Site icon Vistara News

Kazakhstan: ವಿದ್ಯಾರ್ಥಿನಿಯರ ಕನ್ಯತ್ವ ಸ್ಥಿತಿ, ಫೋನ್ ನಂಬರ್, ಹೆಸರು ಸೋರಿಕೆ ಮಾಡಿದ ವಿಶ್ವವಿದ್ಯಾಲಯ!

kazakhstan al farabi university

ನವದೆಹಲಿ: ಕಜಕಿಸ್ತಾನದ ವಿಶ್ವವಿದ್ಯಾಲಯವೊಂದು (Kazakhstan al farabi university) ತನ್ನ ವಿದ್ಯಾರ್ಥಿನಿಯರ ಕನ್ಯತ್ವ ಪರೀಕ್ಷೆ (Female Students Virgin Test) ವರದಿಯನ್ನು ಸೋರಿಕೆ ಮಾಡಿದೆ(Report Leaked). ಇದಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೇ, ವಿದ್ಯಾರ್ಥಿನಿಯರ ಕನ್ಯತ್ವ ಪರೀಕ್ಷೆ ಏಕೆ ಮಾಡಲಾಯಿತು ಎಂದು ಪ್ರಶ್ನಿಸಲಾಗುತ್ತಿದೆ. ಇದರ ಜತೆ, ಆ ವಿದ್ಯಾರ್ಥಿನಿಯರ ಹೆಸರು, ಫೋನ್‌ ನಂಬರ್‌ಗಳನ್ನೂ ಸೋರಿಕೆ ಮಾಡಲಾಗಿದೆ. ಕಜಕಿಸ್ತಾನದ ಅಲ್-ಫರಾಬಿ ಕಜಕಸ್ತಾನ ವಿವಿಯಲ್ಲಿ ಈ ಘಟನೆ ನಡೆದಿದೆ. ಈ ಮಧ್ಯೆ, ವಿದ್ಯಾರ್ಥಿನಿಯರ ಖಾಸಗಿತನವನ್ನು ಬಹಿರಂಗಪಡಿಸಿದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಹೇಳಿದ್ದಾರೆ.

ಅಲ್-ಫರಾಬಿ ಕಜಕಿಸ್ತಾನ್ ವಿಶ್ವವಿದ್ಯಾನಿಲಯವು ವಿದ್ಯಾರ್ಥಿನಿಯರ ಕನ್ಯತ್ವ ಸ್ಥಿತಿಯನ್ನು ನಿರ್ಧರಿಸಲು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ್ದಕ್ಕಾಗಿ ಮತ್ತು ಅವರ ವೈಯಕ್ತಿಕ ಡೇಟಾವನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿದ್ದಕ್ಕಾಗಿ ತೀವ್ರ ಆಕ್ರೋಶವನ್ನು ಎದುರಿಸುತ್ತಿದೆ. ವಿಶ್ವವಿದ್ಯಾನಿಲಯದ ವೈದ್ಯಕೀಯ ಕೇಂದ್ರದಲ್ಲಿ 17 ರಿಂದ 21 ವರ್ಷ ವಯಸ್ಸಿನ ಸುಮಾರು 190 ಹುಡುಗಿಯರು ಮತ್ತು ಮಹಿಳೆಯರು ಕಡ್ಡಾಯವಾಗಿ ಸ್ತ್ರೀರೋಗ ಪರೀಕ್ಷೆಗೆ ಒಳಗಾಗಬೇಕಾಗಿತ್ತು. ಪರೀಕ್ಷೆಗಳನ್ನು ಏಕೆ ನಡೆಸಲಾಯಿತು ಎಂಬುದು ಸ್ಪಷ್ಟವಾಗಿಲ್ಲ.

