Site icon Vistara News

Le Bonnette Potato: ವರ್ಷದಲ್ಲಿ ಹತ್ತೇ ದಿನ ಮಾರಾಟಕ್ಕೆ ಸಿಗುವ ಜಗತ್ತಿನ ದುಬಾರಿ ಆಲೂಗಡ್ಡೆ! ಒಂದು ಕಿಲೋಗೆ ಎಷ್ಟು?

Le Bonnette Potato are world's most expensive potatos

ನವದೆಹಲಿ: ಬಟಾಟೆ, ಆಲೂ.. ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುವ ಆಲೂಗಡ್ಡೆ ಜಗತ್ತಿನಾದ್ಯಂತ ಬಳಕೆಯಾಗುವ ತರಕಾರಿ. ಭಾರತದಲ್ಲಂತೂ ಯಾವುದೇ ಅಡುಗೆ ಆಲೂ ಇಲ್ಲದೇ ಪೂರ್ತಿಯಾಗುವುದಿಲ್ಲ. ಆಲೂಗಡ್ಡೆಯ ಈ ವ್ಯಾಪಕ ಬಳಕೆಗೆ ಮತ್ತೊಂದು ಕಾರಣವಿದೆ. ಏನೆಂದರೆ, ಬಹುಶಃ ಅತ್ಯಂತ ಅಗ್ಗದ ದರದಲ್ಲಿ ದೊರೆಯುವ ತರಕಾರಿ ಇದು. ಈ ಮಾತನ್ನು ಎಲ್ಲ ಒಪ್ಪುತ್ತಾರೆ. ಆದರೆ, ಬಹಳಷ್ಟು ಜನರಿಗೆ ಗೊತ್ತಿಲ್ಲದಿರುವ ಆಲೂ ಇದೆ. ಫ್ರಾನ್ಸ್‌ನಲ್ಲಿ ಬೆಳೆಯಲಾಗುವ ಈ ಆಲೂ ಕೆಜಿಗೆ ಸುಮಾರು 40 ಸಾವಿರದಿಂದ 50 ರೂ.ವರೆಗೆ ಇರುತ್ತದೆ ಮತ್ತು ವರ್ಷದಲ್ಲಿ 10 ದಿನ ಮಾತ್ರವೇ ಮಾರಾಟಕ್ಕೆ ದೊರೆಯುತ್ತದೆ! ಅಂದ ಹಾಗೆ ಈ ಆಲೂ ಹೆಸರು ಲೆ ಬೊನೆಟ್(Le Bonnette).

ಆಲೂಗೆಡ್ಡೆಯ ಈ ತಳಿಯನ್ನು ಫ್ರಾನ್ಸ್‌ನ (France) ಐಲ್ ಡಿ ನೊಯಿರ್ಮೌಟಿಯರ್ (Ile De Noirmoutier) ಎಂಬ ಹೆಸರಿನ ದ್ವೀಪದಲ್ಲಿ ಬೆಳೆಯಲಾಗುತ್ತದೆ. ಈ ಆಲೂಗೆಡ್ಡೆ ತುಂಬಾ ಅಪರೂಪವಾಗಿದ್ದು, ಇದನ್ನು 50 ಚದರ ಮೀಟರ್ ಭೂಮಿಯಲ್ಲಿ ಮಾತ್ರ ಬೆಳೆಸಲಾಗುತ್ತದೆ. ಈ ಆಲೂಗಡ್ಡೆಗಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವುಗಳನ್ನು ಮರಳು ಭೂಮಿಯಲ್ಲಿ ಮಾತ್ರ ಬೆಳೆಯಲಾಗುತ್ತದೆ. ಇದಕ್ಕಾಗಿ ಕಡಲಕಳೆ ಮತ್ತು ಪಾಚಿಗಳು ಗೊಬ್ಬರಗಳಾಗಿ ಬಳಸಲಾಗುತ್ತದೆ. ಈ ಕಾರಣದಿಂದಾಗಿಯೇ ಈ ಆಲೂಗಡ್ಡೆಗಳು ಜಗತ್ತಿನ ದುಬಾರಿ ಆಲೂಗಡ್ಡೆಗಳಾಗಲು ಕಾರಣವಾಗಿದೆ. ಲೆ ಬೊನೆಟ್ ಆಲೂಗಡ್ಡೆಯ ರುಚಿಯು ಇತರ ಆಲೂಗಡ್ಡೆಗಳಿಗಿಂತಲೂ ಭಿನ್ನವಾಗಿದೆ. ಈ ಆಲೂಗಡ್ಡೆಯು ಸ್ವಲ್ಪ ಹುಳಿ, ಸ್ವಲ್ಪ ಉಪ್ಪು ರುಚಿ ಹೊಂದಿರುತ್ತದೆ. ತಿಂದ ಬಳಿಕ ನಿಮಗೆ ವಾಲ್ಟನ್ ರೀತಿ ಅನಿಸುತ್ತದೆ.

