Site icon Vistara News

Goat With Plastic Teeth: ಬಕ್ರೀದ್‌ಗೆ ಪ್ಲಾಸ್ಟಿಕ್‌ ಹಲ್ಲಿರುವ ಮೇಕೆ ಮಾರಲು ಯತ್ನಿಸಿದ ಪಾಕಿಸ್ತಾನಿ!

Goat With Plastic Teeth

Goat With Plastic Teeth

ಇಸ್ಲಾಮಾಬಾದ್‌: ನೆರೆಯ ಪಾಕಿಸ್ತಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಪ್ಲಾಸ್ಟಿಕ್‌ ಹಲ್ಲು ಹೊಂದಿರುವ ಮೇಕೆಯನ್ನು (Goat With Plastic Teeth) ಮಾರಾಟ ಮಾಡಿದ ವ್ಯಾಪಾರಿಯನ್ನು ಬಂಧಿಸಲಾಗಿದೆ. ಬಕ್ರೀದ್‌ ಹಿನ್ನೆಲೆಯಲ್ಲಿ ದೇಶಾದ್ಯಂತ ಮೇಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಮೇಕೆಯನ್ನು ಬಲಿ ಕೊಡಲು ಬಳಸಲಾಗುತ್ತದೆ. ಇದೇ ವೇಳೆ ಈ ವ್ಯಾಪಾರಿ ಬಲಿ ಕೊಡಲು ಪ್ಲಾಸ್ಟಿಕ್‌ ಹಲ್ಲು ಹೊಂದಿರುವ ಮೇಕೆಯನ್ನು ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದಾನೆ (Viral News).

ಪಾಕಿಸ್ತಾನದ ಗುಲ್ಬರ್ಗ್ ಚೌರಂಗಿ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ಗ್ರಾಹಕರೊಬ್ಬರು ಆಡುಗಳ ಪೈಕಿ ಒಂದರಿಂದ ಪ್ಲಾಸ್ಟಿಕ್ ಹಲ್ಲುಗಳನ್ನು ತೆಗೆದು ಹಾಕುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ವೈರಲ್‌ ಆಗಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಂಧಿತ ವ್ಯಾಪಾರಿ ಹೈದರಾಬಾದ್ ಮತ್ತು ಕರಾಚಿ ಮೂಲದವನಾಗಿದ್ದು, ಪೊಲೀಸ್‌ ವಿಚಾರಣೆ ವೇಳೆ ಬಕ್ರೀದ್‌ಗೆ ಬಲಿ ಕೊಡಲಿರುವ ಮೇಕೆಗಳ ಮಾರಾಟದಲ್ಲಿ ಮೋಸ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ತನಿಖೆಯ ಭಾಗವಾಗಿ ಪೊಲೀಸರು ಏಳು ಹೆಚ್ಚುವರಿ ಮೇಕೆಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರು ಹೇಳಿದ್ದೇನು?

