Price hike : ಇಂದಿನಿಂದ ಯಾವುದು ದುಬಾರಿ, ಯಾವುದು ಅಗ್ಗ, ಹೊಸ ಬದಲಾವಣೆ ಏನು? - Vistara News

ಪ್ರಮುಖ ಸುದ್ದಿ

Price hike : ಇಂದಿನಿಂದ ಯಾವುದು ದುಬಾರಿ, ಯಾವುದು ಅಗ್ಗ, ಹೊಸ ಬದಲಾವಣೆ ಏನು?

ಕೇಂದ್ರ ಸರ್ಕಾರ 2023-24ರ ಬಜೆಟ್‌ನಲ್ಲಿ ಘೋಷಿಸಿರುವ ತೆರಿಗೆ ಬದಲಾವಣೆಗಳು ಏಪ್ರಿಲ್‌ 1ರಿಂದ ಜಾರಿಯಾಗುತ್ತವೆ. ಇದರ ಪರಿಣಾಮ ಕೆಲ ವಸ್ತುಗಳು ದುಬಾರಿಯಾದರೆ, ಕೆಲವು ಅಗ್ಗವಾಗಲಿವೆ. (Price hike) ವಿವರ ಇಲ್ಲಿದೆ.

VISTARANEWS.COM


on

shoping centre
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಕೇಂದ್ರ ಸರ್ಕಾರ 2023-24ರ ಬಜೆಟ್‌ನಲ್ಲಿ ಘೋಷಿಸಿರುವ ತೆರಿಗೆ ಬದಲಾವಣೆಗಳು ಏಪ್ರಿಲ್‌ 1ರಿಂದ ಜಾರಿಯಾಗುತ್ತಿವೆ. ಇದರ ಪರಿಣಾಮ ಏಪ್ರಿಲ್‌ 1ರಿಂದ ಕೆಲವು ವಸ್ತುಗಳು ದುಬಾರಿಯಾಗುತ್ತವೆ. ( Price hike) ಮತ್ತೆ ಕೆಲವು ಅಗ್ಗವಾಗಲಿದೆ. ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಸಲುವಾಗಿ 2023ರ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ಆಮದು ಸುಂಕವನ್ನು 2023-24ರ ಬಜೆಟ್‌ನಲ್ಲಿ ಹೆಚ್ಚಿಸಿದೆ. ಜತೆಗೆ ಹೊಸ ನಿಯಮಾವಳಿಗಳೂ ಜಾರಿಯಾಗಲಿವೆ. ಇವೆಲ್ಲವುಗಳ ವಿವರ ಇಲ್ಲಿದೆ.

ಯಾವುದು ದುಬಾರಿ?

cigarette

ಎಲ್‌ಇಡಿ ಬಲ್ಬ್‌, ಸಿಗರೇಟ್‌, ಖಾಸಗಿ ಜೆಟ್‌, ಹೆಲಿಕಾಪ್ಟರ್‌, ಹೈ-ಎಂಡ್‌ ಎಲೆಕ್ಟ್ರಾನಿಕ್‌ ಉತ್ಪನ್ನಗಳು, ಪ್ಲಾಸ್ಟಿಕ್‌ ವಸ್ತುಗಳು, ಬೆಳ್ಳಿ, ಇಮಿಟೇಶನ್ ಜ್ಯುವೆಲ್ಲರಿ, ‌ಚಿನ್ನದ ಗಟ್ಟಿ, ಪ್ಲಾಟಿನಮ್‌, ಹೈ-ಗ್ಲಾಸ್‌ ಪೇಪರ್‌, ಕಿಚನ್‌ ಚಿಮಿಣಿಗಳು, ವಿಟಮಿನ್‌ಗಳು ದುಬಾರಿಯಾಗಲಿವೆ. ದೇಶೀಯ ವಿಮಾನ ಪ್ರಯಾಣಕ್ಕೆ ಸಂಬಂಧಿಸಿ ಸೆಕ್ಯುರಿಟಿ ಶುಲ್ಕವು 160 ರೂ.ಗಳಿಂದ 200 ರೂ.ಗೆ ಏರಿಕೆಯಾಗಿದೆ.

ಔಷಧಗಳ ದರ ಏರಿಕೆ: ಏ.1ರಿಂದ ಗ್ರಾಹಕರು ಹಲವಾರು ಪೇನ್‌ಕಿಲ್ಲರ್ಸ್‌, ಆಂಟಿ ಬಯೋಟಿಕ್ಸ್‌ ಔಷಧಗಳ ದರ ಏರಿಕೆಯನ್ನು ಎದುರಿಸಲಿದ್ದಾರೆ. ಇವುಗಳ ದರದಲ್ಲಿ 12% ತನಕ ಹೆಚ್ಚಳ ನಿರೀಕ್ಷಿಸಲಾಗಿದೆ. ರಾಷ್ಟ್ರೀಯ ಔಷಧ ದರ ಪ್ರಾಧಿಕಾರವು ಸಗಟು ಹಣದುಬ್ಬರ ಸೂಚ್ಯಂಕವನ್ನು ಆಧರಿಸಿ ದರಗಳನ್ನು ನಿಯಂತ್ರಿಸುತ್ತದೆ.

ಕಾರುಗಳ ದರ ಹೆಚ್ಚಳ: ಟಾಟಾ ಮೋಟಾರ್ಸ್‌, ಹೋಂಡಾ ಕಾರ್ಸ್‌, ಹೀರೋಮೋಟೊಕಾರ್ಪ್‌ ಸೇರಿದಂತೆ ಆಟೊಮೊಬೈಲ್‌ ವಲಯದ ಕಂಪನಿಗಳು ಕಾರುಗಳ ದರಗಳನ್ನು ಏಪ್ರಿಲ್‌ 1 ರಿಂದ ಏರಿಸುತ್ತಿವೆ. BS6 ಮಾಲಿನ್ಯ ನಿಯಂತ್ರಣ ನಿಯಮಗಳ ಎರಡನೇ ಹಂತ ಏ.1ರಿಂದ ಜಾರಿಯಾಗುತ್ತಿದೆ. ಇದರಿಂದ ಎಲ್ಲ ಹೊಸ ವಾಹನಗಳು ಬಿಗಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹೀಗಾಗಿ ಹೊಸ ಕಾರುಗಳು ತುಟ್ಟಿಯಾಗಬಹುದು.

ಎಕ್ಸ್‌ -ರೇ ಮೆಶೀನ್‌ ದುಬಾರಿ: ಸರ್ಕಾರ ಎಕ್ಸ್‌ -ರೇ ಮೆಶೀನ್‌ಗಳ (X-ray machine) ಆಮದು ಸುಂಕದಲ್ಲಿ 2023ರ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ 15% ಏರಿಸಿದೆ. 2023ರ ಹಣಕಾಸು ವಿಧೇಯಕದ ತಿದ್ದುಪಡಿಗೆ ಅನುಸಾರವಾಗಿ ಕಸ್ಟಮ್ಸ್‌ ಸುಂಕದಲ್ಲಿ ಬದಲಾವಣೆ ತರಲಾಗಿದೆ. ಪ್ರಸ್ತುತ ಪೋರ್ಟಬಲ್‌ ಎಕ್ಸ್-ರೇ ಮೆಶೀನ್‌ ಮತ್ತು ನಾನ್-ಪೋರ್ಟೆಬಲ್‌ ಎಕ್ಸ್-ರೇ ಮೆಶೀನ್‌ 10% ಆಮದು ಸುಂಕವನ್ನು ಹೊಂದಿವೆ.

