Donald Trump: ಅಮೆರಿಕವೂ ಐರನ್ ಡೋಮ್ ಕ್ಷಿಪಣಿ ತಯಾರಿಸಲಿದೆ; ಡೊನಾಲ್ಡ್‌ ಟ್ರಂಪ್‌ ಸೂಚನೆ - Vistara News

ವಿದೇಶ

Donald Trump: ಅಮೆರಿಕವೂ ಐರನ್ ಡೋಮ್ ಕ್ಷಿಪಣಿ ತಯಾರಿಸಲಿದೆ; ಡೊನಾಲ್ಡ್‌ ಟ್ರಂಪ್‌ ಸೂಚನೆ

Donald Trump: ಮಿಲ್ವಾಕಿಯಲ್ಲಿ ಗುರುವಾರ ನಡೆದ ರಿಪಬ್ಲಿಕನ್ ನ್ಯಾಷನಲ್ ಕನ್ವೆನ್ಷನ್‌ನಲ್ಲಿ ಮಾತನಾಡಿದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇಸ್ರೇಲ್‌ನಂತೆಯೇ ಅಮೆರಿಕ ಕೂಡ ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುವುದಾಗಿ ಮತ್ತೊಮ್ಮೆ ಪ್ರತಿಜ್ಞೆ ಕೈಗೊಂಡರು. ಒಂದು ಗಂಟೆಯ ಭಾಷಣದಲ್ಲಿ ತಮ್ಮ ನಾಮನಿರ್ದೇಶನವನ್ನು ಔಪಚಾರಿಕವಾಗಿ ಘೋಷಿಸಿದ ಟ್ರಂಪ್, ಅಧ್ಯಕ್ಷ ಜೋ ಬೈಡನ್ (Joe Biden) ವಿರುದ್ಧ ವಾಗ್ದಾಳಿ ನಡೆಸಿದರು.

VISTARANEWS.COM


on

Donald Trump
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಷಿಂಗ್ಟನ್:‌ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ (US Presidential Election 2024) ಕೆಲವೇ ತಿಂಗಳು ಬಾಕಿ ಉಳಿದಿವೆ. ರಿಪಬ್ಲಿಕನ್‌ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಕಣಕ್ಕಿಳಿದಿದ್ದು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಿಲ್ವಾಕಿ (Milwauke)ಯಲ್ಲಿ ಗುರುವಾರ ನಡೆದ ರಿಪಬ್ಲಿಕನ್ ನ್ಯಾಷನಲ್ ಕನ್ವೆನ್ಷನ್ (Republican National Convention) ಉದ್ದೇಶಿಸಿ ಮಾತನಾಡಿದ ಅವರು, ಇಸ್ರೇಲ್‌ನಂತೆಯೇ ಅಮೆರಿಕ ಕೂಡ ಐರನ್ ಡೋಮ್ ಕ್ಷಿಪಣಿ (Iron Dome missile) ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುವುದಾಗಿ ಮತ್ತೊಮ್ಮೆ ಪ್ರತಿಜ್ಞೆ ಕೈಗೊಂಡರು.

ಒಂದು ಗಂಟೆಯ ಭಾಷಣದಲ್ಲಿ ತಮ್ಮ ನಾಮನಿರ್ದೇಶನವನ್ನು ಔಪಚಾರಿಕವಾಗಿ ಘೋಷಿಸಿದ ಟ್ರಂಪ್, ಅಧ್ಯಕ್ಷ ಜೋ ಬೈಡನ್ (Joe Biden) ವಿರುದ್ಧ ವಾಗ್ದಾಳಿ ನಡೆಸಿದರು. ʼʼಅವರು (ಜೋ ಬೈಡನ್) ಶಾಂತಿಯ ಜಗತ್ತಿನಲ್ಲಿ ಯುದ್ಧದ ಮೂಲಕ ಕೋಲಾಹಲ ಸೃಷ್ಟಿಸಿದ್ದಾರೆ” ಎಂದು ಹೇಳಿದರು. ಇಸ್ತೇಲ್‌ ಮತ್ತು ಪ್ಯಾಲೆಸ್ತೀನ್‌ ಯುದ್ಧದ ಕುರಿತು ಮಾತನಾಡಿದ ಮಾಜಿ ಅಧ್ಯಕ್ಷ, ಇಸ್ರೇಲ್ ಮೇಲೆ ಏಪ್ರಿಲ್‌ನಲ್ಲಿ ಇರಾನ್ ನಡೆಸಿದ ಕ್ಷಿಪಣಿ ದಾಳಿಯನ್ನು ಉಲ್ಲೇಖಿಸಿದರು. “ಇಸ್ರೇಲ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಇಸ್ರೇಲ್‌ ಮೇಲೆ ಸುಮಾರು 342 ಕ್ಷಿಪಣಿಗಳನ್ನು ಹಾರಿಸಲಾಯಿತಾದರೂ ಒಂದು ಮಾತ್ರ ಸ್ವಲ್ಪಮಟ್ಟಿಗೆ ಹಾದು ಹೋಯಿತು. ಉಳಿದವುಗಳನ್ನು ಅರ್ಧಲ್ಲೇ ತಡೆಯಲಾಗಿದೆʼʼ ಎಂದು ತಿಳಿಸಿದರು.

