Site icon Vistara News

Drone Attack: ರಷ್ಯಾದ ಶಕ್ತಿಕೇಂದ್ರ ಮಾಸ್ಕೋ ಮೇಲೆ ಡ್ರೋನ್ ದಾಳಿ, ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ

Drone Attack on Russian capital Moscow

ನವದೆಹಲಿ: ರಷ್ಯಾ (Russia) ರಾಜಧಾನಿ ಮಾಸ್ಕೋ ನಗರದ (Moscow) ಮೇಲೆ ಡ್ರೋನ್ ದಾಳಿ (Drone Attack) ನಡೆದಿದೆ. ಸರ್ಕಾರದ ಕೆಲವು ಕಟ್ಟಡಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ, ರಾಯ್ಟರ್ ಸುದ್ದಿ ಸಂಸ್ಥೆಯ ಪ್ರಕಾರ, ಜನರಿಗೇನೂ ಅಂಥ ಗಂಭೀರ ಗಾಯಗಳಾಗಿಲ್ಲ. ಮಾಸ್ಕೋ ಮೇಯರ್ ಸೆರ್ಗೆಯ್ ಸೋಬಯಾನಿನ್ ಅವರು ಈ ಕುರಿತು ಮಾಹಿತಿ ನೀಡಿದ್ದು, ನಗರದಲ್ಲಿರುವ ಎಲ್ಲ ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.

ಕೆಲವು ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ವಿಶೇಷವಾಗಿ ಮಾಸ್ಕೋ ನಗರದ ಪ್ರೊಫೆಸೊಯುಜ್ನಾಯಾ ಸ್ಟ್ರೀಟ್‌ನಲ್ಲಿರುವ ಜನರು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ರಷ್ಯಾದ ಆರ್‌ಐಎ ನ್ಯೂಸ್ ಏಜೆನ್ಸಿ ಸುದ್ದಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಮಾಸ್ಕೋ ಪ್ರದೇಶದ ಗವರ್ನರ್ ಆಂಡ್ರೇ ವೊರೊಬಿಯೊವ್ ಅವರು, ಮಾಸ್ಕೋಗೆ ಸಮೀಪಿಸುತ್ತಿರುವಾಗ ಹಲವಾರು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದರು. ಆದರೆ, ಡ್ರೋನ್‌ಗಳನ್ನು ಯಾರು ಉಡಾವಣೆ ಮಾಡಿದ್ದಾರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Alexander Lukashenko: ಬೆಲಾರಸ್ ಅಧ್ಯಕ್ಷನಿಗೆ ರಷ್ಯಾದಲ್ಲಿ ವಿಷಪ್ರಾಶನ? ಪುಟಿನ್ ಭೇಟಿ ಬಳಿಕ ಅಸ್ವಸ್ಥರಾದ ಲುಕಾಶೆಂಕೋ

ಮಾಸ್ಕೋದ ಮೇಲೆ ಡ್ರೋನ್ ದಾಳಿಗಳು ಆರಂಭವಾಗುತ್ತಿದ್ದಂತೆ ಭದ್ರತಾ ಪಡೆಗಳು ಸುಮಾರು 10ಕ್ಕೂ ಹೆಚ್ಚು ಡ್ರೋನ್‌ಗಳನ್ನು ಮಾಸ್ಕೋ ನಗರದ ಹೊರ ವಲಯದಲ್ಲಿ ಹೊಡೆದುರುಳಿಸಿದ್ದಾರೆಂದು ತಿಳಿದು ಬಂದಿದೆ. ಆದರೆ, ಯಾವುದೇ ಸಾವು ನೋವು ಸಂಭವಿಸಿದ ವರದಿಗಳಿಲ್ಲ.

ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version