ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ (US Presidential Election 2024) ಕೆಲವೇ ತಿಂಗಳು ಬಾಕಿ ಉಳಿದಿವೆ. ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಕಣಕ್ಕಿಳಿದಿದ್ದು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಿಲ್ವಾಕಿ (Milwauke)ಯಲ್ಲಿ ಗುರುವಾರ ನಡೆದ ರಿಪಬ್ಲಿಕನ್ ನ್ಯಾಷನಲ್ ಕನ್ವೆನ್ಷನ್ (Republican National Convention) ಉದ್ದೇಶಿಸಿ ಮಾತನಾಡಿದ ಅವರು, ಇಸ್ರೇಲ್‌ನಂತೆಯೇ ಅಮೆರಿಕ ಕೂಡ ಐರನ್ ಡೋಮ್ ಕ್ಷಿಪಣಿ (Iron Dome missile) ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುವುದಾಗಿ ಮತ್ತೊಮ್ಮೆ ಪ್ರತಿಜ್ಞೆ ಕೈಗೊಂಡರು.
ಒಂದು ಗಂಟೆಯ ಭಾಷಣದಲ್ಲಿ ತಮ್ಮ ನಾಮನಿರ್ದೇಶನವನ್ನು ಔಪಚಾರಿಕವಾಗಿ ಘೋಷಿಸಿದ ಟ್ರಂಪ್, ಅಧ್ಯಕ್ಷ ಜೋ ಬೈಡನ್ (Joe Biden) ವಿರುದ್ಧ ವಾಗ್ದಾಳಿ ನಡೆಸಿದರು. ʼʼಅವರು (ಜೋ ಬೈಡನ್) ಶಾಂತಿಯ ಜಗತ್ತಿನಲ್ಲಿ ಯುದ್ಧದ ಮೂಲಕ ಕೋಲಾಹಲ ಸೃಷ್ಟಿಸಿದ್ದಾರೆ” ಎಂದು ಹೇಳಿದರು. ಇಸ್ತೇಲ್ ಮತ್ತು ಪ್ಯಾಲೆಸ್ತೀನ್ ಯುದ್ಧದ ಕುರಿತು ಮಾತನಾಡಿದ ಮಾಜಿ ಅಧ್ಯಕ್ಷ, ಇಸ್ರೇಲ್ ಮೇಲೆ ಏಪ್ರಿಲ್‌ನಲ್ಲಿ ಇರಾನ್ ನಡೆಸಿದ ಕ್ಷಿಪಣಿ ದಾಳಿಯನ್ನು ಉಲ್ಲೇಖಿಸಿದರು. “ಇಸ್ರೇಲ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಇಸ್ರೇಲ್ ಮೇಲೆ ಸುಮಾರು 342 ಕ್ಷಿಪಣಿಗಳನ್ನು ಹಾರಿಸಲಾಯಿತಾದರೂ ಒಂದು ಮಾತ್ರ ಸ್ವಲ್ಪಮಟ್ಟಿಗೆ ಹಾದು ಹೋಯಿತು. ಉಳಿದವುಗಳನ್ನು ಅರ್ಧಲ್ಲೇ ತಡೆಯಲಾಗಿದೆʼʼ ಎಂದು ತಿಳಿಸಿದರು.
TRUMP: "We're gonna build an iron dome over our country!" pic.twitter.com/6BNbrI3UNK
— Townhall.com (@townhallcom) July 19, 2024
ಎದುರಾಳಿಗಳಿಗೆ ಎಚ್ಚರಿಕೆ
ನವೆಂಬರ್‌ನಲ್ಲಿ ನಡೆಯುವ ಚುನಾವಣೆಯ ನಂತರ ತಾವು ಶ್ವೇತಭವನಕ್ಕೆ ಮರಳುವ ಮೊದಲು ಅಮೆರಿಕದ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು 78 ವರ್ಷದ ಟ್ರಂಪ್ ವಿರೋಧಿಗಳಿಗೆ ಕಠಿಣ ಎಚ್ಚರಿಕೆಯನ್ನೂ ನೀಡಿದರು.
