ನವದೆಹಲಿ: ಕೆನಡಾ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯಲ್ಲಿ ಭಾರತ ಸರ್ಕಾರದ ಪಾತ್ರವಿದೆ (Indian Government) ಎಂದು ಆರೋಪಿಸಿ ಕೆನಡಾ ಸರ್ಕಾರವು (Canada Government), ಭಾರತೀಯ ರಾಜತಾಂತ್ರಿಕ ಪವನಕ್ ಕುಮಾರ್ ಅವರನ್ನು ಕಿತ್ತು ಹಾಕಿತ್ತು. ಇದಕ್ಕೆ ಪ್ರತಿಯಾಗಿ, ಆರೋಪವನ್ನು ಅಲ್ಲಗಳೆದ ಭಾರತವು, ಕೆನಡಾದ ರಾಯಭಾರಿಯನ್ನು ದೇಶದಿಂದ ಹೊರಹಾಕಿತ್ತು. ಕೆನಡಾ-ಭಾರತದ ಈ ಕ್ರಿಯೆ-ಪ್ರತಿಕ್ರಿಯೆಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಮಧ್ಯೆ, ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿ ಕರೀಮಾ ಬಲೋಚ್ (Pakistan Human activist Karima Baloch) ಅವರ ಹತ್ಯೆಯಲ್ಲಿ ಕೆನಡಾ ಪಾತ್ರ ವಹಿಸಿರುವ ಕುರಿತು ಭಾರೀ ಚರ್ಚೆಗಳು ಶುರುವಾಗಿವೆ!
ದೇಶಭ್ರಷ್ಟರಾಗಿದ್ದ ಬಲೂಚ್ ಕಾರ್ಯಕರ್ತೆ ಕರಿಮಾ ಬಲೋಚ್ ಅವರು ಕೆನಡಾದ ಟೊರೊಂಟೊದಲ್ಲಿ ವಾಸವಾಗಿದ್ದರು. ಅವರು 2020 ಡಿಸೆಂಬರ್ 20ರಂದು ನಾಪತ್ತೆಯಾಗಿದ್ದರು. ಮರುದಿನ ಟೊರೊಂಟೊದ ಡೌನ್ಟೌನ್ ವಾಟರ್ಫ್ರಂಟ್ನ ಲೇಕ್ ಒಂಟಾರಿಯೊ ಬಳಿ ಬಲೂಚ್ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.
ಬಲೂಚ್ ಅವರು ಟೊರೊಂಟೊದ ಸೆಂಟರ್ ಐಲೆಂಡ್ನಲ್ಲಿ ಆಗಾಗ ವಾಕ್ ಹೋಗುತ್ತಿದ್ದರು. ಈ ರೀತಿಯಾಗಿ ಅನೇಕ ಸಂದರ್ಭಗಳಲ್ಲಿ ಅವರು ಹೋಗಿದ್ದರು. ಆದರೆ, ಅಂದು ಮಾತ್ರ ಅವರು ವಾಕ್ಗೆ ಹೋದವರು ಮತ್ತೆ ವಾಪಸ್ ಆಗಿರಲಿಲ್ಲ. ಆಕೆ ನಾಪತ್ತೆಯಾಗುತ್ತಿದ್ದಂತೆ ಟೊರೊಂಟೊ ಪೊಲೀಸರು ಟ್ವಿಟರ್ ಮೂಲಕ ಮಾಹಿತಿಗಾಗಿ ಮನವಿ ಮಾಡಿದರು. ಬಲಿಕ ಆಕೆಯ ಶವವು ದ್ವೀಪದಲ್ಲಿ ಪತ್ತೆಯಾಯಿತು.
ಯಾರು ಈ ಕರೀಮಾ ಬಲೂಚ್?
ಬಲೂಚ್ ಅವರು ಮಾನವ ಹಕ್ಕುಗಳ ವಕೀಲರಾಗಿ ಗುರುತಿಸಿಕೊಂಡಿದ್ದರು. ಬಲೂಚ್ ವಿದ್ಯಾರ್ಥಿಗಳ ಸಂಘಟನೆ ಆಜಾದ್ ಅಧ್ಯಕ್ಷೆಯಾಗಿದ್ದರು. ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಸೇನಾ ಕಾರ್ಯಾಚರಣೆಯನ್ನು ಅವರು ತೀವ್ರವಾಗಿ ವಿರೋಧಿಸುತ್ತಿದ್ದರು. ಅಲ್ಲದೇ, ಬಲೂಚಿಗಳ ನಾಪತ್ತೆ ಮತ್ತು ಕಾನೂನು ಬಾಹಿರ ಹತ್ಯೆಗಳನ್ನು ಬಹಿರಂಗವಾಗಿಯೇ ಖಂಡಿಸುತ್ತಿದ್ದರು. ಅಂತಿಮವಾಗಿ ಪಾಕಿಸ್ತಾನದ ದೇಶಭ್ರಷ್ಟವಾಗಿ ಕೆನಡಾದಲ್ಲಿ ಆಶ್ರಯಪಡೆದಿದ್ದರು. ಆದರೆ, ಆಕೆಯನ್ನು ಕೆನಡಾದಲ್ಲಿ ಹತ್ಯೆ ಮಾಡಲಾಗಿತ್ತು.
ಈ ಸುದ್ದಿಯನ್ನೂ ಓದಿ: India Canada Row: ಏಟಿಗೆ ಎದುರೇಟು; ಕೆನಡಾದಲ್ಲಿರುವ ಭಾರತೀಯರಿಗೆ ಕೇಂದ್ರ ಅಡ್ವೈಸರಿ
ಬೂಲಚ್ ಅವರ ಹತ್ಯೆಯಲ್ಲಿ ಪಾಕಿಸ್ತಾನದ ಅಧಿಕಾರಿಗಳ ಕೈವಾಡ ಇರುವುದರ ಬಗ್ಗೆ ಕೆನಡಾ ಮೂಲದ ಪಾಕಿಸ್ತಾನಿ ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿದ್ದವು. ಈ ಕುರಿತು ನಿಷ್ಪಪಕ್ಷಪಾತ ತನಿಖೆ ನಡೆಸಬೇಕು ಎಂದು ಕೆನಡಾ ಸರ್ಕಾರಕ್ಕೆ ಆಗ್ರಿಹಿಸಿದ್ದವು. ಬಲೂಚ್ ನ್ಯಾಷನಲ್ ಮೂವ್ಮೆಂಟ್, ಬಲೂಚಿಸ್ತಾನ್ ನ್ಯಾಷನಲ್ ಪಾರ್ಟಿ-ಕೆನಡಾ, ವರ್ಲ್ಡ್ ಸಿಂಧಿ ಕಾಂಗ್ರೆಸ್-ಕೆನಡಾ, ಪಶ್ತುನ್ ಕೌನ್ಸಿಲ್ ಕೆನಡಾ, ಮತ್ತು ಪಿಟಿಎಂ ಕಮಿಟಿ ಕೆನಡಾ ಒಳಗೊಂಡ ಒಕ್ಕೂಟವು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿ ಬೂಲಚ್ ಅವರ ಹತ್ಯೆಯನ್ನು ಖಂಡಿಸಿದ್ದವು. ಮತ್ತೊಂದೆಡೆ, ಬೂಲಚ್ ಹತ್ಯೆಯನ್ನು ಕೆನಡಾ ಸರ್ಕಾರವು ಗಂಭೀರವಾಗಿ ತನಿಖೆ ಮಾಡಲಿಲ್ಲ ಎಂಬ ಆರೋಪವು ಕೇಳಿ ಬಂದಿದೆ.