”ಕೃತಕ ಹಲ್ಲುಗಳನ್ನು ಹೊಂದಿರುವ ಮೇಕೆಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ನಮ್ಮ ಗಮನಕ್ಕೆ ಬಂದಿತ್ತು. ವಿಚಾರಣೆ ನಡೆಸಿದಾಗ ಬಲಿ ಕೊಡುವ ಉದ್ದೇಶಕ್ಕಾಗಿ ಈ ಮೇಕೆಯನ್ನು ಮಾರಾಟ ಮಾಡಲಾಗಿದೆ ಎನ್ನುವ ಅಂಶ ತಿಳಿದು ಬಂತು. ಕೂಡಲೇ ಕ್ರಮ ಕೈಗೊಂಡ ಮೋಸ ಎಸಗಿದ ವ್ಯಾಪಾರಿಯನ್ನು ವಸಕ್ಕೆ ಪಡೆದಿದ್ದೇವೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಚಾರಣೆ ವೇಳೆ ಆತ ತಾನು ಹೈದರಾಬಾದ್‌ ಮೂಲದವನೆಂದೂ ಬಕ್ರೀದ್‌ ಸಂದರ್ಭದಲ್ಲಿ ತನ್ನಲ್ಲಿರುವ ಮೇಕೆಗಳನ್ನು ಮಾರಾಟ ಮಾಡಲು ಕರಾಚಿಗೆ ತೆರಳಿದ್ದಾಗಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ. ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಪಾಕಿಸ್ತಾನದಲ್ಲಿ ಜೂನ್‌ 17ರಂದು ಬಕ್ರೀದ್‌ ಆಚರಿಸಲಾಗುತ್ತಿದೆ. ಜೂನ್ 7 ರಂದು ಜಿಲ್ಲಾ ಹಜ್ ಚಂದ್ರನ ದರ್ಶನದ ನಂತರ ಜೂನ್ 17ರಂದು ನಿಗದಿಯಾಗಿರುವ ಬಕ್ರೀದ್‌ ಮುಸ್ಲಿಮರ ಮಹತ್ವದ ಧಾರ್ಮಿಕ ಹಬ್ಬವಾಗಿದ್ದು, ಪ್ರಾಣಿಗಳನ್ನು ಬಲಿ ನೀಡುವ ಮೂಲಕ ಪ್ರವಾದಿ ಇಬ್ರಾಹಿಂ ದೇವರನ್ನು ಸ್ಮರಿಸಲಾಗುತ್ತದೆ. ಬಳಿಕ ಬಲಿ ಕೊಟ್ಟ ಪ್ರಾಣಿಯ ಮಾಂಸವನ್ನು ಸಾಂಪ್ರದಾಯಿಕವಾಗಿ ಹಂಚಿಕೊಳ್ಳಲಾಗುತ್ತದೆ. ಹೀಗಾಗಿ ಬಲಿ ಕೊಡಲು ಮೇಕೆಗಳಿಗೆ ಬೇಡಿಕೆ ಹೆಚ್ಚಿದೆ. ಬಲಿ ಕೊಡಲು ಪರಿಶುದ್ಧ ಮೇಕೆಯನ್ನೇ ಆಯ್ಕೆ ಮಾಡಿಕೊಳ್ಳಬೇಕೆಂಬ ನಿಯಮವಿದ್ದು, ಈತ ಲಾಭ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್‌ ಹಲ್ಲು ಹೊಂದಿರುವ ಮೇಕೆಯನ್ನು ಮಾರಾಟ ಮಾಡಿದ್ದ.

ಇದನ್ನೂ ಓದಿ: Donkey Population In Pak: ಹೆಚ್ಚುಹೆಚ್ಚು ಕತ್ತೆಗಳನ್ನು ಸಾಕಿ, ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಿ; ಪಾಕ್‌ಗೆ ಚೀನಾ ಸಲಹೆ!

ಕತ್ತೆಗಳ ಸಂಖ್ಯೆ ಹೆಚ್ಚಳ

ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಕಳೆದ ಒಂದು ವರ್ಷದಲ್ಲಿ ಕತ್ತೆಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಇದು ದೇಶದ ಕೃಷಿ ಚಟುವಟಿಕೆಗಳಲ್ಲಿ ಆಶಾದಾಯಕ ಬೆಳವಣಿಗೆಯನ್ನು ತೋರಿಸಿದೆ. ಕತ್ತೆಗಳ ಸಂಖ್ಯೆಯು 2022-23ರ ಆರ್ಥಿಕ ವರ್ಷದಲ್ಲಿ 5.9 ಮಿಲಿಯನ್‌ ತಲುಪಿದ್ದು, ಹಿಂದಿನ ಅವಧಿಯಲ್ಲಿ 5.7 ಮಿಲಿಯನ್‌ ನಷ್ಟಿತ್ತು. ಒಂದು ವರ್ಷದಲ್ಲಿ ಕತ್ತೆಗಳ ಸಂಖ್ಯೆ ಸರಿಸುಮಾರು ಎರಡು ಲಕ್ಷ ಹೆಚ್ಚಳವಾಗಿದೆ.

Exit mobile version