Site icon Vistara News

Donald Trump: ಟ್ರಂಪ್ ವಿರುದ್ಧ ಮತ್ತೊಂದು ಕೇಸ್! ಅಮೆರಿಕ ಅಧ್ಯಕ್ಷ ಎಲೆಕ್ಷನ್‌ ಸ್ಪರ್ಧಿಸುವ ಆಸೆ ಠುಸ್

Donald Trump

ವಾಷಿಂಗ್ಟನ್: ಅಧ್ಯಕ್ಷ ಸ್ಥಾನದಿಂದ ಕೆಳಗಿಳದ ಬಳಿಕವೂ ಅಮೆರಿಕ ರಹಸ್ಯ ದಾಖಲೆಗಳನ್ನು (Secret Documents) ನಿರ್ವಹಣೆ ಮಾಡಿದ ಆರೋಪವನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಿರುದ್ಧ ಹೊರಿಸಲಾಗಿದೆ. ಈ ವಿಷಯವನ್ನು ಟ್ರಂಪ್ ಅವರೇ ಖಚಿತಪಡಿಸಿದ್ದಾರೆ. ಅಲ್ಲದೇ, ಇಂಥ ಆರೋಪ ಎದುರಿಸುತ್ತಿರುವ ಅಮೆರಿಕದ ಮೊದಲ ಹಾಲಿ ಅಥವಾ ಮಾಜಿ ಅಧ್ಯಕ್ಷರಾಗಿದ್ದಾರೆ ಟ್ರಂಪ್ ಅವರು. 2024ರ ಅಧ್ಯಕ್ಷೀಯ ಚುನಾವಣೆಗೆ ಎರಡನೇ ಬಾರಿಗೆ ಸ್ಪರ್ಧಿಸಲು ಮುಂದಾಗಿರುವ ಟ್ರಂಪ್ ಅವರಿಗೆ ಈ ಆರೋಪವು ಕಾನೂನು ತೊಡಕಾಗುವ ಎಲ್ಲ ಸಾಧ್ಯತೆಗಳಿವೆ(US presidential election 2024).

ಭ್ರಷ್ಟ ಬೈಡೆನ್ ಆಡಳಿತವು ನನ್ನನ್ನು ದೋಷಾರೋಪಣೆಗೆ ಒಳಪಡಿಸಲಾಗಿದೆ ಎಂದು ನನ್ನ ವಕೀಲರಿಗೆ ತಿಳಿಸಿದೆ ಎಂದು ಟ್ರಂಪ್ ತಮ್ಮ ಪ್ಲಾಟ್‌ಫಾರ್ಮ್ ಟ್ರೂತ್ ಸೋಶಿಯಲ್‌ನಲ್ಲಿ ಬರೆದಿದುಕೊಂಡಿದ್ದಾರೆ. ಆ ಮೂಲಕ ಇದೇ ಮೊದಲ ಬಾರಿಗೆ ಹಾಲಿ ಅಥವಾ ಮಾಜಿ ಕಮಾಂಡರ್ ಚೀಫ್‌ ಒಬ್ಬರು ಇಂಥ ಫೆಡರಲ್ ಆರೋಪಗಳನ್ನು ಎದುರಿಸುವಂತಾಗಿದೆ. ಇದು ಅಮೆರಿಕದ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗುತ್ತಿದೆ.

ಟ್ರಂಪ್ ಅವರಿಕೆ ಖಚಿತಪಡಿಸಲು ಈ ಕುರಿತು ನ್ಯಾಯಾಂಗ ಇಲಾಖೆಯಿಂದ ತಕ್ಷಣದ ದೃಢೀಕರಣವಿಲ್ಲ, ಆದಾಗ್ಯೂ ದಿ ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಕೆಲವು ಅಮೆರಿಕದ ಮಾಧ್ಯಮಗಳು ಟ್ರಂಪ್ ಅವರನ್ನು ನಿಜವಾಗಿಯೂ ದೋಷಾರೋಪಣೆ ಮಾಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ. ಎರಡನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಗೆ ತಯಾರಿ ನಡೆಸುತ್ತಿರುವ ಟ್ರಂಪ್, ಮಿಯಾಮಿಯಲ್ಲಿ ಫೆಡರಲ್ ಕೋರ್ಟ್‌ಹೌಸ್‌ಗೆ ಬರುವಂತೆ ತಿಳಿಸಲಾಗಿದೆ ಎಂದು ಟ್ರೂತ್ ಸೋಷಿಯಲ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: 2020ರಲ್ಲಿ ಡೊನಾಲ್ಡ್ ಟ್ರಂಪ್​ ಕುಟುಂಬ ಭಾರತಕ್ಕೆ ಬಂದಾಗ ಅವರ ವ್ಯವಸ್ಥೆಗಾಗಿ ಕೇಂದ್ರ ಸರ್ಕಾರ ವ್ಯಯಿಸಿದ್ದೆಷ್ಟು?!

ಟ್ರಂಪ್ ಅವರು ಈಗಾಗಲೇ ಅಪರಾಧದ ಆರೋಪಕ್ಕೆ ಒಳಗಾದ ಮೊದಲ ಮಾಜಿ ಅಥವಾ ಹಾಲಿ ಅಧ್ಯಕ್ಷರಾಗಿದ್ದಾರೆ. ಕಳೆದ ಅಧ್ಯಕ್ಷೀಯ ಚುನಾವಣೆಯ ವೇಳೆ ಪೋರ್ನ್ ತಾರೆಯೊಬ್ಬರಿಗೆ ಅವರು ತಮ್ಮೊಂದಿಗೆ ಸಂಬಂಧ ಹೊಂದಿದ್ದರು ಎಂಬುದನ್ನ ಮರೆ ಮಾಚಲು ಆಕೆಗೆ ಹಣ ಪಾವತಿ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ. ಆದರೆ, ಈ ಹೊಸ ಪ್ರಕರಣದಲ್ಲಿ ಟ್ರಂಪ್ ಅವರ ವಿರುದ್ಧ ನಿರ್ದಿಷ್ಟವಾಗಿ ಯಾವ ಕೇಸಿನಲ್ಲಿ ಆರೋಪ ಹೊರಿಸಲಾಗಿದೆ ಎಂಬುದು ಇನ್ನ ಗೊತ್ತಾಗಿಲ್ಲ.

ವಿದೇಶದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version