ಯಾವುದು ಅಗ್ಗ : ಮೊಬೈಲ್‌ ಫೋನ್‌, ಭಾರತದಲ್ಲಿ ಉತ್ಪಾದನೆಯಾಗುವ ಸ್ಮಾರ್ಟ್‌ಫೋನ್‌ನ ಬಿಡಿಭಾಗಗಳು, ಟಿ.ವಿ, ಆಟಿಕೆಗಳು, ಸೈಕಲ್‌, ಲಿಥಿಯಂ ಬ್ಯಾಟರಿ, ಎಲ್‌ಇಡಿ ಟಿವಿ, ಎಲೆಕ್ಟ್ರಿಕ್‌ ವಾಹನ, ಕ್ಯಾಮೆರಾ ಲೆನ್ಸ್‌ ಮೇಲಿನ ಸುಂಕ ಇಳಿಕೆಯ ಪರಿಣಾಮ ಇವುಗಳ ದರ ಇಳಿಕೆ ನಿರೀಕ್ಷಿಸಲಾಗಿದೆ.

ಪೇಮೆಂಟ್‌ ಬ್ಯಾಂಕ್‌ ಶುಲ್ಕ: ಅಂಚೆ ಇಲಾಖೆಯು ತನ್ನ ಪೇಮೆಂಟ್‌ ಬ್ಯಾಂಕ್‌ನಲ್ಲಿ 10,000 ರೂ.ಗಿಂತ ಹೆಚ್ಚಿನ ಠೇವಣಿ ಇಡಲು ಹಾಗೂ 25,000 ರೂ.ಗಿಂತ ಹೆಚ್ಚಿನ ವಿತ್‌ ಡ್ರಾವಲ್ಸ್‌ಗೆ ಶುಲ್ಕ ಅನ್ವಯವಾಗಲಿದೆ.

ಗೃಹ ಸಾಲ, ಹಿರಿಯ ನಾಗರಿಕರ ಎಫ್‌ಡಿ ದರದಲ್ಲಿ ಬದಲಾವಣೆ

home loan

ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ತಮ್ಮ ಗ್ರಾಹಕರಿಗೆ ನೀಡುವ ಗೃಹ ಸಾಲದ ದರದಲ್ಲಿ ಏರಿಕೆಯಾಗಲಿದೆ. ಹಲವು ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ನೀಡುತ್ತಿರುವ ಹಿರಿಯ ನಾಗರಿಕರ ಠೇವಣಿ ಯೋಜನೆಗಳನ್ನು ಹಿಂತೆಗೆದುಕೊಳ್ಳುತ್ತಿವೆ. ಉದಾಹರಣೆಗೆ ಎಸ್‌ಬಿಐನ ವಿ ಕೇರ್‌ ಡೆಪಾಸಿಟ್‌ ಸ್ಕೀಮ್‌ ಯೋಜನೆ ಸ್ಥಗಿತವಾಗಲಿದೆ.

ಆದಾಯ ತೆರಿಗೆ ಇಲಾಖೆಯು ಬುಧವಾರ 2023-24 ಸಾಲಿಗೆ ( ಮೌಲ್ಯ ಮಾಪನಾ ವರ್ಷ-Assessment year 2023-24) ಆದಾಯ ತೆರಿಗೆ ರಿಟರ್ನ್‌ (Income Tax Return -ITR) ಫಾರ್ಮ್‌ಗಳನ್ನು ಬಿಡುಗಡೆಗೊಳಿಸಿದೆ. ಏಪ್ರಿಲ್‌ 1ರಿಂದ ಇದು ಜಾರಿಗೆ ಬರಲಿದೆ. ತೆರಿಗೆದಾರರ ಅನುಕೂಲಕ್ಕಾಗಿ ಎರಡು ತಿಂಗಳು ಮೊದಲೇ ಅಧಿಸೂಚನೆಗೊಳಿಸಲಾಗಿದೆ.‌

ಐಟಿಆರ್‌ ಫಾರ್ಮ್‌ಗಳಲ್ಲಿ ಬದಲಾವಣೆ:

ತೆರಿಗೆದಾರರಿಗೆ ಆದಾಯ ತೆರಿಗೆ ರಿಟರ್ನ್‌ ಫೈಲಿಂಗ್‌ ಅನ್ನು ಸುಲಭವಾಗಿಸಲು ಐಟಿಆರ್‌ ಫಾರ್ಮ್‌ಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಗಣನೀಯ ಬದಲಾವಣೆ ಮಾಡಿಲ್ಲ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (Central Board Direct Taxes) ಕಳೆದ ಫೆಬ್ರವರಿ 10ರಂದು ಐಟಿಆರ್‌ ಫಾರ್ಮ್‌ಗಳ (1-6) ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ವೈಯಕ್ತಿಕ ತೆರಿಗೆದಾರರು, ವೃತ್ತಿಪರರು, ಬಿಸಿನೆಸ್‌ ನಡೆಸುವವರಿಗೆ ಐಟಿಆರ್‌ ಅರ್ಜಿ ನಮೂನೆಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಅರ್ಜಿ ನಮೂನೆಗಳು 2023ರ ಏಪ್ರಿಲ್‌ 1ರಿಂದ ಲಭಿಸಲಿವೆ.

ಐಟಿಆರ್‌ ಫಾರ್ಮ್‌ 1 (ಸಹಜ್)‌ ಮತ್ತು ಐಟಿಆರ್‌ ಫಾರ್ಮ್‌ 4 (ಸುಗಮ್)‌ ಭಾರಿ ಸಂಖ್ಯೆಯಲ್ಲಿ ಸಣ್ಣ ಮತ್ತು ಮಧ್ಯಮ ತೆರಿಗೆದಾರರಿಗೆ ಅನ್ವಯವಾಗುತ್ತದೆ. 50 ಲಕ್ಷ ರೂ. ತನಕ ಆದಾಯ ಇರುವವರು (ವೇತನ, ಒಂದು ವಸತಿ ಪ್ರಾಪರ್ಟಿ, 5,000 ರೂ. ತನಕ ಕೃಷಿ ಮೂಲದ ಆದಾಯ ಇರುವವರು, ಬಡ್ಡಿ ಮತ್ತು ಇತರ ಮೂಲಗಳಿಂದ ಆದಾಯ) ಐಟಿಆರ್-‌1 ಅನ್ನು ಭರ್ತಿ ಮಾಡಬೇಕು. 50 ಲಕ್ಷ ರೂ. ತನಕ ಆದಾಯ ಇರುವ ಕಂಪನಿಗಳು ಐಟಿಆರ್-‌4 ಅನ್ನು ಬಳಸಬೇಕು. ವಸತಿ ಆಸ್ತಿಗಳ ಮೂಲಕ ಆದಾಯ ಗಳಿಸುವವರು ಐಟಿಆರ್-‌2 ಅನ್ನು ಬಳಸಬೇಕು. ವೃತ್ತಿಪರರು ಐಟಿಆರ್-‌3 ಅನ್ನು ಭರ್ತಿಗೊಳಿಸಬೇಕು. ಐಟಿಆರ್-‌5, ಐಟಿಆರ್-‌6 ಅನ್ನು ಎಲ್‌ಎಲ್‌ಪಿಗಳು (ಲಿಮಿಟೆಡ್‌ ಲಾಯಬಿಲಿಟಿ ಪಾರ್ಟನರ್‌ಶಿಪ್)‌ ಮತ್ತು ಬಿಸಿನೆಸ್‌ ನಡೆಸುವವರು ಬಳಸಬಹುದು. ಟ್ರಸ್ಟ್‌ಗಳು, ರಾಜಕೀಯ ಪಕ್ಷಗಳು, ಚಾರಿಟೆಬಲ್‌ ಸಂಸ್ಥೆಗಳು ಐಟಿಆರ್‌ ಫಾರ್ಮ್‌ 7 ಅನ್ನು ಬಳಸಬಹುದು.