ಎದುರಾಳಿಗಳಿಗೆ ಎಚ್ಚರಿಕೆ

ನವೆಂಬರ್‌ನಲ್ಲಿ ನಡೆಯುವ ಚುನಾವಣೆಯ ನಂತರ ತಾವು ಶ್ವೇತಭವನಕ್ಕೆ ಮರಳುವ ಮೊದಲು ಅಮೆರಿಕದ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು 78 ವರ್ಷದ ಟ್ರಂಪ್ ವಿರೋಧಿಗಳಿಗೆ ಕಠಿಣ ಎಚ್ಚರಿಕೆಯನ್ನೂ ನೀಡಿದರು.

ತಮ್ಮ ಸುದೀರ್ಘ ಭಾಷಣದಲ್ಲಿ ಟ್ರಂಪ್ ಹಣದುಬ್ಬರ, ಅಕ್ರಮ ವಲಸೆ ಮತ್ತು ಹಲವು ಅಂತಾರಾಷ್ಟ್ರೀಯ ಬಿಕ್ಕಟ್ಟುಗಳಿಗೆ ಜೋ ಬೈಡನ್ ಆಡಳಿತವನ್ನು ದೂಷಿಸಿದರು. “ನಾವು ನಮ್ಮ ಸೈನ್ಯವನ್ನು ಇನ್ನಷ್ಟು ಬಲಪಡಿಸುತ್ತೇವೆ ಮತ್ತು ಯಾವುದೇ ಶತ್ರು ನಮ್ಮ ತಾಯ್ನಾಡಿನ ಮೇಲೆ ದಾಳಿ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುತ್ತೇವೆ” ಎಂದು ಘೋಷಿಸಿದರು. ಅದಾಗ್ಯೂ ಟ್ರಂಪ್ ಪ್ರಸ್ತಾಪಿಸಿದ ಐರನ್ ಡೋಮ್ ವ್ಯವಸ್ಥೆಯ ಉದ್ದೇಶವು ಅಸ್ಪಷ್ಟವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ಇದನ್ನು ಅಲ್ಪ-ಶ್ರೇಣಿಯ ರಾಕೆಟ್‌ಗಳನ್ನು ತಡೆಹಿಡಿಯಲು ವಿನ್ಯಾಸಗೊಳಿಸಲಾಗುತ್ತದೆ. ಆದರೆ ಅಮೆರಿಕ ಗಡಿಗಳಲ್ಲಿ ಅಂತಹ ಯಾವುದೇ ಬೆದರಿಕೆಗಳಿಲ್ಲ.

ಟ್ರಂಪ್ ಅವರ ಪತ್ನಿ ಮೆಲಾನಿಯಾ ಅವರು ರಿಪಬ್ಲಿಕನ್ ಪಾರ್ಟಿಯ ಈ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ಪತಿಗೆ ಬೆಂಬಲಿಸಲು ಸೂಚಿಸಿದರು. ಟ್ರಂಪ್‌ ಅವರ ಭಾಷಣ ಮುಗಿದ ಬಳಿಕ ಜನರತ್ತ ಕೈಬೀಸಿ, ಚುಂಬಿಸಿ ಪತಿಯ ಜತೆಗೆ ಕೈ ಜೋಡಿಸಿ ನಿಂತರು.

ಇದನ್ನೂ ಓದಿ: Donald Trump: ಜಗನ್ನಾಥನ ಕೃಪೆಯಿಂದ ಡೊನಾಲ್ಡ್‌ ಟ್ರಂಪ್‌ ಪಾರು; ಏನಿದು ದೈವಿಕ ಪವಾಡ? ವೈರಲ್‌ ಪೋಸ್ಟ್‌ ಇಲ್ಲಿದೆ

ಕೆಲವೇ ದಿನಗಳ ಹಿಂದೆ ನಡೆದ ತಮ್ಮ ಹತ್ಯೆಯ ಪ್ರಯತ್ನದ ನಂತರವೂ ಟ್ರಂಪ್‌ ಪ್ರಚಾರ ಕಾರ್ಯವನ್ನು ಮುಂದುವರಿಸಿದ್ದಾರೆ. ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಜುಲೈ 13ರ ಸಂಜೆ ಆಯೋಜಿಸಿದ್ದ ರ‍್ಯಾಲಿಯ ವೇಳೆ ನಡೆದ ಗುಂಡಿನ ದಾಳಿಯಿಂದ ಟ್ರಂಪ್‌ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Air India Flight: 225 ಪ್ರಯಾಣಿಕರನ್ನು ಹೊತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ; ರಷ್ಯಾದಲ್ಲಿ ಲ್ಯಾಂಡಿಂಗ್‌

Air India Flight: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 225 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ರಷ್ಯಾದ ಕ್ರಾಸ್ನೋಯರ್ಸ್ಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ. ಕಳೆದ ವರ್ಷ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ರಷ್ಯಾದ ಮಗದನ್‌ನಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಲಾಗಿತ್ತು.

VISTARANEWS.COM


on

Air India Flight
Koo

ನವದೆಹಲಿ: ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 225 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋ (Delhi-San Francisco)ಗೆ ತೆರಳುತ್ತಿದ್ದ ಏರ್ ಇಂಡಿಯಾ (Air India Flight) ವಿಮಾನವನ್ನು ರಷ್ಯಾದ ಕ್ರಾಸ್ನೋಯರ್ಸ್ಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Krasnoyarsk international airport)ಕ್ಕೆ ಕಳುಹಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಕಾಕ್ ಪಿಟ್ ಸಿಬ್ಬಂದಿ ತಾಂತ್ರಿಕ ದೋಷವನ್ನು ಪತ್ತೆ ಹಚ್ಚಿದ ಹಿನ್ನಲೆಯಲ್ಲಿ ಎಐ 183 (AI 183) ವಿಮಾನವನ್ನು ರಷ್ಯಾದ ಕ್ರಾಸ್ನೋಯರ್ಸ್ಕ್ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಈ ವಿಮಾನದಲ್ಲಿ 225 ಪ್ರಯಾಣಿಕರು ಮತ್ತು 19 ಸಿಬ್ಬಂದಿ ಸೇರಿ ಒಟ್ಟು 244 ಮಂದಿ ಇದ್ದರು. ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡಿದ ಬಳಿಕ ಅವರೆಲ್ಲರನ್ನೂ ಹೆಚ್ಚಿನ ಟರ್ಮಿನಲ್ ಕಟ್ಟಡಕ್ಕೆ ಕರೆದೊಯ್ಯಲಾಯಿತು ಎಂದು ಅಧಿಕೃತರು ಮಾಹಿತಿ ನೀಡಿದ್ದಾರೆ.

