನೆ ನೀಡಿದ ಭಾರತ ಸರ್ಕಾರ; ಯಾಕೆ ಗೊತ್ತೇ?) ನಡೆಯುತ್ತಿರುವ ಕಾರಣ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಸೂಚನೆ ಬರುವವರೆಗೆ ಇರಾನ್ ಅಥವಾ ಇಸ್ರೇಲ್​​ಗೆ ಪ್ರಯಾಣಿಸದಂತೆ ವಿದೇಶಾಂಗ ಸಚಿವಾಲಯ ಶುಕ್ರವಾರ ಎಲ್ಲಾ ಭಾರತೀಯರಿಗೆ ಸಲಹೆ ನೀಡಿದೆ. ಈಗಾಗಲೇ ಅಲ್ಲಿ ವಾಸಿಸುತ್ತಿರುವ ಭಾರತೀಯರು ಆಯಾ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ತಮ್ಮ ಇರುವಿಕೆಯನ್ನು ದಾಖಲು ಮಾಡಲು ಹೇಳಿದೆ.

“ಈ ಪ್ರದೇಶದಲ್ಲಿ ಸದ್ಯ ಉಂಟಾಗಿರುವ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆ ಬರುವವರೆಗೆ ಎಲ್ಲಾ ಭಾರತೀಯರು ಇರಾನ್ ಅಥವಾ ಇಸ್ರೇಲ್​​​ಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ. ಪ್ರಸ್ತುತ ಇರಾನ್ ಅಥವಾ ಇಸ್ರೇಲ್​​ಗೆ ಹೋದವರು ಅಥವಾ ಅಲ್ಲಿ ವಾಸಿಸುತ್ತಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಬೇಕು ಎಂದು ವಿನಂತಿ ಮಾಡಲಾಗಿದೆ” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯರ ಸುರಕ್ಷತೆಯ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಮತ್ತು ಅವರ ಸಂಚಾರವನ್ನು ಕನಿಷ್ಠ ಮಟ್ಟಕ್ಕೆ ನಿರ್ಬಂಧಿಸಲು ವಿನಂತಿಸಲಾಗಿದೆ” ಎಂದು ಅದು ಹೇಳಿದೆ.

ಎಲ್ಲ ದೇಶಗಳಿಂದಲೂ ಸೂಚನೆ

ಭದ್ರತಾ ಭಯದ ಹಿನ್ನೆಲೆಯಲ್ಲಿ ತನ್ನ ರಾಜತಾಂತ್ರಿಕರ ಚಲನವಲನಗಳನ್ನು ನಿರ್ಬಂಧಿಸುವುದಾಗಿ ಇಸ್ರೇಲ್​ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಘೋಷಿಸಿದ ನಂತರ, ಇರಾನ್, ಇಸ್ರೇಲ್, ಲೆಬನಾನ್ ಅಥವಾ ಪ್ಯಾಲೆಸ್ತೀನ್​ಗೆ ಪ್ರಯಾಣಿಸದಂತೆ ಫ್ರೆಂಚ್ ಸರ್ಕಾರ ಫ್ರೆಂಚ್ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Beggary Rescue : ರಂಜಾನ್ ಹಬ್ಬದಂದು 40ಕ್ಕೂ ಹೆಚ್ಚು ಮಕ್ಕಳಿಂದ ಭಿಕ್ಷಾಟನೆ; ಸಿಕ್ಕಿಬಿದ್ದರು ಲೇಡಿ ಗ್ಯಾಂಗ್‌

ಇರಾನ್ ತನ್ನ ಮಿಲಿಟರಿ ಸಂಪನ್ಮೂಲಗಳನ್ನು ಗುರಿಯಾಗಿಸಿಕೊಂಡು 100 ಕ್ಕೂ ಹೆಚ್ಚು ಡ್ರೋನ್​​ಗಳು ಮತ್ತು ಡಜನ್​ಗಟಗಟಲೆ ಕ್ಷಿಪಣಿಗಳೊಂದಿಗೆ ಶುಕ್ರವಾರದ ವೇಳೆಗೆ ಇಸ್ರೇಲ್ ಮೇಲೆ ದಾಳಿ ನಡೆಸಲಿದೆ ಎಂದು ಯುಎಸ್ ಮೂಲದ ಸುದ್ದಿ ಸಂಸ್ಥೆ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

ಜರ್ಮನ್ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಮತ್ತು ಅವರ ಬ್ರಿಟಿಷ್ ಮತ್ತು ಆಸ್ಟ್ರೇಲಿಯಾದ ಸಹವರ್ತಿಗಳಿಂದ ದೂರವಾಣಿ ಕರೆಗಳು ಬಂದಿವೆ ಎಂದು ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದೊಲ್ಲಾಹಿಯಾನ್ ಗುರುವಾರ ಹೇಳಿದ್ದಾರೆ.