ಚಿನ್ನಾಭರಣ ಮಾರಾಟಕ್ಕೆ ಹಾಲ್‌ ಮಾರ್ಕ್‌ ಕಡ್ಡಾಯ

Gold Rate hits record high today May Reach Rs60000 mark next week

ಏಪ್ರಿಲ್‌ 1ರಿಂದ ಹಾಲ್‌ ಮಾರ್ಕ್‌ ಇಲ್ಲದ (Hallmark Unique Identification- HUID) ಆಭರಣಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ತಿಳಿಸಿದೆ. ಗ್ರಾಹಕರ ಹಿತದೃಷ್ಟಿಯಿಂದ ಮಾರ್ಚ್‌ 31ರ ಬಳಿಕ ಹಾಲ್‌ ಮಾರ್ಕ್‌ ರಹಿತ ಚಿನ್ನಾಭರಣಗಳ ಮಾರಾಟಕ್ಕೆ ಅನುಮತಿ ಇರುವುದಿಲ್ಲ ಎಂದು ಇಲಾಖೆ ಹೇಳಿದೆ. ಹೀಗಾಗಿ ಸಾರ್ವಜನಿಕರು ತಿಳಿದುಕೊಳ್ಳಬೇಕಾದ ಉಪಯುಕ್ತ ಮಾಹಿತಿ ಇಲ್ಲಿದೆ. ಈ ಹಿಂದೆ 4 ಅಂಕಿಗಳ ಎಚ್‌ಯುಐಡಿ ಬಳಸಲಾಗುತ್ತಿತ್ತು. ಈಗ 4 ಮತ್ತು 6 ಅಂಕಿಗಳನ್ನು ಬಳಸಲಾಗುತ್ತಿದೆ. ಆದರೆ ಮಾರ್ಚ್‌ 31ರ ಬಳಿಕ 6 ಅಂಕಿಗಳ ಕೋಡ್‌ ಮಾತ್ರ ಬಳಕೆಯಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Amit Shah: ಕರ್ನಾಟಕದಲ್ಲಿ ಇಂದು ಅಮಿತ್‌ ಶಾ, ಪ್ರಿಯಾಂಕಾ ವಾದ್ರಾ ಪ್ರಚಾರ; ಒಂದೇ ಕ್ಷೇತ್ರದಲ್ಲಿ ಕ್ಯಾಂಪೇನ್!‌

Amit Shah: ಕರ್ನಾಟಕದಲ್ಲಿ ಏಪ್ರಿಲ್‌ 26ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಬುಧವಾರ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇದಕ್ಕೂ ಮೊದಲು ಅಂದರೆ ಇಂದು (ಮಂಗಳವಾರ) ಕರ್ನಾಟಕದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಅವರು ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ.

VISTARANEWS.COM


on

Amit Shah
Koo

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ (Lok Sabha Election 2024) ಕಣವು ದಿನೇದಿನೆ ರಂಗೇರುತ್ತಿದೆ. ರಾಜ್ಯ ನಾಯಕರ ಜತೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಕೇಂದ್ರ ನಾಯಕರು ಕೂಡ ರಾಜ್ಯದಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಘಟಾನುಘಟಿ ನಾಯಕರು ಕರ್ನಾಟಕದಲ್ಲಿ (Karnataka) ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಇಂದು ಮಂಗಳವಾರ (ಏಪ್ರಿಲ್‌ 23) ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಹಾಗೂ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ (Priyanka Vadra) ಅವರು ಅಬ್ಬರದ ಪ್ರಚಾರ ಮಾಡಲಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿಯೇ ಮಂಗಳವಾರ ಅಮಿತ್‌ ಶಾ ಹಾಗೂ ಪ್ರಿಯಾಂಕಾ ವಾದ್ರಾ ಅವರು ಪ್ರಚಾರ ಮಾಡುತ್ತಿರುವುದು ವಿಶೇಷವಾಗಿದೆ. ಇಂದು ಸಂಜೆ 7.50ಕ್ಕೆ ಅಮಿತ್‌ ಶಾ ಅವರು ತೇಜಸ್ವಿ ಸೂರ್ಯ ಪರ ರೋಡ್‌ ಶೋ ನಡೆಸಲಿದ್ದಾರೆ. ಸ್ವಾಮಿ ವಿವೇಕಾನಂದ ವೃತ್ತದಿಂದ ಸೇಂಟ್‌ ಫ್ರಾನ್ಸಿಸ್‌ ಶಾಲೆವರೆಗೂ ಅಮಿತ್‌ ಶಾ ಅವರು ರೋಡ್‌ ಶೋ ನಡೆಸುವ ಮೂಲಕ ತೇಜಸ್ವಿ ಸೂರ್ಯ ಪರ ಮತಯಾಚನೆ ಮಾಡಲಿದ್ದಾರೆ. ರೋಡ್‌ ಶೋಗಾಗಿ ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. 8.45ರವರೆಗೆ ರೋಡ್‌ ಶೋ ನಡೆಯಲಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಇಂದು ಬೆಳಗ್ಗೆ 10 ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಪ್ರಿಯಾಂಕಾ ವಾದ್ರಾ ಅವರು ಭಾಷಣ ಮಾಡಲಿದ್ದಾರೆ. ಇದಾದ ನಂತರ ಸಂಜೆ ಬೆಂಗಳೂರಿಗೆ ಆಗಮಿಸುವ ಪ್ರಿಯಾಂಕಾ ವಾದ್ರಾ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರ ಪರವಾಗಿ ಪ್ರಚಾರ ನಡೆಸುವ ಮೂಲಕ ಹೆಣ್ಣುಮಕ್ಕಳ ಮತ ಸೆಳೆಯುವ ಪ್ರಯತ್ನ ಮಾಡಲಿದ್ದಾರೆ.

ಅಮಿತ್‌ ಶಾ ಅವರು ಬೊಮ್ಮನಹಳ್ಳಿ ವೃತ್ತದಿಂದ ಪ್ರಚಾರ ಆರಂಭಿಸಿದರೆ, ಪ್ರಿಯಾಂಕಾ ವಾದ್ರಾ ಅವರು ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಎಚ್.ಎಸ್. ಆರ್ ಬಡಾವಣೆಯಿಂದ ಪ್ರಚಾರ ಆರಂಭಿಸಲಿದ್ದಾರೆ. ಕರ್ನಾಟಕದಲ್ಲಿ ಏಪ್ರಿಲ್‌ 26ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಏಪ್ರಿಲ್‌ 24ರಂದೇ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಇದರಿಂದಾಗಿ ಮಂಗಳವಾರದ ಪ್ರಚಾರವು ಪ್ರಾಮುಖ್ಯತೆ ಪಡೆದಿದೆ. ಕರ್ನಾಟಕದಲ್ಲಿ ಈಗಾಗಲೇ ನರೇಂದ್ರ ಮೋದಿ ಅವರು ಪ್ರಚಾರ ನಡೆಸಿದ್ದಾರೆ.

ಇದನ್ನೂ ಓದಿ: Ranveer Singh: ಕಾಂಗ್ರೆಸ್‌ ಪರ ರಣವೀರ್‌ ಸಿಂಗ್‌ ಪ್ರಚಾರ? ಕೇಸ್‌ ದಾಖಲು

Continue Reading

ಅಂಕಣ

ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ರಾಜಮಾರ್ಗ ಅಂಕಣ: ಪುಸ್ತಕಗಳು ಜ್ಞಾನವನ್ನು ಉದ್ದೀಪನ ಮಾಡುವ ದೀಪಸ್ತಂಭಗಳು ಮಾತ್ರವಲ್ಲ, ಸ್ಫೂರ್ತಿ ನೀಡುವ ಮಾಧ್ಯಮಗಳು. ಗಾಂಧೀಜಿಯವರು ಬಾಲ್ಯದಲ್ಲಿ ಓದಿದ ಜಾನ್ ರಸ್ಕಿನ್ ಬರೆದ ‘ಆನ್ ಟು ದ ಲಾಸ್ಟ್ ‘ ಪುಸ್ತಕವು ತನ್ನ ಬದುಕಿನ ಗತಿಯನ್ನೇ ಬದಲಾವಣೆ ಮಾಡಿತು ಎಂದು ಹೇಳಿದ್ದಾರೆ.

