Site icon Vistara News

Indian Woman: ಪಾಕ್‌ ವ್ಯಕ್ತಿಯನ್ನು ನಂಬಿ ಮದುವೆಯಾದ ಮುಂಬೈ ಮಹಿಳೆಗೆ ಭಾರಿ ಮೋಸ!

Indian Woman

Indian Woman In Pakistan Refuses To Leave Without Her Kids

ಇಸ್ಲಾಮಾಬಾದ್:‌ ಪಾಕಿಸ್ತಾನದ ಸೀಮಾ ಹೈದರ್‌ ಹಾಗೂ ಭಾರತದ ಸಚಿನ್ ಮೀನಾ ಆನ್‌ಲೈನ್‌ ಮೂಲಕವೇ ಪ್ರೀತಿಸಿ, ಈಗ ಭಾರತಕ್ಕೆ ಬಂದಿರುವ ಸೀಮಾ ಹೈದರ್‌, ಸಚಿನ್‌ ಜತೆ ಸುಖವಾಗಿದ್ದಾರೆ. ಆದರೆ, ಮುಂಬೈ ಮೂಲದ ಮಹಿಳೆಯೊಬ್ಬರು ಪಾಕಿಸ್ತಾನದ (Pakistan) ವ್ಯಕ್ತಿಯನ್ನು ನಂಬಿ, ಆತನನ್ನು ಮದುವೆಯಾಗಿದ್ದು, ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು, ಮುಂಬೈ ಮೂಲದ ಫರ್ಜಾನಾ ಬೇಗಂ (Farzana Begum) ಅವರು ಪಾಕಿಸ್ತಾನದ ವ್ಯಕ್ತಿಯನ್ನು ಮದುವೆಯಾಗಿ, ಅಲ್ಲಿಯೇ ನೆಲೆಸಿದ್ದಾರೆ. ಆದರೆ, ಅವರ ಮಕ್ಕಳನ್ನು ಈಗ ಗೌಪ್ಯ ಸ್ಥಳದಲ್ಲಿ ಇರಿಸಿದ್ದು, ನನ್ನ ಮಕ್ಕಳು ಅಪಾಯದಲ್ಲಿದ್ದಾರೆ. ಅವರನ್ನು ನನಗೆ ನೀಡದ ಹೊರತು ಪಾಕಿಸ್ತಾನ ತೊರೆಯುವುದಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ.

ಫರ್ಜಾನಾ ಬೇಗಂ ಅವರು 2015ರಲ್ಲಿ ಅಬುಧಾಬಿಯಲ್ಲಿ ಪಾಕಿಸ್ತಾನದ ಮಿರ್ಜಾ ಮುಬಿನ್‌ ಇಲಾಹಿ ಎಂಬಾತನನ್ನು ಮದುವೆಯಾಗಿದ್ದರು. ಮೊದಲು ಇಬ್ಬರ ಮಧ್ಯೆ ಎಲ್ಲವೂ ಚೆನ್ನಾಗಿತ್ತು. 2018ರಲ್ಲಿ ಪಾಕಿಸ್ತಾನಕ್ಕೆ ತೆರಳಿದ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ಕೆಲ ತಿಂಗಳಿಂದ ಫರ್ಜಾನಾ ಬೇಗಂ ಅವರ ಇಬ್ಬರು ಮಕ್ಕಳನ್ನು ಗೌಪ್ಯ ಸ್ಥಳದಲ್ಲಿ ಇರಿಸಲಾಗಿದೆ. “ಫರ್ಜಾನಾ ಬೇಗಂ ನನಗೆ ಕಿರುಕುಳ ನೀಡಿದ್ದಾಳೆ” ಎಂಬುದಾಗಿ ಮಿರ್ಜಾ ಮುಬಿನ್‌ ಆರೋಪಿಸಿದ್ದಾನೆ. ಇದರಿಂದಾಗಿ ಇಬ್ಬರ ಮಧ್ಯೆ ವಿರಸ ಉಂಟಾಗಿದೆ ಎಂಬುದು ಸಾಬೀತಾಗಿದೆ. ಇದರ ಮಧ್ಯೆಯೇ, ಮಕ್ಕಳು ಕಾಣೆಯಾಗಿರುವ ಕುರಿತು ಫರ್ಜಾನಾ ಬೇಗಂ ಆತಂಕ ವ್ಯಕ್ತಪಡಿಸಿದ್ದಾರೆ.

