ವಾಷಿಂಗ್ಟನ್: 2020ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡೆನ್ (Joe Biden) ಅವರು ಆಯ್ಕೆಯಾದಾಗಿನಿಂದಲೂ ಅವರು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಎಂಬ ಆರೋಪ ಆಗಾಗ ಕೇಳಿ ಬರುತ್ತಲೇ ಇದೆ. ಈ ಸಾಲಿಗೆ ಮತ್ತೊಂದು ಆರೋಪ ಸೇರ್ಪಡೆಯಾಗಿದೆ. ಒಂದು ವರ್ಷದ ಹಳೆಯ ಫೋಟೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಆದರೆ, ಈ ಫೋಟೋದಲ್ಲಿ ಕ್ಲೇಮ್ ಮಾಡಿರುವಂತೆ ಬೈಡೆನ್ ಮಗುವಿನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಯೇ? ಈ ಬಗೆಗಿನ ಸತ್ಯ ಸಂಗತಿ ಏನು? ತಿಳಿಯೋಣ ಬನ್ನಿ(Fact Check).
ವೈರಲ್ ಫೋಟೋದಲ್ಲಿ ಏನಿದೆ?
ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಬೈಡನ್ ಅವರು ಮಗುವಿನ ಮುಂದೆ ಮಂಡಿಯೂರಿ ಕುಳಿತು, ಮಗುವಿನ ಖಾಸಗಿ ಭಾಗವನ್ನು ಸ್ಪರ್ಶಿಸುತ್ತಿರುವಂತೆ ಕಾಣುತ್ತಿದೆ. ನಿಮ್ಮ ಮಗುವಿಗೆ ಈ ರೀತಿ ಮಾಡಲು ನೀವು ಬಿಡುತ್ತೀರಾ ಎಂದು ಅದರ ಮೇಲೆ ಬರೆಯಲಾಗಿದೆ. ನೋಡಿದ ತಕ್ಷಣವೇ ಬೈಡನ್ ಅವರು ಮಗುವಿನೊಂದಿಗೆ ಅವರು ಅನುಚಿತವಾಗಿ ವರ್ತಿಸುತ್ತಿದ್ದಾರೆಂಬಂತೆ ಭಾಸವಾಗುತ್ತದೆ.
ಸತ್ಯ ಸಂಗತಿ ಏನು?
ಆದರೆ, ವೈರಲ್ ಫೋಟೋದಲ್ಲಿ ಕ್ಲೇಮ್ ಮಾಡಿರುವ ರೀತಿಯಲ್ಲಿ ಬೈಡನ್ ಅವರು ಮಗು ಜತೆ ಅನುಚಿತವಾಗಿ ವರ್ತಿಸಿಲ್ಲ. ಈ ಫೋಟೋವನ್ನು ರಿವರ್ಸ್ ಸರ್ಚ್‌ಗೆ ಹಾಕಿದಾಗ, ಅದು 2021ರಲ್ಲಿ ತೆಗೆದು ಫೋಟೋ ಎಂದು ಗೊತ್ತಾಗುತ್ತದೆ. ಅಧ್ಯಕ್ಷ ಜೋ ಬೈಡೆನ್ ಅವರು 2021 ಅಕ್ಟೋಬರ್ 15ರಂದು ಕನೆಕ್ಟಿಕಟ್‌ನ ಹಾರ್ಟ್‌ಫೋರ್ಡ್‌ನಲ್ಲಿರುವ ಕ್ಯಾಪಿಟಲ್ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್‌ಗೆ ಭೇಟಿ ನೀಡಿದ್ದರು. ಆಗ ತೆಗೆದ ಫೋಟೋವನ್ನು ಡಿಜಿಟಲೀ ಅಲ್ಟರ್ ಮಾಡಿಲಾಗಿದೆ. ಬೈಡೆನ್ ಅವರು ಮಗುವಿನೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ರೀತಿಯಲ್ಲಿ ಕಾಣುವಂತೆ ಎಡಿಟ್ ಮಾಡಲಾಗಿದೆ. ವಾಸ್ತವದಲ್ಲಿ ಅವರು ಮಗು ತೋರಿಸುವ ಟಿ ಶರ್ಟ್ ಟಚ್ ಮಾಡುತ್ತಾರೆ. ಆ ಕ್ಷಣದ ಫೋಟೋವನ್ನು ಡಿಜಿಟಲ್ ಅಲ್ಟರ್ ಮಾಡಿ, ಅವರು ಅನುಚಿತವಾಗಿ ವರ್ತಿಸುವ ರೀತಿಯಲ್ಲಿ ಚಿತ್ರಿಸಲಾಗಿದೆ. ಹಾಗಾಗಿ, ಇದೊಂದು ತಿರುಚಿತ ಫೋಟೋ ಎಂದು ಖಚಿತಪಟ್ಟಿದೆ.
ಇದನ್ನೂ ಓದಿ | Fact Check | ಕೋವಿಡ್ ಒಮಿಕ್ರಾನ್ ಎಕ್ಸ್‌ಬಿಬಿ ವೇರಿಯಂಟ್ ಇದೆಯೇ? ಆರೋಗ್ಯ ಇಲಾಖೆ ಹೇಳಿದ್ದೇನು?