VISTARANEWS.COM


on

reading rajamarga column
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಏಪ್ರಿಲ್ 23 – ಇಂದು ವಿಶ್ವ ಪುಸ್ತಕ ದಿನ (World book day). ಓದುವ (Reading) ಸುಖಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗೆಯೇ ಇಂದು ಖ್ಯಾತ ನಾಟಕಕಾರ ಶೇಕ್ಸ್‌ಪಿಯರ್ (Shakespeare) ಹುಟ್ಟಿದ ದಿನ ಕೂಡ. ಹಾಗೆಯೇ ಆತ ಮೃತಪಟ್ಟ ದಿನ ಕೂಡ ಇದೇ ಏಪ್ರಿಲ್ 23!

ಓದುವ ಸುಖಕ್ಕೆ ಬೆಲೆ ಕಟ್ಟಲು ಸಾಧ್ಯವೇ?

ಪುಸ್ತಕಗಳು ಜ್ಞಾನವನ್ನು ಉದ್ದೀಪನ ಮಾಡುವ ದೀಪಸ್ತಂಭಗಳು ಮಾತ್ರವಲ್ಲ, ಸ್ಫೂರ್ತಿ ನೀಡುವ ಮಾಧ್ಯಮಗಳು. ಗಾಂಧೀಜಿಯವರು ಬಾಲ್ಯದಲ್ಲಿ ಓದಿದ ಜಾನ್ ರಸ್ಕಿನ್ ಬರೆದ ‘ಆನ್ ಟು ದ ಲಾಸ್ಟ್ ‘ ಪುಸ್ತಕವು ತನ್ನ ಬದುಕಿನ ಗತಿಯನ್ನೇ ಬದಲಾವಣೆ ಮಾಡಿತು ಎಂದು ಹೇಳಿದ್ದಾರೆ. ಹಾಗೆಯೇ ಅವರು ರಷ್ಯನ್ ಲೇಖನ ಲಿಯೋ ಟಾಲ್ಸ್ಟಾಯ್ ಅವರ ಪುಸ್ತಕಗಳನ್ನು ಓದಿ ಪ್ರಭಾವಿತರಾದರು.

ಭಗತ್ ಸಿಂಗ್ ಅವರು ಲೆನಿನ್ ಬರೆದ ‘ಸ್ಟೇಟ್ ಆಂಡ್ ರಿವೊಲ್ಯುಶನ್’ ಪುಸ್ತಕವನ್ನು ಓದಿ ಸ್ಫೂರ್ತಿ ಪಡೆದೆ ಎಂದು ಹೇಳಿದ್ದಾರೆ. ಹೀಗೆ ಮಹಾಪುರುಷರು ಒಂದಲ್ಲ ಒಂದು ಪುಸ್ತಕಗಳಿಂದ ಪ್ರಭಾವಿತರಾದವರು .ಯಾವುದೇ ವ್ಯಕ್ತಿಯ ಬದುಕಿನ ಗತಿಯಲ್ಲಿ ಪ್ರಮುಖವಾದ ತಿರುವನ್ನು ತರುವ ಶಕ್ತಿಯು ಪುಸ್ತಕಗಳಿಗೆ ಇವೆ ಎಂದು ನೂರಾರು ಬಾರಿ ಸಾಬೀತು ಆಗಿದೆ.

ನನ್ನ ಬಾಲ್ಯದ ವಿಳಾಸ ಹೀಗೆ ಇತ್ತು – c/o ಲೈಬ್ರೆರಿ!

ನನಗೆ ಬಾಲ್ಯದಿಂದಲೂ ಓದುವ ಅನಿವಾರ್ಯ ವ್ಯಸನವನ್ನು ಅಂಟಿಸಿದವರು ನನ್ನ ಕನ್ನಡ ಶಾಲೆಯ ಅಧ್ಯಾಪಕರು. ಅವರು ತರಗತಿಯಲ್ಲಿ ಪಾಠವನ್ನು ಮಾಡುವಾಗ ಒಂದಲ್ಲ ಒಂದು ಪುಸ್ತಕದ ರೆಫರೆನ್ಸ್ ಕೊಡುತ್ತಿದ್ದರು. ಮತ್ತು ಸ್ಟಾಫ್ ರೂಮಿಗೆ ನಾವು ಹೋದಾಗ ಅದೇ ಪುಸ್ತಕವು ಅವರ ಟೇಬಲ್ ಮೇಲೆ ಸಿಂಗಾರಗೊಂಡು ಕೂತಿರುತಿತ್ತು. ನಾವು ಕೈಗೆ ಎತ್ತಿಕೊಂಡರೆ ‘ ಓದಿ ಹಿಂದೆ ಕೊಡು ಪುಟ್ಟ ‘ಎಂಬ ಮಾತು ತುಂಬ ಖುಷಿ ಕೊಡುತ್ತಿತ್ತು. ಹಾಗೆ ನಮ್ಮ ಕನ್ನಡ ಶಾಲೆಯ ಅಧ್ಯಾಪಕರಿಂದ ಆರಂಭವಾದ ನನ್ನ ಓದಿನ ವ್ಯಸನ ಇಂದಿನವರೆಗೂ ಮುಂದುವರೆದಿದೆ! ಈವರೆಗೆ ಸಾವಿರಾರು ಪುಸ್ತಕಗಳನ್ನು ಓದಿ ಮುಗಿಸಿದ್ದೇನೆ ಎನ್ನುವುದು ಅಭಿಮಾನದ ಮಾತು. ಈ ಓದು ನನ್ನ ಭಾಷೆ ಮತ್ತು ಚಿಂತನೆಯನ್ನು ಶ್ರೀಮಂತವಾಗಿ ಮಾಡಿತು.

ನನ್ನ ಬಾಲ್ಯ ಮತ್ತು ಯೌವ್ವನದ ಎಲ್ಲ ರಜೆಗಳು, ಸಂಜೆಗಳು ಕಳೆದದ್ದು ಕಾರ್ಕಳದ ವಿಸ್ತಾರವಾದ ಗ್ರಂಥಾಲಯದಲ್ಲಿ. ಹಾಗೆ ನನ್ನ ಗೆಳೆಯರು ನನ್ನನ್ನು C/O ಲೈಬ್ರೆರಿ ಎಂದು ತಮಾಷೆ ಮಾಡುತ್ತಿದ್ದರು.

ವಯಸ್ಸಿಗೆ ಸರಿಯಾದ ಪುಸ್ತಕಗಳ ಆಯ್ಕೆ

ನಮ್ಮ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಬಾಲ್ಯದಲ್ಲಿ ಮೂಡಿಸುವುದು ಹೆತ್ತವರ ಮತ್ತು ಶಿಕ್ಷಕರ ಹೊಣೆ. ನಮ್ಮ ಕೈಯ್ಯಲ್ಲಿ ಪುಸ್ತಕಗಳು ಇದ್ದರೆ ಮಕ್ಕಳಿಗೆ ಓದು ಓದು ಎಂದು ಹೇಳುವ ಅಗತ್ಯ ಬೀಳುವುದಿಲ್ಲ. ಆದರೆ ಮಕ್ಕಳ ವಯಸ್ಸಿಗೆ ಅನುಗುಣವಾದ ಪುಸ್ತಕಗಳನ್ನು ನೀಡಿ ಓದಿಸುವುದು ಅಗತ್ಯ. ಅದರ ಬಗ್ಗೆ ಒಂದಿಷ್ಟು ಸೂತ್ರಗಳು ಇಲ್ಲಿವೆ.