“ಕ್ರಾಸ್ನೋಯರ್ಸ್ಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ತನ್ನದೇ ಆದ ಸಿಬ್ಬಂದಿಯನ್ನು ಹೊಂದಿಲ್ಲದ ಕಾರಣ, ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ನಾವು ಬೇರೆ ವ್ಯವಸ್ಥೆ ಮಾಡುತ್ತಿದ್ದೇವೆ” ಎಂದು ಏರ್‌ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. “ಏರ್ ಇಂಡಿಯಾ ಸರ್ಕಾರಿ ಸಂಸ್ಥೆಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಪ್ರಯಾಣಿಕರನ್ನು ಸ್ಯಾನ್ ಫ್ರಾನ್ಸಿಸ್ಕೋಗೆ ತಲುಪಿಸಲು ಶೀಘ್ರ ಪರ್ಯಾಯ ವ್ಯವಸ್ಥೆ ಮಡುತ್ತೇವೆʼʼ ಎಂದು ಭರವಸೆ ನೀಡಿದೆ.

“ಏರ್ ಇಂಡಿಯಾ ವಿಮಾನದಲ್ಲಿರುವ ಪ್ರಯಾಣಿಕರು ಮತ್ತು ಸಿಬ್ಬಂದಿಯ ಬಗ್ಗೆ ಕಾಳಜಿ ವಹಿಸುತ್ತೇವೆ. ಆದಷ್ಟು ಶೀಘ್ರ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮತ್ತು ಅಲ್ಲಿಯವರೆಗೆ ಎಲ್ಲರ ಆರೋಗ್ಯ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ” ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಿಂದೆಯೂ ಆಗಿತ್ತು

ಇದೇ ರೀತಿಯ ಘಟನೆ ಈ ಹಿಂದೆಯೂ ನಡೆದಿತ್ತು. ಕಳೆದ ವರ್ಷ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ರಷ್ಯಾದ ಮಗದನ್‌ನಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಲಾಗಿತ್ತು.

ಆ ಬೋಯಿಂಗ್ 777-200 ಎಲ್ಆರ್ (Boeing 777-200 LR) ವಿಮಾನದಲ್ಲಿ 216 ಪ್ರಯಾಣಿಕರು ಮತ್ತು 16 ಸಿಬ್ಬಂದಿ ಇದ್ದರು. ತುರ್ತು ಭೂ ಸ್ಪರ್ಶದ ಬಳಿಕ ಅವರಿಗೆಲ್ಲ ಸಮೀಪದ ಶಾಲೆಯಲ್ಲಿ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸಲಾಗಿತ್ತು. ಅಲ್ಲಿ ಅವರು ಎರಡು ದಿನಗಳ ಕಾಲ ತಂಗಿದ್ದರು. ನಂತರ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಹೊತ್ತ ಬದಲಿ ವಿಮಾನವನ್ನು ಮುಂಬೈನಿಂದ ಕಳುಹಿಸಲಾಯಿತು. ಎರಡು ದಿನಗಳ ಬಳಿಕ ಪರ್ಯಾಯ ವಿಮಾನ ಮೂಲಕ ಪ್ರಯಾಣಿಕರನ್ನು ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಿದ್ದರು.

ಇದನ್ನೂ ಓದಿ: Bomb threat: ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿ ಬಂದಿತ್ತು ಸಂದೇಶ

ತುರ್ತು ಭೂ ಸ್ಪರ್ಶ

ಈ ವರ್ಷದ ಮೇಯಲ್ಲಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು. ಬೆಂಗಳೂರಿನಿಂದ ಕೇರಳದ ಕೊಚ್ಚಿಗೆ ಹೊರಟಿದ್ದ ವಿಮಾನದ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ತುರ್ತು ಭೂ ಸ್ಪರ್ಶ ಮಾಡಲಾಗಿತ್ತು. ಆ ಮೂಲಕ ಭಾರೀ ಅವಘಡವೊಂದು ತಪ್ಪಿತ್ತು.

Continue Reading

ವಿದೇಶ

Bangladesh Violence: ಬಾಂಗ್ಲಾ ಧಗ ಧಗ; ಭುಗಿಲೆದ್ದ ಹಿಂಸಾಚಾರಕ್ಕೆ 35 ಮಂದಿ ಬಲಿ

Bangladesh Violence: ಅನೇಕ ದಿನಗಳಿಂದ ಪ್ರತಿಭಟನಾಕಾರರು ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತ ಪಕ್ಷವಾದ ಅವಾಮಿ ಲೀಗ್ನ ವಿದ್ಯಾರ್ಥಿ ಘಟಕದ ಸದಸ್ಯರೊಂದಿಗೆ ವಿದ್ಯಾರ್ಥಿಗಳು ಘರ್ಷಣೆ ನಡೆಸಿದ್ದರಿಂದ 35ಮಂದಿ ಸಾವನ್ನಪ್ಪಿದ್ದಾರೆ.

