Site icon Vistara News

17 ವರ್ಷದ ವಿದ್ಯಾರ್ಥಿಯ ಜತೆ 30 ಸಲ ಸೆಕ್ಸ್‌ ಮಾಡಿದ ಶಿಕ್ಷಕಿ; ಮುಂದೇನಾಯ್ತು ಅನ್ನೋದೇ ರೋಚಕ!

Teacher

Married teacher jailed for sexual assault of student 30 times

ವಾಷಿಂಗ್ಟನ್: ತಂದೆ-ತಾಯಿಯ ನಂತರದ ಸ್ಥಾನವನ್ನು ಗುರುವಿಗೆ ಕೊಡುತ್ತೇವೆ. ಗುರುವನ್ನೇ ತಂದೆಯ ಸ್ಥಾನದಲ್ಲಿಟ್ಟು ನೋಡುವವರು ಇದ್ದಾರೆ. ಇನ್ನು ಗುರು ಎನಿಸಿಕೊಂಡವರೂ ಅಷ್ಟೇ, ಶಿಷ್ಯಂದಿರು ಮಾಡಿದ ತಪ್ಪನ್ನು ಮನ್ನಿಸಿ, ದಾರಿ ತಪ್ಪಿದಾಗ ಮಾರ್ಗದರ್ಶನ ನೀಡಿ, ಅವರನ್ನು ಸರಿದಾರಿಗೆ ತರಬೇಕು. ಅಂತಹ ಗುರುಗಳು ಇರುವ ಕಾರಣಕ್ಕಾಗಿಯೇ ಆಧುನಿಕ ಕಾಲದಲ್ಲೂ ಗುರುಗಳ ಮೇಲೆ ಗೌರವ ಇದೆ. ಆದರೆ, ಅಮೆರಿಕದಲ್ಲಿ ಶಿಕ್ಷಕಿಯೊಬ್ಬಳು ಗುರುವಿನ ಪದಕ್ಕೇ ಕಳಂಕ ತರುವ ಕೆಲಸ ಮಾಡಿದ್ದಾಳೆ. 17 ವರ್ಷದ ವಿದ್ಯಾರ್ಥಿಯ ಜತೆ 30 ಬಾರಿ ಸೆಕ್ಸ್‌ ಮಾಡುವ ಮೂಲಕ ಈಗ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ.

ಹೌದು, ಅರ್ಕನಾಸ್‌ನಲ್ಲಿರುವ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಹೀದರ್‌ ಕೇರ್‌ ಎಂಬ ಶಿಕ್ಷಕಿಯು ಇಂತಹ ಹೀನ ಕೃತ್ಯ ಎಸೆಗಿದ್ದಾರೆ. ಮದುವೆಯಾಗಿ, ಇಬ್ಬರು ಮಕ್ಕಳಿರುವ ಹೀದರ್‌ ಕೇರ್‌, ವಾಷಿಂಗ್ಟನ್‌ ಡಿಸಿಗೆ ಪ್ರವಾಸಕ್ಕೆ ಹೋದಾಗ 17 ವರ್ಷದ ವಿದ್ಯಾರ್ಥಿಯ ಜತೆ ಸೆಕ್ಸ್‌ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಸುದ್ದಿವಾಹಿನಿಯೊಂದರಲ್ಲಿ ಲೈವ್‌ ಬಂದಿದ್ದ ಶಿಕ್ಷಕಿಯು, ವಿದ್ಯಾರ್ಥಿಗಳಿಗೆ ಗುಡ್‌ ಬೈ ಹೇಳಿ ಭಾರಿ ಸುದ್ದಿಯಾಗಿದ್ದಾರೆ. ಇದಾದ ಕೆಲ ವರ್ಷಗಳಲ್ಲಿ ಶಿಕ್ಷಕಿಯ ಕರಾಳ ಮುಖ ಬಯಲಾಗಿದೆ.

2021-22ರಲ್ಲಿ ತರಗತಿಯ ಮಕ್ಕಳೊಂದಿಗೆ ಹೀದರ್‌ ಹೇರ್‌ ಅವರು ವಾಷಿಂಗ್ಟನ್‌ ಡಿಸಿಗೆ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ, ಜೆ.ಆರ್.‌ ಎಂಬ 17 ವರ್ಷದ ವಿದ್ಯಾರ್ಥಿಗೆ ಆಕೆ ಮೊದಲ ಬಾರಿಗೆ ಲೈಂಗಿಕ ಕಿರುಕುಳ ಮಾಡಿದ್ದಾರೆ. ಆತನ ಜತೆ ಸೆಕ್ಸ್‌ ಮಾಡಿದ ಬಳಿಕ ಪದೇಪದೆ ಸೆಕ್ಸ್‌ ಮಾಡುವಂತೆ ಒತ್ತಾಯಿಸಿದ್ದಾರೆ. ಶಿಕ್ಷಕಿಯು ವಿದ್ಯಾರ್ಥಿಯ ಜತೆ ಪಾರ್ಕ್‌, ಕಾರು, ಮನೆ, ಸ್ಕೂಲ್‌ ಪಾರ್ಕಿಂಗ್‌, ತರಗತಿಯ ಕೊಠಡಿಯಲ್ಲಿಯೇ ಸೆಕ್ಸ್‌ ಮಾಡಿದ್ದಾರೆ ಎಂಬ ಭೀಕರ ಮಾಹಿತಿಯು ಬಹಿರಂಗವಾಗಿದೆ.

ಹಾಗಾಗಿ, ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾರಣದಿಂದ ನ್ಯಾಯಾಲಯವು ಹೈದರ್‌ ಹೇರ್‌ ಅವರಿಗೆ 13 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರವಾಸಕ್ಕೆ ಹೋಗುವ ಮೊದಲೇ ಬಾಲಕನ ಜತೆ ಸೆಕ್ಸ್‌ ಮಾಡುವ ಕುರಿತು ಟೀಚರ್‌ ಹೇಳಿದ್ದರು. ಇದಕ್ಕೆ ಬಾಲಕನು ಒಪ್ಪಿರಲಿಲ್ಲ. ಆದರೆ, ಬಲವಂತವಾಗಿ ಹೋಟೆಲ್‌ ರೂಮ್‌ಗೆ ಕರೆಸಿಕೊಂಡು, ಸೆಕ್ಸ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ಬಳಿಕ ಬಾಲಕನು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಆತನ ಜತೆ ಆಪ್ತ ಸಮಾಲೋಚನೆ ನಡೆಯುತ್ತಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Salman Khan: ʻಅಲ್ಟಿಮೇಟ್ ಸೆಕ್ಸ್ ಸಿಂಬಲ್ʼ ನನ್ನ ಗಂಡ ಅಲ್ಲ, ಅದು ಸಲ್ಮಾನ್‌ ಖಾನ್‌ ಎಂದಳು ಖ್ಯಾತ ನಟಿ!

Exit mobile version