Book Reading Habit in Children

ಬಾಲ್ಯದ 5-8 ವರ್ಷ – ಕಲ್ಪನಾ ಲೋಕ

ಈ ವಯಸ್ಸು ಮಕ್ಕಳಲ್ಲಿ ರಚನಾತ್ಮಕ ಯೋಚನೆಗಳು ಮತ್ತು ಕಲ್ಪನೆಗಳು ಮೂಡುವ ಅವಧಿ. ಆ ವಯಸ್ಸಿನ ಮಕ್ಕಳಿಗೆ ಕಾಲ್ಪನಿಕವಾದ ಪ್ರಾಣಿ, ಪಕ್ಷಿಗಳ ಕಥೆ ಹೊಂದಿರುವ ಚಿತ್ರ ಪುಸ್ತಕಗಳು ( ಕಾಮಿಕ್ಸ್) ಹೆಚ್ಚು ಉಪಯುಕ್ತ. ಪಂಚತಂತ್ರದ ಕಥೆಗಳು, ಕಾಕೋಲುಕೀಯ, ಈಸೋಪನ ಕಥೆಗಳು ಈ ವಯಸ್ಸಿನ ಮಕ್ಕಳಿಗೆ ಸೂಕ್ತ. ರಾಷ್ಟ್ರೋತ್ಥಾನ ಪರಿಷತ್ ಹೊರತಂದಿರುವ ‘ಭಾರತ ಭಾರತೀ ‘ ಸರಣಿಯ ಸಾವಿರಾರು ಕಿರು ಪುಸ್ತಕಗಳು ಈ ವಯಸ್ಸಿನ ಮಕ್ಕಳಿಗೆ ಓದಲು ಚಂದ.

ಬಾಲ್ಯದ 9-12 ವರ್ಷ – ಕುತೂಹಲದ ಪರ್ವಕಾಲ

ಈ ವಯಸ್ಸಿನ ವಿದ್ಯಾರ್ಥಿಗಳು ಸೃಜನಶೀಲವಾಗಿ ಯೋಚನೆ ಮಾಡುತ್ತಾರೆ ಮತ್ತು ನೈತಿಕ ಮೌಲ್ಯಗಳನ್ನು ನಿಧಾನವಾಗಿ ಜೀರ್ಣ ಮಾಡಿಕೊಳ್ಳುತ್ತಾರೆ. ಅವರಿಗೆ ವಿಜ್ಞಾನಿಗಳ ಕಥೆಗಳು, ಸಿಂದಬಾದನ ಸಾಹಸದ ಕಥೆಗಳು, ರಾಮಾಯಣ, ಮಹಾಭಾರತದ ಕಿರು ಪುಸ್ತಕಗಳು ಹೆಚ್ಚು ಇಷ್ಟವಾಗುತ್ತವೆ. ಆ ಪುಸ್ತಕಗಳಲ್ಲಿ ಹೆಚ್ಚು ಚಿತ್ರಗಳು ಇದ್ದರೆ ಮಕ್ಕಳು ಖುಷಿಪಟ್ಟು ಓದುತ್ತಾರೆ.

ಹದಿಹರೆಯದ 12-15 ವರ್ಷ – ಸಣ್ಣ ಸಣ್ಣ ಕನಸು ಮೊಳೆಯುವ ವಯಸ್ಸು

ಸಣ್ಣ ಕತೆಗಳು ಹೆಚ್ಚು ಇಷ್ಟ ಆಗುವ ವಯಸ್ಸದು. ಸ್ಫೂರ್ತಿ ನೀಡುವ ವಿಕಸನದ ಲೇಖನಗಳು ಅವರಿಗೆ ಹೆಚ್ಚು ಇಷ್ಟವಾಗುತ್ತವೆ. ಎಡಿಸನ್ ತನ್ನ ಬಾಲ್ಯದ ಸಮಸ್ಯೆಗಳನ್ನು ಹೇಗೆ ಗೆದ್ದನು? ಅಬ್ರಹಾಂ ಲಿಂಕನ್ ಕಡುಬಡತನವನ್ನು ಮೆಟ್ಟಿ ಅಮೇರಿಕಾದ ಅಧ್ಯಕ್ಷ ಆದದ್ದು ಹೇಗೆ? ಮೊದಲಾದ ಸ್ಫೂರ್ತಿ ಆಧಾರಿತ ಕಥೆಗಳನ್ನು ಆ ವಯಸ್ಸಿನ ವಿದ್ಯಾರ್ಥಿಗಳು ಖುಶಿ ಪಟ್ಟು ಓದುತ್ತಾರೆ. ಹಾಗೆಯೇ ರಾಷ್ಟ್ರ ಪ್ರೇಮದ ಪುಸ್ತಕಗಳನ್ನು ಓದಲು ಆರಂಭ ಮಾಡಬೇಕಾದ ವಯಸ್ಸು ಇದು. ನಾನು ಒಂಬತ್ತನೇ ತರಗತಿಯಲ್ಲಿ ಓದಿದ ಬಾಬು ಕೃಷ್ಣಮೂರ್ತಿ ಅವರ ‘ ಅಜೇಯ ‘ ಪುಸ್ತಕವು ನನ್ನ ಬದುಕಿನಲ್ಲಿ ಭಾರೀ ಬದಲಾವಣೆ ತಂದಿತ್ತು. ಅದು ಖ್ಯಾತ ಕ್ರಾಂತಿಕಾರಿ ಚಂದ್ರಶೇಖರ್ ಆಝಾದ್ ಅವರ ಬದುಕಿನ ಪುಸ್ತಕ ಆಗಿದೆ.

15-18 ವಯಸ್ಸು – ಹುಚ್ಚು ಖೋಡಿ ಮನಸ್ಸು

ಈ ವಯಸ್ಸಿನ ವಿದ್ಯಾರ್ಥಿಗಳು ಸ್ವಲ್ಪ ಕುತೂಹಲ ಮತ್ತು ಹೆಚ್ಚು ಉಡಾಫೆ ಹೊಂದಿರುತ್ತಾರೆ. ಈ ವಯಸ್ಸಿನವರಿಗೆ ಹೆಚ್ಚು ಆಪ್ತವಾಗುವುದು ವಿಕಸನದ ಸ್ಫೂರ್ತಿ ನೀಡುವ ಲೇಖನಗಳೇ ಆಗಿವೆ. ಸಾಹಸ, ಪ್ರವಾಸ, ಸಂಶೋಧನೆ, ಸ್ವಲ್ಪ ರೋಮಾನ್ಸ್ ಇರುವ ಕತೆಗಳನ್ನು ಹೊಂದಿರುವ ಪುಸ್ತಕಗಳು ಅವರಿಗೆ ಹೆಚ್ಚು ಇಷ್ಟವಾಗುತ್ತವೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಣ್ಣ ಕತೆಗಳು, ಪೂರ್ಣಚಂದ್ರ ತೇಜಸ್ವಿ ಅವರ ರಂಜನೆ ಕಡಿಮೆ ಇರುವ ಕಥೆಗಳ ಪುಸ್ತಕಗಳನ್ನು ಅವರಿಗೆ ಕೊಟ್ಟು ನೋಡಿ. ಡುಂಡಿರಾಜರ ಹನಿಗವನಗಳು ಈ ವಯಸ್ಸಿನ ಓದುಗರಿಗೆ ತುಂಬ ಇಷ್ಟ ಆಗುತ್ತವೆ.

20-24 ವಯಸ್ಸು – ಯೌವ್ವನದ ಕಚಗುಳಿ

ಕಾಲೇಜು ಹಂತದ ವಿದ್ಯಾರ್ಥಿಗಳು ಭ್ರಮೆಯಿಂದ ಹೊರಬಂದು ವಾಸ್ತವದ ನೆಲೆಗಟ್ಟಿನ ಚಿಂತನೆಗಳನ್ನು ಹೊಂದಿರುತ್ತಾರೆ. ಕುವೆಂಪು, ಕಾರಂತ, ಭೈರಪ್ಪ, ರವೀ ಬೆಳಗೆರೆ…….ಮೊದಲಾದವರ ಗಂಭೀರ ಚಿಂತನೆ ಹೊಂದಿರುವ ಮತ್ತು ವಾಸ್ತವದ ನೆಲೆಗಟ್ಟಿನ ಕಾದಂಬರಿಗಳನ್ನು ಈ ವಯಸ್ಸಿನಲ್ಲಿ ಓದಲು ಆರಂಭ ಮಾಡಬೇಕು. ಹಾಗೆಯೇ ಆತ್ಮಚರಿತ್ರೆಯ ಪುಸ್ತಕಗಳನ್ನು ಓದಲು ಆರಂಭಿಸಬೇಕಾದ ವಯಸ್ಸು ಇದು. ಅಬ್ದುಲ್ ಕಲಾಂ ಅವರ ಅಗ್ನಿಯ ರೆಕ್ಕೆಗಳು ಮತ್ತು ಪ್ರಜ್ವಲಿಸುವ ಮನಸುಗಳು ಇವೆರಡು ಪುಸ್ತಕಗಳನ್ನು ಈ ವಯಸ್ಸಿನ ವಿದ್ಯಾರ್ಥಿಗಳಿಗೆ ಉಡುಗೊರೆಯಾಗಿ ಕೊಟ್ಟರೆ ಅವರು ತುಂಬಾ ಖುಷಿ ಪಡುತ್ತಾರೆ. ಷಡಕ್ಷರಿ ಅವರ ‘ ಕ್ಷಣ ಹೊತ್ತು ಆಣಿ ಮುತ್ತು ‘ ಅಂಕಣಗಳು ಮತ್ತು ಪ್ರತಾಪ ಸಿಂಹ ಅವರ ‘ಬೆತ್ತಲೆ ಜಗತ್ತು ‘ ಅಂಕಣಗಳು ಹೆಚ್ಚು ಖುಷಿ ಕೊಡುವ ವಯಸ್ಸು ಅದು.