VISTARANEWS.COM


on

Bangladesh Violence
Koo

ಢಾಕಾ: ಉದ್ಯೋಗ ಮೀಸಲಾತಿ(Job Reservation) ವಿಚಾರವಾಗಿ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ(Bangladesh Violence) ಬರೋಬ್ಬರಿ 35 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಮೀಸಲಾತಿ ವಿಚಾರವಾಗಿ ವಿದ್ಯಾರ್ಥಿಗಳು ರಾಷ್ಟ್ರವ್ಯಾಪಿ ಕರೆ ನೀಡಿದ್ದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿತ್ತು. ಇನ್ನು ಉದ್ರಿಕ್ತ ಪ್ರತಿಭಟನಾಕಾರರು ಢಾಕಾದಲ್ಲಿರುವ ಟಿವಿ ಪ್ರಧಾನ ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ. ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಸರ್ಕಾರ ಮಾತುಕತೆ ನಡೆಸಲಿದೆ ಎಂದು ಕಾನೂನು ಸಚಿವ ಅನಿಸುಲ್ ಹಕ್ ಹೇಳಿದ್ದಾರೆ

ಅನೇಕ ದಿನಗಳಿಂದ ಪ್ರತಿಭಟನಾಕಾರರು ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಮೊಬೈಲ್ ಇಂಟರ್ನೆಟ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತ ಪಕ್ಷವಾದ ಅವಾಮಿ ಲೀಗ್ನ ವಿದ್ಯಾರ್ಥಿ ಘಟಕದ ಸದಸ್ಯರೊಂದಿಗೆ ವಿದ್ಯಾರ್ಥಿಗಳು ಘರ್ಷಣೆ ನಡೆಸಿದ್ದರಿಂದ 35ಮಂದಿ ಸಾವನ್ನಪ್ಪಿದ್ದಾರೆ. ಬ್ರಾಕ್ ವಿಶ್ವವಿದ್ಯಾನಿಲಯದ ಬಳಿಯ ಮೆರುಲ್ ಬಡ್ಡಾದಲ್ಲಿ ವಿದ್ಯಾರ್ಥಿಗಳ ನಡುವೆ ಘರ್ಷಣೆಗಳು ನಡೆದಿವೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.

ಪ್ರತಿಭಟನೆ ಏಕೆ?

ಜೂನ್ 5 ರಂದು, ಬಾಂಗ್ಲಾದೇಶ ಹೈಕೋರ್ಟ್ 1971 ರ ಪಾಕಿಸ್ತಾನದಿಂದ ಸ್ವಾತಂತ್ರ್ಯದ ಯುದ್ಧದಲ್ಲಿ ಹೋರಾಡಿದವರ ಕುಟುಂಬಗಳಿಗೆ ಶೇ. 30 ಮೀಸಲಾತಿಯನ್ನು ಘೋಷಿಸಿತ್ತು. ಇದನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನೇತೃತ್ವದ ಬೃಹತ್ ಆಂದೋಲನದ ನಂತರ 2018 ರಲ್ಲಿ ರದ್ದುಗೊಳಿಸಲಾಗಿತ್ತು. ತಾರತಮ್ಯದ ಮೀಸಲಾತಿಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುತ್ತಿದ್ದಾರೆ. ಖಾಸಗಿ ವಲಯದ ಉದ್ಯೋಗಗಳ ಕೊರತೆಯು ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳನ್ನು ಹೆಚ್ಚು ಲಾಭದಾಯಕವಾಗಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಸ್ತುತ, ಬಾಂಗ್ಲಾದೇಶದಲ್ಲಿ 170 ಮಿಲಿಯನ್ ಜನಸಂಖ್ಯೆಯಲ್ಲಿ ಸುಮಾರು 32 ಮಿಲಿಯನ್ ಯುವಜನರು ಉದ್ಯೋಗದಲ್ಲಿ ಇಲ್ಲ. ಆರ್ಥಿಕ ಸವಾಲುಗಳು ನಿಶ್ಚಲತೆ, ಸುಮಾರು 10% ಹಣದುಬ್ಬರ ಮತ್ತು ಕುಗ್ಗುತ್ತಿರುವ ಹಣದ ಮೌಲ್ಯ ಯುವಜನತೆಯನ್ನು ನಿರಾಶರನ್ನಾಗಿಸಿದೆ. ಕಳೆದ ತಿಂಗಳು ಆರಂಭವಾದ ಪ್ರತಿಭಟನೆಗಳು, ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸಲು ಪ್ರಧಾನಿ ಶೇಖ್ ಹಸೀನಾ ನಿರಾಕರಿಸಿದ ನಂತರ ತೀವ್ರಗೊಂಡವು.

ಭಾರತೀಯ ಪ್ರಜೆಗಳಿಗೆ ಸೂಚನೆ

ಬಾಂಗ್ಲಾದೇಶದಲ್ಲಿ ಉದ್ಯೋಗ ಮೀಸಲಾತಿಗಾಗಿ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿರುವ ಭಾರತೀಯ ಪ್ರಜೆಗಳು ಹಾಗೂ ವಿದ್ಯಾರ್ಥಿಗಳಿಗೆ ಭಾರತೀಯ ರಾಜಭಾರ ಕಚೇರಿ ಸಲಹಾ ಸೂಚಿ ಬಿಡುಗಡೆ ಮಾಡಿದೆ. ಮನೆಯಿಂದ ಹೊರಬಾರದಂತೆ ಮತ್ತು ದೂರ ಪ್ರಯಾಣವನ್ನು ತಪ್ಪಿಸುವಂತೆ ಸಲಹೆ ನೀಡಿದೆ.