ಇಸ್ರೇಲ್ರಾ ಜತಾಂತ್ರಿಕ ವ್ಯಕ್ತಿಗಳು ಮತ್ತು ಸ್ಥಳಗಳ ವಿನಾಯಿತಿ ಉಲ್ಲಂಘಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅದನ್ನು ಖಂಡಿಸಲು ವಿಫಲವಾಗಿದೆ. ಹೀಗಾಗಿ “ಕಾನೂನುಬದ್ಧ ರಕ್ಷಣೆ ಅವಶ್ಯಕತೆಯಾಗಿದೆ ಎಂದು ಇರಾನ್ ಹೇಳಿದೆ. ಅದರೆ, ಯುದ್ಧದ ವ್ಯಾಪ್ತಿಯನ್ನು ವಿಸ್ತರಿಸಲು ಬಯಸುವುದಿಲ್ಲ ಎಂಬುದಾಗಿಯೂ ನುಡಿದಿದೆ.

Continue Reading

ವಿದೇಶ

Rishi Sunak: ಬ್ರಿಟನ್‌ಗೆ ವೀಸಾ ಬಯಸಿದವರಿಗೆ ವೇತನ ಮಿತಿ ಹೆಚ್ಚಿಸಿ ಶಾಕ್‌ ನೀಡಿದ ಸುನಕ್‌, ಎಷ್ಟಿರಬೇಕು?

Rishi Sunak: ಈ ಬದಲಾವಣೆ ತಕ್ಷಣವೇ ಜಾರಿಗೆ ಬರಲಿದೆ. ಮುಂದಿನ ವರ್ಷದ ಆರಂಭದಲ್ಲಿ ಇದು ಇನ್ನಷ್ಟು ಹೆಚ್ಚಲಿದೆ. 38,700 ಪೌಂಡ್‌ಗೆ (40,37,549 ರೂ.) ಏರಬಹುದು ಎಂಬ ಅಂದಾಜು. ವಲಸೆ ವ್ಯವಸ್ಥೆಗೆ ತನ್ನ ಪ್ರಮುಖ ಪ್ಯಾಕೇಜ್ ಸುಧಾರಣೆಗಳನ್ನು ಘೋಷಿಸಿದ ವಾರಗಳಲ್ಲಿ ಇಂದಿನ ಬದಲಾವಣೆಯು ಬಂದಿದೆ.

VISTARANEWS.COM


on

UK Prime Minister Rishi Sunak
Koo

ನವದೆಹಲಿ: ದೇಶದೊಳಗೆ ವಲಸೆ (Immigration) ಪ್ರಮಾಣವನ್ನು ಕಡಿತಗೊಳಿಸುವುದಕ್ಕಾಗಿ, ಬ್ರಿಟನ್‌ನ (United Kingdom) ರಿಷಿ ಸುನಕ್‌ (Rishi Sunak) ಸರ್ಕಾರ ವೀಸಾ (UK visa) ಆಕಾಂಕ್ಷಿತರ ಆದಾಯದ ಕನಿಷ್ಠ ಮಿತಿಯನ್ನು ಶೇ.55ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಸಿದೆ. ಅಂದರೆ ಇನ್ನು ಮುಂದೆ, ನಿಮ್ಮ ಕುಟುಂಬ ಸದಸ್ಯರ ವೀಸಾವನ್ನು ಪ್ರಾಯೋಜಿಸಲು ನೀವು 29,000 ಪೌಂಡ್‌ (30,25,825 ರೂ.) ಸಂಬಳ ಹೊಂದಿರಬೇಕಾಗುತ್ತದೆ. ಈ ಮೊದಲು ಅದು 18,600 ಪೌಂಡ್‌ (19,40,527 ರೂ.) ಇತ್ತು.

ಈ ಬದಲಾವಣೆ ತಕ್ಷಣವೇ ಜಾರಿಗೆ ಬರಲಿದೆ. ಮುಂದಿನ ವರ್ಷದ ಆರಂಭದಲ್ಲಿ ಇದು ಇನ್ನಷ್ಟು ಹೆಚ್ಚಲಿದೆ. 38,700 ಪೌಂಡ್‌ಗೆ (40,37,549 ರೂ.) ಏರಬಹುದು ಎಂಬ ಅಂದಾಜು. “ವಲಸೆ ವ್ಯವಸ್ಥೆಗೆ ತನ್ನ ಪ್ರಮುಖ ಪ್ಯಾಕೇಜ್ ಸುಧಾರಣೆಗಳನ್ನು ಘೋಷಿಸಿದ ವಾರಗಳಲ್ಲಿ ಇಂದಿನ ಬದಲಾವಣೆಯು ಬಂದಿದೆ. ಮೇ 2023ರಲ್ಲಿ ವಿದ್ಯಾರ್ಥಿ ವೀಸಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು” ಎಂದು ಯುಕೆ ಸರ್ಕಾರ ಹೇಳಿದೆ.