25-28 ವಯಸ್ಸು – ಬದುಕಿನ ಸೌಂದರ್ಯದ ವಸಂತ ಕಾಲ

ಮನಸ್ಸು ಮಾಗಿ ಪ್ರಬುದ್ಧತೆಯು ಮೂಡುವ ಈ ವಯಸ್ಸಲ್ಲಿ ಬದುಕಿನ ಸೌಂದರ್ಯದ ಅನುಭೂತಿ ಮೂಡಿಸುವ ತ್ರಿವೇಣಿ, ಸಾಯಿಸುತೆ, ಅನಕೃ, ದೇವುಡು, ತರಾಸು, ನಾ ಡಿಸೋಜಾ ಅವರ ಕಾದಂಬರಿಗಳು ಹೆಚ್ಚು ಆಪ್ತವಾಗುತ್ತವೆ. ಭಾವಗೀತೆಗಳ ಓದು ಖುಷಿ ಕೊಡುತ್ತದೆ. ಸೋತವರ ಕಥೆಗಳು ಹೆಚ್ಚು ಆಪ್ತವಾಗುತ್ತವೆ. ಕಾದಂಬರಿಯ ಓದು ಹೆಚ್ಚು ತಾಳ್ಮೆಯನ್ನು ಬೇಡುತ್ತದೆ. ಆದರೂ ಒಮ್ಮೆ ಅವರು ಓದುವ ಅಭಿರುಚಿ ರೂಢಿಸಿಕೊಂಡರೆ ಅವರು ಅಂತಹ ಪುಸ್ತಕಗಳನ್ನು ಪ್ರೀತಿ ಮಾಡಲು ತೊಡಗುತ್ತಾರೆ.

ಭರತ ವಾಕ್ಯ

ನನ್ನಂತಹ ಭಾಷಣಕಾರ ಮತ್ತು ತರಬೇತಿದಾರನನ್ನು ಜೀವಂತ ಆಗಿಡುವುದೇ ಪುಸ್ತಕಗಳು ಮತ್ತು ಪುಸ್ತಕಗಳು! ಸಾಮಾಜಿಕ ಜಾಲತಾಣಗಳ ಕಾರಣಕ್ಕೆ ಓದುಗರ ಸಂಖ್ಯೆ ಕಡಿಮೆ ಆಗಿದೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಅದು ಪೂರ್ತಿ ನಿಜವಲ್ಲ.

ವಿಶ್ವ ಪುಸ್ತಕ ದಿನವಾದ ಇಂದು ನೀವು ನಿಮ್ಮ ಮಕ್ಕಳಲ್ಲಿ ಓದುವ ಸಂಕಲ್ಪ ಹುಟ್ಟಿಸಿದಿರಿ ಅಂತಾದರೆ ಅದು ಸಾರ್ಥಕ ಹೆಜ್ಜೆ ಆಗುತ್ತದೆ. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್!

Continue Reading

ಭವಿಷ್ಯ

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ ಹುಣ್ಣಿಮೆ ದಿನವಾದ ಇಂದು ದ್ವಾದಶಿ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ತುಲಾ ರಾಶಿಯಿಂದ ಮಂಗಳವಾರ ಬೆಳಗ್ಗೆ 11:19ಕ್ಕೆ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ , ವೃಷಭ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ಸಿಗಲಿದೆ. ಇಂದಿನ ದಿನ ಭವಿಷ್ಯವನ್ನು (Kannada Dina Bhavishya) ನೋಡುವುದಾದರೆ, ಮೇಷ ರಾಶಿಯವರಿಗೆ ಉತ್ಸಾಹದ ವಾತಾವರಣ ತುಂಬಿರಲಿದೆ. ಆಪ್ತರೊಂದಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಭರವಸೆಯ ಹೊಸ ಅವಕಾಶಗಳು ಸಿಗಲಿದೆ. ವೃಷಭ ರಾಶಿಯವರಿಗೆ ಬಂಧು ಮಿತ್ರರಿಂದ ಸಹಕಾರ ಸಿಗಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸಿ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (23-04-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ.
ತಿಥಿ: ಹುಣ್ಣಿಮೆ 29:17 ವಾರ: ಮಂಗಳವಾರ
ನಕ್ಷತ್ರ: ಚಿತ್ತಾ 22:31 ಯೋಗ: ವಜ್ರ 28:55
ಕರಣ: ವಿಷ್ಟಿ (ಭದ್ರ) 16:24 ಅಮೃತಕಾಲ: ಮಧ್ಯಾಹ್ನ 03:27 ರಿಂದ 05:14
ದಿನದ ವಿಶೇಷ: ಚಿತ್ತ ಹುಣ್ಣಿಮೆ (ಚೈತ್ರ ಹುಣ್ಣಿಮೆ) ಬೆಂಗಳೂರು ಕರಗ

ಸೂರ್ಯೋದಯ : 06:03   ಸೂರ್ಯಾಸ್ತ : 06:33

ರಾಹುಕಾಲ : ಮಧ್ಯಾಹ್ನ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಉತ್ಸಾಹದ ವಾತಾವರಣ ತುಂಬಿರಲಿದೆ. ಆಪ್ತರೊಂದಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಭರವಸೆಯ ಹೊಸ ಅವಕಾಶಗಳು ಸಿಗಲಿದೆ. ವ್ಯಾಪಾರ ವ್ಯವಹಾರಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ವೃಷಭ: ಬಂಧು ಮಿತ್ರರಿಂದ ಸಹಕಾರ ಸಿಗಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸಿ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 5

Horoscope Today

ಮಿಥುನ: ಸಂತಸದ ಕ್ಷಣಗಳನ್ನು ಕಳೆಯುವಿರಿ. ಆರ್ಥಿಕ ಪ್ರಗತಿ ಇರಲಿದೆ. ಬಹಳ ದಿನಗಳ ಬಾಕಿ ಇರುವ ಕಾರ್ಯವು ಪೂರ್ಣವಾಗುವುದು. ಮನೆಯಲ್ಲಿ ಪರಸ್ಪರ ಸಹಕಾರ ಸಿಗುವುದು, ಉತ್ಸಾಹದ ದಿನವಿದು. ಅದೃಷ್ಟ ಸಂಖ್ಯೆ: 3

Horoscope Today

ಕಟಕ: ಆಕರ್ಷಕ ವ್ಯಕ್ತಿತ್ವ ಹೊಂದಿರುವ ನೀವು ಇಂದು ಇತರರನ್ನು ಆಕರ್ಷಿಸುವಿರಿ. ಆರ್ಥಿಕ ಪ್ರಗತಿ ಸಾಧಾರಣವಾಗಿದ್ದರೂ, ಸಮರ್ಥವಾಗಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಪ್ರಗತಿ ಇರಲಿದೆ. ಮಡದಿಯ ಪ್ರೀತಿಗೆ ಸೋಲುವಿರಿ. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 7

