Site icon Vistara News

Joe Biden: ಸುರಕ್ಷತೆಯ ಕಳವಳದ ನಡುವೆಯೂ ಪ್ರಚಾರಕ್ಕೆ ಟಿಕ್‌ಟಾಕ್‌ ಆ್ಯಪ್ ಬಳಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್‌

joe biden

'No excuse for violence, unacceptable': US condemns attacks on Indian students

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್‌ (Joe Biden) 2024ರ ಅಧ್ಯಕ್ಷಿಯ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಎರಡನೇ ಅವಧಿಗೆ ಆಯ್ಕೆ ಬಯಸಿರುವ ಅವರು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಭಾಗವಾಗಿ ಅವರು ಚುನಾವಣೆ ಪ್ರಚಾರಕ್ಕಾಗಿ ಇದೇ ಮೊದಲ ಬಾರಿಗೆ ಜನಪ್ರಿಯ ಆ್ಯಪ್ ಟಿಕ್‌ಟಾಕ್‌ (TikTok)ನ ಮೊರೆ ಹೋಗಿದ್ದಾರೆ.

ಭದ್ರತಾ ಕಾರಣಗಳಿಂದಾಗಿ ಅಮೆರಿಕದ ಬಹುತೇಕ ಸರ್ಕಾರಿ ಉಪಕರಣಗಳಲ್ಲಿ ಟಿಕ್‌ಟಾಕ್‌ ಅಪ್ಲಿಕೇಶನ್ ಅನ್ನು ನಿಷೇಧಿಸಲಾಗಿದ್ದರೂ ಜೋ ಬೈಡನ್ ಅವರು ಪ್ರಚಾರ ಅಭಿಯಾನದಲ್ಲಿ ಇದನ್ನು ಬಳಸಿರುವುದು ಚರ್ಚೆಗೆ ಗ್ರಾಸವಾಗಿದೆ. ಭಾನುವಾರ ಸೂಪರ್ ಬೌಲ್ ಸಮಯದಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೊ ಮೂಲಕ ಯುವ ಮತದಾರರನ್ನು ತಲುಪುವ ಗುರಿ ಹೊಂದಲಾಗಿದೆ.

ಚೀನಾಕ್ಕಾಗಿ ಡೇಟಾವನ್ನು ಸಂಗ್ರಹಿಸುವ ಭಯದಿಂದ ಯುಎಸ್ ಫೆಡರಲ್ ಸರ್ಕಾರಿ ಉಪಕರಣಗಳಲ್ಲಿ ನಿಷೇಧಿಸಲಾದ ಅಪ್ಲಿಕೇಶನ್ ಅನ್ನು ಬಳಸಿದ್ದಕ್ಕಾಗಿ ಸಾರ್ವಜನಿಕರು ಬೈಡನ್ ಅವರನ್ನು ಟೀಕಿಸಿದ್ದಾರೆ. ಶ್ವೇತ ಭವನ ಕೂಡ ಸೋಮವಾರ ಟಿಕ್‌ಟಾಕ್ ಬಗ್ಗೆ ಇನ್ನೂ ಕಳವಳವಿದೆ ಎಂದು ಒಪ್ಪಿಕೊಂಡಿದೆ. “ಸರ್ಕಾರಿ ಸಾಧನಗಳಲ್ಲಿ ಟಿಕ್‌ಟಾಕ್ ಬಳಕೆಯ ಬಗ್ಗೆ ಇನ್ನೂ ನಿಷೇಧವಿದೆ. ಆ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಸ್ಪಷ್ಟಪಡಿಸಿದ್ದಾರೆ. ಟಿಕ್‌ಟಾಕ್ ಚೀನಾದ ಸಂಸ್ಥೆ ಬೈಟ್ ಡ್ಯಾನ್ಸ್ ಒಡೆತನದಲ್ಲಿದೆ.

