Site icon Vistara News

G20 Presidency | ನನ್ನ ಸ್ನೇಹಿತ ನರೇಂದ್ರ ಮೋದಿಯನ್ನು ನಂಬುತ್ತೇನೆ: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್

Narendra Modi and Macron

ನವದೆಹಲಿ: ಭಾರತವು ಅಧಿಕೃತವಾಗಿ ಜಿ20 ಅಧ್ಯಕ್ಷೀಯ (G20 Presidency) ಜವಾಬ್ದಾರಿಯನ್ನು ಸ್ವೀಕರಿಸುತ್ತಿದ್ದಂತೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ನರೇಂದ್ರ ಮೋದಿ ಜತೆಗಿರುವ ಫೋಟೋವನ್ನು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶಾಂತಿ ಹಾಗೂ ಸುಸ್ಥಿರ ಜಗತ್ತು ನಿರ್ಮಾಣಕ್ಕೆ ಉಭಯ ರಾಷ್ಟ್ರಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಒಂದು ಭೂಮಿ, ಒಂದು ಫ್ಯಾಮಿಲಿ, ಒಂದು ಭವಿಷ್ಯ. ಭಾರತವು ಜಿ20 ಪ್ರೆಸಿಡೆನ್ಸಿಯನ್ನು ಪಡೆದುಕೊಂಡಿದೆ.
ನನ್ನ ಸ್ನೇಹಿತ ನರೇಂದ್ರ ಮೋದಿ ಅವರು ಶಾಂತಿ ಮತ್ತು ಹೆಚ್ಚು ಸುಸ್ಥಿರ ಜಗತ್ತನ್ನು ನಿರ್ಮಿಸಲು ನಮ್ಮನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಾರೆಂದು ನಾನು ನಂಬುತ್ತೇನೆ ಎಂದು ಮ್ಯಾಕ್ರನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಗುರುವಾರ ಭಾರತವು ಅಧಿಕೃತವಾಗಿ ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಹಿನ್ನೆಲೆಯಲ್ಲಿ ಭಾರತವು ಒಂದು ವಾರ ಕಾಲ ಪಾರಂಪರಿಕ ತಾಣಗಳಲ್ಲಿ ದೀಪಗಳನ್ನು ಬೆಳಗಿಸಲಿದೆ. ಭಾರತದ ಜಿ20 ನೇತೃತ್ವಕ್ಕೆ ಹಲವು ರಾಷ್ಟ್ರಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ, ಮೆಚ್ಚುಗೆ ಸೂಚಿಸಿವೆ.

ಇದನ್ನೂ ಓದಿ | G20 Presidency | ಭಾರತದ ಜಿ20 ಕಾರುಬಾರು ಶುರು, ವಾರ ಕಾಲ ಬೆಳಗಲಿವೆ 100 ಪಾರಂಪರಿಕ ತಾಣಗಳು!

Exit mobile version