Horoscope Today

ಸಿಂಹ: ಉದ್ಯೋಗ ಅಪೇಕ್ಷಿತರಿಗೆ ಇಂದು ಉದ್ಯೋಗದ ಭರವಸೆ ಸಿಗಲಿದೆ. ಆರ್ಥಿಕ ಪ್ರಗತಿ ಇರಲಿದೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಮನೆಯವರ ಪ್ರೀತಿ ಸಹಕಾರ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿ. ಅದೃಷ್ಟ ಸಂಖ್ಯೆ: 5

Horoscope Today

ಕನ್ಯಾ: ಮನೆಯಲ್ಲಿ ಕಲಹದಿಂದ ವಾತಾವರಣ ಹದಗೆಡಬಹುದು. ಕೆಲಸದಲ್ಲಿ ಹಿರಿಯರಿಂದ ಒತ್ತಡ ಇರಲಿದೆ, ಎಚ್ಚರಿಕೆ ವಹಿಸಿ. ಆರ್ಥಿಕ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಯಾವುದೇ ಹೂಡಿಕೆ ಮಾಡಬೇಡಿ. ಬಂಧು ಮಿತ್ರರಿಂದ ಸಹಕಾರ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಮನೆಯಲ್ಲಿಂದು ಸಂತೋಷದ ದಿನ. ಅದೃಷ್ಟ ಸಂಖ್ಯೆ: 8

Horoscope Today

ವೃಶ್ಚಿಕ: ಮಿತ್ರರಿಂದ ಸಹಕಾರ ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಹೊಂದಲು ಹಿರಿಯರು ಮಾರ್ಗದರ್ಶನ ಮಾಡುವುರು. ಧೈರ್ಯದಿಂದ ಕಾರ್ಯದಲ್ಲಿ ಮುನ್ನುಗ್ಗಿ ಯಶಸ್ಸು ಸಿಗುವುದು. ಕುಟುಂಬದಲ್ಲಿ ನೆಮ್ಮದಿ. ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಕುಟುಂಬ ಸದಸ್ಯರ ಆರೋಗ್ಯ ಸಂಬಂಧಿ ವಿಷಯಗಳು ತಮಗೆ ಒತ್ತಡ ಉಂಟುಮಾಡಬಹುದು. ಉದಾಸೀನತೆ ಮಾಡುವುದು ಬೇಡ. ಆಶಾವಾದಿಗಳಾಗಿರಿ ಕುಲದೇವರನ್ನು ಸ್ಮರಿಸಿ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

Horoscope Today

ಮಕರ: ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಆಲಸ್ಯದಿಂದ ದೂರವಿದ್ದು ಕಾರ್ಯ ಪೂರ್ಣ ಮಾಡಿ. ಕೆಲಸದ ಒತ್ತಡದಿಂದ ಮನೆಯ ಸದಸ್ಯರ ಮೇಲೆ ಹಾಕಿ, ವಾತಾವರಣ ಹದಗೆಡಲು ಕಾರಣವಾಗಬೇಡಿ. ಗುರುಗಳ ಆರಾಧನೆ ಮಾಡಿ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

Horoscope Today

ಕುಂಭ: ಭೂ ಸಂಬಂಧಿ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಬಹಳ ದಿನಗಳ ಕನಸು ನನಸಾಗುವ ಕಾಲ ಕೂಡಿ ಬರುವುದು. ಅನ್ಯರು ಆಡುವ ಕುಹುಕು ಮಾತುಗಳಿಗೆ ಧ್ವನಿಯಾಗಬೇಡಿ. ಕುಟುಂಬದಲ್ಲಿ ನೆಮ್ಮದಿ. ಅದೃಷ್ಟ ಸಂಖ್ಯೆ: 3

Horoscope Today

ಮೀನ: ನಿಮ್ಮ ಮಹತ್ವಾಕಾಂಕ್ಷೆಯ ಕೆಲಸ ಕಾರ್ಯಗಳು ಕುಂಠಿತವಾಗುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ. ಆರ್ಥಿಕ ನಷ್ಟದಿಂದ ತಪ್ಪಿಸಿಕೊಳ್ಳಿ. ಸಂಗಾತಿಯ ಮಾತುಗಳು ಹಿತವೆನಿಸುವುದು. ಕುಟುಂಬದಲ್ಲಿ ನೆಮ್ಮದಿ.
ಅದೃಷ್ಟ ಸಂಖ್ಯೆ: 9

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಕ್ರೀಡೆ

IPL 2024 : ಮುಂಬೈ ವಿರುದ್ಧ ರಾಜಸ್ಥಾನ್​ ತಂಡಕ್ಕೆ 9 ವಿಕೆಟ್​ ಅಮೋಘ​ ಗೆಲುವು

IPL 2024 : ಟಾಸ್​ ಗೆದ್ದ ಮುಂಬೈ ತಂಡ ಮೊದಲು ಬ್ಯಾಟ್​ ಮಾಡಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 179 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನ್ನೂ 8 ಎಸೆತಗಳು ಉಳಿದಿರುವಂತೆಯೇ 1 ವಿಕೆಟ್ ನಷ್ಟಕ್ಕೆ 183 ರನ್ ಬಾರಿಸಿ ಗೆಲುವು ಕಂಡಿತು.

VISTARANEWS.COM


on

IPL 2024
Koo

ಜೈಪುರ: ಫಾರ್ಮ್​ಗೆ ಮರಳಿದ ಯಶಸ್ವಿ ಜೈಸ್ವಾಲ್ ಅವರ ಅಬ್ಬರದ ಶತಕ (104 ರನ್, 60 ಎಸೆತ, 9 ಫೋರ್, 7 ಸಿಕ್ಸರ್​) ಬ್ಯಾಟಿಂಗ್ ಹಾಗೂ ಸಂದೀಪ್​ ಶರ್ಮಾ (4 ಓವರ್, 18 ರನ್, 5 ವಿಕೆಟ್​​) ಅವರ ಮಾರಕ ಬೌಲಿಂಗ್ ದಾಳಿಯಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್​ ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 38ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 9 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿದೆ. ಈ ಗೆಲುವು ಆರ್​ಆರ್​ ತಂಡಕ್ಕೆ ಸತತ ಮೂರು ಹಾಗೂ ಒಟ್ಟು ಏಳನೇ ವಿಜಯವಾಗಿದೆ. ಹೀಗಾಗಿ ಪ್ಲೇಆಫ್ ಹಂತಕ್ಕೆ ಬಹುತೇಕ ಏರಿದೆ. ಅತ್ತ ಮುಂಬೈ ತಂಡ ಟೂರ್ನಿಯಲ್ಲಿ ಐದನೇ ಸೋಲಿಗೆ ಒಳಗಾಗಿದೆ. ಹೀಗಾಗಿ ಪ್ಲೇಆಫ್​ ಪ್ರವೇಶದ ಹಾದಿ ದುರ್ಗಮ ಎನಿಸಿದೆ.

ಇಲ್ಲಿನ ಸವಾಯ್​ ಮಾನ್​ಸಿಂಗ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ತಂಡ ಮೊದಲು ಬ್ಯಾಟ್​ ಮಾಡಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 179 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನ್ನೂ 8 ಎಸೆತಗಳು ಉಳಿದಿರುವಂತೆಯೇ 1 ವಿಕೆಟ್ ನಷ್ಟಕ್ಕೆ 183 ರನ್ ಬಾರಿಸಿ ಗೆಲುವು ಕಂಡಿತು.

ಯಶಸ್ವಿ ಶತಕದ ಮುಂದೆ ಮಂಕಾದ ಮುಂಬೈ ಬೌಲರ್​ಗಳು

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆರ್​ಆರ್​ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ನೆರವಾದರು. ಬಟ್ಲರ್​ 25 ಎಸೆತಕ್ಕೆ 35 ರನ್ ಬಾರಿಸ ಔಟಾದರೆ ಜೈಸ್ವಾಲ್ ಅಮೋಘ ಪ್ರದರ್ಶನ ನೀಡಿ 60 ಎಸೆತಕ್ಕೆ ಅಜೇಯ 104 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ನಾಯಕ ಸಂಜು ಸ್ಯಾಮ್ಸನ್​ 28 ಎಸೆತಕ್ಕೆ 38 ರನ್​ ಬಾರಿಸಿ ಕೊನೇ ತನಕ ಉಳಿದರು.