ಈ ವರ್ಷ ಯುಕೆಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳ ಮುನ್ನವೇ ವಲಸೆಯು ಪ್ರಮುಖ ಚುನಾವಣಾ ವಿಷಯಗಳಲ್ಲಿ ಒಂದಾಗಿದೆ. ಸುನಕ್ ಅವರ ಪಕ್ಷವಾದ ಕನ್ಸರ್ವೇಟಿವ್‌ಗಳು ಭಾರೀ ಸೋಲಿನತ್ತ ಸಾಗುತ್ತಿದ್ದಾರೆ ಎಂದು ಸಮೀಕ್ಷೆಗಳು ಸೂಚಿಸುತ್ತವೆ. ಹೊಸ ನಿಯಮಗಳು, ಸುನಕ್ ಅವರ “ಅಸಮರ್ಥನೀಯ ವಲಸೆಯ ಮಟ್ಟವನ್ನು ಕಡಿತಗೊಳಿಸುವುದು ಮತ್ತು ಇಲ್ಲಿಗೆ ಬರುವವರು ತೆರಿಗೆದಾರರಿಗೆ ಹೊರೆಯಾಗದಂತೆ ನೋಡಿಕೊಳ್ಳುವ” ಯೋಜನೆಯ ಭಾಗವಾಗಿದೆ.

UKಯ ಆಂತರಿಕ ಸಚಿವ ಜೇಮ್ಸ್ ಕ್ಲೆವರ್ಲಿ, ಇತ್ತೀಚಿನ ನೀತಿ ಬದಲಾವಣೆಯ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ್ದು, “ಸಾಮೂಹಿಕ ವಲಸೆಯಿಂದ ಉಂಟಾಗುವ ಒತ್ತಡವನ್ನು ತಗ್ಗಿಸುವುದು ಮುಖ್ಯವಾಗಿದೆ” ಎಂದು ಹೇಳಿದ್ದಾರೆ. “ಸಾಮೂಹಿಕ ವಲಸೆಯ ಅಂಚನ್ನು ನಾವು ತಲುಪಿದ್ದೇವೆ. ಬ್ರಿಟಿಷ್ ಜನರಿಗೆ ಸ್ವೀಕಾರಾರ್ಹವಾದ ಮಟ್ಟಕ್ಕೆ ಸಂಖ್ಯೆಯನ್ನು ಕಡಿತಗೊಳಿಸಬೇಕಿದೆ” ಎಂದಿದ್ದಾರೆ.

ಬ್ರಿಟನ್‌ನಲ್ಲಿ ಇರಬಯಸುವ ಹೊರಗಿನ ದೇಶಗಳ ಕುಟುಂಬಗಳು ಸ್ವಾವಲಂಬಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ಹೊಸ ಕ್ರಮ ಪ್ರಯತ್ನಿಸುತ್ತದೆ. ಉಳಿತಾಯ ಮತ್ತು ಉದ್ಯೋಗದಿಂದ ಬರುವ ಆದಾಯ ಸೇರಿದಂತೆ ಇದು ವಿವಿಧ ವಿಧಾನಗಳಿಗೆ ಅವಕಾಶ ನೀಡುತ್ತದೆ.

ಆದಾಯದ ಮಿತಿಗಳಲ್ಲಿನ ಬದಲಾವಣೆಗಳ ಜೊತೆಗೆ, UK ಸರ್ಕಾರವು ವಿದ್ಯಾರ್ಥಿ ವೀಸಾಗಳ ಮೇಲೆ ಕಟ್ಟುನಿಟ್ಟಾದ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಜೊತೆಗೆ ರಾಷ್ಟ್ರೀಯ ಆರೋಗ್ಯ ಸೇವೆ (NHS) ಅನ್ನು ಹೊಂದುವ ವಿದೇಶಿ ಪ್ರಜೆಗಳಿಗೆ ಆರೋಗ್ಯದ ಹೆಚ್ಚುವರಿ ಶುಲ್ಕದಲ್ಲಿ ಗಣನೀಯ ಪ್ರಮಾಣದ, ಅಂದರೆ ಶೇ.66 ಹೆಚ್ಚಳ ಮಾಡಿದೆ. ಪ್ರಸ್ತುತ ವಲಸೆ ಅಂಕಿಅಂಶಗಳು 7,45,000ರಷ್ಟಿದ್ದು, UK ಸರ್ಕಾರ ಅದನ್ನು 3,00,000ಕ್ಕೆ ಇಳಿಸುವ ಗುರಿ ಹೊಂದಿದೆ.