ಈ ಆಲೂಗಡ್ಡೆಗಳು ಬಹಳ ಟೊಳ್ಳಾಗಿರುತ್ತವೆ ಮತ್ತು ಸೂಕ್ಷ್ಮವಾಗಿರುತ್ತವೆ. ಹಾಗಾಗಿಯೇ, ಅವುಗಳನ್ನು ಒಂದೊಂದಾಗಿ ಕೈಯಿಂದ ಕೀಳುತ್ತಾರೆ. ವರ್ಷಕ್ಕೆ ಒಂದು ವಾರ ಮಾತ್ರವೇ ಈ ಆಲೂಗಡ್ಡೆ ಸುಗ್ಗಿಯಾಗಿರುತ್ತದೆ. ಈ ಆಲೂಗಡ್ಡೆಗಳ ಸಿಪ್ಪೆ ತೆಗೆಯದಂತೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಈ ಆಲೂಗಡ್ಡೆಯ ಸಿಪ್ಪೆ ಮಣ್ಣಿನ ಎಲ್ಲಾ ಸುವಾಸನೆ ಮತ್ತು ಹತ್ತಿರದ ಸಮುದ್ರದ ನೀರನ್ನು ಹೀರಿಕೊಂಡಿರುತ್ತದೆ. ಒಂದೊಮ್ಮೆ ಸಿಪ್ಪೆ ತೆಗೆದರೆ ಆ ಮೂಲ ಗುಣಗಳು ಹೊರಟು ಹೋಗುತ್ತವೆ.

ಈ ದ್ವೀಪದಲ್ಲಿ ಉತ್ಪಾದಿಸಲಾಗುವ 10 ಸಾವಿರ ಟನ್ ಆಲೂಗಡ್ಡೆಗಳ ಪೈಕಿ 100 ಟನ್ ಈ ದುಬಾರಿ ಲೆ ಬಾನೆಟ್‌ ಆಲೂಗಡ್ಡೆಗಳಿರುತ್ತವೆ. ಹೆಚ್ಚು ಉತ್ಪಾದನೆಯಾಗದೇ ಕಾರಣ ಈ ಆಲೂ ಹೆಚ್ಚು ದುಬಾರಿ ಎನಿಸಿಕೊಂಡಿದೆ. ಕೈಯಿಂದಲೇ ಕೀಳುವುದರಿಂದ ಹೆಚ್ಚು ಕೂಲಿಗಳು ಬೇಕಾಗುತ್ತದೆ. ಒಂದು ವಾರ ಕಾಲ ನಡೆಯುವ ಆಲೂ ಸುಗ್ಗಿಯಲ್ಲಿ ಸುಮಾರು 2500 ಜನರು ಪಾಲ್ಗೊಳ್ಳುತ್ತಾರೆ.

ಇದನ್ನೂ ಓದಿ: Price hike : ಇಂದಿನಿಂದ ಯಾವುದು ದುಬಾರಿ, ಯಾವುದು ಅಗ್ಗ, ಹೊಸ ಬದಲಾವಣೆ ಏನು?

ಈ ವಿಶೇಷ ಆಲೂಗಳನ್ನು ಸಲಾಡ್ ಪೂರಿ, ಸೂಪ್ ಮತ್ತು ಕ್ರೀಮ್ ತಯಾರಿಸಲು ಬಳಸಲಾಗುತ್ತದೆ. ವೈದ್ಯರ ಪ್ರಕಾರ, ಬೊನೊಟ್‌ ಆಲೂಗಳನ್ನು ತೀವ್ರವಾದ ಕಾಯಿಲೆಗಳಿಂದ ರಕ್ಷಿಸಲು ಬಳಸಲಾಗುತ್ತದೆ. ಅಲ್ಲದೆ, ಅವು ಸೂಪರ್‌ಮಾರ್ಕೆಟ್‌ಗಳಲ್ಲಿ ದೊರೆಯುವುದಿಲ್ಲ. ಒಂದೊಮ್ಮೆ ಈ ಆಲೂಗಳನ್ನು ಖರೀದಿಸಬೇಕಿದ್ದರೆ ಆನ್‌ಲೈನ್ ಸ್ಟೋರ್‌ಗಳ ಮೂಲಕವೇ ಖರೀದಿಸಬೇಕಾಗುತ್ತದೆ.

Exit mobile version