“ಒಂದು ವರ್ಷದ ಹಿಂದೆ ಶ್ವೇತಭವನವು ಟಿಕ್‌ಟಾಕ್‌ ಅನ್ನು ನಿಷೇಧಿಸಿದ ನಂತರವೂ ಬೈಡನ್ ಈ ಆ್ಯಪ್ ಬಳಸಿ ಪ್ರಚಾರ ಕಾರ್ಯದಲ್ಲಿ ತೊಡಗಿರುವುದರಿಂದ ಕಳವಳ ಉಂಟು ಮಾಡಿದೆ” ಎಂದು ರಿಪಬ್ಲಿಕನ್ ಪ್ರತಿನಿಧಿ ಡಾರೆಲ್ ಇಸಾ ಹೇಳಿದ್ದಾರೆ. ಅದಾಗ್ಯೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಲು, ಯುವ ಮತದಾರರ ಗಮನ ಸೆಳೆಯಲು ಟಿಕ್‌ಟಾಕ್‌ ಉತ್ತಮ ಮಾರ್ಗ ಎನ್ನುವುದನ್ನು ಬೈಡನ್ ಅವರ ಪ್ರಚಾರ ತಂಡ ಕಂಡುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಬೈಡನ್ ಅವರಿಗೆ ಈಗಾಗಲೇ 82 ವರ್ಷ ವಯಸ್ಸಾಗಿದ್ದು, ಈ ಬಗ್ಗೆ ಮತದಾರರ ಕಳವಳಗಳನ್ನು ನಿವಾರಿಸಲು ಟಿಕ್‌ಟಾಕ್‌ನಂತಹ ಸಾಮಾಜಿಕ ಮಾಧ್ಯಮಗಳನ್ನು ಬಳಸಲಾಗುತ್ತಿದೆ. ʼಲಾಲ್ ಹೇ ಗಯ್ಸ್‌ʼ(lol hey guys) ಎಂಬ ಶೀರ್ಷಿಕೆಯ ಭಾನುವಾರದ ಈ ಟಿಕ್‌ಟಾಕ್‌ ವಿಡಿಯೊ ರಾಜಕೀಯದಿಂದ ಹಿಡಿದು ಎನ್ಎಫ್ಎಲ್ ಚಾಂಪಿಯನ್‌ಶಿಪ್‌ ಆಟದವರೆಗಿನ ವಿವಿಧ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ವಿಡಿಯೊವು ʼಡಾರ್ಕ್ ಬ್ರಾಂಡನ್ʼ (Dark Brandon) ಮೆಮ್ ಅನ್ನು ಒಳಗೊಂಡಿದೆ. ಹೊಳೆಯುವ ಕೆಂಪು ಕಣ್ಣುಗಳು ಮತ್ತು ಡೆಮಾಕ್ರಟಿಕ್‌ನ ಸೂಪರ್-ಪವರ್‌ಗಳನ್ನು ಸೂಚಿಸಲು ಬಳಸುವ ದೊಡ್ಡ ನಗುವಿನೊಂದಿಗೆ ಬೈಡನ್ ಅವರ ಭಾವಚಿತ್ರದಲ್ಲಿ ಇದರಲ್ಲಿ ಕಂಡು ಬಂದಿದೆ.

ಇದನ್ನೂ ಓದಿ: Joe Biden: ಮೃತ ನಾಯಕರನ್ನು ಭೇಟಿಯಾಗಿದ್ದೇನೆ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡ ಬೈಡನ್‌

50 ಲಕ್ಷಕ್ಕಿಂತ ಅಧಿ ವ್ಯೂವ್ಸ್‌

“ಭಾನುವಾರ ರಾತ್ರಿ ಅಪ್‌ಲೋಡ್‌ ಮಾಡಲಾದ ಬೈಡನ್‌ ಅವರ ಟಿಕ್‌ಟಾಕ್‌ ಪಾದರ್ಪಣೆ ವಿಡಿಯೊ ಈಗಾಗಲೇ 50 ಲಕ್ಷಕ್ಕಿಂತ ಅಧಿ ವ್ಯೂವ್ಸ್‌ ಪಡೆದುಕೊಂಡಿದೆ. ಇದು ಮತದಾರರನ್ನು ತಲುಪಲು ನಾಬು ಕೈಗೊಂಡ ನವೀನ ಮಾರ್ಗಕ್ಕೆ ಸಿಕ್ಕ ಯಶಸ್ಸುʼʼ ಎಂದು ಬೈಡನ್ ಪರ ಪ್ರಚಾರ ತಂಡದಲ್ಲಿರುವ ಸದಸ್ಯರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version