ಇಸ್ಲಮಾಬಾದ್: ಭಾರತದ ಜೊತೆ ಮಾಡಿಕೊಂಡಿದ್ದ 1999 ಲಾಹೋರ್ ಒಪ್ಪಂದ(1999 Lahore Declaration)ವನ್ನು ಪಾಕಿಸ್ತಾನವೇ ಮುರಿದಿತ್ತು. ಅದು ನಮ್ಮ ಅತಿ ದೊಡ್ಡ ತಪ್ಪಾಗಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್(Nawaz Sharif) ಬಹಿರಂಗ ಹೇಳಿಕೆ ನೀಡಿದ್ದಾರೆ. ಆ ಮೂಲಕ ಕಾರ್ಗಿಲ್ ಯುದ್ಧ(Kargil War) ಜನರಲ್ ಫರ್ವೇಜ್ ಮುಷಾರಫ್(Pervez Musharraf) ಕುಕೃತ್ಯ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ(Viral Video)ದಲ್ಲಿ ಬಹಳ ಸದ್ದು ಮಾಡುತ್ತಿದೆ.
ತಮ್ಮ ಪಾಕಿಸ್ತಾನ ಮುಸ್ಲಿಂ ಲೀಗ್(N) ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ನವಾಜ್ ಷರೀಫ್, ಮೇ 28, 1998,ರಂದು ಪಾಕಿಸ್ತಾನ ಐದು ಅಣು ಬಾಂಬ್ ಪರೀಕ್ಷೆ ನಡೆಸಿತ್ತು. ಇದಾದ ಬಳಿಕ ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಲ್ಲಿಗೆ ಬಂದು ನಮ್ಮ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಾವು ಮಾತ್ರ ಆ ಒಪ್ಪಂದವನ್ನು ಮುರಿದೆವು.ಅದು ನಮ್ಮ ಅತಿ ದೊಡ್ಡ ತಪ್ಪು ಎಂದರು.
We broke the Lahore Agreement (1999) with India. It was our fault, says PML-N supremo Nawaz Sharif.
— Sidhant Sibal (@sidhant) May 28, 2024
PS: He made the remarks at an event where he bcm president of PML N party (party which the PM Shehbaz Sharif comes). pic.twitter.com/BI6CNhbGRH
ಫೆಬ್ರವರಿ 21, 1999 ರಂದು ಎರಡು ಬದ್ಧ ವೈರಿ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಭಾರತ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ನೆರೆಹೊರ ರಾಷ್ಟ್ರಗಳ ನಡುವಿನ ಶಾಂತಿ ಒಪ್ಪಂದವು ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಜನ ಸಂಪರ್ಕವನ್ನು ಉತ್ತೇಜಿಸಲು ಕರೆ ನೀಡಿತು. ಆದಾಗ್ಯೂ, ಕೆಲವು ತಿಂಗಳ ನಂತರ, ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಪಾಕಿಸ್ತಾನದ ಆಕ್ರಮಣವು ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು.
ಮಾರ್ಚ್ 1999 ರಿಂದ, ಪಾಕಿಸ್ತಾನ ಸೇನೆಯ ಜನರಲ್ ಆಗಿದ್ದ ಮುಷರಫ್, ಲಡಾಖ್‌ನ ಕಾರ್ಗಿಲ್ ಜಿಲ್ಲೆಯೊಳಗೆ ಪಾಕ್ ಸೇನೆಯ ರಹಸ್ಯ ಒಳನುಸುಳುವಿಕೆಗೆ ಆದೇಶಿಸಿದರು. ನವದೆಹಲಿ ಒಳನುಸುಳುವಿಕೆಯನ್ನು ಕಂಡುಹಿಡಿದ ನಂತರ ಪೂರ್ಣ ಪ್ರಮಾಣದ ಯುದ್ಧವು ಸ್ಫೋಟಗೊಂಡಿತು. ಈ ಯುದ್ಧವನ್ನು ಭಾರತ ಗೆದ್ದಿತ್ತು. ಈ ಸಂರ್ಭದಲ್ಲಿ ಷರೀಫ್ ಪಾಕಿಸ್ತಾನದ ಪ್ರಧಾನಿ ಆಗಿದ್ದರು.
ಇದೀಗ ಇದೇ ವಿಚಾರ ಬಗ್ಗೆ ಪ್ರಸ್ತಾಪಿಸಿರುವ ಷರೀಫ್ ಅಂದು ತಮ್ಮ ಸರ್ಕಾರ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಟೆಲಿವಿಷನ್ ಕಾರ್ಪೊರೇಷನ್ (ಪಿಟಿವಿ) ಪ್ರಸಾರ ಮಾಡಿದ ನವಾಜ್ ಷರೀಫ್ ಅವರ ಭಾಷಣದ ಒಂದು ಭಾಗವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.