ಮಹಿಳೆ ಹೇಳುವುದೇನು?

“ನನಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬನಿಗೆ 7 ವರ್ಷ, ಮತ್ತೊಬ್ಬನಿಗೆ 6 ವರ್ಷ ವಯಸ್ಸು. ಆದರೆ, ಇಬ್ಬರನ್ನೂ ಕಸ್ಟಡಿಯಲ್ಲಿ ಇರಿಸಲಾಗಿದ್ದು, ನನ್ನಿಂದ ದೂರ ಮಾಡಿದ್ದಾರೆ. ನನ್ನ ಪತಿಯೇ ಇದರ ಪಿತೂರಿದಾರನಾಗಿದ್ದಾನೆ. ನಾನು ಆತನಿಗೆ ವಿಚ್ಛೇದನ ನೀಡಿದ್ದೇನೆ ಎಂಬುದಾಗಿ ಹೇಳಿದ್ದಾನೆ. ಹಾಗೊಂದು ವೇಳೆ ನಾನು ವಿಚ್ಛೇದನ ನೀಡಿದ್ದರೆ, ಪ್ರಮಾಣಪತ್ರ ಇರಬೇಕಲ್ಲವೇ? ನನ್ನ ಮಕ್ಕಳು ನನಗೆ ಬೇಕು. ನನ್ನ ಮಕ್ಕಳನ್ನು ನೀಡಿದರೆ ಮಾತ್ರ ನಾನು ಮತ್ತೆ ಭಾರತಕ್ಕೆ ಹೋಗುತ್ತೇನೆ” ಎಂಬುದಾಗಿ ಫರ್ಜಾನಾ ಬೇಗಂ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಸ್ತಿಯ ವಿಷಯಕ್ಕಾಗಿ ನನ್ನ ಪತಿಯೇ ಕುತಂತ್ರ ಮಾಡಿದ್ದಾನೆ. ಆಸ್ತಿಗಾಗಿಯೇ ಮಕ್ಕಳನ್ನು ಬಚ್ಚಿಟ್ಟಿದ್ದು, ಅವರ ಪ್ರಾಣವು ಅಪಾಯದಲ್ಲಿದೆ. ಲಾಹೋರ್‌ನ ರೆಹಮಾನ್‌ ಗಾರ್ಡನ್ಸ್‌ನಲ್ಲಿ ನನ್ನ ಹೆಸರಿನಲ್ಲಿ ಮನೆ ಇದೆ. ನನ್ನ ಮಕ್ಕಳ ಹೆಸರಿನಲ್ಲಿಯೂ ಆಸ್ತಿ ಇದೆ. ಆಸ್ತಿಯ ಕಾರಣಕ್ಕಾಗಿ ಮಿರ್ಜಾ ಮುಬಿನ್‌ ಇಲಾಹಿಯು ಮಕ್ಕಳನ್ನು ಬಚ್ಚಿಟ್ಟಿದ್ದಾನೆ. ಹಾಗಾಗಿ, ಪ್ರಕರಣದಲ್ಲಿ ಪಾಕಿಸ್ತಾನ ಸರ್ಕಾರವು ಮಧ್ಯಸ್ಥಿಕೆ ವಹಿಸಬೇಕು. ನನಗೆ ನ್ಯಾಯ ಒದಗಿಸಿ, ನನ್ನ ಮಕ್ಕಳನ್ನು ಬಿಡುಗಡೆ ಮಾಡಿಸಬೇಕು. ನನ್ನ ಹಾಗೂ ಮಕ್ಕಳ ಪಾಸ್‌ಪೋರ್ಟ್‌ಗಳನ್ನು ಕೂಡ ಮಿರ್ಜಾ ಮುಬಿನ್‌ ಕಸಿದುಕೊಂಡಿದ್ದಾನೆ. ಪಾಕ್‌ ಸರ್ಕಾರ ನನಗೆ ಸಹಾಯ ಮಾಡಬೇಕು” ಎಂಬುದಾಗಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Terror Attack: ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ; 11 ಜನರನ್ನು ಅಪಹರಿಸಿ ಬರ್ಬರ ಹತ್ಯೆ

Exit mobile version