ನವದೆಹಲಿ: ನ್ಯೂಯಾರ್ಕ್ ನಗರದ (New York City) ಜೆಡ್ಡಿ ವಿಲ್ (Zeddy Will) ಎಂಬ 22 ವರ್ಷದ ಸಂಗೀತಗಾರ ಇತ್ತೀಚೆಗೆ ತಾನು ಗರ್ಭಿಣಿ ಮಾಡಿದ ಐವರು ಮಹಿಳೆಯರಿಗೆ (Five woman pregnant) ಜಂಟಿ ಸೀಮಂತ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದಿದ್ದಾನೆ(Joint Baby Shower). ಈ ಐವರು ಗರ್ಭಿಣಿ ಪೈಕಿ ಆಶ್ಲೀಗ್ ಎಂಬಾಕೆ ಟಿಕ್ಟಾಕ್ನಲ್ಲಿ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಈ ಸುದ್ದಿ ಭಾರೀ ವೈರಲ್ ಆಗಿದೆ. 29 ವರ್ಷದ ಆಶ್ಲೀಗ್ ಅವರು ಜನವರಿ 14 ರಂದು ಕ್ವೀನ್ಸ್ನಲ್ಲಿ ಬೇಬಿ ಶವರ್(ಸೀಮಂತ ಕಾರ್ಯಕ್ರಮ) ಆಯೋಜಿಸಲಾಗುವುದು ಎಂದು ಆಮಂತ್ರಣ ಪತ್ರಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು(viral News).
ಆ ಮಂತ್ರಣ ಪತ್ರಿಕೆಯಲ್ಲಿ ಗರ್ಭಿಣಿ ಆಶ್ಲೀಗ್ ಮತ್ತು ವಿಲ್ ಅವರ ಜೋಡಿ ಫೋಟೋ ಇದ್ದು, ವೆಲ್ಕಮ್ ಲಿಟ್ಲ್ ಜೆಡ್ಡಿ ವಿಲ್ಸ್ 1-5 ಎಂದು ಬರೆಯಲಾಗಿತ್ತು! ನಾವು ಈಗ ಸಹೋದರಿ ಪತ್ನಿಯರು ಎಂದು ಭಾವಿಸುತ್ತೇನೆ ಎಂದು ಆಶ್ಲೀಗ್ ಅವರು ಬಹುಪತ್ನಿತ್ವದ ಕುಟುಂಬದ ಜೀವನವನ್ನು ಅನುಸರಿಸುವ ಜನಪ್ರಿಯ ಟಿಎಲ್ಸಿ ಕಾರ್ಯಕ್ರಮವನ್ನು ಉಲ್ಲೇಖಿಸಿ ವೀಡಿಯೊಗೆ ಶೀರ್ಷಿಕೆ ನೀಡಿದ್ದರು.
ಆಶ್ಲೀಗ್ ತಮ್ಮ ಮುಂದಿನ ವೀಡಿಯೊದಲ್ಲಿ 5 ತಾಯಂದಿರು ಇರುವುದನ್ನು ತೋರಿಸಿದ್ದಾರೆ. ವಿಲ್ನಿಂದ ಆಶ್ಲೀಗ್, ಬೋನಿ ಬಿ, ಕೇ ಮೆರಿ, ಜಿಲೀನ್ ವಿಲಾ ಮತ್ತು ಇಯಾನ್ಲಾ ಕಲಿಫಾ ಗ್ಯಾಲೆಟ್ಟಿ ಗರ್ಭಿಣಿಯಾಗಿದ್ದಾರೆ. ಇವರು ಒಬ್ಬರನ್ನೊಬ್ಬರು ಒಪ್ಪಿಕೊಂಡಿದ್ದಾರೆ. ಯಾಕೆಂದರೆ, ಚಿಕ್ಕ ಮಕ್ಕಳು ಬದುಕು ಉತ್ತಮವಾಗಲಿ ಮತ್ತು ದೊಡ್ಡ ಕುಟುಂಬದಲ್ಲಿ ಬೆಳೆಯಲಿ ಎಂದು ಕ್ಯಾಪ್ಷನ್ ಕೂಡ ನೀಡಲಾಗಿದೆ.
ಹಲವು ಫೋಟೋಗಳ ಪೈಕಿ ಒಂದು ಫೋಟೋಗೆ ಆಶ್ಲೀಗ್ ಅವರು ನೋಡಿ ನಮ್ಮ ಸುಂದರ ಕುಟುಂಬ ಎಂದು ಕ್ಯಾಪ್ಷನ್ ನೀಡಿದ್ದಾರೆ. ನಾವು ನಮ್ಮ ಮಗುವಿನ ತಂದೆಯನ್ನು ಪ್ರೀತಿಸುತ್ತೇವೆ. ನಮ್ಮ ಮಕ್ಕಳು ಹಾಳಾಗುವುದನ್ನು ನಾವು ಬಯಸುವುದಿಲ್ಲ. ನಮ್ಮ ಕುಟುಂಬಗಳು ಇದನ್ನು ಒಪ್ಪಿಕೊಂಡಿವೆ ಎಂದು ಹೇಳಿಕೊಂಡಿದ್ದಾರೆ.
ಜೆಡ್ಡಿ ವಿಲ್ ಅವರ ಸಹ ವ್ಯವಸ್ಥಾಪಕ ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಯೊಂದಿಗೆ ಮಾತನಾಡಿ, ಸಮಾಜವು ಬದಲಾಗಿದೆ ಮತ್ತು ಪ್ರತಿಯಾಗಿ ಆಧುನಿಕ ಸಂಬಂಧದ ನಾನಾ ಆಯಾಮಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. ಸೀಮಂತ ಕಾರ್ಯಕ್ರಮದ ವಿಡಿಯೋದಲ್ಲಿ ಐವರು ಗರ್ಭಿಣಿಯರು ನೃತ್ಯ ಮಾಡುವುದನ್ನು, ಒಟ್ಟಿಗೆ ಸೇರಿ ತಿನ್ನುವುದನ್ನು ಮತ್ತು ಅವರು ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು.
ಈ ಸುದ್ದಿಯನ್ನೂ ಓದಿ: ವೈರಲ್ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!