ವರದಿಯ ಪ್ರಕಾರ, ಕಜಕಿಸ್ತಾನ್‌ನ ವಿಜ್ಞಾನ ಮತ್ತು ಉನ್ನತ ಶಿಕ್ಷಣ ಸಚಿವ ಸಯಾಸತ್ ನುರ್ಬೆಕ್, “ವೈಯಕ್ತಿಕ ಡೇಟಾದ ವರ್ಗಾವಣೆ, ವಿಶೇಷವಾಗಿ ವೈದ್ಯಕೀಯ ಸ್ವರೂಪದ ಉಲ್ಲಂಘನೆಯಾಗಿದೆ. ಇಲ್ಲಿ ನೇರ ಉಲ್ಲಂಘನೆ ಇರುವುದರಿಂದ ನಾನು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಾನೆ. ಇದರ ಹೊಣೆಗಾರರು ನಮ್ಮ ಪ್ರಸ್ತುತ ಕಾನೂನಿನ ಅಡಿಯಲ್ಲಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇದೊಂದು ಮಹಿಳೆಯರ ಖಾಸಗಿ ಹಕ್ಕು ಉಲ್ಲಂಘನೆಯ ಗಂಭೀರ ಪ್ರಕರಣವೆಂದು ಪರಿಗಣಿಸಲಾಗುತ್ತಿದೆ. ಅಲ್-ಫರಾಬಿ ಕಜಕಿಸ್ತಾನ್ ವಿಶ್ವವಿದ್ಯಾನಿಲಯವು ಹುಡುಗಿಯರು ಮತ್ತು ಮಹಿಳಾ ವಿದ್ಯಾರ್ಥಿಗಳನ್ನು ಅವರ ಕನ್ಯತ್ವ ಸ್ಥಿತಿಯನ್ನು ನಿರ್ಧರಿಸಲು ಸಂಸ್ಥೆಯ ವೈದ್ಯಕೀಯ ಕೇಂದ್ರದಲ್ಲಿ ಸ್ತ್ರೀರೋಗ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿತ್ತು. ಆದರೆ, ಈ ಪರೀಕ್ಷೆಯನ್ನು ಏಕೆ ಮಾಡಲಾಗಿದೆ ಎಂಬುದರ ಕುರಿತು ವಿಶ್ವವಿದ್ಯಾಲಯವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ 17 ರಿಂದ 21 ವರ್ಷ ವಯಸ್ಸಿನವರ ಹೆಸರುಗಳು, ವಯಸ್ಸು, ಫೋನ್ ಸಂಖ್ಯೆಗಳು ಮತ್ತು ತೆರಿಗೆ ವಿವರಗಳಂತಹ ವಿವರಗಳನ್ನು ನಂತರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಮಾಹಿತಿಯು ಸೋರಿಕೆಯಾಗುವ ಮೊದಲು ವಿವರವನ್ನು ವಿಶ್ವವಿದ್ಯಾಲಯದ ಮೆಕ್ಯಾನಿಕ್ಸ್ ಮತ್ತು ಗಣಿತಶಾಸ್ತ್ರದ ಫ್ಯಾಕಲ್ಟಿಯ ಡೀನ್ ಕಚೇರಿಗೆ ಕಳುಹಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಂತರ ಅವುಗಳನ್ನು ಶಿಕ್ಷಕರು, ಸಹ ವಿದ್ಯಾರ್ಥಿಗಳು ಮತ್ತು ಬಹುಶಃ ಇತರರನ್ನು ಒಳಗೊಂಡಿರುವ ವಿಶ್ವವಿದ್ಯಾಲಯದ ವಾಟ್ಸಾಪ್ ಗುಂಪುಗಳಲ್ಲಿ ಪ್ರಸಾರ ಮಾಡಲಾಯಿತು ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: Viral News: ಈತನಿಗೆ 43 ಲಕ್ಷ ರೂ. ಸಂಬಳ! ಆದರೂ, ಉಚಿತ ಊಟ ನೀಡುವ ಕಂಪನಿ ಬೇಕಂತೆ!

Exit mobile version