ಇದನ್ನೂ ಓದಿ: Trump Assassination Bid: ಟ್ರಂಪ್‌ ಮೇಲೆ ಗುಂಡಿನ ದಾಳಿ; ಶೂಟರ್‌ ಫೋಟೋ ರಿಲೀಸ್‌- ಆತನ ಸ್ನೇಹಿತರು ಹೇಳಿದ್ದೇನು?

Continue Reading

ವಿದೇಶ

Israel Palestine War: 50 ಕಿ.ಮೀ ದೂರದಿಂದಲೇ ಪ್ಯಾಲೆಸ್ತಿನ್‌ ಕಮಾಂಡರ್‌ನನ್ನು ಕೊಂದ ಇಸ್ರೇಲ್‌! ವಿಡಿಯೊ ನೋಡಿ

Israel Palestine War: ಜುಲೈ 18ರಂದು ಐಡಿಎಫ್ (ಇಸ್ರೇಲ್‌ ಡಿಫೇನ್ಸ್‌ ಪೋರ್ಸ್‌) ಪ್ಯಾಲೆಸ್ತಿನ್‌ ಉಗ್ರ ಸಂಘಟನೆಯ ಕಮಾಂಡರ್‌ನನ್ನು ಗುರಿಯಾಗಿಸಿಕೊಂಡು ಲೆಬನಾನ್‌ ಮೇಲೆ 50 ಕಿ.ಮೀ ದೂರದಿಂದಲೇ ದಾಳಿ ನಡೆಸಿದೆ. ಈತ ಗಾಜಾ ನಗರದಲ್ಲಿರುವ ಇಸ್ರೇಲ್ ವಿರೋಧಿ ಪಡೆಗಳ ಮುಖ್ಯಸ್ಥನಾಗಿದ್ದ. ವೈರಲ್ ಆಗಿರುವ ವಿಡಿಯೋದಲ್ಲಿ ಇಸ್ರೇಲ್ ಸೇನೆಯು ಅನಾಸ್ ಕಾರಿನ ಮೇಲೆ ದಾಳಿ ನಡೆಸಿದ ದೃಶ್ಯವನ್ನು ತೋರಿಸಿದೆ.

VISTARANEWS.COM


on

By

Israel Palestine War
Koo

ಲೆಬನಾನ್‌ನಲ್ಲಿ ಇಸ್ಲಾಮಿಕ್ ಜಿಹಾದ್‌ನ ನೌಕಾ ಪಡೆಗಳ ಕಮಾಂಡರ್‌ನ ( Islamic Jihad’s Naval Forces commander) ಕಾರಿನ ಮೇಲೆ ಇಸ್ರೇಲ್ ಸೇನೆ ದಾಳಿ (Israel Palestine War) ನಡೆಸಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ಜಿಹಾದ್ ನೌಕಾ ಪಡೆಗಳ ಕಮಾಂಡರ್ ಅನಾಸ್ ಮುರಾದ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಜುಲೈ 18ರಂದು ಐಡಿಎಫ್ (ಇಸ್ರೇಲ್‌ ಡಿಫೇನ್ಸ್‌ ಪೋರ್ಸ್‌) ಉಗ್ರ ಸಂಘಟನೆಯ ಕಮಾಂಡರ್‌ನನ್ನು ಗುರಿಯಾಗಿಸಿಕೊಂಡು ಲೆಬನಾನ್‌ ಮೇಲೆ 50 ಕಿ.ಮೀ ದೂರದಿಂದಲೇ ದಾಳಿ ನಡೆಸಿತ್ತು.

Israel Palestine War


ಅನಾಸ್ ಮುರಾದ್ ಗಾಜಾ ನಗರದಲ್ಲಿ ಇಸ್ರೇಲ್ ವಿರೋಧಿ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ. ವೈರಲ್ ಆಗಿರುವ ವಿಡಿಯೋದಲ್ಲಿ ಇಸ್ರೇಲ್ ಸೇನೆಯು ಅನಾಸ್ ಕಾರಿನ ಮೇಲೆ ದಾಳಿ ನಡೆಸಿದ ದೃಶ್ಯವನ್ನು ತೋರಿಸಿದೆ.

Israel Palestine War


ಇನ್ನೊಂದು ದಾಳಿಯಲ್ಲಿ ಭಯೋತ್ಪಾದಕ ಅಹ್ಮದ್ ಅಲ್-ಮಸ್ರಿಯನ್ನು ಇಸ್ರೇಲ್‌ ಸೇನೆ ಹೊಡೆದು ಉರುಳಿಸಿದೆ. ಅಕ್ಟೋಬರ್ 7ರಂದು ಇಸ್ರೇಲ್‌ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಸಂಘಟನೆಯ ಮುಖಂಡನಾಗಿದ್ದ ಅಲ್‌-ಮಸ್ರಿ ಪ್ರಮುಖ ಪಾತ್ರ ವಹಿಸಿದ್ದ.