ಇದನ್ನೂ ಓದಿ: Sudha Murty: ಮಾತಾಡೋರು ಮಾತಾಡ್ಲಿ; ಅಳಿಯ ರಿಷಿ ಸುನಕ್‌ಗೆ ಸುಧಾಮೂರ್ತಿ ಹೀಗೆ ಹೇಳಿದ್ದೇಕೆ?

Continue Reading
Advertisement
NIA Raid
ಕರ್ನಾಟಕ59 seconds ago

NIA Raid: ಹುಬ್ಬಳ್ಳಿಯಲ್ಲಿ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದ ಎನ್‌ಐಎ

Khalistan Terrorist
ಪ್ರಮುಖ ಸುದ್ದಿ20 mins ago

Khalistani Terrorist : ದೆಹಲಿ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿ ಉಗ್ರ ಪ್ರಭ್​ಪ್ರೀತ್ ಸಿಂಗ್ ಸೆರೆ

Lok Sabha Election 2024
ಕರ್ನಾಟಕ28 mins ago

Lok Sabha Election 2024: ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆ; ಇವರ ಆಸ್ತಿ ಎಷ್ಟು?

Pakistan
ಪ್ರಮುಖ ಸುದ್ದಿ44 mins ago

United Kingdom: ‘ಪ್ರಯಾಣಕ್ಕೆಅಪಾಯಕಾರಿ’ ದೇಶಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿದ ಬ್ರಿಟನ್​!

Chikkaballapur Lok Sabha Constituency BJP Candidate Dr K Sudhakar is campaigning in various places today
ಚಿಕ್ಕಬಳ್ಳಾಪುರ1 hour ago

Lok Sabha Election 2024: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ರಿಂದ ಏ.13ರಂದು ಪ್ರಚಾರ

Union Minister Pralhad Joshi statement
ಹುಬ್ಬಳ್ಳಿ1 hour ago

Lok Sabha Election 2024: ದೇಶದ್ರೋಹಿ ಕೃತ್ಯ ನಿಗ್ರಹಕ್ಕೆ ಮೋದಿ ಸರ್ಕಾರವೇ ಬೇಕು: ಪ್ರಲ್ಹಾದ್‌ ಜೋಶಿ

Union Minister Pralhad Joshi latest statement in hubli
ಕರ್ನಾಟಕ1 hour ago

Lok Sabha Election 2024: ರಾಜ್ಯದಲ್ಲಿ ಕಾಂಗ್ರೆಸ್ 3ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲಲ್ಲ: ಪ್ರಲ್ಹಾದ್‌ ಜೋಶಿ ಸವಾಲು

Rashtrotthana Hospital adopts Dozi technology to provide greater safety to patients
ಕರ್ನಾಟಕ1 hour ago

Rashtrotthana Parishat: ಡೋಝಿ ತಂತ್ರಜ್ಞಾನ ಅಳವಡಿಸಿಕೊಂಡ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ

Iran- israel War
ದೇಶ1 hour ago

Iran- Israel War : ಮುಂದಿನ 48 ಗಂಟೆಗಳೊಳಗೆ ಇರಾನ್-ಇಸ್ರೇಲ್ ಭೀಕರ ಯುದ್ಧ ಶುರು!

Rain News
ಪ್ರಮುಖ ಸುದ್ದಿ1 hour ago

Rain News: ರಾಜ್ಯದ ವಿವಿಧೆಡೆ ಮಳೆ ಆರ್ಭಟ; ಸಿಡಿಲು ಬಡಿದು ಗದಗದಲ್ಲಿ 20, ಶಿವಮೊಗ್ಗದಲ್ಲಿ 18 ಕುರಿ ಸಾವು

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameshwaram Cafe Blast Fake IDs created and captured bombers hiding in Kolkata
ಕ್ರೈಂ11 hours ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ18 hours ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 day ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20241 day ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ3 days ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ3 days ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ4 days ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ5 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

Rockstar Bull of bull festival king fame passes away
ಹಾವೇರಿ5 days ago

Rockstar Bull: ಹೋರಿ ಹಬ್ಬದ ಕಿಂಗ್ ಖ್ಯಾತಿಯ ರಾಕ್‌ ಸ್ಟಾರ್‌ ಬುಲ್‌ ಇನ್ನಿಲ್ಲ; ಬೊಮ್ಮಾಯಿ ಕಂಬನಿ

ಟ್ರೆಂಡಿಂಗ್‌