Site icon Vistara News

Jesus Christ | ಜೀಸಸ್‌ ಕ್ರೈಸ್ಟ್‌ ಹೆಸರಿನ ನಕಲಿ ಖಾತೆಗೆ ಬ್ಲ್ಯೂ ಟಿಕ್‌ ನೀಡಿದ ಟ್ವಿಟರ್, ಜನರಿಂದ ಆಕ್ರೋಶ

Jesus Christ Blue Tick

ವಾಷಿಂಗ್ಟನ್‌: ಎಲಾನ್‌ ಮಸ್ಕ್‌ ಅವರು ಟ್ವಿಟರ್‌ಅನ್ನು ಖರೀದಿಸಿದ ಬಳಿಕ ಜಾಲತಾಣದಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ಟ್ವಿಟರ್‌ನಲ್ಲಿ ನಕಲಿ ಖಾತೆಗಳನ್ನು ರದ್ದುಗೊಳಿಸುವುದು ಸೇರಿ ಹಲವು ಹೊಸ ನಿಯಮಗಳನ್ನು ರೂಪಿಸಿದ್ದರು. ಇದರ ಬೆನ್ನಲ್ಲೇ ಟ್ವಿಟರ್‌ನಲ್ಲಿ ಜೀಸಸ್‌ ಕ್ರೈಸ್ಟ್‌ (Jesus Christ) ಹೆಸರಿನಲ್ಲಿ ರಚಿಸಲಾದ ಖಾತೆಯನ್ನು ಸಂಸ್ಥೆಯು ವೇರಿಫೈ ಮಾಡಿದೆ. ಇದರಿಂದಾಗಿ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪರ-ವಿರೋಧ ಚರ್ಚೆಯೂ ಆರಂಭವಾಗಿದೆ.

ದೇವರ ಹೆಸರಿನಲ್ಲಿ ತೆಗೆದ ಖಾತೆಗೆ ಬ್ಲ್ಯೂಟಿಕ್‌ ಏಕೆ ನೀಡಲಾಗಿದೆ? ನಕಲಿ ಖಾತೆಗಳನ್ನು (Parody Accounts) ರದ್ದುಗೊಳಿಸಲಾಗುವುದು ಎಂದು ಘೋಷಿಸಿದ ಎಲಾನ್‌ ಮಸ್ಕ್‌, ಈಗ ಏಕೆ ನಕಲಿ ಖಾತೆಯನ್ನು ವೇರಿಫೈ ಮಾಡಿದ್ದಾರೆ ಎಂದು ಹಲವರು ಪ್ರಶ್ನೆ ಕೇಳಿದ್ದಾರೆ. ವಿದೇಶದ ಮಾಧ್ಯಮಗಳಲ್ಲೂ ಈ ಕುರಿತು ಚರ್ಚಿಸಲಾಗುತ್ತದೆ. ಹಾಗೆಯೇ, ಒಂದಷ್ಟು ಜನ ಇದು ಸರಿಯಾದ ನಿರ್ಧಾರ ಎಂದೂ ಹೇಳಿದ್ದಾರೆ.

ಜೀಸಸ್‌ ಕ್ರೈಸ್ಟ್‌ ಹೆಸರಿನಲ್ಲಿ ತೆಗೆದ ಟ್ವಿಟರ್‌ ಖಾತೆಯ ಬಯೋ, ‘ಕಾರ್ಪೆಂಟರ್‌, ಹೀಲರ್‌ ಗಾಡ್’‌ ಎಂದಿದೆ. ಕೆಲ ದಿನಗಳ ಹಿಂದಷ್ಟೇ, ಮಸ್ಕ್‌ ಅವರು ಪರೋಡಿ ಖಾತೆಗಳನ್ನು ರದ್ದುಗೊಳಿಸಲಾಗುವುದು ಎಂದಾಗ, ಇದೇ ನಕಲಿ ಖಾತೆಯಿಂದ “ನನ್ನ ಖಾತೆಯೂ ಪರೋಡಿ” ಎಂದು ಪ್ರತಿಕ್ರಿಯಿಸಲಾಗಿತ್ತು. ಈಗ ಇದೇ ಖಾತೆಗೆ ಬ್ಲ್ಯೂಟಿಕ್‌ ನೀಡಲಾಗಿದೆ.‌ ಇದರಿಂದಾಗಿ, ಅಕೌಂಟ್‌ ವೇರಿಫೈ ಮಾಡಲು ಇರುವ ಮಾನದಂಡಗಳಾದರೂ ಯಾವವು ಎಂಬ ಪ್ರಶ್ನೆಯೂ ಮೂಡಿದೆ.

ಇದನ್ನೂ ಓದಿ | Twitter | ಟ್ವಿಟರ್‌ನಲ್ಲಿ ಬ್ಲೂ ಟಿಕ್‌ ಮಾರ್ಕ್‌ ಬೇಕಿದ್ದರೆ ತಿಂಗಳಿಗೆ 1,600 ರೂ. ಶುಲ್ಕ ಅನ್ವಯ: ಎಲಾನ್‌ ಮಸ್ಕ್

Exit mobile version