ಭಯೋತ್ಪಾದಕರು ಇಸ್ರೇಲ್‌ನೊಳಗೆ ನುಗ್ಗಿ ಹಲವಾರು ರಾಕೆಟ್‌ ದಾಳಿಗಳನ್ನು ನಡೆಸಿದ್ದರು. ಆ ಬಳಿಕ ಪ್ಯಾಲೆಸ್ತೀನ್‌ ಉಗ್ರ ಸಂಘಟನೆ ಹಮಾಸ್ ಮೇಲೆ ಪ್ರತಿ ದಾಳಿಯನ್ನು ಹೆಚ್ಚಿಸಲಾಗಿದೆ. ಕೇಂದ್ರ ಗಾಜಾದ ಮೇಲೆ ಗುರುವಾರ ನಡೆದ ಇಸ್ರೇಲ್ ದಾಳಿಯಲ್ಲಿ 12ಕ್ಕೂ ಹೆಚ್ಚು ಪ್ಯಾಲೆಸ್ತಿನಿಯನ್ನರನ್ನು ಕೊಲ್ಲಲಾಗಿದೆ. ಅನೇಕರು ಗಾಯಗೊಂಡಿದ್ದು, ಚಿಕಿತ್ಸೆಯ ಕೊರತೆಯಿಂದ ಸಾವುನೋವುಗಳು ಹೆಚ್ಚಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: Oil Tanker Capsizes: ತೈಲ ತುಂಬಿದ್ದ ಹಡಗು ಮುಳುಗಡೆ; 13 ಭಾರತೀಯರು ಜಲಸಮಾಧಿ

Continue Reading

ವಿದೇಶ

Mashco Piro Tribe: ಮೊದಲ ಬಾರಿ ಹೊರ ಜಗತ್ತಿಗೆ ಕಾಣಿಸಿಕೊಂಡ ಮಾಶ್ಕೊ ಪಿರೋ ಬುಡಕಟ್ಟು ಸಮುದಾಯ!

ಪ್ರಪಂಚದ ಅತೀ ದೊಡ್ಡ ಬುಡಕಟ್ಟು ಸಮುದಾಯವೊಂದು (World’s Largest Tribe) ಪೆರುವಿಯನ್ ಅಮೆಜಾನ್‌ನ ನದಿ ದಡದಲ್ಲಿ ಕಾಣಿಸಿಕೊಂಡಿದೆ. ಹೊರ ಜಗತ್ತಿನ ಸಮರ್ಕವಿಲ್ಲದ ಇವರ ಅಪರೂಪದ ಫೋಟೋ, ವಿಡಿಯೋಗಳನ್ನು ʼಸರ್ವೈವಲ್ ಇಂಟರ್‌ನ್ಯಾಷನಲ್ʼ ಬಿಡುಗಡೆ ಮಾಡಿದೆ. ಮಾಶ್ಕೊ ಪಿರೋ ಬುಡಕಟ್ಟು ಸಮುದಾಯ ಎದುರಿಸುತ್ತಿರುವ ಅಪಾಯದ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವುದರ ಬೆನ್ನಲ್ಲೇ ಈ ವಿಡಿಯೊ ಹೊರ ಬಂದಿದೆ.

VISTARANEWS.COM


on

By

World's Largest Tribe
Koo

ಪ್ರಪಂಚದ ಅತೀ ದೊಡ್ಡ ಬುಡಕಟ್ಟು ಸಮುದಾಯವೊಂದು (World’s Largest Tribe) ಪೆರುವಿಯನ್ ಅಮೆಜಾನ್ ನಲ್ಲಿ (Peruvian Amazon) ಇದೆ. ಆದರೆ ಇವರದು ಹೊರ ಜಗತ್ತಿನ ಸಂಪರ್ಕವಿಲ್ಲದ ಬುಡಕಟ್ಟು ಸಮುದಾಯ. ಇದೇ ಮೊದಲ ಬಾರಿಗೆ ಮಾಶ್ಕೊ ಪಿರೋ (Mashco Piro) ಸಮುದಾಯದ ಜನರ ಚಲನವಲನದ ಅಪರೂಪದ ದೃಶ್ಯಗಳನ್ನು ʼಸರ್ವೈವಲ್ ಇಂಟರ್ನ್ಯಾಷನಲ್ʼ ಬಿಡುಗಡೆ ಮಾಡಿದೆ.

ಮಾಶ್ಕೊ ಪಿರೋ ಬುಡಕಟ್ಟು ಸಮುದಾಯದ ಯೋಗಕ್ಷೇಮದ ಕಾಳಜಿ ಹೆಚ್ಚಾಗುತ್ತಿರುವ ಮಧ್ಯೆಯೇ ಈ ವಿಡಿಯೋ ತುಣುಕು ಬಿಡುಗಡೆಯಾಗಿದೆ. ಇದರಲ್ಲಿ ಮಾಶ್ಕೊ ಪಿರೋ ಬುಡಕಟ್ಟು ಸಮುದಾಯದ ಹಲವಾರು ಸದಸ್ಯರು ನದಿಯ ದಡದಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ಈ ದೃಶ್ಯದಲ್ಲಿ ತೋರಿಸಲಾಗಿದೆ.

ಈ ಪ್ರದೇಶದಲ್ಲಿ ಮರಗಳನ್ನು ಕಡಿಯುವುದು ಹೆಚ್ಚಾಗಿರುವುದರಿಂದ ಇಲ್ಲಿರುವ ಮಾಶ್ಕೊ ಪಿರೋ ಬುಡಕಟ್ಟು ಜನಾಂಗಕ್ಕೆ ಅಪಾಯ ಎದುರಾಗಿದೆ. ಅವರ ಸಾಂಪ್ರದಾಯಿಕ ಭೂಮಿಯಿಂದ ಅವರು ಹೊರಗೆ ತಳ್ಳಲ್ಪಡುತ್ತಿದ್ದಾರೆ. ಮಾಶ್ಕೊ ಪಿರೋ ಜನಾಂಗದವರು ಆಹಾರ ಮತ್ತು ಸುರಕ್ಷಿತ ಆಶ್ರಯಕ್ಕಾಗಿ ಹುಡುಕಾಡುತ್ತ ವಲಸೆ ಹೋಗುತ್ತಿರಬಹುದು ಎನ್ನಲಾಗಿದೆ.

