Site icon Vistara News

Human Composting | ಮಾನವ ಮಿಶ್ರಗೊಬ್ಬರ ಬಳಕೆಗೆ ಅನುಮತಿ ನೀಡಿದ ಅಮೆರಿಕದ ಮತ್ತೊಂದು ರಾಜ್ಯ!

Human Composting @ New York

ನವದೆಹಲಿ: ಇತ್ತೀಚಿಗೆ ಮಾನವ ಮಿಶ್ರಗೊಬ್ಬರ (Human Composting) ಹೆಚ್ಚು ಜನಪ್ರಿಯವಾಗುತ್ತಿದೆ. ಅಮೆರಿಕದಲ್ಲಂತೂ ಮಾನವ ಮಿಶ್ರಗೂಬ್ಬರಕ್ಕೆ ಕಾನೂನಿನ ಶ್ರೀರಕ್ಷೆ ಕೂಡ ದೊರೆಯುತ್ತಿದೆ. ಅಮೆರಿಕದ ನ್ಯೂಯಾರ್ಕ್, ಮಾನವ ಮಿಶ್ರಗೊಬ್ಬರ ಬಳಕೆಗೆ ಅನುಮತಿ ನೀಡಿದ ಮತ್ತೊಂದು ರಾಜ್ಯವಾಗಿದೆ. ಇಲ್ಲಿವರೆಗೆ ಅಮೆರಿಕದ 6 ರಾಜ್ಯಗಳಲ್ಲಿ ಈ ಮಾನವ ಮಿಶ್ರಗೊಬ್ಬರ ಬಳಕೆಗೆ ತಮ್ಮ ಒಪ್ಪಿಗೆಯನ್ನು ನೀಡಿವೆ.

ಮನುಷ್ಯ ನಿಧನವಾದ ಮೇಲೆ ಆತನ ಮೃತದೇಹವನ್ನು ಹೂಳುತ್ತಾರೆ ಇಲ್ಲವೇ ಸುಟ್ಟು ಹಾಕುತ್ತಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾನವ ಮೃತದೇಹವನ್ನು ಕೊಳೆಯಲು ಬಿಟ್ಟು, ಅದನ್ನು ಗೊಬ್ಬರವಾಗಿ ಮಾರ್ಪಾಡಿಸುವ ಟ್ರೆಂಡ್ ಹೆಚ್ಚಾಗಿದೆ. ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಮಾನವ ಮಿಶ್ರಗೊಬ್ಬರ ಪರಿಸರಸ್ನೇಹಿಯೂ ಆಗಿರುವುದರಿಂದ ಅಮೆರಿಕದಂಥ ದೇಶಗಳಲ್ಲಿ ಬೇಡಿಕೆ ಕೂಡ ಹೆಚ್ಚುತ್ತಿದೆ. ಅದೇ ಕಾರಣಕ್ಕೆ ಹಲವು ರಾಜ್ಯಗಳಲ್ಲಿ ಮಾನವ ಗೊಬ್ಬರ ತಯಾರಿಸಲು ಕಾನೂನಿನ ಶ್ರೀರಕ್ಷೆಯನ್ನು ಒದಗಿಸುತ್ತಿವೆ.

ಮಾನವ ಗೊಬ್ಬರವನ್ನು ನ್ಯಾಚುರಲ್ ಆರ್ಗಾನಿಕ್ ರಿಡಕ್ಷನ್ ಎಂದು ಕರೆಯಲಾಗುತ್ತದೆ. ಮೃತದೇಹವನ್ನು ಗೊಬ್ಬರವಾಗಿ ಮಾರ್ಪಡಿಸಲು, ಕಂಟೇನರ್‌ಗಳಲ್ಲಿ ಶವವನ್ನು ಹಲವು ವಾರಗಳ ಕಾಲ ಇಡಲಾಗುತ್ತದೆ. ಬಳಿಕ ಅದು ಗೊಬ್ಬರವಾಗಿ ಬದಲಾದ ಬಳಿಕ, ಹೊರ ತೆಗೆದು ಬಳಸಲಾಗುತ್ತದೆ. 2019ರಲ್ಲಿ ಮೊದಲ ಬಾರಿಗೆ ವಾಷಿಂಗ್ಟನ್, ಈ ಮಾನವ ಗೊಬ್ಬರ ಬಳಕೆಗೆ ಕಾನೂನಾತ್ಮಕವಾಗಿ ಅವಕಾಶ ನೀಡಿತು. ಬಳಿಕ, ಕೊಲೊರಾಡೊ, ಒರೆಗಾನ್, ವರ್ಮೊಂಟ್ ಮತ್ತು ಕ್ಯಾಲಿಫೋರ್ನಿಯಾ ರಾಜ್ಯಗಳು ವಾಷಿಂಗ್ಟನ್ ನೀತಿಯನ್ನು ಅನುಸರಿಸಿದವು. ಇದೀಗ ಅದೇ ಮಾರ್ಗವನ್ನು ನ್ಯೂಯಾರ್ಕ್ ಕೂಡ ಹಿಡಿದಿದೆ.

ಇದನ್ನೂ ಓದಿ | Allu Arjun | ನ್ಯೂಯಾರ್ಕ್‌ನ ಇಂಡಿಯಾ ಡೇ ಪರೇಡ್‌ನಲ್ಲಿ ಭಾರತ ಪ್ರತಿನಿಧಿಸಿದ ಐಕಾನ್‌ಸ್ಟಾರ್‌: ಪೋಟೊ ವೈರಲ್‌!

Exit mobile version