ಸಂದೀಪ್​ ಮಾರಕ ದಾಳಿಗೆ ಬೆಚ್ಚಿ ಬಿದ್ದ ಮುಂಬೈ

ಬದಲಿ ಆಟಗಾರನಾಗಿ ಆರ್​ಆರ್​ ಬಳಗ ಸೇರಿದ್ದ ಸಂದೀಪ್​ ಶರ್ಮಾ ಆರ್​ಆರ್​ ಪರ ಮಾರಕ ಬೌಲಿಂಗ್ ದಾಳಿ ಸಂಘಟಿಸಿದರು. ಅದಕ್ಕೆ ಬೆಚ್ಚಿ ಬಿದ್ದ ಮುಂಬೈ ತಂಡ ಆರಂಭದಲ್ಲಿಯೇ ಸತತವಾಗಿ ವಿಕೆಟ್​ ಕಳೆದುಕೊಂಡಿತು. ರೋಇತ್ ಶರ್ಮಾ 6 ರನ್ ಬಾರಿಸಿದರೆ ಇಶಾನ್ ಕಿಶನ್​ ಶೂನ್ಯಕ್ಕೆ ಔಟಾದರು. ಸೂರ್ಯಕುಮಾರ್ ಯಾದವ್​ 10 ರನ್​ಗೆ ಔಟಾಗಿ ನಿರ್ಗಮಿಸಿದರು. 20 ರನ್​ಗೆ 3 ವಿಕೆಟ್​ ಕಳೆದುಕೊಂಡ ಮುಂಬಯಿ ಸಂಕಷ್ಟಕ್ಕೆ ಬಿತ್ತು.

ಇದನ್ನೂ ಓದಿ: Hardik Pandya : ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್​​ನಲ್ಲಿ ಮತ್ತೆ ವಿಫಲ; ಬೆಂಡೆತ್ತಿದ ಅಭಿಮಾನಿಗಳು

ಈ ವೇಳೆ ಆಡಲು ಬಂದ ತಿಲಕ್ ವರ್ಮಾ ಅಬ್ಬರದಿಂದ ಬ್ಯಾಟ್ ಬೀಸಿದರು. ಏತನ್ಮಧ್ಯೆ ಐದನೇ ಕ್ರಮಾಂಕದಲ್ಲಿ ಆಡಿದ ನಬಿ 23 ರನ್ ಬಾರಿಸಿ ತಂಡದ ಮೊತ್ತ ಹೆಚ್ಚಿಸಿದರು. ಆದರೆ ಆ ಬಳಿಕ ಅವಕಾಶ ಪಡೆದ ನೇಹಲ್ ವದೇರಾ 24 ಎಸೆಗಳಿಗೆ 49 ರನ್ ಬಾರಿಸಿದರು. ಈ ಹಂತದಲ್ಲಿ ಮುಂಬೈ 200 ರನ್​​ಗಳ ಗಡಿ ದಾಟುವ ಅವಕಾಶ ಸೃಷ್ಟಿಸಿತು. ಅದರೆ, ಆ ಬಳಿಕ ಬಂದ ಪಾಂಡ್ಯ ಎಸೆತಕ್ಕೆ ಒಂದು ರನ್​ಗಳಂತೆ 10 ರನ್​ಗೆ ಔಟಾದರು. ಅವರ ವೈಫಲ್ಯ ಉಳಿದವರಿಗೂ ತಟ್ಟಿತು. ಟಿಮ್ ಡೇವಿಡ್ 3 ರನ್ ಬಾರಿಸಿ ಔಟಾದರು. ಕೊನೇ ಓವರ್​ನಲ್ಲಿ ಸಂದೀಪ್ ಶರ್ಮಾ 3 ವಿಕೆಟ್ ಪಡೆದು ಐದು ವಿಕೆಟ್ ಸಾಧನೆ ಮಾಡಿದರು.

Continue Reading
Advertisement
Drought In Karnataka
ಬೆಳಗಾವಿ23 mins ago

Drought In Karnataka : ಭೀಕರ ಬರ; ಆಹಾರ ಸಿಗದೆ ಪ್ಲಾಸ್ಟಿಕ್, ನಟ್ಟು ಬೋಲ್ಟು ತಿನ್ನುತ್ತಿರುವ ಹಸುಗಳು!

Vastu Tips
ಲೈಫ್‌ಸ್ಟೈಲ್28 mins ago

Vastu Tips: ಸುಖ, ಶಾಂತಿ, ಸಮೃದ್ಧಿಗಾಗಿ ಹೀಗಿರಲಿ ಮನೆಯ ಕಿಟಕಿ, ಬಾಗಿಲು

Karun Nair
ಕ್ರೀಡೆ33 mins ago

Karun Nair: ತ್ರಿಶತಕ ಬಾರಿಸಿದರೂ ಭಾರತ ತಂಡದಲ್ಲಿ ಕಡೆಗಣನೆ; ಕೌಂಟಿಯಲ್ಲಿ ದ್ವಿಶತಕ ಬಾರಿಸಿದ ಕರುಣ್ ನಾಯರ್

OM Puri
ಬಾಲಿವುಡ್54 mins ago

OM Puri: ಹೊಟ್ಟೆಪಾಡಿಗಾಗಿ ಚಹಾ ಅಂಗಡಿಯಲ್ಲಿ ಲೋಟ ತೊಳೆಯುತ್ತಿದ್ದರು ಈ ಹೆಸರಾಂತ ನಟ!

malasia helicopter crash viral video
ವೈರಲ್ ನ್ಯೂಸ್1 hour ago

Viral video: ಸೇನಾ ಹೆಲಿಕಾಪ್ಟರ್‌ಗಳ ಭಯಾನಕ ಡಿಕ್ಕಿ; 10 ಸಾವು

CSK vs LSG
ಕ್ರೀಡೆ2 hours ago

CSK vs LSG: ಇಂದಿನ ಲಕ್ನೋ-ಚೆನ್ನೈ ಪಂದ್ಯಕ್ಕೆ ಮಳೆ ಭೀತಿ

Bengaluru Karaga
ಬೆಂಗಳೂರು2 hours ago

Bengaluru Karaga: ಇಂದು ರಾತ್ರಿ ಕರಗ ಮಹೋತ್ಸವ; ವಾಹನ ಸವಾರರೇ ಬೇರೆ ದಾರಿ ಕಂಡುಕೊಳ್ಳಿ

Rohit Sharma
ಕ್ರೀಡೆ2 hours ago

Rohit Sharma: ರೋಹಿತ್​ ಕೆನ್ನೆಗೆ ಕಿಸ್​ ಕೊಡಲು ಬಂದ ರಾಜಸ್ಥಾನ್​ ಕೋಚ್​; ವಿಡಿಯೊ ವೈರಲ್

Amit Shah
ಕರ್ನಾಟಕ3 hours ago

Amit Shah: ಕರ್ನಾಟಕದಲ್ಲಿ ಇಂದು ಅಮಿತ್‌ ಶಾ, ಪ್ರಿಯಾಂಕಾ ವಾದ್ರಾ ಪ್ರಚಾರ; ಒಂದೇ ಕ್ಷೇತ್ರದಲ್ಲಿ ಕ್ಯಾಂಪೇನ್!‌

bolero hit 3 death road accident raichur
ರಾಯಚೂರು3 hours ago

Road Accident: ನೀರು ತರುತ್ತಿದ್ದ ಹನುಮ ಮಾಲಾಧಾರಿಗಳಿಗೆ ಬೊಲೆರೋ ಡಿಕ್ಕಿ, 3 ಸಾವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು18 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ19 hours ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು22 hours ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು24 hours ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ1 day ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