ಬ್ರೆಜಿಲ್‌ನ ಗಡಿಯಲ್ಲಿರುವ ಆಗ್ನೇಯ ಪೆರುವಿಯನ್ ಪ್ರಾಂತ್ಯದ ಮ್ಯಾಡ್ರೆ ಡಿ ಡಿಯೋಸ್‌ನ ನದಿಯ ದಡದ ಬಳಿ ಜೂನ್ ಅಂತ್ಯದಲ್ಲಿ ಈ ವಿಡಿಯೋಗಳನ್ನು ತಗೆದಿರುವುದಾಗಿ ʼಸರ್ವೈವಲ್ ಇಂಟರ್‌ನ್ಯಾಷನಲ್ʼ ವರದಿ ಮಾಡಿದೆ.

ಮರಗಳನ್ನು ಕಡಿಯುವ ಕಾರ್ಯಾಚರಣೆ ಪ್ರಾರಂಭಿಸಿರುವ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಹೆಚ್ಚಿನ ಸಂಖ್ಯೆಯ ಮ್ಯಾಶ್ಕೊ ಪಿರೋಗಳು ವಾಸಿಸುತ್ತಿದ್ದಾರೆ ಎಂದು ಸರ್ವೈವಲ್ ಇಂಟರ್ನ್ಯಾಷನಲ್ ನಿರ್ದೇಶಕಿ ಕ್ಯಾರೋಲಿನ್ ಪಿಯರ್ಸ್ ಹೇಳಿದ್ದಾರೆ.

ಮಾಂಟೆ ಸಾಲ್ವಾಡೊ ಎಂಬ ಯಿನ್ ಜನರ ಹಳ್ಳಿಯ ಬಳಿ ಇತ್ತೀಚಿಗೆ 50ಕ್ಕೂ ಹೆಚ್ಚು ಮ್ಯಾಶ್ಕೊ ಪಿರೋ ಜನರು ಕಾಣಿಸಿಕೊಂಡರು. 17 ಜನರ ಮತ್ತೊಂದು ಗುಂಪು ಪೋರ್ಟೊ ನ್ಯೂವೊ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಹಕ್ಕುಗಳನ್ನು ರಕ್ಷಿಸುವ ಎನ್‌ಜಿಒ ಒಂದು ಹೇಳಿದೆ.

World's Largest Tribe


ಮಡ್ರೆ ಡಿ ಡಿಯೋಸ್‌ನ ಕಾಡಿನಲ್ಲಿ ಎರಡು ಪ್ರದೇಶದಲ್ಲಿ ವಾಸಿಸುವ ಮಾಶ್ಕೊ ಪಿರೋ ನಿಯಮದಂತೆ ವಿರಳವಾಗಿ ಕಾಣಿಸಿಕೊಂಡಿದ್ದಾರೆ. ಅವರು ಯಾರೊಂದಿಗೂ ಹೆಚ್ಚು ಸಂವಹನ ನಡೆಸುವುದಿಲ್ಲ. ಹಲವಾರು ಕಂಪೆನಿಗಳು ಮ್ಯಾಶ್ಕೊ ಪಿರೋ ವಾಸಿಸುವ ಪ್ರದೇಶದೊಳಗೆ ಮರವನ್ನು ಕಡಿಯಲು ಅನುಮತಿ ಹೊಂದಿವೆ. ಒಂದು ಕಂಪನಿ ಮರಗಳನ್ನು ಸಾಗಿಸಲು ಟ್ರಕ್‌ಗಳಿಗಾಗಿ 200 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ರಸ್ತೆಗಳನ್ನು ನಿರ್ಮಿಸಿದೆ ಎಂದು ಸರ್ವೈವಲ್ ಇಂಟರ್ನ್ಯಾಷನಲ್ ತಿಳಿಸಿದೆ.

ಈ ಬಗ್ಗೆ ಲಿಮಾದಲ್ಲಿನ ಕ್ಯಾನಲ್ಸ್ ತಹುಮಾನು ಪ್ರತಿನಿಧಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಂಪೆನಿಯು ಫಾರೆಸ್ಟ್ ಸ್ಟೀವರ್ಡ್‌ಶಿಪ್ ಕೌನ್ಸಿಲ್‌ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಅದರ ಪ್ರಕಾರ ಇದು ಕಾಡಿನ ನಿರ್ದಿಷ್ಟ ಸಂಪನ್ಮೂಲಗಳನ್ನು ಹೊರತೆಗೆಯಲು ಮ್ಯಾಡ್ರೆ ಡಿ ಡಿಯೋಸ್‌ನಲ್ಲಿ 53,000 ಹೆಕ್ಟೇರ್ ಕಾಡುಗಳನ್ನು ಹೊಂದಿದೆ ಎನ್ನಲಾಗಿದೆ.


