Site icon Vistara News

Richest Hindus of Pakistan : ಇವರು ಪಾಕಿಸ್ತಾನದ ಶ್ರೀಮಂತ ಹಿಂದೂಗಳು! ಎಷ್ಟಿದೆ ಆಸ್ತಿ?

Do you know about Richest hindus of Pakistan

ಬೆಂಗಳೂರು: ನಮ್ಮ ನೆರೆಯ ಪಾಕಿಸ್ತಾನವು ಈಗ ಆರ್ಥಿಕ ಸಂಕಟದಿಂದ ತತ್ತರಿಸುತ್ತಿದೆ. ಬಡತನವು, ಹಸಿವು ಇತ್ತೀಚಿನ ದಿನಗಳಲ್ಲಿ ಮಿತಿಮೀರಿದೆ. ಹಿಟ್ಟು, ಅಕ್ಕಿ, ಮೊಟ್ಟೆ ಸೇರಿದಂತೆ ದಿನ ನಿತ್ಯದ ಆಹಾರ ಪದಾರ್ಥಗಳು ಜನರಿಗೆ ಸಿಗುತ್ತಿಲ್ಲ. ಹಿಟ್ಟಿಗಾಗಿ ಜನರು ಜಗಳ ಮಾಡುವ ಪರಿಸ್ಥಿತಿ ಇದೆ. ಜತೆಗೆ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡುತ್ತಾರೆ. ಪಾಕಿಸ್ತಾನದ ಹಿಂದೂಗಳ ಮೇಲೆ ನಿರಂತರವಾಗಿ ದಬ್ಬಾಳಿಕೆ, ಅತ್ಯಾಚಾರ, ಮತಾಂತರ, ಕೊಲೆ, ಸುಲಿಗೆ ನಡೆಯುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಇಷ್ಟೆಲ್ಲ, ಸಂಕಟಗಳ ಮಧ್ಯೆಯೂ, ಅಡೆ ತಡೆಗಳ ಮಧ್ಯೆಯೂ ಪಾಕಿಸ್ತಾನದಲ್ಲಿ ಒಂದಿಷ್ಟು ಹಿಂದೂಗಳು ಶ್ರೀಮಂತರಾಗಿದ್ದಾರೆ(Richest Hindus of Pakistan). ಕೋಟ್ಯಧೀಶರ ಹಿಂದೂಗಳಿದ್ದಾರೆ. ಅವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ….

ದೀಪಕ್ ಪೆರವಾಣಿ

ಇವರು ಪಾಕಿಸ್ತಾನದ ಫೇಮಸ್ ಫ್ಯಾಷನ್ ಡಿಸೈನರ್. ಹಿಂದೂ ಸಿಂಧಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಫ್ಯಾಷನ್ ಇಂಡ್‌ಸ್ಟ್ರಿಯ ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. 2022ರಲ್ಲಿ ಪ್ರಕಟವಾದ ವರದಿಯ ಪ್ರಕಾರ, ದೀಪಕ್ ಪೆರವಾಣಿ ಅವರ ಆಸ್ತಿ 71 ಕೋಟಿ ರೂ. ಇದೆ.

ನವೀನ್ ಪೆರವಾಣಿ

ಇವರು ದೀಪಕ್ ಪೆರವಾಣಿ ಅವರ ಸಹೋದರ. 1971 ಅಕ್ಟೋಬರ್ 30ರಂದು ಜನಿಸಿದ್ದಾರೆ. ಇವರು ಪಾಕಿಸ್ತಾನದ ಜನಪ್ರಿಯ ಸ್ನೂಕರ್ ಪ್ಲೇಯರ್. 2006ರಲ್ಲಿ ಕತಾರ್‌ನ ದೋಹಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಪಾಕಿಸ್ತಾನವನ್ನು ನವೀನ್ ಅವರು ಪ್ರತಿನಿಧಿಸಿದ್ದರು. 2022ರ ವರದಿಯ ಪ್ರಕಾರ, ಇವರ ಒಟ್ಟು ಆಸ್ತಿ 66 ಕೋಟಿ ರೂಪಾಯಿ.

ಸಂಗೀತಾ

ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಸಂಗೀತಾ ಅವರು ಪ್ರಖ್ಯಾತ ನಟಿ. 1969ರಿಂದಲೂ ಪಾಕಿಸ್ತಾನದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಸಂಗೀತಾ ಅವರು, ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಇವರು ಪರ್ವೀನ್ ರಿಝ್ವಿ ಎಂದು ಖ್ಯಾತರಾಗಿದ್ದಾರೆ. ನಿಖಾಹ, ಮುಟ್ಟಿ ಬಹರ್ ಚವ್ಲಾ, ಯೇಹ ಅಮಾನ್, ನಾಮ್ ಮೇರಾ ಬದನಾಮ್ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ವಾರ್ಷಿಕ ಆದಾಯ ಅಂದಾಜು 39 ಕೋಟಿ ರೂ. ಇದೆ.

ಇದನ್ನೂ ಓದಿ ಲಾಹೋರ್‌ನ 1200 ವರ್ಷ ಹಳೆಯ ಹಿಂದೂ ದೇಗುಲ ಸಂರಕ್ಷಿಸಿದ ಪಾಕ್‌ ಸರ್ಕಾರ

ರೀತಾ ಈಶ್ವರ್

ರೀತಾ ಈಶ್ವರ ಕೂಡ ಕರಾಚಿಯವರು. 1981ರಲ್ಲಿ ಜನಿಸಿದ ರೀತಾ ಅವರು, 2013ರಿಂದ 2018ರವರೆಗೆ ಪಾಕಿಸ್ತಾನ ನ್ಯಾಷನಲಸ್ ಅಸೆಂಬ್ಲಿಯ ಸದಸ್ಯೆಯಾಗಿಯೂ ಕೆಲಸ ಮಾಡಿದ್ದಾರೆ. ಪಾಕಿಸ್ತಾನದ ಶ್ರೀಮಂತ ರಾಜಕಾರಣಿಗಳ ಪೈಕಿ ರೀತಾ ಅವರೂ ಒಬ್ಬರಾಗಿದ್ದಾರೆ. ಇವರ ವಾರ್ಷಿಕ ಆದಾಯವು ಅಂದಾಜು 30 ಕೋಟಿ ರೂಪಾಯಿ ಇದೆ.

Exit mobile version