ತಮ್ಮ ಸುದೀರ್ಘ ಭಾಷಣದಲ್ಲಿ ಟ್ರಂಪ್ ಹಣದುಬ್ಬರ, ಅಕ್ರಮ ವಲಸೆ ಮತ್ತು ಹಲವು ಅಂತಾರಾಷ್ಟ್ರೀಯ ಬಿಕ್ಕಟ್ಟುಗಳಿಗೆ ಜೋ ಬೈಡನ್ ಆಡಳಿತವನ್ನು ದೂಷಿಸಿದರು. “ನಾವು ನಮ್ಮ ಸೈನ್ಯವನ್ನು ಇನ್ನಷ್ಟು ಬಲಪಡಿಸುತ್ತೇವೆ ಮತ್ತು ಯಾವುದೇ ಶತ್ರು ನಮ್ಮ ತಾಯ್ನಾಡಿನ ಮೇಲೆ ದಾಳಿ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುತ್ತೇವೆ” ಎಂದು ಘೋಷಿಸಿದರು. ಅದಾಗ್ಯೂ ಟ್ರಂಪ್ ಪ್ರಸ್ತಾಪಿಸಿದ ಐರನ್ ಡೋಮ್ ವ್ಯವಸ್ಥೆಯ ಉದ್ದೇಶವು ಅಸ್ಪಷ್ಟವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ಇದನ್ನು ಅಲ್ಪ-ಶ್ರೇಣಿಯ ರಾಕೆಟ್‌ಗಳನ್ನು ತಡೆಹಿಡಿಯಲು ವಿನ್ಯಾಸಗೊಳಿಸಲಾಗುತ್ತದೆ. ಆದರೆ ಅಮೆರಿಕ ಗಡಿಗಳಲ್ಲಿ ಅಂತಹ ಯಾವುದೇ ಬೆದರಿಕೆಗಳಿಲ್ಲ.
Under President Bush, Russia invaded Georgia.
— Team Trump (Text TRUMP to 88022) (@TeamTrump) July 19, 2024
Under President Obama, Russia took Crimea.
Under the current administration, Russia is after all of Ukraine.
Under President Trump, Russia took NOTHING. pic.twitter.com/lYe4YBfDwQ
ಟ್ರಂಪ್ ಅವರ ಪತ್ನಿ ಮೆಲಾನಿಯಾ ಅವರು ರಿಪಬ್ಲಿಕನ್ ಪಾರ್ಟಿಯ ಈ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ಪತಿಗೆ ಬೆಂಬಲಿಸಲು ಸೂಚಿಸಿದರು. ಟ್ರಂಪ್ ಅವರ ಭಾಷಣ ಮುಗಿದ ಬಳಿಕ ಜನರತ್ತ ಕೈಬೀಸಿ, ಚುಂಬಿಸಿ ಪತಿಯ ಜತೆಗೆ ಕೈ ಜೋಡಿಸಿ ನಿಂತರು.
ಇದನ್ನೂ ಓದಿ: Donald Trump: ಜಗನ್ನಾಥನ ಕೃಪೆಯಿಂದ ಡೊನಾಲ್ಡ್ ಟ್ರಂಪ್ ಪಾರು; ಏನಿದು ದೈವಿಕ ಪವಾಡ? ವೈರಲ್ ಪೋಸ್ಟ್ ಇಲ್ಲಿದೆ
ಕೆಲವೇ ದಿನಗಳ ಹಿಂದೆ ನಡೆದ ತಮ್ಮ ಹತ್ಯೆಯ ಪ್ರಯತ್ನದ ನಂತರವೂ ಟ್ರಂಪ್ ಪ್ರಚಾರ ಕಾರ್ಯವನ್ನು ಮುಂದುವರಿಸಿದ್ದಾರೆ. ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಜುಲೈ 13ರ ಸಂಜೆ ಆಯೋಜಿಸಿದ್ದ ರ‍್ಯಾಲಿಯ ವೇಳೆ ನಡೆದ ಗುಂಡಿನ ದಾಳಿಯಿಂದ ಟ್ರಂಪ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.