ಈ ಕುರಿತು ಪ್ರತಿಕ್ರಿಯಿಸಿರುವ ಪೆರುವಿಯನ್ ಸರ್ಕಾರವು ಜೂನ್ 28ರಂದು ಮಡ್ರೆ ಡಿ ಡಿಯೋಸ್‌ನ ರಾಜಧಾನಿ ಪೋರ್ಟೊ ಮಾಲ್ಡೊನಾಡೊ ನಗರದಿಂದ 150 ಕಿಲೋಮೀಟರ್ ದೂರದಲ್ಲಿರುವ ಲಾಸ್ ಪೀಡ್ರಾಸ್ ನದಿಯ ದಡದಲ್ಲಿ ಮಾಶ್ಕೊ ಪಿರೊವನ್ನು ನೋಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ವರದಿ ಮಾಡಿದ್ದಾರೆ ಎಂದು ತಿಳಿಸಿದೆ. ಬ್ರೆಜಿಲ್‌ನ ಗಡಿಯುದ್ದಕ್ಕೂ ಮ್ಯಾಶ್ಕೊ ಪಿರೋ ಕಾಣಿಸಿಕೊಂಡಿದೆ ಎಂದು ಬ್ರೆಜಿಲಿಯನ್ ಕ್ಯಾಥೊಲಿಕ್ ಬಿಷಪ್‌ಗಳ ಸ್ಥಳೀಯ ಮಿಷನರಿ ಕೌನ್ಸಿಲ್‌ನಲ್ಲಿ ರೋಸಾ ಪಡಿಲ್ಹಾ ಹೇಳಿದ್ದಾರೆ.

ಇದನ್ನೂ ಓದಿ: United Nations: ಗಾಜಾದಲ್ಲಿ ಸಂಪೂರ್ಣ ಕದನ ವಿರಾಮ ಘೋಷಿಸಿ; ವಿಶ್ವಸಂಸ್ಥೆಯಲ್ಲಿ ಪುನರುಚ್ಚರಿಸಿದ ಭಾರತ

ಅವರು ಪೆರುವಿಯನ್ ಭಾಗದಲ್ಲಿ ಲಾಗರ್ಸ್‌ನಿಂದ ವಲಸೆ ಹೋಗುತ್ತಿದ್ದಾರೆ. ಈ ಸಮಯದಲ್ಲಿ ಅವರು ಟ್ರಾಕಾಜಾ ಅಂದರೆ ಅಮೆಜಾನ್ ಆಮೆಗಳ ಮೊಟ್ಟೆಗಳನ್ನು ತೆಗೆದುಕೊಳ್ಳಲು ಕಡಲತೀರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಯಾವ ಕ್ಷಣ ಏನು ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಶಾಂತಿಯ ವರ್ತನೆ ತೋರುವುದಿಲ್ಲ. ದಾಳಿಗೆ ಮುಂದಾಗುತ್ತಾರೆ. ಜನರನ್ನು ಕಂಡಾಕ್ಷಣ ಓಡಿ ಹೋಗುತ್ತಾರೆ ಎಂದು ಪಡಿಲ್ಹಾ ತಿಳಿಸಿದ್ದಾರೆ.

Continue Reading
Advertisement
Electric Shock
ದಕ್ಷಿಣ ಕನ್ನಡ2 mins ago

Electric shock : ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ, ವೃದ್ಧ ಸೇರಿ ಶ್ವಾನಗಳು ಸಾವು

DK Shivakumar
ಕರ್ನಾಟಕ4 mins ago

DK Shivakumar: ಬಿಎಸ್‌ವೈ, ಬೊಮ್ಮಾಯಿ ಕಾಲದಲ್ಲಿ 300 ಕೋಟಿಗೂ ಹೆಚ್ಚು ಅಕ್ರಮ: ಡಿಕೆಶಿ ಆರೋಪ

Virat Kohli
ಕ್ರೀಡೆ16 mins ago

Virat Kohli: ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿ ಕೋಚ್​ ಗಂಭೀರ್​ ವಿಚಾರದಲ್ಲಿ ಕೊಹ್ಲಿ ಕೊಟ್ಟ ಆಶ್ವಾಸನೆ ಏನು?

karnataka Rain
ಮಳೆ23 mins ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

ಪ್ರಮುಖ ಸುದ್ದಿ36 mins ago

Karnataka Job Reservation: ಕನ್ನಡಿಗರಿಗೆ ಮೀಸಲಾತಿ ನೀಡಲು ಕರವೇ ಆಗ್ರಹ; ʼಫೋನ್ ಪೇʼ ಬಾಯ್ಕಾಟ್ ಅಭಿಯಾನ ಶುರು!

Kanwar Yatra
ದೇಶ42 mins ago

Kanwar Yatra: ಕನ್ವರ್‌ ಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ: ಯೋಗಿ ಆದಿತ್ಯನಾಥ್

Uttara kannada landslide 3
ಉತ್ತರ ಕನ್ನಡ55 mins ago

Uttara Kannada Landslide: 6 ಜನರ ಶವ ಪತ್ತೆ, ಇನ್ನೂ ನಾಲ್ವರಿಗಾಗಿ ಶೋಧ; ಭಾರಿ ಮಳೆ ನಡುವೆ ಮಣ್ಣು ತೆರವು

England vs West Indies
ಕ್ರೀಡೆ1 hour ago

England vs West Indies: ವೇಗದ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್

Karnataka Rain
ಮಳೆ1 hour ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Vaibhavi Jagdish Bold Photo shoot
ಸ್ಯಾಂಡಲ್ ವುಡ್1 hour ago

Vaibhavi Jagdish: ಬೋಲ್ಡ್‌ ಫೋಟೊ ಹಂಚಿಕೊಂಡು ಕಮೆಂಟ್‌ ಸೆಕ್ಷನ್‌ ಆಫ್‌ ಮಾಡಿದ ಜೈ ಜಗದೀಶ್ ಪುತ್ರಿ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ23 mins ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ1 hour ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ21 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ23 hours ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ3 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ4 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ4 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ4 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ5 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